Advertisement

ಪ್ರತಿ ಹನಿಗೆ ಅಧಿಕ ಬೆಳೆ : ಹನಿ ಹಾಗೂ ತುಂತುರು ನೀರಾವರಿ ಘಟಕಗಳ ಅಳವಡಿಕೆಗೆ ಸರ್ಕಾರದಿಂದ ಸಹಾಯಧನ

ಬೇಸಾಯ ಸಿನಿಮಾ ಆಟ ಅಂಕಣ ಸಂಪಾದಕೀಯ ಈ ದಿನ ಫೋಕಸ್‌ ವಿಶೇಷ ಯುದ್ಧ ವರದಿ ಅರ್ಥ ಪ್ರೀಮಿಯಂ ಲೇಖನಗಳು ನರೇಗಾ

ಹನಿ ಹಾಗೂ ತುಂತುರು ನೀರಾವರಿ ಘಟಕಗಳ ಅಳವಡಿಕೆಗೆ ಸರ್ಕಾರದಿಂದ ಸಹಾಯಧನ,ಕೃಷಿಯಲ್ಲಿ ನೀರಿನ ಸದ್ಬಳಕೆ ಮಾಡಿಕೊಂಡು ಅಧಿಕ ಇಳುವರಿ ಪಡೆಯಲು ಬಯಸುವ ರೈತರಿಗೆ ತೋಟಗಾರಿಕೆ ಇಲಾಖೆ ಸಿಹಿಸುದ್ದಿ ನೀಡಿದೆ. 2026-27ನೇ ಸಾಲಿನ ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಪಿಎಂಕೆಎಸ್‌ವೈ) ಅಡಿಯಲ್ಲಿ “ಪ್ರತಿ ಹನಿಗೆ ಅಧಿಕ ಬೆಳೆ” (ಪಿಡಿಎಂಸಿ) ಯೋಜನೆಯಡಿ ಹನಿ ಹಾಗೂ ತುಂತುರು ನೀರಾವರಿ ಘಟಕಗಳ ಅಳವಡಿಕೆಗೆ ಬಂಪ‌ರ್ ಸಹಾಯಧನ ಘೋಷಿಸಲಾಗಿದೆ.

ನೀರಿನ ಕೊರತೆಯನ್ನು ನಿವಾರಿಸಿ, ನೀರಿನ ಬಳಕೆಯ ದಕ್ಷತೆ ಹೆಚ್ಚಿಸುವ ಮೂಲಕ ಬೆಳೆ ಇಳುವರಿ ವೃದ್ಧಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ. ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ ಹಾಗೂ ಅತಿ ಸಣ್ಣ ರೈತರು ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ. ಆದರೆ ಕಾಫಿ, ಟೀ, ರಬ್ಬರ್ ಹಾಗೂ ಅಡಿಕೆ ಬೆಳೆಗಳಿಗೆ ಸಹಾಯಧನ ಅನ್ವಯಿಸುವುದಿಲ್ಲ.

ಈ ಹಿಂದೆ ಸೂಕ್ಷ್ಮ ನೀರಾವರಿ ಯೋಜನೆಯಡಿ ಸಹಾಯಧನ ಪಡೆದು ಏಳು ವರ್ಷಗಳು ಪೂರ್ಣಗೊಂಡಿರುವ ರೈತರಿಗೆ ಮರು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹನಿ ಮತ್ತು ತುಂತುರು ನೀರಾವರಿ ಘಟಕಗಳ ಅಳವಡಿಕೆಗೆ ಪ್ರತಿ ರೈತರಿಗೆ ಗರಿಷ್ಠ 5 ಹೆಕ್ಟೇ‌ರ್ ಪ್ರದೇಶದವರೆಗೆ ಸಹಾಯಧನ ನೀಡಲಾಗುತ್ತದೆ. ತರಕಾರಿ ಹಾಗೂ ಹೂವಿನ ಬೆಳೆಗಳಿಗೆ ಮಾತ್ರ ಗರಿಷ್ಠ 2 ಹೆಕ್ಟೇ‌ರ್ ಮಿತಿ ನಿಗದಿಪಡಿಸಲಾಗಿದೆ.

ಮೊದಲ 2 ಹೆಕ್ಟೇ‌ರ್ ಪ್ರದೇಶದವರೆಗೆ ಎಲ್ಲಾ ವರ್ಗದ ರೈತರಿಗೆ ಶೇ.90ರಷ್ಟು ಹಾಗೂ 2ರಿಂದ 5 ಹೆಕ್ಟೇ‌ರ್ ಪ್ರದೇಶದವರೆಗೆ ಶೇ.45ರಷ್ಟು ಸಹಾಯಧನ ನೀಡಲಾಗುತ್ತದೆ.

ಮುಂಗಡ ನೋಂದಣಿ ಕಡ್ಡಾಯ

ಯೋಜನೆಯಡಿ ಘಟಕ ಅಳವಡಿಸಿಕೊಳ್ಳುವ ರೈತರು ಮೊದಲು ತಮ್ಮ ತಾಲ್ಲೂಕಿನ ತೋಟಗಾರಿಕೆ ಕಚೇರಿಯಲ್ಲಿ ಹೆಸರು ನೋಂದಾಯಿಸಿ ಕಾರ್ಯಾದೇಶ (ವರ್ಕ್‌ ಆರ್ಡರ್) ಪಡೆಯುವುದು ಕಡ್ಡಾಯವಾಗಿದೆ. ಅಗತ್ಯ ದಾಖಲೆಗಳೊಂದಿಗೆ ಸಂಬಂಧಿತ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ (ಜಿಪಂ) ಕಚೇರಿಗೆ ಅರ್ಜಿ ಸಲ್ಲಿಸಬೇಕು.

ಇಲಾಖೆ ಮನವಿ

ಯೋಜನೆಯ ಪ್ರಯೋಜನ ಪಡೆಯಲು ಆಸಕ್ತ ರೈತರು ಕೂಡಲೇ ತಮ್ಮ ತಾಲೂಕಿನ ತೋಟಗಾರಿಕೆ ಇಲಾಖೆ ಕಚೇರಿಯನ್ನು ಸಂಪರ್ಕಿಸಿ ಕಾರ್ಯಾದೇಶ ಪಡೆಯಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ತೋಟಗಾರಿಕೆ ಜಂಟಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಇಲಾಖೆ ತಿಳಿಸಿದೆ.

Post a Comment

0 Comments