Poultry Scheme-ಕರ್ನಾಟಕ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ರಾಜ್ಯದ ರೈತ ಮಹಿಳೆಯರಿಗೆ ನಾಟಿ ಕೋಳಿ ಸಾಕಾಣಿಕೆ (Poultry Scheme) ಮಾಡುವ ಮೂಲಕ ಆರ್ಥಿಕ ಸ್ವಾವಲಂಬನೆಗಾಗಿ ಉಚಿತ ಕೋಳಿ ಮರಿ ವಿತರಣೆ ಮಾಡುತ್ತಿದೆ. ಈ ವಿಶೇಷ ಯೋಜನೆಯಡಿ ಅರ್ಹ ರೈತ ಮಹಿಳೆಯರಿಗೆ ನಾಲ್ಕು ವಾರದ ನಾಟಿ ಕೋಳಿ ಮರಿಗಳನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ನಾಟಿ ಕೋಳಿ ಸಾಕಾಣಿಕೆ (Poultry Scheme): ರೈತರಿಗೆ ಹೊಸ ಆಯ್ಕೆ
ಹೈನುಗಾರಿಕೆ, ಕೋಳಿ ಸಾಕಾಣಿಕೆ ಮುಂತಾದ ಉಪ ಕಸುಬು ರೈತರ ಆದಾಯದಲ್ಲಿ ಹೊಸ ಆಯಾಮವನ್ನು ತಂದಿದ್ದು, ನಾಡಿನ ಹವಾಮಾನ ಬದಲಾವಣೆ ಹಿನ್ನೆಲೆಯಲ್ಲಿ ಕೃಷಿ ಮಾತ್ರವಲ್ಲ, ಕೋಳಿ ಸಾಕಾಣಿಕೆ ಹಾಗೂ ಕುರಿ ಸಾಕಾಣಿಕೆ ಕೂಡ ಆರ್ಥಿಕ ಸ್ಥಿರತೆಯ ಪ್ರಮುಖ ಮಾರ್ಗವಾಗಿದೆ. ನಾಟಿ ಕೋಳಿಗಳಿಗೆ ಉತ್ತಮ ಮಾರುಕಟ್ಟೆ ಬೆಲೆ ಸಿಗುತ್ತಿರುವ ಕಾರಣ, ಈ ಯೋಜನೆ ರೈತ ಮಹಿಳೆಯರಿಗೆ ಉತ್ತಮ ಆರ್ಥಿಕ ಅವಕಾಶವಾಗಿದೆ.
ಯಾರು ಅರ್ಜಿ ಸಲ್ಲಿಸಬಹುದು?
ಎಲ್ಲಾ ವರ್ಗದ ರೈತ ಮಹಿಳೆಯರು ನಾಟಿ ಕೋಳಿ ಮರಿಗಳಿಗೆ ಅರ್ಜಿ ಸಲ್ಲಿಸಬಹುದು.
ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ರೈತ ಮಹಿಳೆಯರು ಅರ್ಜಿ ಸಲ್ಲಿಸಲು ಅರ್ಹರು.
ಹಿಂದಿನ ವರ್ಷದಲ್ಲಿ ಕೋಳಿ ಮರಿ ಪಡೆದವರಿಗೆ ಪ್ರಸ್ತುತ ವರ್ಷಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
ಅರ್ಜಿ ಸಲ್ಲಿಸುವ ವಿಧಾನ
ತನ್ನ ತಾಲ್ಲೂಕಿನ ಪಶುಪಾಲನಾ ಇಲಾಖೆಯನ್ನು ನೇರವಾಗಿ ಭೇಟಿಯಾಗಿ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವಾಗ ಈ ಕೆಳಗಿನ ದಾಖಲೆಗಳನ್ನು ಹೊಂದಿರುವುದು ಅಗತ್ಯ –
ಅಗತ್ಯ ದಾಖಲೆಗಳು
ಆಧಾರ್ ಕಾರ್ಡ್ (Aadhar Card)
ಇತ್ತೀಚಿನ ಪೋಟೋ (Recent Photo)
ಬ್ಯಾಂಕ್ ಪಾಸ್ ಬುಕ್ (Bank Passbook)
ಜಮೀನಿನ ಪಹಣಿ / RTC (Land Record)
ಸಕ್ರಿಯ ಮೊಬೈಲ್ ನಂಬರ್ (Mobile Number)
ನಾಟಿ ಕೋಳಿ ಸಾಕಾಣಿಕೆಯ ಪ್ರಯೋಜನಗಳು
ಕೋಳಿ ಮರಿಗಳನ್ನು 3-4 ತಿಂಗಳ ವರೆಗೆ, ಉತ್ತಮ ತಾಳ್ಮೆಯಿಂದ ಸಾಕುವ ಮೂಲಕ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟ ಮಾಡಿ ಲಾಭ ಗಳಿಸಬಹುದು.
ಕೋಳಿ ಮೊಟ್ಟೆ ಮತ್ತು ಮಾಂಸಕ್ಕೆ ಸ್ಥಿರ ಬೇಡಿಕೆಯಿದ್ದು, ರೈತರಿಗೆ ಉತ್ತಮ ಆದಾಯದ ಮಾರ್ಗ ಆಗಿದೆ.
ರೈತ ಮಹಿಳೆಯರು ಈ ಕಾಯಕವನ್ನು ಮಾಡುವ ಮೂಲಕ ಆರ್ಥಿಕವಾಗಿ ಸಭಲರಾಗುವುದಲ್ಲದೇ, ರೈತರ ನಡುವೆ ಕೋಳಿ ಸಾಕಾಣಿಕೆಯ ಅನುಭವವನ್ನು ಹಂಚಿಕೊಳ್ಳಲು ಸಾಧ್ಯವಾಗಲಿದೆ.
ಹೆಚ್ಚಿನ ಮಾಹಿತಿಗಾಗಿ
ನಿಮ್ಮ ತಾಲ್ಲೂಕಿನ ಪಶುಪಾಲನಾ ಕಚೇರಿಗೆ ಕಚೇರಿಯ ಸಮಯದಲ್ಲಿ ಭೇಟಿ ನೀಡಿ, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮತ್ತು ಯೋಜನೆಯ ವಿವರಗಳನ್ನು ಕೇಳಿ ತಿಳಿದುಕೊಳ್ಳಲು ಸಾಧ್ಯವಾಗಲಿದೆ.
ಅಥವಾ ಅಧಿಕೃತ ವೆಬ್ಸೈಟ್ ನೋಡಿ:
ಈ (Poultry Scheme) ಯೋಜನೆಯ ಮೂಲಕ ಗ್ರಾಮೀಣ ಭಾಗದ ರೈತ ಮಹಿಳೆಯರಿಗೆ ಆರ್ಥಿಕ ಅವಕಾಶ ಹೆಚ್ಚಿಸಿಕೊಳ್ಳುವುದಕ್ಕೆ ಉತ್ತಮ ಹಾದಿ ಇದಾಗಿದೆ. ಈಗಲೇ ಅರ್ಜಿ ಸಲ್ಲಿಸಿ,
ಈ ಯೋಜನೆಯ ಸಹಾಯವನ್ನು ಪಡೆದುಕೊಳ್ಳಿ.