ಜೂನ್ 13 ರಂದು ನಡೆದ ಸಭೆ ಬಳಿಕ ಸಿಎಂ ಡಿಕೆ ಶಿವಕುಮಾರ್, ಮಹತ್ವದ ಘೋಷಣೆ ಮಾಡಿದ್ದು, ಅನರ್ಹರಿಗೆ ಹೊಗುತ್ತಿರುವ ಗ್ಯಾರಂಟಿ ಯೋಜನೆಗಳನ್ನು ತಡೆಯಲು, ಗೃಹಲಕ್ಷ್ಮೀ ಹಾಗೂ ಗೃಹಜ್ಯೋತಿ ಫಲಾನುಭವಿಗಳು,ಮತ್ತೊಮ್ಮೆ ಎಲ್ಲಾ ವಿವರ-ಫೋಟೋ ಜೊತೆಗೆ ಅರ್ಜಿ ಸಲ್ಲಿಕೆ ಕಡ್ಡಾಯ ಎಂದಿದ್ದಾರೆ.
ಮನೆಗೇ ತಲುಪಲಿದೆ ನಮೂನೆ -ಯೋಜನೆ ಸ್ಥಗಿತ ಇಲ್ಲ, ಆದರೆ ಅನರ್ಹರಿಗೆ ನೆರವು ತಡೆಯುವ ಉದ್ದೇಶ,ದುರ್ಬಳಕೆ ತಡೆಗಾಗಿ ಗೃಹಲಕ್ಷ್ಮೀ ಹಾಗೂ ಗೃಹಜ್ಯೋತಿ ಯೋಜನೆ ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸಿ ಅರ್ಹರಿಗೆ ಸೌಲಭ್ಯ ಮುಂದುವರಿಸುವ ಚಿಂತನೆಯನ್ನು ಅಧಿಕಾರಿಗಳೊಂದಿಗೆ ಹಂಚಿಕೊಂಡರು.
ಡಿಸಿ, ಜಿಪಂ ಸಿಇಒಗಳು ಸೇರಿದಂತೆ ಇತರೆ ಅಧಿಕಾರಿಗಳು, ಗ್ಯಾರಂಟಿ ಸಮಿತಿಗಳ ಸದಸ್ಯರು ಶೀಘ್ರವೇ ಅರ್ಹರಿಗೆ ಅರ್ಜಿಗಳನ್ನು ತಲುಪಿಸುವ ಕೆಲಸ ಮಾಡಲಿದ್ದಾರೆ. ಭಾವಚಿತ್ರ ಸಹಿತವಾಗಿ ವಿವರಗಳನ್ನು ದಾಖಲಿಸಿ ಸಲ್ಲಿಸಬೇಕು
ಗ್ಯಾರಂಟಿ ಯೋಜನೆಗಳಿಗೆ ಮತ್ತೆ ಅರ್ಜಿ ಸಲ್ಲಿಕೆ ಅನಿವಾರ್ಯ,ಗೃಹಲಕ್ಷ್ಮೀ ಹಾಗೂ ಗೃಹಜ್ಯೋತಿ ಯೋಜನೆ ಫಲಾನುಭವಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು! ಗ್ಯಾರಂಟಿ ಯೋಜನೆಗಳ ಲಾಭ ಅನರ್ಹರಿಗೂ ತಲುಪುತ್ತಿದೆ ಎಂಬ ಸಂಶಯದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಇಂತಹ ನಿರ್ಧಾರ ಕೈಗೊಂಡಿದೆ.
ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು, ಎಸ್‌ಪಿಗಳು ಹಾಗೂ ಡಿಎಫ್‌ಒಗಳ ಜತೆ ಶನಿವಾರ ವಿಧಾನಸೌಧದಲ್ಲಿ ನಡೆಸಿದ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಈ ವಿಷಯ ಪ್ರಕಟಿಸಿದ್ದಾರೆ. ಮುಖ್ಯಮಂತ್ರಿಯಾದ ಬಳಿಕ ಜಿಲ್ಲಾಡಳಿತಗಳ ಉನ್ನತ ಅಧಿಕಾರಿಗಳೊಂದಿಗೆ ಮೊದಲ ಬಾರಿಗೆ ಸಭೆ ನಡೆಸಿದ ಮುಖ್ಯಮಂತ್ರಿ, ತಮ್ಮ ಸರಕಾರದ ಕಾರ್ಯಸೂಚಿಯ ವಿವರ ನೀಡಿದರು. ಸುದೀರ್ಘ ಏಳು ಗಂಟೆ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಅನೇಕ ಸೂಚನೆಗಳನ್ನೂ ನೀಡಿದರು.
