Good News: ಪಡಿತರ ಚೀಟಿ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಇವುಗಳಲ್ಲಿ ಹಲವು ವಿಧಗಳಿದ್ದು, ಬಿಪಿಎಲ್‌ಗೆ ಹೆಚ್ಚಿನ ಸರ್ಕಾರಿ ಸೌಲಭ್ಯಗಳು ದೊರೆಯಲಿವೆ. ಇನ್ನೂ ರೇಷನ್ ಕಾರ್ಡ್‌ದಾರರಿಗೆ ಆಗಾಗ ಶುಭ ಸುದ್ದಿಗಳನ್ನು ಸರ್ಕಾರ ನೀಡುತ್ತಲಿರುತ್ತದೆ. ಹಾಗೆಯೇ ಇದೀಗ ಇಂತವರು ಈ ಒಂದೇ ಒಂದು ಕೆಲ್ಸ ಮಾಡಿದ್ರೆ ಸಾಕು ಪ್ರತಿ ತಿಂಗಳು ಕೈತುಂಬಾ ಹಣ ಪಡೆಯಬಹುದು. ಹಾಗಾದ್ರೆ ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಪಡಿತರ ಚೀಟಿಯಡಿಯಲ್ಲಿ ಇದೀಗ ಬಹುತೇಕ ಜನರು ಪಡಿತರದ ಜೊತೆಗೆ ಹಲವು ಸರ್ಕಾರಿ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇದೀಗ ಇದರ ಜೊತೆಗೆ ಐದು ಪಿಂಚಣಿ ಯೋಜನೆಗಳನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿದೆ. ಇವುಗಳ ಮೂಲಕ ಪ್ರತಿ ತಿಂಗಳು ಫಲಾನುಭವಿಗಳು ಕೈತುಂಬಾ ಹಣ ಪಡೆಯಬಹುದಾಗಿದೆ. ಹಾಗಾದ್ರೆ ಯಾವೆಲ್ಲಾ ಯೋಜನೆಗಳಿಂದ ಎಷ್ಟು ಹಣ ಸಿಗಲಿದೆ ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೋಡಿ.
Good News for BPL Ration Card Holders Get Monthly Pension Benefits Under 5 Central Govt Schemes
ದೇಶದಲ್ಲಿ ಬಿಪಿಎಲ್ ಕಾರ್ಡ್‌ದಾರರನ್ನು ಬೆಂಬಲಿಸುವ ಉದ್ದೇಶದಿಂದ ಸರ್ಕಾರವು ರಾಷ್ಟ್ರೀಯ ಸಾಮಾಜಿಕ ಸಹಾಯ ಕಾರ್ಯಕ್ರಮದ ಅಡಿಯಲ್ಲಿ 5 ಪ್ರಮುಖ ಪಿಂಚಣಿ ಯೋಜನೆಗಳನ್ನು ಸಿದ್ದಪಡಿಸಿದೆ. ಈ ಯೋಜನೆಯಿಂದ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ವೃದ್ಧರು, ವಿಧವೆಯರು ಮತ್ತು ಅಂಗವಿಕಲರಿಗೆ ಹಣಕಾಸಿನ ನೆರವು ಸಿಕ್ಕಂತಾಗಲಿದೆ. ಇದು ಕೇಂದ್ರ ಸರ್ಕಾರದಿಂದ ಸಂಪೂರ್ಣ ಅನುದಾನಿತ ಯೋಜನೆ ಆಗಿದೆ. ಇದನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯವು ಜಾರಿಗೆ ತರಲಿದೆ ಎನ್ನವ ಮಾಹಿತಿ ಇದೆ.
ಈ ಯೋಜನೆಯು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ವೃದ್ಧಾಪ್ಯ ಪಿಂಚಣಿ, ವಿಧವಾ ಪಿಂಚಣಿ, ಅಂಗವೈಕಲ್ಯ ಪಿಂಚಣಿ, ಕುಟುಂಬ ಭತ್ಯೆ, ಹಾಗೆಯೇ ಅನ್ನಪೂರ್ಣ ಯೋಜನೆಯ ಮೂಲಕ ಆಹಾರ ಭದ್ರತೆಯಂತಹ ಪ್ರಮುಖ ಅಂಶಗಳನ್ನು ಒಳಗೊಂಡಿದೆ. ಇದು ವೃದ್ಧಾಪ್ಯ ಪಿಂಚಣಿ ಯೋಜನೆಗೆ ಅರ್ಹರಾಗಿದ್ದರೂ ಅದರ ಪ್ರಯೋಜನಗಳನ್ನು ಪಡೆಯುತ್ತಿಲ್ಲ.
