ಈ 8 ಯೊಜನೆಗಳ ಪ್ರಯೋಜನ ನಿಮ್ಮದಾಗಿಸಲು ಖಂಡಿತ ಮರೆಯಬೇಡಿ..

ಈ 8 ಯೊಜನೆಗಳ ಪ್ರಯೋಜನ ನಿಮ್ಮದಾಗಿಸಲು ಖಂಡಿತ ಮರೆಯಬೇಡಿ..

ಇತ್ತೀಚಿನ ವರ್ಷಗಳಲ್ಲಿ, ಬಡವರ ಹಾಗು ಮಧ್ಯಮ ವರ್ಗದ ಜನರ ಕಲ್ಯಾಣಕ್ಕಾಗಿ ಭಾರತ ಸರ್ಕಾರವು ಹಲವಾರು ಜನಪ್ರಿಯ ಯೋಜನೆಗಳನ್ನು ಪರಿಚಯಿಸಿದೆ. ಕಡಿಮೆ ವೆಚ್ಚದ ಅಂದರೆ, ಕನಿಷ್ಟ ಹೂಡಿಕೆ ಅಥವಾ ಸಣ್ಣ ಪ್ರಮಾಣದ ಹಣದ ಅಗತ್ಯವಿರುವ ಯೋಜನೆಗಳನ್ನು ಪ್ರಾರಂಭಿಸಿದೆ.

ಸುಕನ್ಯಾ ಸಮೃದ್ಧಿ ಯೋಜನೆ ಇದು ಹೆಚ್ಚು ಆದ್ಯತೆಯ ಠೇವಣಿ ಯೋಜನೆ ಎಂದು ಪರಿಗಣಿಸಲ್ಪಟ್ಟಿದ್ದು, ಜನವರಿ 2015 ರಲ್ಲಿ ಪ್ರಾರಂಭಿಸಲಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆ ಹೆಣ್ಣು ಮಗುವಿನ ಕಲ್ಯಾಣಕ್ಕಾಗಿ ಆರಂಭಿಸಲಾಗಿದ್ದು, 14 ವರ್ಷಗಳ ಅವಧಿಗೆ ಪ್ರತಿ ವರ್ಷವೂ ಕನಿಷ್ಟ ರೂ. 500 ಠೇವಣಿ ಇಡುತ್ತಾ ಹೋಗಬೇಕು. ಹೆಣ್ಣು ಮಗುವಿಗೆ 18 ವರ್ಷ ತುಂಬಿದಾಗ 50% ಹಣವನ್ನು ಮದುವೆ ಅಥವಾ ಶಿಕ್ಷಣಕ್ಕಾಗಿ ಹಿಂತೆಗೆದುಕೊಳ್ಳಬಹುದು.ಇದು 100% ಸುರಕ್ಷಿತ ಹೂಡಿಕೆ ಯೋಜನೆಯಾಗಿದ್ದು, ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಯಿಂದ ಸಂಪೂರ್ಣವಾಗಿ ವಿನಾಯಿತಿ ಪಡೆದಿರುತ್ತದೆ. ಸುಕನ್ಯಾ ಸಮೃದ್ಧಿ ಯೋಜನೆ ರೂ. 30 ಸಾವಿರ ಹೂಡಿಕೆ ಮಾಡಿದ ಮೇಲೆ ಆದಾಯವನ್ನು ಮೇಲಿನ ಟೇಬಲ್ ನಲ್ಲಿ ನೀಡಲಾಗಿದೆ


ಪ್ರಧಾನ ಮಂತ್ರಿ ಜನ ಧನ ಯೋಜನೆ ದೇಶದ ಪ್ರತಿಯೊಬ್ಬರಿಗೂ ಎಲ್ಲ ಬಗೆಯ ಬ್ಯಾಂಕಿಂಗ್ ಸೌಲಭ್ಯಗಳನ್ನು ಕಲ್ಪಿಸುವುದು ಪ್ರಧಾನ ಮಂತ್ರಿ ಜನ ಧನ ಯೋಜನೆಯ ಪ್ರಮುಖ ಧ್ಯೇಯವಾಗಿದ್ದು, 2015ರ ಜನೆವರಿಯಲ್ಲಿ ಲಾಂಚ್ ಮಾಡಲಾಗಿದೆ. ಈ ಯೋಜನೆ ಅಡಿಯಲ್ಲಿ ವಿಶೇಷವಾಗಿ ಬಡವರಿಗೆ ಬ್ಯಾಂಕ್ ಖಾತೆ, ವಿಮೆ ಮತ್ತು ಡೆಬಿಟ್ ಕಾರ್ಡ್ ಸೌಲಭ್ಯಗಳನ್ನು ಕಲ್ಪಿಸುವ ಗುರಿ ಹೊಂದಿದೆ.ಪ್ರಧಾನ ಮಂತ್ರಿ ಜನ ಧನ ಯೋಜನೆ ಲಾಂಚ್ ಮಾಡಿದ ಕೇವಲ ಐದು ತಿಂಗಳಲ್ಲಿ ದಾಖಲೆಯ ೧೧.೫ ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಯಿತು. ಅಕ್ಟೋಬರ್ 2017 ರ ವೇಳೆಗೆ, 30.17 ಕೋಟಿ ಬ್ಯಾಂಕ್ ಖಾತೆಗಳನ್ನು ಒಟ್ಟು ಠೇವಣಿ ರೂ. 66742.47 ಕೋಟಿ ರೂಪಾಯಿಗಳೊಂದಿಗೆ ತೆರೆಯಲಾಗಿದೆ. ಪ್ರಧಾನಮಂತ್ರಿ ಜನಧನ ಯೋಜನೆಯಡಿ ಖಾತೆ ತೆರೆದರೆ ದೇಶದ ಪ್ರತಿಯೊಬ್ಬರಿಗೂ ಅಪಘಾತ ವಿಮೆ ದೊರೆಯುತ್ತದೆ. ಆಕಸ್ಮಿಕ ಅವಘಡ ಸಂಭವಿಸಿ ವ್ಯಕ್ತಿ ಮೃತನಾದರೆ 1 ಲಕ್ಷ ರೂ.ಅಪಘಾತ ವಿಮೆಯನ್ನು ಈ ಯೋಜನೆ ಅನ್ವಯ ಪಾವತಿ ಮಾಡಲಾಗುತ್ತದೆ. ಸರ್ಕಾರ ನೇರವಾಗಿ ಫಲಾನುಭವಿಯ ಖಾತೆಗೆ ಹಣ ಜಮೆ ಮಾಡುತ್ತದೆ. ಉಳಿತಾಯ ಖಾತೆ ತೆರೆಯುವಾಗ ಇಂತಿಷ್ಟು ಮೊತ್ತದ ಹಣ ಠೇವಣಿ ಇಡಬೇಕು ಎಂಬ ನಿಯಮ ಇರುತ್ತದೆ.

ಉಳಿತಾಯ ಖಾತೆ ತೆರೆಯುವಾಗ ಇಂತಿಷ್ಟು ಮೊತ್ತದ ಹಣ ಠೇವಣಿ ಇಡಬೇಕು ಎಂಬ ನಿಯಮ ಇರುತ್ತದೆ. ಆದರೆ ಜನಧನ ಯೋಜನೆಯಲ್ಲಿ ಇಂತಿಷ್ಟು ಪ್ರಮಾಣದ ಹಣ ಇಡಲೇಬೇಕೆಂಬ ನಿಯಮವಾಗಲಿ ಒತ್ತಾಯವಾಗಲಿ ಇಲ್ಲ. ಇದು ಶೂನ್ಯ ಬ್ಯಾಲೆನ್ಸ್ ಆಗಿದ್ದು, ಕನಿಷ್ಟ ಮೊತ್ತ ಇಡಬೇಕಾಗಿಲ್ಲ


ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಇದು ವಿಶ್ವದ ಅಗ್ಗದ ವೈಯಕ್ತಿಕ ಅಪಘಾತ ವಿಮಾ ಯೋಜನೆಯಾಗಿದ್ದು, ವಾರ್ಷಿಕ ಪ್ರೀಮಿಯಂ ರೂ. 12 ಮಾತ್ರ. ಕೇವಲ ವಾರ್ಷಿಕ 12 ರೂಪಾಯಿಗಳ ಪ್ರೀಮಿಯಂ ಮೊತ್ತವನ್ನು ಹೊಂದಿರುವ ಈ ವಿಮೆಯು ಬಡವರಿಗೆ ಮತ್ತು ಕಡಿಮೆ ಆದಾಯ ಹೊಂದಿರುವ ಜನರಿಗೆ ಬಹಳ ಉಪಯೋಗಕಾರಿಯಾಗಿದೆ. ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯಡಿಯಲ್ಲಿ ಆಕಸ್ಮಿಕ ಮರಣ ಮತ್ತು ಶಾಶ್ವತ ಪೂರ್ಣ ಅಂಗವೈಕಲ್ಯಕ್ಕೆ 2 ಮತ್ತು ಭಾಗಶಃ ಅಂಗವೈಕಲ್ಯಕ್ಕೆ 1 ಲಕ್ಷ ರೂಪಾಯಿಗಳ ಲೈಫ್ ಕವರೇಜ್ ಲಭಿಸುವುದು. ಈ ವಿಮೆಯ ಸೌಲಭ್ಯವನ್ನು ಪಡೆಯಲಿಚ್ಛಿಸುವವರಿಗೆ 18 ವರ್ಷ ಭರ್ತಿಯಾಗಿರಬೇಕು ಮತ್ತು ಉಳಿತಾಯ ಖಾತೆಯನ್ನು ಹೊಂದಿರಬೇಕು. 18-70 ವರ್ಷದೊಳಗಿನ ಪ್ರತಿಯೊಬ್ಬರೂ ವಿಮೆಯನ್ನು ಮಾಡಿಸಿಕೊಳ್ಳಬಹುದು. ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆಗಳನ್ನು ಹೊಂದಿದ್ದರೆ, ಕೇವಲ ಒಂದರಿಂದ ಮಾತ್ರ ಈ ವಿಮೆಗೆ ಸೇರಬಹುದು. ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಅಡಿಯಲ್ಲಿ ವಿಮೆದಾರನ ಆಕಸ್ಮಿಕ ಮರಣದ ಸಂದರ್ಭದಲ್ಲಿ ರೂ. 2 ಲಕ್ಷ ಲಭ್ಯವಾಗುತ್ತದೆ. ಇದಲ್ಲದೆ, ರೂ. 2 ಲಕ್ಷ ಪೂರ್ಣ ಅಂಗವೈಕಲ್ಯತೆ ಅಥವಾ ಎರಡೂ ಕಣ್ಣುಗಳಿಗೆ ಶಾಶ್ವತ ಹಾನಿ ಅಥವಾ ಕೈಗಳು ಮತ್ತು ಪಾದಗಳು, ಪಾರ್ಶ್ವವಾಯು ಇತ್ಯಾದಿಗಳ ಪೂರ್ಣ ಅಸಾಮರ್ಥ್ಯದ ಸಂದರ್ಭದಲ್ಲಿ ಒದಗಿಸಲಾಗುತ್ತದೆ. ಭಾಗಶಃ ಅಂಗವೈಕಲ್ಯತೆಯ ಸಂದರ್ಭದಲ್ಲಿ, ವಿಮೆದಾರರಿಗೆ ರೂ. 1 ಲಕ್ಷಗಳ ಜೀವ ರಕ್ಷಣಾ ಧನವನ್ನು ನೀಡಲಾಗುತ್ತದೆ . ಕನಿಷ್ಟ 18 ವರುಷ ಪೂರೈಸಿರಬೇಕಾಗಿದ್ದು, 18-70 ವರ್ಷ ವಯಸ್ಸಿನ ವ್ಯಕ್ತಿಗಳು PMSBY ಅನ್ನು ಖರೀದಿಸಲು ಅರ್ಹರಾಗಿದ್ದಾರೆ. ಇದಲ್ಲದೆ, NRIಗಳೂ ಕೂಡ ಪಾಲಿಸಿಗೆ ಸೇರಿಕೊಳ್ಳಬಹುದು.


ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಭಾರತದಲ್ಲಿನ ಮತ್ತೊಂದು ಅಗ್ಗದ ಜೀವ ವಿಮೆ ಎಂದರೆ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ PMJJBY ಗೆ ವಾರ್ಷಿಕ ಪ್ರೀಮಿಯಂ ಅನ್ನು ಕೇವಲ ರೂ. 330 ಪಾವತಿಸಬೇಕು. PMJJBY ವಿಮಾ ಯೋಜನೆಯಲ್ಲಿ ವಿಮೆ ಮಾಡಿಸಿದ ವ್ಯಕ್ತಿ ಮರಣ ಹೊಂದಿದರೆ ರೂ. 2,00,000/- ಕವರೇಜ್ ಮೊತ್ತವನ್ನು ಪಡೆಯಬಹುದು. ನಾಮಿನಿಗೆ ಮಾತ್ರ ಮೊತ್ತವನ್ನು ಪಾವತಿಸಲಾಗುತ್ತದೆ. PMJJBY ಒಂದು ಜೀವನ ವಿಮೆ ಯೋಜನೆಯಾಗಿದೆ (ಅವಧಿ ಆಧಾರಿತ). ಈ ಯೋಜನೆಯಲ್ಲಿ ನೈಸರ್ಗಿಕ ಹಾಗೂ ಅಪಘಾತದಲ್ಲಿ ಆದ ಸಾವುಗಳ ಸಾಧ್ಯತೆಯನ್ನು ಪರಿಗಣಿಸಲಾಗಿದೆ. ಈ ಸರ್ಕಾರಿ ಯೋಜನೆಯಲ್ಲಿ ಪಡೆಯಬಹುದಾದ ಗರಿಷ್ಟ ಮೊತ್ತವೆಂದರೆ ಎರಡು ಲಕ್ಷ ರೂಪಾಯಿಗಳು. ಇದರ ಪ್ರೀಮಿಯಂ ಅಂದರೆ ನಿಯಮಿತವಾಗಿ ಕಟ್ಟಬೇಕಾದ ಕಂತು ವರ್ಷಕ್ಕೆ ಕೇವಲ ರೂ. 330 ಮಾತ್ರ. ಅಂದರೆ ದಿನಕ್ಕೆ ಒಂದು ರೂಪಾಯಿಗೂ ಕಡಿಮೆ. ಈ ಯೋಜನೆ 18-50 ವರ್ಷ ವಯಸ್ಸಿನವರಿಗೆ ಅನ್ವಯವಾಗುತ್ತದೆ.


