Digital e-Stamp-ಛಾಪಾ ಕಾಗದ ದಾಖಲೆಗಳಿಗೆ ಈಗ ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ಜಾರಿ

ಕರ್ನಾಟಕ ಸರ್ಕಾರದ ಸ್ಟ್ಯಾಂಪ್ ಮತ್ತು ನೋಂದಣಿ ಇಲಾಖೆಯು ಡಿಸೆಂಬರ್ 2 2025 ರಂದು ನೋಂದಣಿ ಮತ್ತು ನೋಂದಣಿಯೇತರ(e-Stamp Portal)ಛಾಪಾ ಕಾಗದ ವಹಿವಾಟುಗಳಿಗೆ ಬಳಸುವ ‘ಇ– ಸ್ಟ್ಯಾಂಪ್‌’ ಬದಲಿಗೆ ‘ಡಿಜಿಟಲ್‌ ಇ– ಸ್ಟ್ಯಾಂಪ್‌’ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಇದು ಕರ್ನಾಟಕ ಸ್ಟ್ಯಾಂಪ್ (ತಿದ್ದುಪಡಿ) ಕಾಯಿದೆ 2025 ಅಡಿಯಲ್ಲಿ ಸ್ಟ್ಯಾಂಪ್ ಡ್ಯೂಟಿ ವಹಿವಾಟುಗಳಿಗಾಗಿ ಸಾಂಪ್ರದಾಯಿಕ ಇ-ಸ್ಟ್ಯಾಂಪ್ ಅನ್ನು ಬದಲಾಯಿಸುತ್ತದೆ.

ಪ್ರಸ್ತುತ ದಿನಗಳಲ್ಲಿ ಛಾಪಾ ಕಾಗದ ದಾಖಲೆಗಳ ವಹಿವಾಟು ಈಗ ಇನ್ನಷ್ಟು ಸುಗಮವಾಗಿದೆ. ಪರಂಪರೆಯ(Online Agreement Stamp) ಕಾಗದ ಆಧಾರಿತ ಸ್ಟ್ಯಾಂಪ್ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸುವ ಉದ್ದೇಶದಿಂದ ಸರ್ಕಾರವು ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆಯನ್ನು ಅಧಿಕೃತವಾಗಿ ಜಾರಿಗೆ ತರಲಾಗಿದೆ.

ಈ ವ್ಯವಸ್ಥೆಯ ಮೂಲಕ ವ್ಯಾಪಾರಿಗಳು ಹಾಗೂ ನಾಗರಿಕರು ತಮ್ಮ ಛಾಪಾ ಕಾಗದ ದಾಖಲೆಗಳಿಗೆ ಬೇಕಾದ ಸ್ಟ್ಯಾಂಪ್ ಶೂಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಬಹುದು. ಇದರಿಂದ ನಕಲಿ ಸ್ಟ್ಯಾಂಪ್‌ಗಳ ಬಳಕೆ ತಡೆಗಟ್ಟಲಾಗುವುದಲ್ಲದೆ ಸಮಯ, ಹಣ ಮತ್ತು ಕಾಗದದ ವ್ಯರ್ಥ ವ್ಯಯವೂ ಕಡಿಮೆಯಾಗಲಿದೆ.

ಈ ಲೇಖನದಲ್ಲಿ ಡಿಜಿಟಲ್ ಇ-ಸ್ಟ್ಯಾಂಪ್ ಎಂದರೇನು? ಡಿಜಿಟಲ್ ಇ-ಸ್ಟ್ಯಾಂಪ್ ಇದರ ಪ್ರಯೋಜನಗಳೇನು? ಈ ಡಿಜಿಟಲ್ ವ್ಯವಸ್ಥೆಯ ಅಗತ್ಯಗಳಾವುವು? ಆನ್ಲೈನ್ ಮೂಲಕ ಹೇಗೆ ಪಡೆಯಬಹುದು? ಇನ್ನೂ ಹೆಚ್ಚಿನ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

What is e-Stamp-ಏನಿದು ಡಿಜಿಟಲ್ ಇ-ಸ್ಟ್ಯಾಂಪ್?

