Cow Shed Subsidy-ಹಸು ಕೊಟ್ಟಿಗೆ ನಿರ್ಮಾಣಕ್ಕೆ ₹57,000/- ಸಹಾಯಧನ ಪಡೆಯುವುದು ಹೇಗೆ

ಗ್ರಾಮೀಣ ಭಾಗದ ರೈತರಿಗೆ ಹಸು ಸಾಕಾಣಿಕೆಯನ್ನು ಕೈಗೊಳ್ಳಲು ಹಾಗೂ ಈಗಾಗಲೇ ಸಾಕಾಣಿಕೆಯನ್ನು ಮಾಡುತ್ತಿರುವ ರೈತರಿಗೆ ಕೊಟ್ಟಿಗೆಯನ್ನು ನಿರ್ಮಾಣ(Cow Shed Subsidy In Karnataka)ಮಾಡಿಕೊಳ್ಳಲು ಆರ್ಥಿಕ ನೆರವನ್ನು ಒದಗಿಸಲು ಗ್ರಾಮ ಪಂಚಾಯಿತಿ ಮೂಲಕ ನರೇಗಾ ಯೋಜನೆಯಡಿ ₹57,000/- ಸಹಾಯಧನವನ್ನು ಒದಗಿಸಲು ಅವಕಾಶವಿದ್ದು, ಇದಕ್ಕಾಗಿ ರೈತರು ಅರ್ಜಿ ಸಲ್ಲಿಸುವುದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ಕೃಷಿಕರು ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಂಡು ದಿನನಿತ್ಯದ ಖರ್ಚು ವೆಚ್ಚವನ್ನು ಸರಿದೂಗಿಸಿಕೊಂಡು ಹೋಗಲು ಬಹುತೇಕ ಬಯಲು ಸೀಮೆಯ ಗ್ರಾಮೀಣ ಮಟ್ಟದ ಎಲ್ಲಾ ರೈತರ ಮನೆಯಲ್ಲಿ 2-3 ಹಸುಗಳು ಇದ್ದೇ ಇರುತ್ತವೆ ಈ ನಿಟ್ಟಿನಲ್ಲಿ ಇಂತಹ ರೈತರಿಗೆ ಕೊಟ್ಟಿಗೆಯನ್ನು ನಿರ್ಮಾಣ ಮಾಡಿಕೊಳ್ಳಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ(MGNREG) ಯೋಜನೆ ಅಡಿ ಸಹಾಯಧನವನ್ನು ಒದಗಿಸಲು ಅವಕಾಶವಿದ್ದು ಈ ಕುರಿತು ಒಂದಿಷ್ಟು ಅಗತ್ಯ ಮಾಹಿತಿ ಇಲ್ಲಿದೆ.

ರೈತರು ಗ್ರಾಮ ಪಂಚಾಯಿತಿಯಿಂದ ಹಸು ಕೊಟ್ಟಿಗೆ ನಿರ್ಮಾಣಕ್ಕೆ(Cow Shed Subsidy) ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳೇನು? ಅರ್ಜಿ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತದೆ? ಎಷ್ಟು ಸಹಾಯಧನ ಒದಗಿಸಲಾಗುತ್ತದೆ? ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗೆ ವಿವರಿಸಲಾಗಿದೆ.

Who Can Apply For Cow Shed Subsidy-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೊಟ್ಟಿಗೆ ನಿರ್ಮಾಣ ಮಾಡಿಕೊಳ್ಳಲು ಸಹಾಯಧನವನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎನ್ನುವ ವಿವರ ಈ ಕೆಳಗಿನಂತಿವೆ:

ಗ್ರಾಮೀಣ ಭಾಗದಲ್ಲಿ ವಾಸಿಸುವ ರೈತರು ಮಾತ್ರ ಅರ್ಜಿ ಸಲ್ಲಿಸಬಹುದು.

ಸಣ್ಣ ಮತ್ತು ಅತೀ ಸಣ್ಣ ರೈತರು ಅರ್ಜಿ ಸಲ್ಲಿಸಲು ಅರ್ಹರು.

ಉದ್ಯೋಗ ಚೀಟಿಯನ್ನು ಹೊಂದಿರುವ ರೈತರು ಅರ್ಜಿ ಸಲ್ಲಿಸಬಹುದು.

ಹಸು ಸಾಕಾಣಿಕೆಯನ್ನು ಮಾಡುವ ರೈತರು ಅರ್ಜಿ ಸಲ್ಲಿಸಬಹುದು.

