ಪಡಿತರ ಚೀಟಿ (Ration Card) ಯಿಂದ ಅದೆಷ್ಟೊ ಜನರಿಗೆ ಸಹಾಯ ವಾಗಿದೆ.
ದೇಶ ಅಭಿವೃದ್ಧಿ ಆಗಿದೆ ಎಂದು ಹೇಳುವ ಮಾತು ಆಗಿದ್ದರೂ ಎಲ್ಲೊ ಒಂದು ಕಡೆ ಅನ್ನಕ್ಕಾಗಿ ಪರದಾಡುವ ಜನರು ಇದ್ದಾರೆ ಎನ್ನುವ ಉದಾಹರಣೆಗಳನ್ನು ಈಗಲೇ ಕೇಳಿದ್ದೇವೆ, ಬಡ ವರ್ಗದ ಜನರು ರೇಷನ್ ಕಾರ್ಡ್ ಮೂಲಕ ಸಿಗುವ ಲಾಭವನ್ನು ಪಡೆಯುತ್ತಿದ್ದಾರೆ, ಅಂತ್ಯೊದಯ ಕಾರ್ಡ್, ಬಿ ಪಿ ಎಲ್ ಕಾರ್ಡ್ ಚೀಟಿ ಹೊಂದಿರುವ ಜನರಿಗೇ ಈಗಾಗಲೇ ಹಲವು ಸೌಲಭ್ಯಇದ್ದು ಕಾರ್ಡ್ ಹೊಂದಿರುವ ಜನರು ಈ ಕೆಲಸ ತಪ್ಪದೇ ಮಾಡಿ, ಇಲ್ಲದೆ ಹೋದಲ್ಲಿ ನಿಮ್ಮ ಕಾರ್ಡ್ ರದ್ದಾಗುವ ಸದ್ಯತೆ ಇದೆ.
ರೇಷನ್ ಕಾರ್ಡ್ ಆಪ್ ಡೇಟ್ ಮಾಡಿ
ಕೇಂದ್ರ ಸರ್ಕಾರದಿಂದ (Central Govt) ಪಡಿತರ ಚೀಟಿದಾರರಿಗೆ ಹೊಸ ಹೊಸ ಯೋಜನೆಗಳು ಬರುತ್ತಲೇ ಇದೆ, ಆದರೆ ಅನೇಕ ಅನರ್ಹರು ಕೂಡ ಉಚಿತ ಪಡಿತರ ಲಾಭ ಪಡೆಯುತ್ತಿರುವ ಉದಾಹರಣೆಗಳು ಕಂಡು ಬಂದಿವೆ, ಆದ್ದರಿಂದ ಪಡಿತರ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲದಿದ್ದರೆ ನಿಮ್ಮ ಕಾರ್ಡ್ ರದ್ದಾಗುವುದು ಪಕ್ಕವಾಗಿದೆ, ಜೂನ್ 30ರೊಳಗೆ ಲಿಂಕ್ ಮಾಡಿ ಸರಿಪಡಿಸಿಕೊಳ್ಳಿ, ಈ ಕುರಿತು ಆಹಾರ ಮತ್ತು ಸಾರ್ವಜನಿಕ ಇಲಾಖೆ ಕೂಡ ಆದೇಶ ಹೊರಡಿಸಿದೆ.
ಅರ್ಹ ಪಡಿತರಿಗೆ ಸಿಗಬೇಕು
ದೇಶದ ಕೋಟಿಗಟ್ಟಲೆ ಜನರು ಈ ಯೋಜನೆಯ ಸವಲತ್ತು ಪಡೆಯುತ್ತಿದ್ದಾರೆ, ಈಗಾಗಲೇ ಒನ್ ನೇಷನ್, ಒನ್ ರೇಶನ್ ಕಾರ್ಡ್ ಜಾರಿ ಗೊಳಿಸುವುದಾಗಿ ಹೇಳಲಾಗಿದೆ, ಇದರ ಸದುಪಯೋಗವನ್ನು ಅರ್ಹರಿಗೆ ಮಾತ್ರ ಸಿಗಬೇಕಾಗಿದೆ , ಈ ಹಿಂದೆ ಅನೇಕ ಜನರಿಗೆ ಸಬ್ಸಿಡಿ ಆಹಾರ ಧಾನ್ಯಗಳು ಸಿಗಲಿಲ್ಲ ಎನ್ನುವ ಹಲವು ಪ್ರಕರಣಗಳು ಕೇಳಿಬಂದಿತ್ತು, ಅದ್ದರಿಂದ ಆಧಾರ್ ಕಾರ್ಡ್ ಆಪ್ ಡೇಟ್ ಮಾಡುವುದು ಬಹಳ ಮುಖ್ಯ, ಈ ರೂಲ್ಸ್ ಅನ್ನು ಜೂನ್ 30 ರ ಒಳಗೆ ಮಾಡಿ ಮುಗಿಸಿ