Advertisement

ಜುಲೈ 1 ರಿಂದ 'EPFO 3.0' ನಿಯಮ ಜಾರಿ; ಇನ್ಮುಂದೆ ಪಿಎಫ್‌ ಖಾತೆಯಲ್ಲಿ 25% ಕನಿಷ್ಠ ಬ್ಯಾಲೆನ್ಸ್ ಕಡ್ಡಾಯ

EPFO 3.0 Rules From july 1: ನೌಕರರ ಭವಿಷ್ಯ ನಿಧಿ ಸಂಸ್ಥೆಯು (EPFO) ಜುಲೈ 1, 2026 ರಿಂದ ಜಾರಿಗೆ ಬರುವಂತೆ ತನ್ನ ಐಟಿ ವ್ಯವಸ್ಥೆಯಲ್ಲಿ 'ಇಪಿಎಫ್‌ಓ 3.0' ಎಂಬ ಹೊಸ ಬದಲಾವಣೆಯನ್ನು ತರಲು ಸಜ್ಜಾಗಿದೆ. ಈ ಹೊಸ ನಿಯಮದ ಅನ್ವಯ, ನೌಕರರು ಇನ್ನು ಮುಂದೆ ತಮ್ಮ ಪಿಎಫ್ ಖಾತೆಯಿಂದ ಸಂಪೂರ್ಣ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ; ಬದಲಿಗೆ ಒಟ್ಟು ಮೊತ್ತದ ಶೇಕಡಾ 25 ರಷ್ಟು ಕನಿಷ್ಠ ಬ್ಯಾಲೆನ್ಸ್ ಅನ್ನು ಖಾತೆಯಲ್ಲೇ ಉಳಿಸಿಕೊಳ್ಳುವುದು ಕಡ್ಡಾಯವಾಗಿದೆ. ನಿವೃತ್ತಿ ಭದ್ರತೆಗಾಗಿ ತರಲಾಗಿರುವ ಈ ಹೊಸ ನಿಯಮದ ಸಂಪೂರ್ಣ ವಿವರ ಇಲ್ಲಿದೆ.

ನೌಕರರ ಭವಿಷ್ಯ ನಿಧಿ ಸಂಸ್ಥೆಯು (EPFO) ಜುಲೈ 1, 2026 ರಿಂದ ಜಾರಿಗೆ ಬರುವಂತೆ ತನ್ನ ಐಟಿ ವ್ಯವಸ್ಥೆಯಲ್ಲಿ 'ಇಪಿಎಫ್‌ಓ 3.0' ಎಂಬ ಹೊಸ ಬದಲಾವಣೆಯನ್ನು ತರಲು ಸಜ್ಜಾಗಿದೆ. ಈ ಹೊಸ ನಿಯಮದ ಅನ್ವಯ, ನೌಕರರು ಇನ್ನು ಮುಂದೆ ತಮ್ಮ ಪಿಎಫ್ ಖಾತೆಯಿಂದ ಸಂಪೂರ್ಣ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ; ಬದಲಿಗೆ ಒಟ್ಟು ಮೊತ್ತದ ಶೇಕಡಾ 25 ರಷ್ಟು ಕನಿಷ್ಠ ಬ್ಯಾಲೆನ್ಸ್ ಅನ್ನು ಖಾತೆಯಲ್ಲೇ ಉಳಿಸಿಕೊಳ್ಳುವುದು ಕಡ್ಡಾಯವಾಗಿದೆ. ನಿವೃತ್ತಿ ಭದ್ರತೆಗಾಗಿ ತರಲಾಗಿರುವ ಈ ಹೊಸ ನಿಯಮದ ಸಂಪೂರ್ಣ ವಿವರ ಇಲ್ಲಿದೆ.

EPF Withdraw Rule

ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಐಟಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಅಪ್ಡೇಟ್‌ ಮಾಡುತ್ತಿದ್ದು, 2026ರ ಜುಲೈ 1 ರಿಂದ ಹೊಸ 'ಇಪಿಎಫ್‌ಒ 3.0' (EPFO 3.0) ನಿಯಮಗಳನ್ನು ಜಾರಿಗೆ ತರಲು ಸಜ್ಜಾಗಿದೆ. ಈ ಹೊಸ ವ್ಯವಸ್ಥೆಯಡಿ ನೌಕರರ ನಿವೃತ್ತಿ ಜೀವನದ ಆರ್ಥಿಕ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಪಿಎಫ್‌ ಹಣ ಹಿಂಪಡೆಯುವಿಕೆಯಲ್ಲಿ (PF Withdrawal) ಅತ್ಯಂತ ಮಹತ್ವದ ಬದಲಾವಣೆ ತರಲಾಗಿದೆ.ಇನ್ಮುಂದೆ ಉದ್ಯೋಗದಲ್ಲಿರುವಾಗ ಯಾವುದೇ ಕಾರಣಕ್ಕಾಗಿ ಪಿಎಫ್‌ ಖಾತೆಯಿಂದ ಪಾರ್ಶಿಯಲ್ (ಭಾಗಶಃ) ಹಣ ಹಿಂಪಡೆದರೂ, ಖಾತೆಯಲ್ಲಿ ಕನಿಷ್ಠ ಶೇ.25 ರಷ್ಟು ಹಣದ ಬ್ಯಾಲೆನ್ಸ್ ಅನ್ನು ಕಡ್ಡಾಯವಾಗಿ ಉಳಿಸಿಕೊಳ್ಳಬೇಕು. ಅಂದರೆ, ಖಾತೆಯಲ್ಲಿರುವ ನೂರಕ್ಕೆ ನೂರು ಭಾಗ ಹಣವನ್ನು ವಿತ್‌ಡ್ರಾ ಮಾಡಲು ಇನ್ಮುಂದೆ ಅವಕಾಶವಿರುವುದಿಲ್ಲ.

25% ಕಡ್ಡಾಯ ಬ್ಯಾಲೆನ್ಸ್‌ ನಿಯಮ (25% Lock-in Rule) ಎಂದರೇನು?

ಈ ಹಿಂದೆ ಉದ್ಯೋಗಿಗಳು ತುರ್ತು ಸಂದರ್ಭಗಳಲ್ಲಿ ತಮ್ಮ ಖಾತೆಯಲ್ಲಿರುವ ಬಹುಪಾಲು ಹಣವನ್ನು ಹಿಂಪಡೆಯಬಹುದಿತ್ತು. ಆದರೆ, ಇದರಿಂದ ನಿವೃತ್ತಿಯ ವೇಳೆಗೆ ಕಾರ್ಮಿಕರ ಕೈಯಲ್ಲಿ ಅತ್ಯಂತ ಕಡಿಮೆ ಮೊತ್ತ ಉಳಿಯುತ್ತಿರುವುದನ್ನು ಇಪಿಎಫ್‌ಒ ಗಮನಿಸಿದೆ. ಈ ಹಿನ್ನೆಲೆಯಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ (CBT) ಹೊಸ ನಿಯಮಕ್ಕೆ ಅನುಮೋದನೆ ನೀಡಿದೆ.

ಉದ್ಯೋಗಿ ಮತ್ತು ಕಂಪನಿಯ ಒಟ್ಟು ವಂತಿಗೆ ಹಾಗೂ ಅದರ ಮೇಲಿನ ಬಡ್ಡಿಯನ್ನು ಒಳಗೊಂಡ ಒಟ್ಟು ಮೊತ್ತದಲ್ಲಿ ಶೇ. 75 ರಷ್ಟನ್ನು ಮಾತ್ರ ವಿತ್‌ಡ್ರಾ ಮಾಡಬಹುದು. ಉಳಿದ ಶೇ. 25 ರಷ್ಟು ಮೊತ್ತ ಖಾತೆಯಲ್ಲೇ ಇರಬೇಕು.

ಉದಾಹರಣೆ: ನಿಮ್ಮ ಪಿಎಫ್ ಖಾತೆಯಲ್ಲಿ ಒಟ್ಟು ₹4 ಲಕ್ಷ ಇದ್ದರೆ, ನೀವು ಗರಿಷ್ಠ ₹3 ಲಕ್ಷ ಮಾತ್ರ ಹಿಂಪಡೆಯಬಹುದು. ಬಾಕಿ ₹1 ಲಕ್ಷ ಖಾತೆಯಲ್ಲೇ ಉಳಿಯುತ್ತದೆ ಮತ್ತು ಅದಕ್ಕೆ ಪ್ರಸ್ತುತ ವಾರ್ಷಿಕ ಶೇ. 8.25 ರಷ್ಟು ಬಡ್ಡಿ ಸಿಗುತ್ತದೆ.

ಪೂರ್ಣ ಹಣ ಯಾವಾಗ ಸಿಗುತ್ತದೆ?: ಈ ಶೇ. 25 ರಷ್ಟು ಕಾಯ್ದಿರಿಸಿದ ಹಣವನ್ನು ಉದ್ಯೋಗಿ ನಿವೃತ್ತಿಯಾದಾಗ (55 ವರ್ಷದ ನಂತರ), ಶಾಶ್ವತ ಅಂಗವೈಕಲ್ಯ ಹೊಂದಿದಾಗ ಅಥವಾ ಸತತ 12 ತಿಂಗಳ ಕಾಲ ಉದ್ಯೋಗವಿಲ್ಲದೆ ಇದ್ದಾಗ ಮಾತ್ರ ಪೂರ್ಣವಾಗಿ ಹಿಂಪಡೆಯಬಹುದು.

