ದೇಶದಲ್ಲಿ ಹಣದುಬ್ಬರ ಹೆಚ್ಚಾಗಿದೆ ಹಾಗಾಗಿ ದುಡಿದು ಹಣವೆಲ್ಲವೂ ಖಾಲಿಯಾಗಿ ಬಿಡುತ್ತದೆ ಉಳಿತಾಯ ಅನ್ನೋದಂತು ದೂರದ ಮಾತು. ಜೊತೆಗೆ ವಸ್ತುಗಳು ಕೂಡ ದುಬಾರಿಯಾಗಿವೆ.
ಹಾಗಾಗಿ ಅನಿವಾರ್ಯ ಎನಿಸಿರುವ ವಸ್ತುಗಳು ದುಬಾರಿಯಾದರೂ ಕೊಂಡುಕೊಳ್ಳಲೇಬೇಕಲ್ಲ! ಅದಕ್ಕಾಗಿ ಇ ಎಂ ಐ ಹಾಕಿಕೊಂಡು ಸಾಲದ ರೂಪದಲ್ಲಿ ವಸ್ತುಗಳನ್ನು ಪಾವತಿಸುವುದು ಸಹಜ. ಇದಕ್ಕಾಗಿ ಪ್ರತಿಯೊಬ್ಬರೂ ಕ್ರೆಡಿಟ್ ಕಾರ್ಡ್ ಬಳಸುತ್ತಾರೆ ಮೂಲಕ ವಸ್ತುಗಳನ್ನು ಖರೀದಿ ಮಾಡಿ ಕಂತುಗಳಲ್ಲಿ ಹಣವನ್ನು ಪಾವತಿಸಬಹುದು.
ಆದರೆ ಕ್ರೆಡಿಟ್ ಕಾರ್ಡ್ ಪ್ರತಿಯೊಬ್ಬರ ಬಳಿ ಇರಲು ಸಾಧ್ಯವಿಲ್ಲ ಕ್ರೆಡಿಟ್ ಕಾರ್ಡ್ ಬ್ಯಾಂಕ್ ನಿಂದ ಪಡೆದುಕೊಳ್ಳಲು ಅದರದ್ದೇ ಆದ ರೂಲ್ಸ್ ಕೂಡ ಇವೆ. ಆದರೆ ನೀವು ಚಿಂತೆ ಮಾಡಬೇಕಾಗಿಲ್ಲ ಎಟಿಎಂ ಅಥವಾ ಡೆಬಿಟ್ ಕಾರ್ಡ್ ಇದ್ದರೂ ಸಾಕು. ಇಎಂಐ ಮೂಲಕ ದುಬಾರಿ ವಸ್ತುಗಳನ್ನು ಖರೀದಿ ಮಾಡಬಹುದು. ಬ್ಯಾಂಕ್ ಹೊಸ ಸೌಲಭ್ಯವನ್ನು ಗ್ರಾಹಕರಿಗೆ ನೀಡುತ್ತಿದ್ದು ಫೋನ್, ಕಂಪ್ಯೂಟರ್ ರೆಫ್ರಿಜರೇಟರ್ ಮೊದಲಾದವುಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದೆ.
ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ, ನಿಮ್ಮ ಮೊಬೈಲ್ ನಿಂದ ಎಸ್ಎಮ್ಎಸ್ ಕಳುಹಿಸಿ ಮೂಲಕ ವಸ್ತುಗಳನ್ನು ಖರೀದಿಸಲು ಸಾಧ್ಯವಿದೆ. ಇದಕ್ಕಾಗಿ ಬ್ಯಾಂಕಿಗೆ ಪ್ರತ್ಯೇಕ ಎಸ್ಎಮ್ಎಸ್ ಕಳುಹಿಸಬೇಕಾಗುತ್ತದೆ ಅದರ ಮೂಲಕ ನೀವು ಈ ಎಂ ಐ ಸೌಲಭ್ಯ ಪಡೆದುಕೊಳ್ಳಲು ಅರ್ಹರೆ ಇಲ್ಲವೇ ಎಂಬುದನ್ನು ಕೂಡ ಪರಿಶೀಲಿಸಿಕೊಳ್ಳಬಹುದು.
ಎಸ್ ಬಿ ಐ ನಿಂದ ಎಸ್ಎಂಎಸ್ ಸೌಲಭ್ಯ:
ಎಸ್ ಬಿ ಐ ಈ ಹೊಸ ಗ್ರಾಹಕರಿಗೆ ನೀಡುತ್ತಿದ್ದು ನಿಮ್ಮ ನೋಂದಾಯಿತ ಮೊಬೈಲ್ ನಿಂದ 567676 ಗೆ DCEMI ಎಂದು ಎಸ್ಎಂಎಸ್ ಕಳುಹಿಸಬೇಕು. ಅಂದರೆ ಡೆಬಿಟ್ ಕಾರ್ಡ್ EMI ಎಂದು ಅರ್ಥ. ಇನ್ನು ನೀವು ಎಕ್ಸೆಸ್ ಬ್ಯಾಂಕ್ ನಿಂದಲೂ ಈ ಸೌಲಭ್ಯ ಪಡೆಯಬಹುದಾಗಿದ್ದು, 56161600ಗೆ ಸಂದೇಶವನ್ನು ಕಳುಹಿಸಬೇಕು. ಅದೇ ನೀವು ಹೆಚ್ ಡಿ ಎಫ್ ಸಿ ಬ್ಯಾಂಕಿನ ಗ್ರಾಹಕರಾಗಿದ್ದರೆ, 5676712 ಈ ನಂಬರ್ ಗೆ MYHDFC ಎನ್ನುವ ಸಂದೇಶ ಕಳುಹಿಸಬೇಕಾಗುತ್ತದೆ.
ಈ ರೀತಿ ಮಾಡುವುದರಿಂದ ಯಾವುದೇ ಸಮಸ್ಯೆ ಇಲ್ಲದೆ ಕೇವಲ ಎಸ್ಎಂಎಸ್ ಮಾಡುವುದರ ಮೂಲಕವೂ ನೀವು ದುಬಾರಿ ವಸ್ತುಗಳನ್ನು ಖರೀದಿಸಲು ಸಾಧ್ಯವಿದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಬ್ಯಾಂಕ್ಗಳನ್ನು ಸಂಪರ್ಕಿಸಿ