ಮುಖ್ಯವಾಗಿ ಗ್ಯಾರಂಟಿ ಯೋಜನೆಗಳ ದುರ್ಬಳಕೆಯಿಂದ ಸರಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂ. ನಷ್ಟ ಉಂಟಾಗುತ್ತಿರುವುದನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿ ಅವರು ದುರ್ಬಳಕೆ ತಡೆಗಾಗಿ ಗೃಹಲಕ್ಷ್ಮೀ ಹಾಗೂ ಗೃಹಜ್ಯೋತಿ ಯೋಜನೆ ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸಿ ಅರ್ಹರಿಗೆ ಸೌಲಭ್ಯ ಮುಂದುವರಿಸುವ ಚಿಂತನೆಯನ್ನು ಅಧಿಕಾರಿಗಳೊಂದಿಗೆ ಹಂಚಿಕೊಂಡರು.
ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ''ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ನೈಜತೆ ಪರಿಶೀಲಿಸಿದಾಗ ನೂರಾರು ಕೋಟಿ ರೂ. ಅನರ್ಹರಿಗೆ ತಲುಪಿರುವುದು ಪತ್ತೆಯಾಗಿದೆ. ಯಾರದ್ದೋ ಮೊಬೈಲ್ ಸಂಖ್ಯೆ ನೀಡಿ ನೆರವು ಪಡೆಯುತ್ತಿರುವುದು, ಮೃತಪಟ್ಟವರ ಹೆಸರಿನಲ್ಲಿ ನೆರವು, ಒಂದೇ ಕುಟುಂಬದಲ್ಲಿ ಹಲವರು ನೆರವು ಪಡೆಯುತ್ತಿರುವುದು ಕಂಡುಬಂದಿದೆ. ಹಾಗಾಗಿ ಅರ್ಹ ಫಲಾನುಭವಿಗಳಿಗೆ ನೆರವು ಸಿಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ತೀರ್ಮಾನಿಸಲಾಗಿದೆ,'' ಎಂದು ಡಿ.ಕೆ.ಶಿವಕುಮಾರ್ ಪ್ರಕಟಿಸಿದರು.
''ಡಿಸಿ, ಜಿಪಂ ಸಿಇಒಗಳು ಸೇರಿದಂತೆ ಇತರೆ ಅಧಿಕಾರಿಗಳು, ಗ್ಯಾರಂಟಿ ಸಮಿತಿಗಳ ಸದಸ್ಯರು ಶೀಘ್ರವೇ ಅರ್ಹರಿಗೆ ಅರ್ಜಿಗಳನ್ನು ತಲುಪಿಸುವ ಕೆಲಸ ಮಾಡಲಿದ್ದಾರೆ. ಭಾವಚಿತ್ರ ಸಹಿತವಾಗಿ ವಿವರಗಳನ್ನು ದಾಖಲಿಸಿ ಸಲ್ಲಿಸಬೇಕು. ಈ ಸಂಬಂಧ ಅಧಿಕಾರಿಗಳಿಗೆ ಸ್ಪಷ್ಟ ಮಾರ್ಗದರ್ಶನ ನೀಡಲಾಗಿದೆ,'' ಎಂದು ಶಿವಕುಮಾರ್ ವಿವರಿಸಿದರು.
ಗೃಹಜ್ಯೋತಿ ಯೋಜನೆಯಲ್ಲೂ ದುರ್ಬಳಕೆ
''ಗೃಹಜ್ಯೋತಿ ಯೋಜನೆಯೂ ದುರ್ಬಳಕೆಯಾಗುತ್ತಿದೆ. ಒಂದೇ ಕಟ್ಟಡದಲ್ಲಿ 5-6 ವಿದ್ಯುತ್ ಸಂಪರ್ಕ ಪಡೆದಿರುವುದು, ನೆಲಮಹಡಿಯ ಮಳಿಗೆ ಹಾಗೂ ಮೊದಲ ಮಹಡಿಯ ವಾಸದ ಮನೆಗೂ ಗೃಹಜ್ಯೋತಿ ಸೌಲಭ್ಯ ಪಡೆಯುತ್ತಿರುವುದು ಕಂಡುಬಂದಿದೆ. ಕರ್ನಾಟಕದವರಷ್ಟೇ ಈ ಸೌಲಭ್ಯ ಪಡೆಯುತ್ತಿದ್ದಾರೆಯೋ ಅಥವಾ ಅನ್ಯರು ಪಡೆಯುತ್ತಿದ್ದಾರೋ ಎಂಬ ಮಾಹಿತಿಯನ್ನು ಕಲೆ ಹಾಕಬೇಕಿದೆ. ಹಾಗಾಗಿ ಸದ್ಯ ಶೂನ್ಯ ಮೊತ್ತದ ಬಿಲ್ ನೀಡಲಾಗುತ್ತಿದ್ದು, ಸದ್ಯದಲ್ಲೇ ಗುರುತಿನ ಚೀಟಿ ವಿತರಿಸಲಾಗುವುದು. ದಿನೇದಿನೇ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿದ್ದು, ದುಬಾರಿ ಬೆಲೆಯಲ್ಲಿ ಖರೀದಿಸಿ ಉಚಿತವಾಗಿ ಪೂರೈಸಲಾಗುತ್ತಿದೆ. ವಾಸದ ಮನೆಗಳಿಗಷ್ಟೇ ಉಚಿತ ಸೌಲಭ್ಯವಿದ್ದು, ವ್ಯಾಪರ ಉದ್ದೇಶಕ್ಕೆ ಇಲ್ಲ,'' ಎಂದು ತಿಳಿಸಿದರು.