ಡಿಜಿಟಲ್ ಇ-ಸ್ಟ್ಯಾಂಪ್ ಎಂಬುದು ಸಾಂಪ್ರದಾಯಿಕ ಸ್ಟ್ಯಾಂಪ್ ಪೇಪರ್‌ನ ಡಿಜಿಟಲ್ ರೂಪವಾಗಿದೆ. ಸ್ಟ್ಯಾಂಪ್ ಪೇಪರ್ ಖರೀದಿಸಲು ಬ್ಯಾಂಕ್‌ಗಳು ಅಥವಾ ಪರವಾನಗಿ ಪಡೆದ ಮಾರಾಟಗಾರರ ಬಳಿಗೆ ಹೋಗುವ ಅವಶ್ಯಕತೆ ಇಲ್ಲದೆ, ಆನ್‌ಲೈನ್ ಮೂಲಕಲೇ ಸ್ಟ್ಯಾಂಪ್ ಶೂಲ್ಕ ಪಾವತಿಸಿ ತಕ್ಷಣ ಡಿಜಿಟಲ್ ಸ್ಟ್ಯಾಂಪ್ ಪ್ರಮಾಣ ಪತ್ರ (e-Stamp Certificate) ಪಡೆಯುವ ವ್ಯವಸ್ಥೆಯಾಗಿದ್ದು,ಇದು ಆಧಾರ್ ಆಧಾರಿತ ದೃಢೀಕರಣದೊಂದಿಗೆ ಡಿಜಿಟಲ್ ಸಹಿಗಳನ್ನು ಬಳಸಿ ಭದ್ರವಾಗಿರುತ್ತದೆ.

Uses Of This Scheme-ಈ ಹೊಸ ಡಿಜಿಟಲ್ ವ್ಯವಸ್ಥೆಯಿಂದಾಗುವ ಪ್ರಯೋಜನಗಳಾವುವು?

ಸುರಕ್ಷತೆ (High Security)

ಡಿಜಿಟಲ್ ಸಹಿ ಮತ್ತು ಆಧಾರ್ ದೃಢೀಕರಣದಿಂದ ದಾಖಲೆಗಳ ನಕಲಿ ಮಾಡುವ ಸಾಧ್ಯತೆಯನ್ನು ತಡೆಯುತ್ತದೆ.

ಪ್ರತಿಯೊಂದು ಇ-ಸ್ಟ್ಯಾಂಪ್‌ಗೆ ಯೂನಿಕ್ QR ಕೋಡ್, ರೆಫರೆನ್ಸ್ ಸಂಖ್ಯೆ ಇರುವುದರಿಂದ ಸುಲಭವಾಗಿ ಪರಿಶೀಲನೆಯನ್ನು ಮಾಡಬಹುದು.

ನಾಗರಿಕರಿಗೆ ಆಗುವ ವಂಚನೆ, ಮೋಸ ಮತ್ತು ದುರಪಯೋಗಗಳ ವಿರುದ್ಧ ಹೆಚ್ಚಿನ ರಕ್ಷಣೆಯನ್ನು ನೀಡಲು ಸಹಾಯಕಾರಿಯಾಗಿದೆ.

ಹೇಗೆ ಸೌಲಭ್ಯ ಪಡೆಯಬಹುದು:

ಸ್ಟ್ಯಾಂಪ್ ಪೇಪರ್ ಖರೀದಿಸಲು ಬ್ಯಾಂಕ್ ಅಥವಾ ಸರ್ಕಾರಿ ಕಚೇರಿಗಳಿಗೆ ಹೋಗುವ ಅಗತ್ಯವಿರುವುದಿಲ್ಲ.