ಎನ್‌ಎಸ್‌ಎಪಿ ಅಡಿಯಲ್ಲಿ ಪ್ರಸ್ತುತ ಐದು ಉಪ-ಯೋಜನೆಗಳಿವೆ. ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ, ಇಂದಿರಾ ಗಾಂಧಿ ರಾಷ್ಟ್ರೀಯ ವಿಧವೆಯರ ಪಿಂಚಣಿ ಯೋಜನೆ, ಇಂದಿರಾ ಗಾಂಧಿ ರಾಷ್ಟ್ರೀಯ ಅಂಗವಿಕಲ ಪಿಂಚಣಿ ಯೋಜನೆ, ರಾಷ್ಟ್ರೀಯ ಕುಟುಂಬ ಪ್ರಯೋಜನ ಯೋಜನೆ ಮತ್ತು ಅನ್ನಪೂರ್ಣ ಯೋಜನೆಗಳಾಗಿವೆ.
ಈ ಯೋಜನೆಗಳ ಅಡಿಯಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ಗ್ರಾಮ ಪಂಚಾಯಿತಿಗಳು ಮತ್ತು ಪುರಸಭೆಗಳು ಸಕ್ರಿಯ ಪಾತ್ರ ವಹಿಸುತ್ತವೆ. ಸ್ಥಳೀಯ ಸಂಸ್ಥೆಗಳು ಕ್ಷೇತ್ರ ಮಟ್ಟದಲ್ಲಿ ಬಡತನ ರೇಖೆಗಿಂತ ಕೆಳಗಿರುವವರನ್ನು ಅಂದರೆ ಬಿಪಿಎಲ್ ಪಡಿತರ ಚೀಟಿದಾರರನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತವೆ.
ಫಲಾನುಭವಿಗಳಿಗೆ ಪ್ರಯೋಜನಗಳನ್ನು ಒದಗಿಸಲು ಡಿಬಿಟಿ ವಿಧಾನವನ್ನು ಬಳಕೆ ಮಾಡಗುತ್ತದೆ. ಸುಮಾರು ಶೇಕಡ 94ರಷ್ಟು ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಅಂಚೆ ಕಚೇರಿಯ ಉಳಿತಾಯ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಅವುಗಳನ್ನು ಅಂಚೆ ಹಣದ ಆದೇಶಗಳ ಮೂಲಕವೂ ವಿತರಣೆ ಮಾಡಲಾಗುತ್ತದೆ. ಫಲಾನುಭವಿಯು ಬ್ಯಾಂಕ್ ಅಂಚೆ ಕಚೇರಿಗೆ ಬರಲು ಸಾಧ್ಯ ಆಗದ ಸಮಯಗಳಲ್ಲಿ ಮನೆಗೆ ಹಣವನ್ನು ತಲುಪಿಸುವ ಅವಕಾಶ ಕಲ್ಪಿಸುತ್ತವೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಯೋಜನೆಗಳ ಅನುಷ್ಠಾನಕ್ಕಾಗಿ ಯಾವುದೇ ಸರ್ಕಾರಿ ಇಲಾಖೆಯನ್ನು ಆಯ್ಕೆ ಮಾಡಬಹುದು. ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಸಂಬಂಧಿತ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ರಾಜ್ಯ ಮಟ್ಟದಲ್ಲಿ ನೋಡಲ್ ಕಾರ್ಯದರ್ಶಿಯನ್ನು ನೇಮಕ ಮಾಡಬೇಕು. ಪ್ರತಿ ತ್ರೈಮಾಸಿಕದ 15ನೇ ತಾರೀಖಿನೊಳಗೆ ಪ್ರಗತಿ ವರದಿಯನ್ನು ಸಲ್ಲಿಕೆ ಮಾಡುವುದು ಕಡ್ಡಾಯ ಆಗಿದೆ.
* ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆಯಡಿಯಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ಬಿಪಿಎಲ್ ಹಿರಿಯ ನಾಗರಿಕರಿಗೆ ಆರ್ಥಿಕ ನೆರವು ನೀಡಲಾಗುತ್ತದೆ. 60 ರಿಂದ 79 ವರ್ಷ ವಯಸ್ಸಿನವರು ಕೇಂದ್ರ ಸರ್ಕಾರದಿಂದ ತಿಂಗಳಿಗೆ 200 ರೂಪಾಯಿ ಪಡೆಯುತ್ತಾರೆ. 80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ತಿಂಗಳಿಗೆ 500 ರೂಪಾಯಿ ಪಡೆಯುತ್ತಾರೆ.
