ಬಂಗಾರ ದರವು ನಿರಂತರವಾಗಿ ಏರಿಳಿತ ಕಾಣುತ್ತಲಿದೆ. ಒಂದು ದಿನ ಏರಿಕೆ, ಮತ್ತೊಂದು ದಿನ ಇಳಿಕೆ, ಮತ್ತೆ ಸ್ಥಿರತೆ, ಹೀಗೆ ದಿನ ದಿನವು ಬೆಲೆಯಲ್ಲಿ ವ್ಯತ್ಯಾಸ ಉಂಟಾಗುತ್ತಿದೆ. ಈ ಹಿಂದೆ ದಿಡೀರ್ ಆಗಿ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಬಂಗಾರ ದರವು ಪ್ರಸ್ತುತ ಕೊಂಚ ಸುಧಾರಿಸುತ್ತಿದೆ. ಎರಡು ದಿನಗಳ ಸ್ಥಿರತೆ ಬಳಿಕ ನಿನ್ನೆ ಕೊಂಚ ಏರಿದ್ದ ಬಂಗಾರ ದರ ಇಂದು ಕುಗ್ಗಿದೆ.
ಮೇ 13ರಂದು ಕೊಂಚ ಏರಿಕೆ ಕಂಡಿದ್ದ ಬಂಗಾರ ದರವು ಅದಾದ ಬಳಿಕ ಎರಡು ದಿನಗಳ ಕಾಲ ಸ್ಥಿರವಾಗಿತ್ತು. ಅದಾದ ಬಳಿಕ ಮತ್ತೆ ಕೊಂಚ ಏರಿಕೆಯಾಗಿದೆ. ಮತ್ತೆ ಕೊಂಚ ಇಳಿಕೆಯಾಗಿದೆ. ಮೇ 17ರಂದು ಹತ್ತು ಗ್ರಾಂ ಚಿನ್ನದ ದರವು 56,750 ರೂಪಾಯಿಯಿಂದ 56,300 ರೂಪಾಯಿಗೆ ತಲುಪಿದೆ. ಇನ್ನು ಅಷ್ಟೇ ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆಯು 61,910 ರೂಪಾಯಿಯಿಂದ 61,420 ರೂಪಾಯಿಗೆ ಇಳಿದಿದೆ. ಬೆಳ್ಳಿ ದರ ಇಂದು ಕುಸಿತವಾಗಿದೆ.
ಕಳೆದ ಎರಡು ವಾರಗಳಿಂದ ಚಿನ್ನ ಹಾಗೂ ಬೆಳ್ಳಿ ದರವು ಏರಿಳಿತ ಕಾಣುತ್ತಿದೆ. ಅದರಲ್ಲೂ ಮುಖ್ಯವಾಗಿ ಬೆಳ್ಳಿ ದರವು ಏರಿಳಿತ ಕಾಣುತ್ತಿದೆ. ಪ್ರಮುಖವಾಗಿ ಇದು ಮದುವೆ ಸೀಸನ್ ಆದ ಕಾರಣದಿಂದಾಗಿ ಹಳದಿ ಲೋಹಕ್ಕೆ ಬೇಡಿಕೆ ಅಧಿಕವಾಗಿ ದರವು ಕೂಡಾ ಅಧಿಕವಾಗಿದೆ.
ಭಾರತದಲ್ಲಿ ಚಿನ್ನದ ದರ ಎಷ್ಟಿದೆ?
ನಿನ್ನೆ ಏರಿಕೆಯಾಗಿದ್ದ ಚಿನ್ನದ ದರವು ಇಂದು ಇಳಿಕೆಯಾಗಿದೆ. ಕಳೆದ ಐದು ದಿನದಲ್ಲಿ 2 ಬಾರಿ ಗೋಲ್ಡ್ ರೇಟ್ ಹೆಚ್ಚಾಗಿದ್ದು, 1 ಬಾರಿ ಇಳಿದಿದೆ. 2 ಬಾರಿ ಸ್ಥಿರವಾಗಿದೆ. ಇನ್ನು ಕಳೆದ ಹತ್ತು ದಿನದಲ್ಲಿ ಬಂಗಾರ ದರ 2 ಬಾರಿ ಇಳಿಕೆಯಾಗಿದ್ದರೆ 5 ಬಾರಿ ಏರಿಕೆಯಾಗಿದೆ. 3 ಬಾರಿ ಸ್ಥಿರವಾಗಿದೆ. ನಿನ್ನೆ ಏರಿಕೆಯಾಗಿದ್ದ ಬೆಳ್ಳಿ ದರವು ಇಂದು ಇಳಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 2 ಬಾರಿ ಬೆಳ್ಳಿ ಬೆಲೆ ಏರಿದ್ದು 5 ಬಾರಿ ಇಳಿದಿದೆ. 3 ಬಾರಿ ಸ್ಥಿರವಾಗಿದೆ.
