102 ಕಿ.ಮೀವರೆಗೆ ಮೈಲೇಜ್.. ಬೆಲೆಯೂ ಅಗ್ಗ, ದೇಶದ 5 ಶ್ರೇಷ್ಠ 125 ಸಿಸಿ ಬೈಕ್‌ಗಳು!

ಭಾರತದಲ್ಲಿ 125 ಸಿಸಿ ಬೈಕ್‌ಗಳು ದಿನಬಳಕೆಗೆ ಹೆಚ್ಚು ಸೂಕ್ತವಾಗಿವೆ. ಇವುಗಳನ್ನು ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲೂ ಸುಲಭವಾಗಿ ಬಳಕೆ ಮಾಡಬಹುದು. ನೀವು ಹೊಸ ಮೋಟಾರ್‌ಸೈಕಲ್‌ವೊಂದನ್ನು ಕೊಂಡುಕೊಳ್ಳಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ, ಈ ವಿಭಾಗದಲ್ಲಿ ಖರೀದಿಗೆ ದೊರೆಯುವ ಬಜಾಜ್ ಫ್ರೀಡಂ 125, ಹೀರೋ ಎಕ್ಸ್‌ಟ್ರೀಮ್ 125ಆರ್, ಬಜಾಜ್ ಪಲ್ಸರ್ 125, ಹೋಂಡಾ ಶೈನ್ 125 ಹಾಗೂ ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್‌ಗಳು ಅತ್ಯುತ್ತಮವಾದ ಆಯ್ಕೆಯಾಗಲಿವೆ. ಬನ್ನಿ, ಇವುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

ಬಜಾಜ್ ಫ್ರೀಡಂ 125 (Bajaj Freedom 125):

ಇದು ಜನಪ್ರಿಯ ಬೈಕ್ ಆಗಿದ್ದು, ಎಲ್ಲ ವರ್ಗದ ಗ್ರಾಹಕರಿಗೆ ಸುಲಭವಾಗಿ ಕೈಗೆಟುಕುತ್ತದೆ. ಅದಕ್ಕೆ ತಕ್ಕಂತೆ ರೂ.91,000 ದಿಂದ ರೂ.1.07 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ತುಂಬಾ ಸರಳವಾದ ವಿನ್ಯಾಸವನ್ನು ಹೊಂದಿದೆ. ರೇಸಿಂಗ್ ರೆಡ್, ಸೈಬರ್ ವೈಟ್, ಎಬೊನಿ ಬ್ಲ್ಯಾಕ್, ಪ್ಯೂಟರ್ ಗ್ರೇ, ಕೆರಿಬಿಯನ್ ಬ್ಲೂ ಮತ್ತು ಎಬೊನಿ ಬ್ಲ್ಯಾಕ್-ಗ್ರೇ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 170 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,340 ಮಿ.ಮೀ ವೀಲ್‌ಬೇಸ್‌ನ್ನು ಹೊಂದಿದೆ.

ನೂತನ 'ಫ್ರೀಡಂ' ಮೋಟಾರ್‌ಸೈಕಲ್‌, 124.58 ಸಿಸಿ ಪೆಟ್ರೋಲ್-ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. ತಲಾ 2 ಲೀಟರ್/ಕೆಜಿ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಹೊಂದಿದೆ. ಪೆಟ್ರೋಲ್ ಮೋಡ್‌ನಲ್ಲಿ 1.ಲೀ.ಗೆ 65 ಕಿ.ಮೀ ಹಾಗೂ ಸಿಎನ್‌ಜಿ ಮೋಡ್‌ನಲ್ಲಿ ಪ್ರತಿ ಕೆಜಿಗೆ 102 ಕಿ.ಮೀ ಮೈಲೇಜ್ ನೀಡುತ್ತದೆ. ಒಟ್ಟು 330 ಕಿ.ಮೀ ರೇಂಜ್ ನೀಡುತ್ತದೆ. ಎಲ್‌ಸಿಡಿ ಇನ್ಸ್ಟ್ರುಮೆಂಟ್ ಡಿಸ್‌ಪ್ಲೇ & ಬ್ಲೂಟೂತ್ ಕನೆಕ್ಟಿವಿಟಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ

ಹೀರೋ ಎಕ್ಸ್‌ಟ್ರೀಮ್ 125ಆರ್ (Hero Xtreme 125R):

ಈ ಬೈಕ್‌ ಸಾಕಷ್ಟು ಜನಪ್ರಿಯತೆ ಗಳಿಸಿದೆ. ರೂ.91,500 ರಿಂದ ರೂ.1.07 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಬ್ಲ್ಯಾಕ್ ಪರ್ಲ್ ರೆಡ್, ಬ್ಲ್ಯಾಕ್d ಮ್ಯಾಟ್ ಶಾಡೋ ಗ್ರೇ ಮತ್ತು ಬ್ಲ್ಯಾಕ್ ಲೀಫ್ ಗ್ರೀನ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 180 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1319 ಮಿ.ಮೀ ವೀಲ್‌ಬೇಸ್‌ನ್ನು ಪಡೆದಿದೆ.

ಹೊಸ 'ಎಕ್ಸ್‌ಟ್ರೀಮ್ 125ಆರ್' 124.7 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 66 ಕಿ.ಮೀವರೆಗೆ ಮೈಲೇಜ್ ಕೊಡುತ್ತದೆ. ಎಲ್‍ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಹಾಗೂ ಐಡಲ್ ಸ್ಟಾರ್ಟ್/ ಸ್ಟಾಪ್ ಟೆಕ್ನಾಲಜಿಯಂತಹ ವೈಶಿಷ್ಟ್ಯಗಳನ್ನು ಪಡೆದಿದೆ. ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.

ಬಜಾಜ್ ಪಲ್ಸರ್ 125 (Bajaj Pulsar 125):

ಇದೊಂದು ಪ್ರಖ್ಯಾತ ಮೋಟಾರ್‌ಸೈಕಲ್‌ ಎಂದೇ ಹೆಸರುವಾಸಿಯಾಗಿದೆ. ರೂ.85,633 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 124.4 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 55 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. ಫುಲ್ ಡಿಜಿಟಲ್ ಕನ್ಸೋಲ್, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಯುಎಸ್‌‍ಬಿ ಚಾರ್ಜಿಂಗ್ ಪೋರ್ಟ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.

ಹೋಂಡಾ ಶೈನ್ 125 (Honda Shine 125):

ಈ ಬೈಕ್‌ನ್ನು ಗ್ರಾಹಕರು ಮೆಚ್ಚಿಕೊಂಡಿದ್ದಾರೆ. ರೂ.79,352 ರಿಂದ 83,711 (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 123.94 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 55 ಕಿ.ಮೀವರೆಗೆ ಮೈಲೇಜ್ ಕೊಡುತ್ತದೆ. ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.

ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್ (Hero Super Splendor XTEC):

ಇದು ಜಗಮೆಚ್ಚಿದ ಮೋಟಾರ್‌ಸೈಕಲ್‌ ಆಗಿದೆ. ರೂ.81,998 ರಿಂದ 85,594 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 124.7 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 69 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಐಡಲ್ ಸ್ಟಾರ್ಟ್/ ಸ್ಟಾಪ್ ಸಿಸ್ಟಮ್ ಸೇರಿದಂತೆ ನಾನಾ ಬಗೆಯ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.

Previous Post Next Post