* ಇಂದಿರಾ ಗಾಂಧಿ ರಾಷ್ಟ್ರೀಯ ವಿಧವೆಯರ ಪಿಂಚಣಿ ಯೋಜನೆಯು 40 ರಿಂದ 79 ವರ್ಷ ವಯಸ್ಸಿನ ಬಿಪಿಎಲ್ ವಿಧವೆಯರಿಗೆ ತಿಂಗಳಿಗೆ 300 ರೂಪಾಯಿ ಕೇಂದ್ರ ಸಹಾಯವನ್ನು ನೀಡುತ್ತದೆ. 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ 500 ರೂಪಾಯಿ ಇಂದಿರಾ ಗಾಂಧಿ ರಾಷ್ಟ್ರೀಯ ಅಂಗವಿಕಲ ವ್ಯಕ್ತಿಗಳ ಪಿಂಚಣಿ ಯೋಜನೆಯು 18 ರಿಂದ 79 ವರ್ಷ ವಯಸ್ಸಿನ ತೀವ್ರ ಬಹು ಅಂಗವೈಕಲ್ಯ ಹೊಂದಿರುವ ಬಿಪಿಎಲ್ ಕಾರ್ಡ್ ಹೊಂದಿರುವ ವ್ಯಕ್ತಿಗಳಿಗೆ ತಿಂಗಳಿಗೆ 300 ರೂಪಾಯಿ ಒದಗಿಸುತ್ತದೆ. 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಇದು 500 ರೂಪಾಯಿ ಪಡೆಯಲು ಸಹಾಯಕವಾಗದೆ.
* 18 ರಿಂದ 59 ವರ್ಷದೊಳಗಿನ ಬಿಪಿಎಲ್ ಕುಟುಂಬದಲ್ಲಿ ಪ್ರಮುಖ ಆದಾಯ ಗಳಿಸುವವರ ದುರದೃಷ್ಟಕರ ಮರಣದ ಸಂದರ್ಭದಲ್ಲಿ ರಾಷ್ಟ್ರೀಯ ಕುಟುಂಬ ಪ್ರಯೋಜನ ಯೋಜನೆ ಅನ್ವಯ ಆಗುತ್ತದೆ. ಈ ವೇಳೆ ಕುಟುಂಬವು ತಕ್ಷಣದ ಆರ್ಥಿಕ ಸಂಕಷ್ಟದಿಂದ ಮುಕ್ತರಾಗಲು 20,000 ರೂಪಾಯಿಗಳ ಆರ್ಥಿಕ ಸಹಾಯವನ್ನು ಪಡೆಯುತ್ತದೆ.
ಅರ್ಜಿ ಸಲ್ಲಿಸುವ ವಿಧಾನಗಳು
* ಫಲಾನುಭವಿಗಳು ಈ ಯೋಜನೆಗಳಿಗೆ UMANG ಅಪ್ಲಿಕೇಶನ್ ಬಳಸಿ ಅಥವಾ ಅದರ ವೆಬ್‌ಸೈಟ್‌ಗೆ ಭೇಟಿ ನೀಡಿ ನೀಡುವ ಮೂಲಕ ಆನ್ ಲೈನ್‌ನ ಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು.
* UMANGಗೆ ಲಾಗ್ ಇನ್ ಆದ ನಂತರ, ಅವರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಎಂಬುದರ ಮೆಲೆ ಕ್ಲಿಕ್ ಮಾಡಬೇಕು.
* NSAP ವಿಭಾಗದಲ್ಲಿ ವಿವರಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿ.
* IGNOAPSಗೆ ಅರ್ಹರಾಗಿರುವ ಮತ್ತು ಪಿಂಚಣಿಗೆ ಅರ್ಹರಲ್ಲದ ಹಿರಿಯ ನಾಗರಿಕರಿಗೆ ಅನ್ನಪೂರ್ಣ ಯೋಜನೆಯಡಿಯಲ್ಲಿ ತಿಂಗಳಿಗೆ 10 ಕೆಜಿ ಉಚಿತ ಆಹಾರ ಧಾನ್ಯಗಳನ್ನು ಒದಗಿಸಲಾಗುತ್ತದೆ. ಈ ಮೂಲಕ ಆಹಾರ ಭದ್ರತೆಯನ್ನು ಒದಗಿಸಲಾಗುತ್ತದೆ.
ಹೀಗೆ ಬಡಜನರಿಗೆ ಅನುಕೂಲ ಆಗುವ ದೃಷ್ಟಿಯಲ್ಲಿ ಈ ಯೋಜನೆಗಳನ್ನಯ ತರಲಾಗಿದೆ. ಇದನ್ನು ಅರ್ಹರ ಫಲಾನುಭವಿಗಳು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಲಾಗಿದೆ.