ಬೆಂಗಳೂರು: ರಾಜ್ಯದ 2026 ನೇ ಸಾಲಿನ ಎಸ್‌ಎಸ್‌ಎಲ್‌ಸಿ (10 ನೇ ತರಗತಿ) ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು 2 ರ ಅಂತಿಮ ವೇಳಾಪಟ್ಟಿ (SSLC 2nd PUC Exam 2026 Time Table) ಪ್ರಕಟವಾಗಿದೆ. ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯು (KSEAB) ಇಂದು ಅಧಿಕೃತವಾಗಿ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಪರೀಕ್ಷಾ ಮಂಡಳಿಯು ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳು ಹಾಗೂ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ತಮ್ಮ ಕಾಲೇಜು ಮತ್ತು ಶಾಲೆಯ ಪ್ರಕಟಣಾ ಫಲಕಗಳಲ್ಲಿ (ನೋಟಿಸ್ ಬೋರ್ಡ್) ವೇಳಾಪಟ್ಟಿಯನ್ನು ಅಂಟಿಸಿ, ವಿದ್ಯಾರ್ಥಿಗಳಿಗೆ ವೇಳಾಪಟ್ಟಿ ಕುರಿತು ಪೂರ್ಣ ಮಾಹಿತಿಯನ್ನು ನೀಡುವಂತೆ ಸೂಚಿಸಿದೆ.
ಈ ವೇಳಾಪಟ್ಟಿ ಪ್ರಕಟಣೆ ಆಗಿರುವುದರಿಂದ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಸಿದ್ಧತೆಯನ್ನು ಆರಂಭಿಸಲು ಸ್ಪಷ್ಟ ಚಿತ್ರಣ ದೊರೆತಿದೆ.
SSLC 2nd PUC Exam 2026 Time Table PDF Download:
ಅಂತಿಮ ವೇಳಾಪಟ್ಟಿಯನ್ನು ಪರೀಕ್ಷಾ ಮಂಡಳಿಯ ಅಧಿಕೃತ ಜಾಲತಾಣದಲ್ಲಿ ನೋಡಬಹುದು: https://kseab.karnataka.gov.in. ಅಥವಾ ಈ ಕೇಳಗೆ ನೀಡಲಾಗಿರುವ ಲಿಂಕ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು.
2nd PUC Time Table 2026 Paper-1: Download PDF
2nd PUC Exam 2026 Time Table Paper-2: Download PDF
SSLC Exam 2026 Time Table Paper-1: Download PDF
SSLC Exam Time Table 2026 Paper-2: Download PDF