ಪ್ರಧಾನ ಮಂತ್ರಿ ಮುದ್ರಾ ಯೋಜನೆ ಮುದ್ರಾ(ಮೈಕ್ರೋ ಯುನಿಟ್ಸ್ ಡೆವಲಪ್​ವೆುಂಟ್ ಆಂಡ್ ರಿಫೈನಾನ್ಸ್ ಏಜೆನ್ಸಿ) ಯೋಜನೆ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸು. ದೇಶದ ಯುವಜನತೆಯನ್ನು ಉದ್ಯಮಶೀಲತೆಯೆತ್ತ ಆಕರ್ಷಿಸಲು ಹಾಗೂ ಸಣ್ಣ ಹಾಗೂ ಅತಿಸಣ್ಣ ಉದ್ದಿಮೆಗಳನ್ನು ನಡೆಸುತ್ತಿರುವ ಉದ್ಯಮಶೀಲರಿಗೆ ಹಣಕಾಸಿನ ನೆರವು ನೀಡಲು ಕೇಂದ್ರ ಸರ್ಕಾರ ಈ ಯೋಜನೆಯನ್ನು ಪ್ರಾರಂಭಿಸಿದೆ. ಯಾವುದೇ ಭಾರತೀಯ ನಾಗರಿಕ ಕೃಷಿಯೇತರ ಆದಾಯದ ಚಟುವಟಿಕೆಗೆ ಉದಾಹರಣೆಗೆ ಉತ್ಪಾದನೆ, ಪರಿಷ್ಕರಣೆ, ವ್ಯಾಪಾರ ಅಥವಾ ಸೇವಾ ವಲಯ ಇವುಗಳಲ್ಲಿ ತೊಡಗಲು ಇಚ್ಛಿಸಿ ರೂ. 10 ಲಕ್ಷದ ವರೆಗೆ ಸಾಲ ಪಡೆಯಲು ಬಯಸಿದಲ್ಲಿ ಬ್ಯಾಂಕ್, MFI, ಅಥವಾ NBFC ಸಂಪರ್ಕಿಸಿ ಮೈಕ್ರೋ ಯೂನಿಟ್ ಡೆವಲಪ್ಮೆಂಟ್ & ರಿಫೈನೆನ್ಸ್ ಏಜೆನ್ಸಿ ಲಿಮಿಟೆಡ್ (ಮುದ್ರಾ) ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಅಡಿಯಲ್ಲಿ ಸಾಲ ಪಡೆಯಬಹುದು. ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಈ ಕೆಳಗಿನ ಸಾಲ ಯೋಜನೆಗಳು ಲಭ್ಯವಿರುತ್ತದೆ. ಶಿಶು ಸಾಲ: ರೂ . 50,000/- ವರೆಗೆ ಒಳಗೊಂಡ ಸಾಲ ಕಿಶೋರ್ ಸಾಲ: ರೂ 50,000 /- ದಿಂದ ರೂ 5 ಲಕ್ಷ ವರೆಗೆ ಸಾಲ ತರುಣ್ ಸಾಲ: ರೂ 5 ಲಕ್ಷ ದಿಂದ ರೂ. 10 ಲಕ್ಷ ವರೆಗೆ ಸಾಲ


ಪ್ರಧಾನ ಮಂತ್ರಿ ಅವಾಸ ಯೋಜನೆ ದೇಶದ ಪ್ರತಿಯೊಬ್ಬರಿಗೂ 2022ರ ಹೊತ್ತಿಗೆ ಮನೆ ಸಿಗಬೇಕು ಎನ್ನುವುದು ಪ್ರಧಾನಿ ಮೋದಿಯವರ ಆಶಯ. ಈ ಆಶಯಕ್ಕಾಗಿ ಕೇಂದ್ರ ಸರ್ಕಾರ "ಪ್ರಧಾನ ಮಂತ್ರಿ ಅವಾಸ ಯೋಜನೆ" (Pradhan ,Mantri Awas Yojana) ಪ್ರಾರಂಭಿಸಿದೆ. ಇದರಲ್ಲಿ ಬಡವರು, ಅತಿ ಕೆಳವರ್ಗದವರು, ಮಧ್ಯಮ ವರ್ಗದವರು, ಕಡಿಮೆ ಆದಾಯ ಹೊಂದಿರುವವರು, ನೌಕರರು ಹೀಗೆ ಎಲ್ಲರೂ ಒಳಗೊಂಡಿದ್ದಾರೆ. 2022 ರ ಹೊತ್ತಿಗೆ 5 ಕೋಟಿ ಅಗ್ಗದ ಮನೆಗಳನ್ನು ಒದಗಿಸುವುದು ಸರ್ಕಾರದ ಗುರಿಯಾಗಿದೆ. ಯೋಜನೆಯ ಅಡಿಯಲ್ಲಿ ಮನೆ ಖರೀದಿಸಲು ಬಯಸುವ ಆಸಕ್ತಿ ವ್ಯಕ್ತಿಗಳಿಗೆ ಹಣಕಾಸಿನ ಬೆಂಬಲ, ಬಡ್ಡಿ ಸಬ್ಸಿಡಿ ಮತ್ತು ನೇರ ಸಬ್ಸಿಡಿ ನೀಡಲಾಗುತ್ತದೆ. ಪ್ರಧಾನಮಂತ್ರಿ ಅವಾಸ ಯೋಜನೆಯ ಅಧಿಕೃತ ವೆಬ್ಸೈಟ್ pmaymis.gov.in ಗೆ ಭೇಟಿ ನೀಡಿ. 'ಸಿಟಿಜನ್ ಅಸೆಸ್ಮೆಂಟ್' ಮೆನು ಮೂಲಕ ಪ್ರಧಾನಮಂತ್ರಿ ಅವಾಸ ಯೋಜನೆ ಅರ್ಜಿ ಆಪ್ಸನ್ ಆಯ್ಕೆ ಮಾಡಿ. ನಿಮಗೆ ಎರಡು ಆಯ್ಕೆಗಳನ್ನು ನೋಡಬಹುದು: 1. ಸ್ಲಂ ನಿವಾಸಿಗಳು(Slum Dwellers) 2. ಇತರ ಮೂರು ಘಟಕಗಳ ಪ್ರಯೋಜನಗಳು( rural, urban or semi-urban)


