ಆಸಕ್ತ ಅಭ್ಯರ್ಥಿಗಳು 2026ರ ಜೂನ್ 27ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳುವುದು ಕಡ್ಡಾಯ.
ಕಲಬುರಗಿ–ಬೀದರ್ ಹಾಗೂ ಯಾದಗಿರಿ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (GUMUL) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಪ್ರಮುಖ ಲಿಂಕ್ ಗಳು
ಸಾಮಾನ್ಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು:
https://virtualofficeerp.com/gumul2026/instruction
ಬ್ಯಾಕ್ಲಾಗ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು:
https://virtualofficeerp.com/gumulbl2026/instruction
ಅಧಿಕೃತ ವೆಬ್ತಾಣ:
https://virtualofficeerp.com/gumul2026
ಪ್ರಮುಖ ದಿನಾಂಕಗಳು
• ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 29-05-2026
• ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 27-06-2026
ಸಂಕ್ಷಿಪ್ತ ಮಾಹಿತಿ
• ನೇಮಕಾತಿ ಸಂಸ್ಥೆ: ಕಲಬುರಗಿ–ಬೀದರ್ ಹಾಗೂ ಯಾದಗಿರಿ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (ಜಿಯುಎಂಯುಎಲ್)
• ವೇತನ ಶ್ರೇಣಿ: 34,100 ರೂಪಾಯಿಯಿಂದ 1,55,200 ರೂ.
• ಒಟ್ಟು ಹುದ್ದೆಗಳು: 55
• ಸಾಮಾನ್ಯ ನೇಮಕಾತಿ ಹುದ್ದೆಗಳು: 50
• ಬ್ಯಾಕ್ಲಾಗ್ ಹುದ್ದೆಗಳು: 5
• ಉದ್ಯೋಗ ಸ್ಥಳ: ಕಲಬುರಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳು
ಬ್ಯಾಕ್ಲಾಗ್ ನೇಮಕಾತಿ ಹುದ್ದೆಗಳು
1. ಸಹಾಯಕ ವ್ಯವಸ್ಥಾಪಕರು (ಪ.ವೈ) – 2
2. ಖರೀದಿ/ಉಗ್ರಾಣ ಅಧಿಕಾರಿ – 1
3. ಹಿರಿಯ ಕೆಮಿಸ್ಟ್ – 1
4. ಕಿರಿಯ ತಾಂತ್ರಿಕರು (ಎಂಆರ್ಎಸಿ) – 1
ಸಾಮಾನ್ಯ ನೇಮಕಾತಿ ಹುದ್ದೆಗಳು
1. ಸಹಾಯಕ ವ್ಯವಸ್ಥಾಪಕರು (ಪ.ವೈ) – 4
2. ಲೆಕ್ಕಾಧಿಕಾರಿ – 1
3. ತಾಂತ್ರಿಕ ಅಧಿಕಾರಿ (ಡಿ.ಟಿ) – 1
4. ಖರೀದಿ/ಉಗ್ರಾಣ ಅಧಿಕಾರಿ – 1
5. ಹಿರಿಯ ಕೆಮಿಸ್ಟ್ – 2
6. ಡೈರಿ ಸೂಪರ್ವೈಸರ್ ದರ್ಜೆ–2 (ಮೆಕಾನಿಕಲ್, ಎಲೆಕ್ಟ್ರಿಕಲ್, ಆರ್ಎಸಿ, ಸಿವಿಲ್) – 5
7. ವಿಸ್ತರಣಾಧಿಕಾರಿ ದರ್ಜೆ–3 – 13
8. ಆಡಳಿತ ಸಹಾಯಕ ದರ್ಜೆ–3 – 6
9. ಲೆಕ್ಕ ಸಹಾಯಕ ದರ್ಜೆ–3 – 12
10. ಮಾರುಕಟ್ಟೆ ಸಹಾಯಕ ದರ್ಜೆ–3 – 12
11. ಕಿರಿಯ ತಾಂತ್ರಿಕರು (ಫಿಟ್ಟರ್, ಎಲೆಕ್ಟ್ರಿಕಲ್, ಬಾಯ್ಲರ್, ಎಂಆರ್ಎಸಿ) – 4
ಸೂಚನೆ: ಮೇಲಿನ ಹುದ್ದೆಗಳ ಸಂಖ್ಯೆಯನ್ನು ಒಟ್ಟು ಮಾಡಿದಾಗ ಅಧಿಸೂಚನೆಯಲ್ಲಿ ಉಲ್ಲೇಖಿಸಿರುವ 50 ಹುದ್ದೆಗಳಿಗಿಂತ ಹೆಚ್ಚು ಬರುತ್ತದೆ. ಆದ್ದರಿಂದ ಮೂಲ ಅಧಿಸೂಚನೆಯನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಪರಿಶೀಲಿಸಬೇಕು.
