ಬೇರೆ ರಾಜ್ಯಗಳಿಗೆ ಹೋಲಿಸಿಕೊಂಡರೆ ಕರ್ನಾಟಕದಲ್ಲೇ ಕಡಿಮೆ ಬೆಲೆ ಇರೋದು. ಕರ್ನಾಟಕದಲ್ಲಿ ಹಾಲಿನ ದರ 39 ರೂಪಾಯಿ ಇದ್ದರೆ, ತಮಿಳುನಾಡಿನಲ್ಲಿ 40 ರೂಪಾಯಿ ಇದೆ.
ಬೆಂಗಳೂರು: ಕಾಂಗ್ರೆಸ್ನ ಪಂಚ ಗ್ಯಾರಂಟಿಗಳ ಮಧ್ಯೆ ಕರೆಂಟ್ ಬಿಲ್ ಸದ್ದಿಲ್ಲದೇ ಹೆಚ್ಚಾಯಿತು. ತರಕಾರಿಯೂ ತಿನ್ನೋದಕ್ಕೆ ಆಗದಷ್ಟು ಬೆಲೆ ಏರಿಕೆ ಆಯ್ತು. ಈಗ ಜನರಿಗೆ ಮತ್ತೊಂದು ಶಾಕ್ ಕಾದಿದೆ.
ಕರೆಂಟ್ ಬಿಲ್ ಡಬಲ್ ಬಂದಿದ್ದಾಯ್ತು. ತರಕಾರಿ ಬೆಲೆ ಗಗನಕ್ಕೆ ಏರಿದ್ದೂ ಆಯ್ತು. ಈಗ ಹಾಲಿನ ಸರದಿ. ಹಾಲಿನ ಬೆಲೆ ಏರಿಕೆ ಮಾಡಬೇಕು ಅಂತಾ ಹಾಲು ಉತ್ಪಾದಕ ಒಕ್ಕೂಟಗಳು ಪಟ್ಟು ಹಿಡಿದಿವೆ.
ಇದಕ್ಕೆ ಕಾರಣಗಳೇನು ಅಂತ ನೋಡುವುದಾದರೆ, ಸದ್ಯದ ಮಟ್ಟಿಗೆ ಹೈನೋದ್ಯಮ ನಿರ್ವಹಣೆ, ದೊಡ್ಡ ಸವಾಲಾಗಿದೆ. ದರ ಏರಿಸುವುದರಿಂದ ರೈತರಿಗೆ ಪ್ರೋತ್ಸಾಹ ಧನ ಸಿಗಲಿದೆ
ಜೊತೆಗೆ ಸಾಗಣೆ ಖರ್ಚು-ವೆಚ್ಚ, ವಿದ್ಯುತ್, ಪ್ಯಾಕಿಂಗ್, ಸಲಕರಣೆ ವೆಚ್ಚವನ್ನೂ ಸರಿದೂಗಿಸಬಹುದು. ನೆರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್‌ಲೇ ಕಡಿಮೆ ಬೆಲೆ ಇರೋದು.
ಇನ್ನು ಬೇರೆ ರಾಜ್ಯಗಳಿಗೆ ಹೋಲಿಸಿಕೊಂಡರೆ ಕರ್ನಾಟಕದಲ್ಲೇ ಕಡಿಮೆ ಬೆಲೆ ಇರೋದು. ಕರ್ನಾಟಕದಲ್ಲಿ ಹಾಲಿನ ದರ 39 ರೂಪಾಯಿ ಇದ್ದರೆ, ತಮಿಳುನಾಡಿನಲ್ಲಿ 40 ರೂಪಾಯಿ, ಕೇರಳದಲ್ಲಿ 46 ರೂಪಾಯಿ, ಗುಜರಾತ್‌ನಲ್ಲಿ 50 ರೂಪಾಯಿ ಇದೆ
ಉಳಿದಂತೆ ಮಹಾರಾಷ್ಟ್ರ-ದೆಹಲಿಯಲ್ಲಿ 51 ರೂಪಾಯಿ, ಆಂಧ್ರಪ್ರದೇಶದಲ್ಲಿ 55 ರೂಪಾಯಿ ಇದೆ. ಹೀಗಾಗಿ ಹಾಲಿನ ದರ ಹೆಚ್ಚಿಸುವಂತೆ ಹಾಲಿನ ಒಕ್ಕೂಟಗಳು ಒತ್ತಾಯಿಸುತ್ತಿವೆ.
ಈ ಹಿಂದೆ ಬೊಮ್ಮಾಯಿ ಸರ್ಕಾರ ಇದ್ದಾಗ ದರ ಏರಿಕೆ ಪ್ರಸ್ತಾಪ ಮುಂದಿಡಲಾಗಿತ್ತು. ಆದರೆ ಚುನಾವಣೆ ಅಂತಾ ಪ್ರಸ್ತಾಪವನ್ನು ತಳ್ಳಿ ಹಾಕಿದ್ದರು. ಈಗ ಸಿಎಂ ಸಿದ್ದರಾಮಯ್ಯ ಏನು ಮಾಡ್ತಾರೆ ಕಾದು ನೋಡಬೇಕಿದೆ