ಅಟಲ್ ಪಿಂಚಣಿ ಯೋಜನೆ (APY) ಈ ಸಾಮಾಜಿಕ ಭದ್ರತಾ ಯೋಜನೆಯು, ನಿವೃತ್ತಿ ಸಮಯದಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ಒದಗಿಸುವ ಧ್ಯೇಯ ಹೊಂದಿದೆ. ಅಸಂಘಟಿತ ಕಾರ್ಮಿಕರ ವೃದ್ಧಾಪ್ಯ ಜೀವನವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರ 'ಅಟಲ್ ಪಿಂಚಣಿ ಯೋಜನೆ' (Atal Pension Yojana - APY) ಯನ್ನು ಜಾರಿಗೆ ತಂದಿದೆ. ೨೦೧೫ ರಲ್ಲಿ ಜಾರಿಯಾದ ಈ ಪಿಂಚಣಿ ಯೋಜನೆಯನ್ನು 18 ರಿಂದ 40 ವಯೋಮಾನದ ಭಾರತದ ನಾಗರಿಕರು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಯೋಜನೆಯನ್ನು ಪಡೆದ ನಂತರ ಪ್ರತಿ ತಿಂಗಳು ನಿಗದಿತ ವಂತಿಗೆಯನ್ನು ಪಾವತಿಸುವ ಮೂಲಕ ನಿವೃತ್ತಿಯ ನಂತರ ಮಾಸಿಕವಾಗಿ ಒಂದು ಸಾವಿರದಿಂದ ಐದು ಸಾವಿರ ರೂಪಾಯಿಗಳವರೆಗೆ (ಸಾವಿರದ ದ್ವಿಗುಣಗಳಲ್ಲಿ) ಪಿಂಚಣಿ ಪಡೆಯಬಹುದು. ವಂತಿಗೆದಾರನಿಗೆ 60 ವರ್ಷಗಳಾದ ತಕ್ಷಣ ಪಿಂಚಣಿ ಆರಂಭವಾಗುತ್ತದೆ. ತಿಂಗಳಿಗೆ ರೂ. 5000 ಪಿಂಚಣಿ ಪಡೆಯಬೇಕಾದರೆ: ಕನಿಷ್ಟ 20 ವರ್ಷ ಹೂಡಿಕೆ ಮಾಡಬೇಕಾಗುತ್ತದೆ. 18 ವರ್ಷದವರಾದರೆ 42 ವರ್ಷ ಕಾಲ ತಿಂಗಳಿಗೆ ರೂ. 210, 20 ವರ್ಷದವರಾದರೆ 40 ವರ್ಷಗಳವರೆಗೆ ರೂ. 248, 25 ವರ್ಷದವರಾದರೆ 35 ವರ್ಷ ಮಾಸಿಕ ರೂ. 376, 30 ವರ್ಷದವರಾದರೆ 30 ವರ್ಷಗಳವರೆಗೆ ಮಾಸಿಕ ರೂ. 577 ಹಾಗೂ 40 ವರ್ಷದವರಾದರೆ 20 ವರ್ಷಗಳ ಕಾಲ ಮಾಸಿಕ ರೂ. 1454 ಹೂಡಿಕೆ ಮಾಡಬೇಕಾಗುತ್ತದೆ.