ಶೈಕ್ಷಣಿಕ ಅರ್ಹತೆ
ಸಹಾಯಕ ವ್ಯವಸ್ಥಾಪಕರು (ಪ.ವೈ): ಬಿವಿಎಸ್ಸಿ ಪದವಿ ಹಾಗೂ ಕಂಪ್ಯೂಟರ್ ಜ್ಞಾನ.
ಲೆಕ್ಕಾಧಿಕಾರಿ: ಪ್ರಥಮ ದರ್ಜೆಯಲ್ಲಿ ಎಂ.ಕಾಂ. ಜೊತೆಗೆ ಸಿಎ/ಐಸಿಡಬ್ಲ್ಯು.
ತಾಂತ್ರಿಕ ಅಧಿಕಾರಿ (ಡಿ.ಟಿ): ಬಿ.ಟೆಕ್ (ಡಿ.ಟಿ)/ಬಿ.ಎಸ್ಸಿ (ಡಿ.ಟಿ) ಪದವಿ ಹಾಗೂ 2 ವರ್ಷಗಳ ಅನುಭವ.
ಖರೀದಿ/ಉಗ್ರಾಣ ಅಧಿಕಾರಿ: ಪ್ರಥಮ ದರ್ಜೆಯಲ್ಲಿ ಬಿ.ಕಾಂ./ಬಿಬಿಎಂ ಜೊತೆಗೆ ಪಿಜಿಡಿಎಂಎಂ ಅಥವಾ ಎಂಬಿಎ (ಮೆಟೀರಿಯಲ್ಸ್) ಹಾಗೂ 2 ವರ್ಷಗಳ ಅನುಭವ.
ಹಿರಿಯ ಕೆಮಿಸ್ಟ್: ಪ್ರಥಮ ದರ್ಜೆಯಲ್ಲಿ ಬಿ.ಎಸ್ಸಿ (ಕೆಮಿಸ್ಟ್ರಿ/ಮೈಕ್ರೋಬಯಾಲಜಿ) ಹಾಗೂ 2 ವರ್ಷಗಳ ಅನುಭವ.
ಡೈರಿ ಸೂಪರ್ವೈಸರ್: ಸಂಬಂಧಿತ ವಿಭಾಗದಲ್ಲಿ ಡಿಪ್ಲೊಮಾ ಹಾಗೂ 2 ವರ್ಷಗಳ ಅನುಭವ.
ವಿಸ್ತರಣಾಧಿಕಾರಿ ದರ್ಜೆ–3: ಯಾವುದೇ ಪದವಿಯಲ್ಲಿ ಪ್ರಥಮ ದರ್ಜೆ ಹಾಗೂ ಕಂಪ್ಯೂಟರ್ ಜ್ಞಾನ.
ಆಡಳಿತ ಸಹಾಯಕ ದರ್ಜೆ–3: ಯಾವುದೇ ಪದವಿಯಲ್ಲಿ ದ್ವಿತೀಯ ದರ್ಜೆ ಹಾಗೂ ಕಂಪ್ಯೂಟರ್ ಜ್ಞಾನ.
