Watch & Earn: ವಿಡಿಯೋ ನೋಡಿ, ಮಜಾ ಮಾಡಿ; 10 ಗಂಟೆಗೆ 82,000 ರೂ ಗಳಿಸಿ; ಈ ಆಫರ್ ಸುಮ್ಮನೆ ಅಲ್ಲ, ಕಂಡೀಷನ್ಸ್ ಅಪ್ಲೈಡ್

Watch & Earn: ವಿಡಿಯೋ ನೋಡಿ, ಮಜಾ ಮಾಡಿ; 10 ಗಂಟೆಗೆ 82,000 ರೂ ಗಳಿಸಿ; ಈ ಆಫರ್ ಸುಮ್ಮನೆ ಅಲ್ಲ, ಕಂಡೀಷನ್ಸ್ ಅಪ್ಲೈಡ್

 10-Hour TikTok Watching: 10 ಗಂಟೆ ಕಾಲ ಟಿಕ್ ಟಾಕ್ ವಿಡಿಯೋಗಳನ್ನು ನೋಡಿ ಟ್ರೆಂಡಿಂಗ್ ಅನ್ನು ಗುರುತಿಸಬಲ್ಲಿರಾದರೆ ನಿಮಗೆ ಗಂಟೆಗೆ 100 ಡಾಲರ್​ನಂತೆ ಹಣ ಗಳಿಸಬಹುದು. ಈ ಮ್ಯಾರಥಾನ್ 10 ಗಂಟೆ ಟಿಕ್​ಟಾಕ್ ಸೆಷನ್​ಗೆ ಅರ್ಜಿ ಸಲ್ಲಿಸಲು ಅರ್ಜಿ ಕರೆಯಲಾಗಿದೆ.



ವಾಷಿಂಗ್ಟನ್: ನಿಮಗೆ ವಿಡಿಯೋ ನೋಡುವ ಹುಚ್ಚಿದೆಯಾ? ಕೈಗೆ ಮೊಬೈಲ್ ಕೊಟ್ಟರೆ ಎಷ್ಟು ಹೊತ್ತು ಬೇಕಾದರೂ ಸೋಷಿಯಲ್ ಮೀಡಿಯಾ ವಿಡಿಯೋಗಳನ್ನು ನೋಡುವಿರಾ? ವಿಡಿಯೋ ಟ್ರೆಂಡ್​ಗಳನ್ನು ಗುರುತಿಸಬಲ್ಲಿರಾ? ನಿಮ್ಮ ವಯಸ್ಸು 18 ವರ್ಷ ದಾಟಿದೆಯಾ? ಹಾಗಿದ್ದರೆ ಇಲ್ಲೊಂದು ಭರ್ಜರಿ ಆಫರ್ ಇದೆ

10 ಗಂಟೆ ಕಾಲ ಮ್ಯಾರಥಾನ್ ವಿಡಿಯೋ ವೀಕ್ಷಿಸುವ ಕೆಲಸ ನಿಮ್ಮದು. ಗಂಟೆಗೆ 100 ಡಾಲರ್ (8,200 ರೂ) ಸಿಗುತ್ತದೆ. 10 ಗಂಟೆಗೆ ನೀವು ಬರೋಬ್ಬರಿ 82,000 ರೂ ಗಳಿಸಬಹುದು. ಅಬ್ಬಬ್ಬಾ, ಈ ಆಫರ್ ಅನ್ನು ಯಾರಾದರೂ ಬಿಟ್ಟುಬಿಡಲು ಸಾಧ್ಯವೇ? ಒಂದಿಷ್ಟು ಕಂಡೀಷನ್ಸ್ ಇದೆ.

ಮೊದಲಿಗೆ ಇದು ಟಿಕ್ ಟಾಕ್ (TikTok) ಆಫರ್. ಭಾರತದಲ್ಲಿ ಟಿಕ್ ಟಾಕ್ ನಿಷೇಧವಾಗಿದೆ. ಅಮೆರಿಕದ ಇನ್​ಫ್ಲುಯೆನ್ಸರ್ ಮಾರ್ಕೆಟಿಂಗ್ ಏಜೆನ್ಸಿ ಯೂಬಿಕ್ವಿಟಸ್ (Ubiquitous) ಈ ಆಫರ್ ಕೊಟ್ಟಿದೆ. ನಿರಂತರವಾಗಿ ಟಿಕ್ ಟಾಕ್ ನೋಡುವ ಮತ್ತು ಆನ್​ಲೈನ್ ಟ್ರೆಂಡ್​ಗಳನ್ನು ಅರಿತುಕೊಳ್ಳುವಂತಹ ವ್ಯಕ್ತಿಗಳು ಈ 10 ಗಂಟೆ ಟಿಕ್ ಟಾಕ್ ಸೆಷನ್​ನಲ್ಲಿ ಪಾಲ್ಗೊಳ್ಳಬಹುದು ಎಂದಿದೆ. ಆದರೆ, ಈ ಆಫರ್ ಇರುವುದು ಮೂವರಿಗೆ ಮಾತ್ರ. ಆದರೆ, ಯಾರು ಬೇಕಾದರೂ ಅರ್ಜಿ ಗುಜರಾಯಿಸಬಹುದು

ಆಯ್ದ ಅಭ್ಯರ್ಥಿಗಳು ಟಿಕ್ ಟಾಕ್ ವಿಡಿಯೋಗಳನ್ನು ನೋಡುವುದಲ್ಲದೇ, ತಾವು ವಿಡಿಯೊಗಳನ್ನು ವೀಕ್ಷಿಸುವಾಗ ಯಾವುದಾದರೂ ಟ್ರೆಂಡ್​ಗಳು ಕಂಡು ಬಂದರೆ ಅದನ್ನು ಒಂದು ಡಾಕ್ಯುಮೆಂಟ್​ನಲ್ಲಿ ಭರ್ತಿ ಮಾಡಬೇಡಬೇಕು. ಇದರೊಂದಿಗೆ ನಮಗೆ ಹೊಸ ಟ್ರೆಂಡ್​ಗಳನ್ನು ಗುರುತಿಸಲು ಸಹಾಯವಾಗುತ್ತದೆ ಎಂದು ಯುಬಿಕ್ವಿಟಸ್ ಸಂಸ್ಥೆ ಹೇಳಿದೆ

ಈ ಕೆಲಸ ಇಷ್ಟವಾಗುವವರು ಈ ಏಜೆನ್ಸಿಯ ಯೂಟ್ಯೂಬ್ ಚಾಲನ್​ಗೆ ಸಬ್​ಸ್ಕ್ರೈಬ್ ಆಗಬೇಕು. ತಾವು ಈ ಕೆಲಸಕ್ಕೆ ಯಾಕೆ ಸೂಕ್ತ ವ್ಯಕ್ತಿ ಎಂದು ಸಣ್ಣದಾಗಿ ವಿವರಿಸಿರುವ ವಿಡಿಯೋ ಮಾಡಿ ಕಳುಹಿಸಬೇಕು. 18 ವರ್ಷ ಮೇಲ್ಪಟ್ಟವರು ಮತ್ತು ಟಿಕ್ ಟಾಕ್ ಅಕೌಂಟ್ ಹೊಂದಿರುವ ಯಾರು ಬೇಕಾದರೂ ಅರ್ಜಿ ಹಾಕಬಹುದು. ಮೇ 31ರವರೆಗೂ ಕಾಲಾವಕಾಶ ಇದೆ.

ಆಯ್ಕೆಯಾದ ಅಭ್ಯರ್ಥಿಗಳು 10 ಗಂಟೆ ಟಿಕ್​ಟಾಕ್ ಸೆಷನ್​ನ ಬಳಿಕ ತಮ್ಮ ಅನುಭವವನ್ನು ಯಾವುದೇ ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ನಲ್ಲಿ ಹಂಚಿಕೊಳ್ಳಬೇಕಾಗಬಹುದು

ಚೀನಾ ಮೂಲದ ಟಿಕ್ ಟಾಕ್ 2017ರಲ್ಲಿ ಆರಂಭವಾಗಿತ್ತು. ಅಮೆರಿಕದಲ್ಲಿ ಬಹಳ ಜನಪ್ರಿಯವಾದ ವಿಡಿಯೋ ಶೇರಿಂಗ್ ಪ್ಲಾಟ್​ಫಾರ್ಮ್ ಇದು. 2020ರಲ್ಲಿ ಭಾರತದಲ್ಲಿ ಬ್ಯಾನ್ ಆಗುವವರೆಗೂ ಇಲ್ಲಿಯೂ ಇದು ನಂಬರ್ ಒನ್ ಆಗಿತ್ತು. ಬಹಳ ಮಂದಿ ಭಾರತೀಯರು ಈಗಲೂ ಕೂಡ ಸೋಷಿಯಲ್ ಮೀಡಿಯಾದ ಶಾರ್ಟ್ ವಿಡಿಯೋಗಳಿಗೆ ಟಿಕ್ ಟಾಕ್ ಎಂದೇ ಕರೆಯುವ ರೂಢಿ ಉಂಟು. ಅಮೆರಿಕದಲ್ಲಿ ಒಂದು ದಿನದಲ್ಲಿ ಜನರು 113 ನಿಮಿಷ ಕಾಲ ಟಿಕ್​ಟಾಕ್ ನೋಡುತ್ತಾರಂತೆ. ಅಷ್ಟರಮಟ್ಟಿಗೆ ಅವರು ಅಡಿಕ್ಟ್ ಆಗಿ ಹೋಗಿದ್ದಾರೆ.


Post a Comment

Previous Post Next Post
CLOSE ADS
CLOSE ADS
×