ಸಣ್ಣ ರೈತರು ವರ್ಷಕ್ಕೆ 10,000 ರೂಪಾಯಿ ಪಡೆಯಲು ಜೂನ್ 30ರೊಳಗೆ ಇಕೆವೈಸಿ ಮಾಡಿ...

ಸಣ್ಣ ರೈತರು ವರ್ಷಕ್ಕೆ 10,000 ರೂಪಾಯಿ ಪಡೆಯಲು ಜೂನ್ 30ರೊಳಗೆ ಇಕೆವೈಸಿ ಮಾಡಿ...

 PM Kisan Scheme ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆ ಸಣ್ಣ ರೈತರು ವರ್ಷಕ್ಕೆ 10,000 ರೂಪಾಯಿ ಪ್ರೋತ್ಸಾಹ ಧನ ಪಡೆಯಲು ಇ-ಕೆವೈಸಿ ಕಡ್ಡಾಯವಾಗಿದೆ.... ಪಿಎಂ-ಕಿಸಾನ್ ಯೋಜನೆಯಡಿ ರೈತರು ಮುಂಬರುವ 14ನೇ ಕಂತಿನ ಹಣ ಪಡೆಯಲು ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಕೃಷಿ ಇಲಾಖೆ ಅಧಿಕಾರಿಗಳು ರಾಜ್ಯಾದ್ಯಂತ ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಮಾತ್ರವಲ್ಲದೇ, ಹೋಬಳಿ, ಗ್ರಾಮ ಮಟ್ಟದಲ್ಲಿ ಕೂಡ ಜಾಗೃತಿ ಮೂಡಿಸುತ್ತಿದ್ದಾರೆ. 



 ಈಗಾಗಲೇ 13 ಕಂತುಗಳು ಹಣ ಪಾವತಿ ಮಾಡಲಾಗಿದ್ದು, ಇ-ಕೆವೈಸಿ ಇಲ್ಲದ ರೈತರಿಗೆ ಈ ಹಣ ಪಾವತಿ ಮಾಡಿಲ್ಲ. ಇದೀಗ 14ನೇ ಸುತ್ತಿನ ಹಣವನ್ನು ಬಿಡುಗಡೆ ಮಾಡಲು ಇ-ಕೆವೈಸಿ ಅತ್ಯಗತ್ಯವಾಗಿದ್ದು, ಇ-ಕೆವೈಸಿ ಮಾಡಿಸದಿದ್ದರೆ ಈ ಬಾರಿಯೂ ಇ-ಕೆವೈಸಿ ಮಾಡದ ರೈತರಿಗೆ ಹಣ ಪಾವತಿಯಾಗುವುದಿಲ್ಲ.

 ಪಿ.ಎಂ.ಕಿಸಾನ್ ಯೋಜನೆಯಡಿ ಫಲಾನುಭವಿಗಳಿಗೆ ವಾರ್ಷಿಕ ಕೇಂದ್ರ ಸರ್ಕಾರದಿಂದ 6,000 ಮತ್ತು ರಾಜ್ಯ ಸರ್ಕಾರದಿಂದ 4,000 ಗಳಂತೆ ಒಟ್ಟು ವಾರ್ಷಿಕ 10,000 ರೂಪಾಯಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ. ಆದರೆ ಸಮರ್ಪಕವಾಗಿ ಇ-ಕೆವೈಸಿ ಆಗದ ಕಾರಣ ಈ ಸಹಾಯಧನವು ಅನೇಕ ರೈತರ ಖಾತೆಗೆ ಜಮೆ ಆಗುತ್ತಿಲ್ಲ. ಹೀಗಾಗಿ ರೈತರು ಆದಷ್ಟು ಬೇಗ ಅಗತ್ಯ ದಾಖಲೆಗಳೊಂದಿಗೆ ನೋಂದಾಯಿಸಿಕೊಳ್ಳಬೇಕು. 


 ಕೃಷಿ ಆಯುಕ್ತರು ಜೂನ್ 3ರಂದು ನಡೆದ ಗೂಗಲ್ ಸಭೆಯಲ್ಲಿ ಜೂನ್ 30ರೊಳಗೆ ಎಲ್ಲಾ ಅರ್ಹ ರೈತರು ಇ-ಕೆವೈಸಿ ಮಾಡಿಸಲು ಸೂಚನೆ ನೀಡಿದ್ದಾರೆ. ವಿಶೇಷ ಆಂದೋಲನ ರೂಪದಲ್ಲಿ ರೈತರಿಗೆ ಇ-ಕೆವೈಸಿ ಮಾಡಿಸಲು ಸೂಕ್ತ ಕ್ರಮ ಕೈಗೊಳ್ಳಲು ತಮ್ಮ ಎಲ್ಲಾ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ವಿಶೇಷ ಸೂಚನೆ ನೀಡಲಾಗಿದೆ. ಹೀಗಾಗಿ ಈವರೆಗೂ ಇ-ಕೆವೈಸಿ ಮಾಡಿಸದ ಫಲಾನುಭವಿ ರೈತರುಗಳು ಈ ಕೂಡಲೇ ತಮ್ಮ ಹತ್ತಿರದ ಗ್ರಾಮ್-ಒನ್, ನಾಗರಿಕ ಸೇವಾ ಕೇಂದ್ರ, ಬಾಪೂಜಿ ಸೇವಾ ಕೇಂದ್ರಗಳು ಹಾಗೂ ಪೋಸ್ಟ್ ಆಫೀನಲ್ಲಿ ಪಿ.ಎಂ. ಕಿಸಾನ್ ಇ-ಕೆವೈಸಿ ಮಾಡಿಸಿಕೊಳ್ಳಬಹುದಾಗಿದೆ.

 ಒಂದಕ್ಕಿ೦ತ ಹೆಚ್ಚು ಆಧಾರ್ ಕಾರ್ಡ್‍ಗಳಿಗೆ ಒಂದೇ ಮೊಬೈಲ್ ನಂಬರ್ ನೀಡಿದ್ದ ರೈತರು ತಮ್ಮ ಬಯೊಮೆಟ್ರಿಕ್ ಥಂಬ್ ಇಂಪ್ರೆಷ‍ನ್ ಮೂಲಕ ಇ-ಕೆವೈಸಿ ಮಾಡಿಕೊಳ್ಳಬಹುದಾಗಿದೆ. ಇ-ಕೆವೈಸಿ ಮಾಡಿಸಲು ಜೂನ್ 31 ಅಂತಿಮ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದಾಗಿದೆ. ಇಕೆವೈಸಿ ಮಾಡಲು, ಹೊಸ ರೈತರ ನೋಂದಾವಣಿಗೆ, ಆಧಾರ್ ವೈಫಲ್ಯದ ದಾಖಲೆ ತಿದ್ದುಪಡಿ ಮಾಡಲು, ಫಲಾನುಭವಿ ರೈತರ ಅರ್ಜಿ ಸ್ಥಿತಿ ಪರಿಶೀಲಿಸಲು ಇತ್ಯಾದಿ ವಿವರಗಳಿಗೆ ಅಧಿಕೃತ ವೆಬ್‌ಸೈಟ್ ಲಿಂಕ್: PM-Kisan 

Helpline No. 155261 / 011-24300606

Post a Comment

Previous Post Next Post
CLOSE ADS
CLOSE ADS
×