ಮೇ 17ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 450 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 56,300 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 490 ರೂಪಾಯಿ ಇಳಿಕೆ ಕಂಡಿದ್ದು ಪ್ರಸ್ತುತ 61,420 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 500 ರೂಪಾಯಿ ಕುಸಿತ ಕಂಡು ಪ್ರಸ್ತುತ 74,600 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ಮೇ 17 ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆ 60285.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 72390.00 ರೂಪಾಯಿ ಆಗಿದೆ. ಅಂತರರಾಷ್ಟ್ರೀಯ, ಸ್ಪಾಟ್ ಗೋಲ್ಡ್ ಪ್ರತಿ (1 ಔನ್ಸ್=28.3495 ಗ್ರಾಂ) ಶೇ 0.11ರಷ್ಟು ಕುಗ್ಗಿದ್ದು 1,987.46 ಯುಎಸ್‌ಡಿ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.49ರಷ್ಟು ಇಳಿಕೆ 23.64 ಯುಎಸ್ ಡಾಲರ್ ಆಗಿದೆ.
10 ಗ್ರಾಂ ಲೆಕ್ಕಾಚಾರದಲ್ಲಿ ಬೆಂಗಳೂರು 22 ಕ್ಯಾರೆಟ್ ಚಿನ್ನ: 56,350 ರೂಪಾಯಿ (-450 ರೂಪಾಯಿ) 24 ಕ್ಯಾರೆಟ್ ಚಿನ್ನ: 61,470 ರೂಪಾಯಿ (-490 ರೂಪಾಯಿ)
ಮುಂಬೈ 22 ಕ್ಯಾರೆಟ್ ಚಿನ್ನ: 56,300 ರೂಪಾಯಿ (-450 ರೂಪಾಯಿ) 24 ಕ್ಯಾರೆಟ್ ಚಿನ್ನ: 61,420 ರೂಪಾಯಿ (-490 ರೂಪಾಯಿ) ದೆಹಲಿ 22 ಕ್ಯಾರೆಟ್ ಚಿನ್ನ: 56,450 ರೂಪಾಯಿ (-450 ರೂಪಾಯಿ) 24 ಕ್ಯಾರೆಟ್ ಚಿನ್ನ: 61,570 ರೂಪಾಯಿ (-490 ರೂಪಾಯಿ) ಕೇರಳ 22 ಕ್ಯಾರೆಟ್ ಚಿನ್ನ: 56,300 ರೂಪಾಯಿ (-450 ರೂಪಾಯಿ) 24 ಕ್ಯಾರೆಟ್ ಚಿನ್ನ: 61,420 ರೂಪಾಯಿ (-490 ರೂಪಾಯಿ)
ಮಂಗಳೂರು 22 ಕ್ಯಾರೆಟ್ ಚಿನ್ನ: 56,350 ರೂಪಾಯಿ (-450 ರೂಪಾಯಿ) 24 ಕ್ಯಾರೆಟ್ ಚಿನ್ನ: 61,470 ರೂಪಾಯಿ (-490 ರೂಪಾಯಿ) ಮೈಸೂರು 22 ಕ್ಯಾರೆಟ್ ಚಿನ್ನ: 56,350 ರೂಪಾಯಿ (-450 ರೂಪಾಯಿ) 24 ಕ್ಯಾರೆಟ್ ಚಿನ್ನ: 61,470 ರೂಪಾಯಿ (-490 ರೂಪಾಯಿ)