ಜನ್ ಔಷಧಿ ಯೋಜನೆ ಬಡವರಿಗೆ, ನಿರ್ಗತಿಕರಿಗೆ, ಜನಸಾಮಾನ್ಯರಿಗೆ ಅನುಕೂಲಕರವಾಗಲಿಯೆಂದು ಕೇಂದ್ರ ಸರ್ಕಾರ ಕೆಲ ಯೋಜನೆಗಳನ್ನು ಜಾರಿ ತಂದಿದೆ. ಔಷಧಿಗಳು ಸುಲಭವಾಗಿ ಸಾಮಾನ್ಯ ದರದಲ್ಲಿ ಸಿಗುವಂತೆ ಮಾಡುವುದು ಜನ್ ಔಷಧಿ ಮಳಿಗೆಗಳ ಉದ್ದೇಶವಾಗಿದ್ದು, ಬಡವರಿಗೆ, ಜನಸಾಮಾನ್ಯರಿಗೆ ಉನ್ನತ ಗುಣಮಟ್ಟದ ಔಷಧಿಗಳನ್ನು ಅಗ್ಗದ ದರದಲ್ಲಿ ಒದಗಿಸುವುದಕ್ಕಾಗಿ 2008ರಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ. ಜನ್ ಔಷಧಿ ಮಳಿಗೆಗಳಲ್ಲಿ ಮಾತ್ರೆ ಕಡಿಮೆ ಬೆಲೆಗೆ ಸಿಗುತ್ತವೆ. ಡಾಕ್ಟರ್ 100 ರೂ.ಗೆ ನೀಡುವ ಮಾತ್ರೆಗಳು ಇಲ್ಲಿ 10 ರೂ.ಗೆ ಸಿಗಬಹುದು. ಸಾಮಾನ್ಯವಾಗಿ ಜನ್ ಔಷಧಿ ಮಳಿಗೆ ಸರ್ಕಾರಿ ಆಸ್ಪತ್ರೆಗಳ ಹತ್ತಿರದಲ್ಲಿರುತ್ತವೆ. ನಿವು ತೆರೆಯಬಹುದು? ಜನ್ ಔಷಧಿ ಮಳಿಗೆ ತೆರೆಯಲು ಸರ್ಕಾರ ರೂ. 2, 50,000 ಸಹಾಯಧನ ನಿಡುತ್ತದೆ. ಈ ಮಳಿಗೆಗಳನ್ನು ಖಾಸಗಿ ಆಸ್ಪತ್ರೆಗಳು, ಎನ್ಜಿಒಗಳು ಮತ್ತು ಇತರ ಸಾಮಾಜಿಕ ಗುಂಪುಗಳು ಮಾತ್ರ ತೆರೆಯಬಹುದಾಗಿದೆ. ಜನ್ ಔಷಧ ಮಳಿಗೆಗೆಳನ್ನು ತೆರೆಯುವವರಿಗೆ ಪಿಠೋಪಕರಣಕ್ಕಾಗಿ ರೂ. 1 ಲಕ್ಷ, ಕಂಪ್ಯೂಟರ, ಪ್ರಿಂಟರ್ ಮತ್ತಿತರ ಉಪಕರಣಗಳಿಗಾಗಿ 50 ಸಾವಿರ, ಆರಂಭದಲ್ಲಿ ಉಚಿತವಾಗಿ ಔಷಧಿ ನೀಡುವ ಸಲುವಾಗಿ ರೂ. 1 ಲಕ್ಷ ಪ್ರೋತ್ಸಾಹ ಧನ ಸರ್ಕಾರ ನೀಡಲಿದೆ












Post a Comment

Previous Post Next Post
CLOSE ADS
CLOSE ADS
×