ಸಿಎಂ ಹೇಳಿದ್ದೇನು?
ಗ್ಯಾರಂಟಿಯಡಿ ನೀಡುತ್ತಿರುವ ನೆರವಿನ ಮೊತ್ತ ಕರ್ನಾಟಕದ ನಾನಾ ಬ್ಯಾಂಕ್‌ಗಳಿಗೆ ಹೋಗುತ್ತಿದೆಯೇ ಅಥವಾ ಅನ್ಯ ರಾಜ್ಯಗಳಿಗೂ ಹೋಗುತ್ತಿದೆಯೇ? ಲಂಚಕ್ಕೋ, ಸಾಲ ಮರುಪಾವತಿಗೋ, ಯಾವುದಾದರೂ ಹಣಕಾಸಿನ ಯೋಜನೆಗೆ ತಲುಪುತ್ತಿದೆಯೋ ಎಂಬ ಮಾಹಿತಿ ಪಡೆಯುವ ದೃಷ್ಟಿಯಿಂದ ಅರ್ಜಿ ಸ್ವೀಕರಿಸಲು ತೀರ್ಮಾನಿಸಲಾಗಿದೆ. ಯಾವುದೇ ಫಲಾನುಭವಿಗೆ ಸೌಲಭ್ಯ ನಿಲ್ಲಿಸುವುದಿಲ್ಲ. ಆದರೆ ಪ್ರತಿಯೊಬ್ಬರೂ ಅರ್ಜಿಯಲ್ಲಿ ಸರಿಯಾದ ಮಾಹಿತಿ ದಾಖಲಿಸಬೇಕು ಎಂದಿದ್ದಾರೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ
ಟೀಂ ಕರ್ನಾಟಕವಾಗಿ ಕೆಲಸ ಮಾಡೋಣ
*ಜನಪರ ಆಡಳಿತ ನೀಡಲು ನಾವೆಲ್ಲರೂ 'ಟೀಂ ಕರ್ನಾಟಕ'ವಾಗಿ ಕಾರ್ಯನಿರ್ವಹಿಸೋಣ
* ಅಧಿಕಾರಿಗಳು ನಿತ್ಯ ಬೆಳಗ್ಗೆ 10ಗೆ ಸರಿಯಾಗಿ ಕಚೇರಿಗೆ ಹಾಜರಾಗಬೇಕು
* ಕಾನೂನುಬಾಹಿರ ಕೆಲಸವನ್ನು ಸಿಎಂ, ಸಚಿವರು ಹೇಳಿದರೂ ಮಾಡಬಾರದು
* ಕರ್ನಾಟಕವನ್ನು ಭ್ರಷ್ಟಾಚಾರ ಮುಕ್ತವನ್ನಾಗಿಸೋಣ
* ಜನರ ಸಮಸ್ಯೆ- ನಿರೀಕ್ಷೆಗಳಿಗೆ ಸ್ಥಳೀಯವಾಗಿಯೇ ಪರಿಹಾರ, ಸ್ಪಂದನೆ ಸಿಗುವ ವ್ಯವಸ್ಥೆ ಮಾಡೋಣ
ಅಧಿಕಾರಿಗಳಿಗೆ ಸಿಎಂ ಸೂಚನೆ
* ತಿಂಗಳಲ್ಲಿ ಸರಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ, ಪಠ್ಯ, ಶೂ ವಿತರಿಸಬೇಕು
* ಮುಂಗಾರು ಆರಂಭದ ಹಿನ್ನೆಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ವ್ಯವಸ್ಥೆ ಮಾಡಿಕೊಳ್ಳಬೇಕು
* ಮಳೆ ಕೊರತೆ ಮುನ್ಸೂಚನೆ ಹಿನ್ನೆಲೆಯಲ್ಲಿ ಎದುರಾಗಬಹುದಾದ ಸಮಸ್ಯೆಯನ್ನು ಎದುರಿಸಲೂ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು
* ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮತದಾರರ ಹಕ್ಕು ರಕ್ಷಣೆಗೆ ಕ್ರಮ ವಹಿಸಬೇಕು
0 Comments