ರಾಜ್ಯದ ಕಾಂಗ್ರೆಸ್ ಸರಕಾರವು ಆಡಳಿತಕ್ಕೆ ಬಂದಾಗಿನಿಂದ ಒಂದಲ್ಲ ಒಂದು ರೀತಿಯ ಸುಧಾರಣೆಯನ್ನು ತರುತ್ತಲೇ ಇದೆ ಅದೇ ರೀತಿ ತನ್ನ ಗ್ಯಾರೆಂಟಿ ಯೋಜನೆಯ ಮೂಲಕ ಜನಮಾನ್ಯತೆ ಪಡೆದ ಕಾಂಗ್ರೆಸ್ ಸರಕಾರದ ಆ ಒಂದು ಗ್ಯಾರೆಂಟಿ ಮಾತ್ರ ಇಂದಿಗೂ ಜನರಿಗೆ ಗೊಂದಲವನ್ನೇ ಸೃಷ್ಟಿ ಮಾಡುತ್ತಿದೆ.
ಜನರಿಗೆ ತನ್ನ ಕಾರ್ಯಯೋಜನೆಯ ಬಗ್ಗೆ ಗೊಂದಲ ಏರ್ಪಟ್ಟಿದ್ದನ್ನು ತಿಳಿದ ಸರಕಾರವು ಆ ಗೊಂದಲವನ್ನು ನಿವಾರಿಸಲು ಪ್ರಯತ್ನ ಪಟ್ಟಿದೆ. ಈ ಮೂಲಕ ಸುದ್ದಿಗೋಷ್ಠಿ ಏರ್ಪಡಿಸಿ ಗೊಂದಲವನ್ನು ನಿವಾರಣೆ ಮಾಡಿದೆ. ರಾಜ್ಯದಲ್ಲಿ ವಾಸವಿರುವ ಎಲ್ಲ ಮನೆಗೆ ಉಚಿತ ಇನ್ನೂರು ಯುನಿಟ್ ನೀಡುತ್ತೇನೆ ಎಂದ ಸರಕಾರ ಇದೀಗ ಅದಕ್ಕೆ ಕೆಲ ಷರತ್ತನ್ನು ಸಹ ವಿಧಿಸಿದೆ.
ಹೊಸ ರೂಲ್ಸ್?
ಬಾಡಿಗೆ ಮನೆಯುಳ್ಳವರಿಗೆ ಗೃಹಜ್ಯೋತಿ (Grahajoythi) ಭಾಗ್ಯ ಸಿಗೊಲ್ಲ ಎಂದು ಹೇಳಲಾಗುತ್ತಿತ್ತು ಆದರೆ ಸಿಎಂ ಗೆ ಸಹ ಈ ಬಘೆ ಅನೇಕನವಿ ಬಂದು ಈ ನೀತಿಗೆ ಬದಲಾಗಿ ಅವರು ಬಾಡಿಗೆದಾರರಿಗೂ ಉಚಿತ ಗೃಹಜ್ಯೋತಿ ನೀಡಲು ತೀರ್ಮಾನಕೈಗೊಂಡಿದ್ದಾರೆ. ಆದರೆ ಒಂದೆ ಆರ್ ಆರ್ ಸಂಖ್ಯೆ ಹೊಂದಿರುವ ಜೊತೆಗೆ ಬಾಡಿಗೆ ಇರುವ ವಾಸದ ಸ್ಥಳಕ್ಕೆ ಆಧಾರ್ ಜೋಡಣೆ ಮಾಡಿದ್ದರೆ ಮಾತ್ರ ಈ ಯೋಜನೆ ಲಾಭ ಸಿಗಲಿದೆ. ಇದು ಬಾಡಿಗೆ ದಾರರಿಗೆ ಮತ್ತು ಗೊಂದಲ ಮೂಡಿಸುವಂತೆ ಮಾಡಿದೆ ಹಾಗೂ ಇಂಧನ ಇಲಾಖೆಯೂ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಈ ರೀತಿ ಜೋಡಣೆ ಮಾಡಿದ ಸಂಖ್ಯೆಯ ಮೂಲಕ ಸೇವಾ ಸಿಂಧು ಪೋರ್ಟಲ್ ಮೂಲಕ ಲಾಗಿನ್ ಆಗಬೇಕು ಆದರೆ ಈ ಆಧಾರ್ ಜೋಡಣೆ ಆಗದಿದ್ದರೆ ಮಾತ್ರ ಸೌಲಭ್ಯ ಕೂಡ ಇಲ್ಲ.
ಹೊಸ ವಿದ್ಯುತ್ (new current) ಸಂಪರ್ಕ ಪಡೆದ ಮನೆಗೆ ಈ ಸೌಲಭ್ಯ ಇಲ್ಲ. ಬದಲಾಗಿ ಒಂದು ವರ್ಷ ಕನಿಷ್ಠ ವಾಸಸ್ಥಾನವಾದರೂ ಇರಲೇ ಬೇಕು.
ವಾರ್ಷಿಕ ಸರಾಸರಿ ಬಳಕೆಯ ಪ್ರಮಾಣದ ಮೇಲೆ ವಿದ್ಯುತ್ ಬೆಲೆ ನಿಗಧಿ ಮಾಡಲಾಗುತ್ತದೆ.
ಇನ್ನೂರು ಯುನಿಟ್ (200unit) ಪೈಕಿ ವರ್ಷದಲ್ಲಿ ಯಾವುದೊ ಒಂದು ತಿಂಗಳು ಇನ್ನೂರು ಯುನಿಟ್ ಗೂ ಮೀರಿದರೂ ಸಹ ಹಣ ಪಾವತಿ ಮಾಡಲೇ ಬೇಕು.
ಬಹು ಮನೆಯೂ ಬಾಡಿಗೆ ಇದ್ದರೂ ಪ್ರತ್ಯೇಕ ಮೀಟರ್ ಹೊಂದಿದ್ದ ಜನರಿಗೆ ಮಾತ್ರ ಈ ಸೌಲಭ್ಯ ಇರಲಿದೆ.
ಗೃಹಜ್ಯೋತಿ (Grahajoythi) ಫಲಾನುಭವಿಗಳು ಸರಾಸರಿಗಿಂತ 10%ದಷ್ಟು ಹೆಚ್ಚು ಉಪಯೋಗ ಮಾಡಿದರೆ ಚಾರ್ಜ್ ಇಲ್ಲ.