ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023: ಫೈನಲ್‌ ಪಂದ್ಯದ ಬಹುಮಾನ ಮೊತ್ತ ಪ್ರಕಟಿಸಿದ ಐಸಿಸಿ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023: ಫೈನಲ್‌ ಪಂದ್ಯದ ಬಹುಮಾನ ಮೊತ್ತ ಪ್ರಕಟಿಸಿದ ಐಸಿಸಿ

 World Test Championship 2023: ICC Announces Prize Money For Final Match



2021-23ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಹಣಾಹಣಿಯು ಜೂನ್ 7ರಿಂದ 11ರ ವರೆಗೆ ಲಂಡನ್‌ನ ದಿ ಓವಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯಲಿದೆ. ಈಗಾಗಲೇ ಉಭಯ ತಂಡಗಳು ಕೆಲವು ಆಟಗಾರರು ಇಂಗ್ಲೆಂಡ್‌ಗೆ ತೆರಳಿದ್ದು, ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.


ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೂ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬಹುಮಾನ ಮೊತ್ತವನ್ನು ಪ್ರಕಟಿಸಿದೆ. ಅಧಿಕೃತ ವರದಿಯ ಪ್ರಕಾರ, ಒಟ್ಟು 9 ತಂಡಗಳು 31.4 ಕೋಟಿ ರೂಪಾಯಿಗಳ ಮೊತ್ತವನ್ನು ಹಂಚಿಕೊಳ್ಳುತ್ತವೆ. ಇದು 2019-21ರ ಚಕ್ರದಂತೆ ಈ ಬಾರಿಯೂ ಅಷ್ಟೇ ಮೊತ್ತವನ್ನು ಪ್ರಕಟಿಸಿದೆ.

ICC Announces Prize Money For Final Match


ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ವಿಜೇತ ತಂಡವು ಅಂದಾಜು 13.22 ಕೋಟಿ ರೂ. ಬಹುಮಾನವನ್ನು ಪಡೆದುಕೊಳ್ಳಲಿದ್ದಾರೆ. ಇನ್ನು ರನ್ನರ್-ಅಪ್ ತಂಡ ಅಂದಾಜು 6.61 ಕೋಟಿ ರೂಪಾಯಿಗಳನ್ನು ಜೇಬಿಗಿಳಿಸಲಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಬಹುಮಾನದ ಹಣದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇದು 2019-21ರ ಚಾಂಪಿಯನ್‌ಶಿಪ್‌ನ ಉದ್ಘಾಟನಾ ಆವೃತ್ತಿಯ ಒಟ್ಟು ಪರ್ಸ್‌ನಲ್ಲಿ ಕೇನ್ ವಿಲಿಯಮ್ಸನ್ ನಾಯಕತ್ವದ ನಗಯೂಜಿಲೆಂಡ್ ತಂಡ 3.8 ಮಿಲಿಯನ್ ಡಾಲರ್ (ಅಂದಾಜು 13.22 ಕೋಟಿ ರೂ.) ಗೆದ್ದುಕೊಂಡಿತ್ತು.

ICC Announces Prize Money For Final Match

2021ರಲ್ಲಿ ಸೌತಾಂಪ್ಟನ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಎಂಟು ವಿಕೆಟ್‌ಗಳಿಂದ ಸೋತ ಭಾರತ ರನ್ನರ್‌-ಅಪ್ ಸ್ಥಾನಕ್ಕೆ ತೃಪ್ತಿಪಟ್ಟು, 1.6 ಮಿಲಿಯನ್ ಡಾಲರ್ (ಅಂದಾಜು 6.61 ಕೋಟಿ ರೂ.) ಪಡೆದುಕೊಂಡಿತ್ತು.



ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಸ್ಥಾನವನ್ನು ಕಳೆದುಕೊಂಡು ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾವು ಅಂದಾಜು 3.72 ಕೋಟಿ ರೂ. ಪಡೆದುಕೊಳ್ಳಲಿದೆ.

ಕೊನೆಯ ಹಂತದಲ್ಲಿ ಅಬ್ಬರಿಸಿ ನಾಲ್ಕನೇ ಸ್ಥಾನದಲ್ಲಿ ತಮ್ಮ ಅಭಿಯಾನವನ್ನು ಪೂರ್ಣಗೊಳಿಸಿದ ಇಂಗ್ಲೆಂಡ್ 350,000 ಯುಎಸ್ ಡಾಲರ್ (ಅಂದಾಜು 2.9 ಕೋಟಿ ರೂ.) ಗಳಿಸಲಿದೆ ಎಂದು ಐಸಿಸಿ ಹೇಳಿದೆ.


ಎಪಿಕ್ ಫೈನಲ್‌ನಲ್ಲಿ ಡಿಸೈಡ್‌ನಲ್ಲಿ ಸ್ಥಾನಕ್ಕಾಗಿ ರೇಸ್‌ನಲ್ಲಿ ಅಗ್ರ ತಂಡಗಳಲ್ಲಿದ್ದ ಶ್ರೀಲಂಕಾ, 200,000 ಡಾಲರ್ (ಅಂದಾಜು 1.65 ಕೋಟಿ ರೂ.) ಗಳಿಸಲು ಐದನೇ ಸ್ಥಾನ ಗಳಿಸಿತು.


ಉಳಿದ ತಂಡಗಳಾದ ನ್ಯೂಜಿಲೆಂಡ್ 6ನೇ ಸ್ಥಾನ ಗಳಿಸಿದರೆ, ಪಾಕಿಸ್ತಾನ 7ನೇ ಸ್ಥಾನ ಪಡೆದಿದೆ. ವೆಸ್ಟ್ ಇಂಡೀಸ್ 8ನೇ ಪಡೆದಿದ್ದರೆ, ಬಾಂಗ್ಲಾದೇಶ 9ನೇ ಸ್ಥಾನ ಪಡೆದು ತಲಾ 100,000 ಡಾಲರ್ ಮೊತ್ತವನ್ನು (ಅಂದಾಜು 82.7 ಲಕ್ಷ ರೂ.) ಬಹುಮಾನವಾಗಿ ಪಡೆಯಲಿವೆ ಎಂದು ಐಸಿಸಿ ಹೇಳಿದೆ.

Post a Comment

Previous Post Next Post
CLOSE ADS
CLOSE ADS
×