ಗ್ರಾಹಕರು ತಮ್ಮ ಮನೆಯಿಂದಲೇ, ಮೊಬೈಲ್/ಕಂಪ್ಯೂಟರ್ ಮೂಲಕ ಯಾವಾಗ ಬೇಕಾದರೂ ತಯಾರು ಮಾಡಿಕೊಳ್ಳಬಹುದು.

ಕಾಗದರಹಿತ ಪ್ರಕ್ರಿಯೆ ಹೇಗೆ (Paperless & Eco-Friendly):

ಸಂಪೂರ್ಣ ಆನ್‌ಲೈನ್, ಮುದ್ರಣದ ಅವಶ್ಯಕತೆ ಕಡಿಮೆ ಇರುತ್ತದೆ.

ಪರಿಸರ ಸ್ನೇಹಿ ಕಾಗದ ಬಳಕೆ ಕಡಿಮೆಯಾಗುತ್ತದೆ.

ಡಿಜಿಟಲ್ ದಾಖಲೆಗಳನ್ನು ಸುರಕ್ಷಿತವಾಗಿ ಸಂಗ್ರಹಿಸಬಹುದು.

ಕಾನೂನು ಮಾನ್ಯತೆ (Full Legal Validity)

ಇ-ಸ್ಟ್ಯಾಂಪ್ ಪ್ರಮಾಣ ಪತ್ರಕ್ಕೂ ಭೌತಿಕ ಸ್ಟ್ಯಾಂಪ್ ಪೇಪರ್‌ಗೆ ನೀಡುವಷ್ಟು ಕಾನೂನುಬದ್ಧ ಮಾನ್ಯತೆಯನ್ನು ಒದಗಿಸುತ್ತದೆ.

ನ್ಯಾಯಾಲಯ, ಇಲಾಖೆ, ಬ್ಯಾಂಕ್ ಮತ್ತು ಎಲ್ಲ ಅಧಿಕೃತ ಸ್ಥಳಗಳಲ್ಲಿ ಮಾನ್ಯವಾಗಿರುತ್ತದೆ.

ಅತ್ಯಂತ ವೇಗದ ಪ್ರಕ್ತಿಯೆ (Fast & Efficient Process)

ಕೆಲವೇ ನಿಮಿಷಗಳಲ್ಲಿ ಪಾವತಿ ಮತ್ತು ಪ್ರಮಾಣ ಪತ್ರವನ್ನು ರೆಡಿ ಮಾಡಬಹುದು.

ಹಳೆಯ ಕ್ರಮದ ಹಾಗೆ queues, verification delay ಮೊದಲಾದವುಗಳ ಪ್ರಕ್ರಿಯೆ ಇರುವುದಿಲ್ಲ.

ಹಣದ ವೆಚ್ಚ ಉಳಿತಾಯ (Cost Saving)

ಪ್ರಯಾಣ, ಮುದ್ರಣ ಮತ್ತು ಮಧ್ಯವರ್ತಿ ವೆಚ್ಚಗಳು ಸಂಪೂರ್ಣವಾಗಿ ಉಳಿದು, ಆನ್‌ಲೈನ್ ಪಾವತಿಯಿಂದ ಸಮಯ-ಹಣ ಉಳಿತಾಯವಾಗುತ್ತದೆ ಹಾಗೂ ದಾಖಲೆ ಸಂಗ್ರಹಣೆಗೆ ಹೆಚ್ಚುವರಿ ವೆಚ್ಚವೂ ಬರುವುದಿಲ್ಲ.

ಯಾವ ಯಾವ ದಾಖಲಾತಿಗಳಿಗೆ ಡಿಜಿಟಲ್ ಇ-ಸ್ಟ್ಯಾಂಪ್ ಬಳಸಬಹುದು?

ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆಯನ್ನು ಈ ಕೆಳಕಂಡ ಸಂದರ್ಭಗಳಲ್ಲಿ ಬಳಸಬಹುದು:

ಒಪ್ಪಂದ ಪತ್ರಗಳು (Agreement Documents).

ಮನೆ ಬಾಡಿಗೆ ಒಪ್ಪಂದಗಳು.

ಮಾರಾಟ ಹಾಗೂ ಖರೀದಿ ದಾಖಲೆಗಳು.

ಕರಾರು ಮತ್ತು ಇತರೆ ಕಾನೂನು ದಾಖಲೆಗಳು.

ನೋಟರಿ ದೃಢೀಕೃತ ದಾಖಲೆಗಳು.

ವ್ಯಾಪಾರ ಮತ್ತು ಕಂಪನಿ ಸಂಬಂಧಿತ ಪತ್ರಿಕೆಗಳು.

ಪ್ರಮಾಣ ಪತ್ರ ಬೇಕಾಗಿರುವ ಇತರೆ ಎಲ್ಲಾ ದಾಖಲೆಗಳು.

ಈ ಡಿಜಿಟಲ್ ಸೇವೆಯನ್ನು ಹೇಗೆ ಪಡೆಯಬಹುದು?

Step-1: ಮೊದಲಿಗೆ ಈ ಲಿಂಕ್ ಮೇಲೆ "Click Here" ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬೇಕು. ನಂತರ One-time Registration ಮೂಲಕ ನಿಮ್ಮ ಖಾತೆಯನ್ನು ರಚನೆ ಮಾಡಿಕೊಂಡು ಲಾಗಿನ್ ಆಗಬೇಕು.

Step-2: ಅಗತ್ಯವಿರುವ ದಾಖಲೆ ಪ್ರಕಾರ ಆಯ್ಕೆ ಮಾಡಿ(ಉದಾ: ಬಾಡಿಗೆ, ಅಫಿಡವಿಟ್, ಮಾರಾಟ ಒಪ್ಪಂದ) ವಿವರ ಮತ್ತು ಸ್ವಂತ ವಿಷಯ ಸೇರಿಸಿ, ಆಸ್ತಿ ಇದ್ದರೆ ಸರ್ಕಾರದ ಡೇಟಾಬೇಸ್ ಮೂಲಕ ಪರಿಶೀಲನೆ ಮಾಡುತ್ತದೆ.

Step-3: ಅರ್ಜಿದಾರರು ಹಾಗೂ ಸಹಿ ಮಾಡುವ ಎಲ್ಲರೂ Aadhaar OTP ಮೂಲಕ e-KYC ದೃಢೀಕರಿಸಬೇಕು.

Step-4: ನಂತರ ಪೋರ್ಟಲ್ ಸ್ಟ್ಯಾಂಪ್ ಡ್ಯೂಟಿ ಲೆಕ್ಕಿಸಿ, Treasury Payment Gateway ಮೂಲಕ ಪಾವತಿ ಮಾಡಿ, ಯಶಸ್ವಿ ಆದ ಬಳಿಕ ಡಿಜಿಟಲ್ e-Stamp ಸೃಷ್ಟಿಯಾಗುತ್ತದೆ.

Step-5: ಸಹಿ ಮಾಡುವ ಎಲ್ಲರ ಮೊಬೈಲ್‌ ನಂಬರ್ ಗೆ e-Sign ಲಿಂಕ್ ಬರುತ್ತದೆ, Aadhaar e-Sign ಅಥವಾ DSC ಮೂಲಕ ಸಹಿ ಮಾಡಿ, ಎಲ್ಲರೂ ಸಹಿ ಮಾಡಿದ ನಂತರ ಮಾನ್ಯವಾದ e-Document ಪಡೆಯಬಹುದು ಮತ್ತು ಅದನ್ನು ಡೌನ್‌ಲೋಡ್ ಮಾಡಿ ನೋಂದಣಿ/ಇತರೆ ಕಾರ್ಯಗಳಿಗೆ ಬಳಸಬಹುದು..



Previous Post Next Post