ಲೆಕ್ಕ ಸಹಾಯಕ ದರ್ಜೆ–3: ದ್ವಿತೀಯ ದರ್ಜೆಯಲ್ಲಿ ಬಿ.ಕಾಂ. ಪದವಿ ಹಾಗೂ ಟ್ಯಾಲಿ ಜ್ಞಾನ.
ಮಾರುಕಟ್ಟೆ ಸಹಾಯಕ ದರ್ಜೆ–3: ದ್ವಿತೀಯ ದರ್ಜೆಯಲ್ಲಿ ಬಿಬಿಎಂ/ಬಿಬಿಎ ಹಾಗೂ ಕಂಪ್ಯೂಟರ್ ಜ್ಞಾನ.
ಕಿರಿಯ ತಾಂತ್ರಿಕರು: ಎಸ್ಎಸ್ಎಲ್ಸಿ, ಐಟಿಐ ಜೊತೆಗೆ ಅಪ್ರೆಂಟಿಸ್ ಪ್ರಮಾಣಪತ್ರ ಹಾಗೂ 2 ವರ್ಷಗಳ ಅನುಭವ. ಬಾಯ್ಲರ್ ಹುದ್ದೆಗೆ ಬಾಯ್ಲರ್ ಅಟೆಂಡೆಂಟ್ ಪ್ರಮಾಣಪತ್ರ ಕಡ್ಡಾಯ.
ವಯೋಮಿತಿ
ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸು ಪೂರೈಸಿರಬೇಕು.
ಸರ್ಕಾರದ ವಿಶೇಷ ಆದೇಶದಂತೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡಲಾಗಿದ್ದು, ಗರಿಷ್ಠ ವಯೋಮಿತಿ ಹೀಗಿದೆ:
• ಸಾಮಾನ್ಯ ಅಭ್ಯರ್ಥಿಗಳು – 40 ವರ್ಷ
• ಒಬಿಸಿ (2ಎ, 2ಬಿ, 3ಎ, 3ಬಿ) – 43 ವರ್ಷ
• ಎಸ್ಸಿ/ಎಸ್ಟಿ ಹಾಗೂ ಪ್ರವರ್ಗ–1 – 45 ವರ್ಷ
• ವಿಕಲಚೇತನ ಅಭ್ಯರ್ಥಿಗಳಿಗೆ ಹೆಚ್ಚುವರಿಯಾಗಿ 10 ವರ್ಷಗಳ ಸಡಿಲಿಕೆ
ಮಾಜಿ ಸೈನಿಕರು ಹಾಗೂ ವಿಧವೆಯರಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳಿಗೆ 200 ಅಂಕಗಳ ಲಿಖಿತ ಪರೀಕ್ಷೆ ನಡೆಸಲಾಗುವುದು. ಲಿಖಿತ ಪರೀಕ್ಷೆಯ ಅಂಕಗಳಿಗೆ ಶೇ.85 ಹಾಗೂ ಮೌಖಿಕ ಸಂದರ್ಶನಕ್ಕೆ ಶೇ.15 ತೂಕ ನೀಡಿ ಅಂತಿಮ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ 1:5 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು.
ಅರ್ಜಿ ಶುಲ್ಕ
• ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳು – 1,000 (ಗೇಟ್ ವೇ ಶುಲ್ಕ ಹೆಚ್ಚುವರಿ)
• ಎಸ್ಸಿ/ಎಸ್ಟಿ, ಪ್ರವರ್ಗ–1 ಹಾಗೂ ವಿಕಲಚೇತನ ಅಭ್ಯರ್ಥಿಗಳು – 500 (ಗೇಟ್ವೇ ಶುಲ್ಕ ಹೆಚ್ಚುವರಿ)
ಪಾವತಿ ವಿಧಾನ
ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಆನ್ಲೈನ್ ಪಾವತಿ ವ್ಯವಸ್ಥೆಯ ಮೂಲಕ ಪಾವತಿಸಬೇಕು.
0 Comments