ಇಪಿಎಫ್‌ಒ 3.0 ರ ಇತರ ಪ್ರಮುಖ ಡಿಜಿಟಲ್ ಬದಲಾವಣೆಗಳು

ಹೊಸ ಐಟಿ ವ್ಯವಸ್ಥೆಯ ಅಪ್‌ಗ್ರೇಡ್‌ನ ಭಾಗವಾಗಿ ಜೂನ್ 30 ರವರೆಗೆ ಇಪಿಎಫ್‌ಓ ವೆಬ್‌ಸೈಟ್, ಪಾಸ್‌ಬುಕ್ ಮತ್ತು ಕ್ಲೈಮ್ ಸೆಟಲ್‌ಮೆಂಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಜುಲೈ 1 ರಿಂದ ಜಾರಿಗೆ ಬರಲಿರುವ ಇತರ ಪ್ರಮುಖ ಸೌಲಭ್ಯಗಳು ಇಲ್ಲಿವೆ:

ಯುಪಿಐ (UPI) ಮತ್ತು ಎಟಿಎಂ ಮೂಲಕ ಹಣ ವಿತ್‌ಡ್ರಾ: ಇನ್ಮುಂದೆ ಪಿಎಫ್ ಕ್ಲೈಮ್ ಮೊತ್ತವನ್ನು ನೇರವಾಗಿ ಯುಪಿಐ ಮೂಲಕ ಅಥವಾ ಇಪಿಎಫ್‌ಓ ಲಿಂಕ್ಡ್ ಎಟಿಎಂ ಕಾರ್ಡ್ ಬಳಸಿ ಸುಲಭವಾಗಿ ಪಡೆಯುವ ವ್ಯವಸ್ಥೆ ಬರಲಿದೆ.

ಮಾಲೀಕರ ಅನುಮೋದನೆ ಅಗತ್ಯವಿಲ್ಲ: ಆಧಾರ್ ಒಟಿಪಿ (Aadhaar OTP) ಮತ್ತು ಸ್ವಯಂ-ದೃಢೀಕರಣದ (Self-certification) ಮೂಲಕವೇ ಕ್ಲೈಮ್‌ಗಳನ್ನು ಸಲ್ಲಿಸಬಹುದು. ಕಂಪನಿಯ ಮಾಲೀಕರ ಸಹಿ ಅಥವಾ ಅನುಮೋದನೆಯ ಅಗತ್ಯ ಇರುವುದಿಲ್ಲ.

ತ್ವರಿತ ಸೆಟಲ್‌ಮೆಂಟ್ ಹಾಗೂ ₹5 ಲಕ್ಷ ಆಟೋ-ಲಿಮಿಟ್: ಹೊಸ ಆಟೋಮೇಷನ್ ವ್ಯವಸ್ಥೆಯಿಂದಾಗಿ ಶೇ. 95 ರಷ್ಟು ಕ್ಲೈಮ್‌ಗಳು ಕೆಲವೇ ಗಂಟೆಗಳಲ್ಲಿ ಸೆಟಲ್ ಆಗಲಿವೆ. ಆಟೋ-ಸೆಟಲ್‌ಮೆಂಟ್ ಮಿತಿಯನ್ನು ₹1 ಲಕ್ಷದಿಂದ ₹5 ಲಕ್ಷಕ್ಕೆ ಏರಿಸಲಾಗಿದೆ.

ಬಡ್ಡಿ ಜಮೆ: ವ್ಯವಸ್ಥೆಯ ಅಪ್‌ಗ್ರೇಡ್‌ನೊಂದಿಗೆ, 2025-26ರ ಆರ್ಥಿಕ ವರ್ಷಕ್ಕೆ ನಿಗದಿಪಡಿಸಲಾದ ಶೇ. 8.25 ರಷ್ಟು ಬಡ್ಡಿಯ ಮೊತ್ತವನ್ನು ಜೂನ್ 30 ರೊಳಗಾಗಿ ಖಾತೆಗಳಿಗೆ ಜಮೆ ಮಾಡಲಿದ್ದು, ಜುಲೈ 1 ರಿಂದ ಪರಿಷ್ಕೃತ ಪಾಸ್‌ಬುಕ್‌ನಲ್ಲಿ ಇದು ಕಾಣಿಸಿಕೊಳ್ಳಲಿದೆ.

ಹೊಸ ಯೋಜನೆಗಳು: 'ಇಪಿಎಫ್' ಮತ್ತು 'ಇಪಿಎಸ್' 2026

ಕೇಂದ್ರ ಸರ್ಕಾರವು ಹಳೆಯ 'ಇಪಿಎಫ್ ಕಾಯ್ದೆ 1952' ಮತ್ತು 'ಇಪಿಎಸ್ ಕಾಯ್ದೆ 1995' ರ ಬದಲಿಗೆ 'ಉದ್ಯೋಗಿಗಳ ಭವಿಷ್ಯ ನಿಧಿ ಸ್ಕಿಮ್ 2026' ಮತ್ತು 'ಉದ್ಯೋಗಿಗಳ ಪಿಂಚಣಿ ಸ್ಕಿಮ್ 2026' ಅನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಈ ಪ್ರಸ್ತಾವನೆಗಳು ಸದ್ಯ ನ್ಯಾಯಾಂಗ ಸಚಿವಾಲಯದ ಪರಿಶೀಲನೆಯಲ್ಲಿದ್ದು, ಶೀಘ್ರದಲ್ಲೇ ಅಧಿಕೃತ ನೋಟಿಫಿಕೇಶನ್ ಹೊರಬೀಳುವ ಸಾಧ್ಯತೆಯಿದೆ.


Post a Comment

0 Comments