How To Apply For Cow Shed Subsidy-ಅರ್ಜಿ ಸಲ್ಲಿಸುವುದು ಹೇಗೆ?

ಕೊಟ್ಟಿಗೆಯನ್ನು ನಿರ್ಮಾಣ ಮಾಡಿಕೊಳ್ಳಲು ಆಸಕ್ತಿಯನ್ನು ಹೊಂದಿರುವ ರೈತರು ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ಗ್ರಾಮ ಪಂಚಾಯಿತಿ ಕಚೇರಿಯನ್ನು ಭೇಟಿ ಮಾಡಿ ಕ್ರಿಯಾ ಯೋಜನೆಯಲ್ಲಿ ನಿಮ್ಮ ಹೆಸರನ್ನು ಸೇರ್ಪಡೆ ಮಾಡಿ ಅನುಮೋದನೆಗೆ ಕಳುಹಿಸಲು ಅರ್ಜಿ ಸಲ್ಲಿಸಬೇಕು.

Cow Shed Subsidy Amount-ಎಷ್ಟು ಸಬ್ಸಿಡಿ ಪಡೆಯಬಹುದು?

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ(MGNREG) ಯೋಜನೆ ಅಡಿಯಲ್ಲಿ ಹಸು/ಎಮ್ಮೆ ಸಾಕಾಣಿಕೆಯನ್ನು ಮಾಡಲು ಕೊಟ್ಟಿಗೆಯನ್ನು ನಿರ್ಮಾಣ ಮಾಡಿಕೊಳ್ಳಲು ಒಟ್ಟು 57,000/- ಸಹಾಯಧನವನ್ನು ಪಡೆಯಲು ಅವಕಾಶವಿದ್ದು ಇದರಲ್ಲಿ ಕೂಲಿ ವೆಚ್ಚ ರೂ10,556/- ಮತ್ತು ಸಾಮಾಗ್ರಿ ವೆಚ್ಚ ರೂ 46,644/- ಒಳಗೊಂಡಿರುತ್ತದೆ.

How To Apply For Dairy Shed Subsidy-ಅರ್ಜಿ ಸಲ್ಲಿಸುವುದು ಹೇಗೆ?

ನರೇಗಾ ಯೋಜನೆ ಅಡಿಯಲ್ಲಿ ಹಸು/ಎಮ್ಮೆ ಸಾಕಾಣಿಕೆಗೆ ಶೆಡ್ ಅನ್ನು ನಿರ್ಮಾಣ ಮಾಡಿಕೊಳ್ಳಲು ಆಸಕ್ತಿಯನ್ನು ಹೊಂದಿರುವವರು ಮೊದಲಿಗೆ ನಿಮ್ಮ ಹಳ್ಳಿ ವ್ಯಾಪ್ತಿಯ ಗ್ರಾಮ ಪಂಚಾಯತಿಯನ್ನು ನೇರವಾಗಿ ಅಗತ್ಯ ದಾಖಲಾತಿಗಳ ಸಮೇತ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಿ ಕ್ರಿಯಾಯೋಜನೆಯಲ್ಲಿ ನಿಮ್ಮ ಕಾಮಗಾರಿಯನ್ನು ಸೇರಿಸಿ ಅನುಮೋದನೆಯನ್ನು ಪಡೆದುಕೊಂಡು ಶೆಡ್ ನಿರ್ಮಾಣ ಮಾಡಿ ಹಂತ ಹಂತವಾಗಿ ಸಹಾಯಧನವನ್ನು ಪಡೆದುಕೊಳ್ಳಬಹುದು.

Documents For Dairy Shed Subsidy-ಕೊಟ್ಟಿಗೆ ನಿರ್ಮಾಣಕ್ಕೆ ಬೇಕಾಗುವ ಅಗತ್ಯ ದಾಖಲೆಗಳು:

ರೈತರು ಒಮ್ಮೆ ಗ್ರ‍ಾಮ ಪಂಚಾಯಿತಿಯನ್ನು ಭೇಟಿ ಮಾಡಿ ಕ್ರಿಯಾ ಯೋಜನೆಯಲ್ಲಿ ನಿಮ್ಮ ಹೆಸರನ್ನು ಸೇರ್ಪಡೆ ಮಾಡಿ ಅನುಮೋದನೆಯನ್ನು ಪಡೆದ ಬಳಿಕ ಕೊಟ್ಟಿಗೆಯನ್ನು ನಿರ್ಮಾಣ ಮಾಡಿಕೊಳ್ಳಲು ಅವಶ್ಯವಿರುವ ದಾಖಲೆಗಳ ಪಟ್ಟಿ ಹೀಗಿದೆ:

ಅರ್ಜಿದಾರ ಕುಟುಂಬದ ಜಾಬ್ ಕಾರ್ಡ ಪ್ರತಿ.

ರೈತರ ಆಧಾರ್ ಕಾರ್ಡ.

ಕೊಟ್ಟಿಗೆ ನಿರ್ಮಾಣ ಜಾಗದ ದಾಖಲೆ.

ಬ್ಯಾಂಕ್ ಪಾಸ್ ಬುಕ್ ಪ್ರತಿ.

ಸ್ಥಳೀಯ ಪಶು ವೈದ್ಯಾಧಿಕಾರಿಗಳಿಂದ ಹಸು ಸಾಕಾಣಿಕೆ ಕುರಿತು ದೃಡೀಕರಣ ಪತ್ರ.

ಜಾತಿ ಪ್ರಮಾಣ ಪತ್ರ.

Application Proccess-ಅರ್ಜಿ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತದೆ?

ರೈತರು ಕೊಟ್ಟಿಗೆ ನಿರ್ಮಾಣಕ್ಕೆ ಕ್ರಿಯಾ ಯೋಜನೆಯಲ್ಲಿ ನಿಮ್ಮ ಹೆಸರನ್ನು ಸೇರ್ಪಡೆ ಮಾಡಲು ಅದಷ್ಟು ಪ್ರತಿ ವರ್ಷ ಮೇ-ಜೂನ್ ತಿಂಗಳ ಒಳಗಾಗೆ ಅರ್ಜಿ ಸಲ್ಲಿಸಿ ಅಕ್ಟೋಬರ್ ನಂತರ ಅನುಮೋದನೆಗೆ ಅರ್ಜಿ ಸಲ್ಲಿಸಿದರೆ ಮುಂದಿನ ಏಪ್ರಿಲ್ ನಂತರ ಕೊಟ್ಟಿಗೆ ನಿರ್ಮಾಣ ಮಾಡಲು ಅವಕಾಶವಿರುತ್ತದೆ. ಕ್ರಿಯಾ ಯೋಜನೆಯಲ್ಲಿ ಹೆಸರು ಸೆರ್ಪಡೆಯಾದ ಬಳಿಕವೇ ಕೊಟ್ಟಿಗೆ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿಯಿಂದ ಅವಕಾಶ ನೀಡಲಾಗುತ್ತದೆ.

GPS Photo-ಮೂರು ಹಂತದ ಜಿಪಿಎಸ್ ಪೋಟೋ:

ನರೇಗಾ ಯೋಜನೆಯಡಿ ಕೊಟ್ಟಿಗೆ ನಿರ್ಮಾಣಕ್ಕೂ ಮುನ್ನ ಪ್ರಾರಂಭಿಕ ಹಂತದಲ್ಲಿ ಖಾಲಿ ಜಾಗದ ಪೋಟೋ ನಂತರ ಅರ್ಧ ಕೆಲಸ ಪೂರ್ಣಗೊಳಿಸಿದ ಬಳಿಕ ಪುನಃ ಮತ್ತೊಂದು ಜಿಪಿಎಸ್ ಪೋಟೋ ನಂತರ ಕೊಟ್ಟಿಗೆ ನಿರ್ಮಾಣ ಪೂರ್ಣಗೊಂಡ ಬಳಿಕ ಕೊನೆಯದಾಗಿ ಅಂತಿನವಾಗಿ ಜಿಪಿಎಸ್ ಪೋಟೋವನ್ನು ತೆಗೆಯುವುದರಿಂದ ರೈತರು ಈ ಪೋಟೋಗಳನ್ನು ತೆಗೆಸಿಕೊಳ್ಳುವುದು ಕಡ್ಡಾಯವಾಗಿದೆ ಇಲ್ಲವಾದಲ್ಲಿ ಸಹಾಯಧನ ಹಣ ಜಮಾ ಅಗುವುದಿಲ್ಲ.

For More Details-ನರೇಗಾ ಯೋಜನೆಯ ಕುರಿತು ಇನ್ನು ಅಧಿಕ ಮಾಹಿತಿಗಾಗಿ:

Website Link-ನರೇಗಾ ಅಧಿಕೃತ ಜಾಲತಾಣ- Click Here

Narega Helpline Number-ನರೇಗಾ ಯೋಜನೆ ಸಹಾಯವಾಣಿ- 1800 042 58666

Previous Post Next Post