Free TV Repair Training-ಉಚಿತ ಟಿವಿ ಮತ್ತು ಎಲೆಕ್ಟ್ರಿಕ್ ಉಪಕರಣ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ

ನಿರುದ್ಯೋಗಿಗಳಿಗೆ ಮತ್ತು ಎಲೆಕ್ಟ್ರಿಕ್ ಉಪಕರಣ ದುರಸ್ತಿ ಕ್ಷೇತ್ರದಲ್ಲಿ ಕೌಶಲ್ಯವನ್ನು ಕಲಿತು ಸ್ವಂತ ಉದ್ಯೋಗವನ್ನು ಆರಂಭಿಸಲು ಆಸಕ್ತಿಯನ್ನು ಹೊಂದಿರುವ ಯುವಕರಿಗೆ ಕೆನರಾ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ(TV And Electronics) ಕೇಂದ್ರದಿಂದ 30 ದಿನದ ಉಚಿತ ಟಿವಿ ಮತ್ತು ಎಲೆಕ್ಟ್ರಿಕ್ ಉಪಕರಣ ರಿಪೇರಿ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಪ್ರಸ್ತುತ ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಜನ ಸಂಖ್ಯೆಗೆ ಅನುಗುಣವಾಗಿ ನಿರುದ್ಯೋಗವು ಸಹ ಏರಿಕೆಯಾಗುತ್ತಿದ್ದು ಈ ನಿಟ್ಟಿನಲ್ಲಿ ಕೆನರಾ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ(Canara Bank) ಸಂಸ್ಥೆಯಿಂದ ನಿರುದ್ಯೋಗಿ ಯುವಕರಿಗೆ ತಮ್ಮ ಅದ ಸ್ವಂತ ಉದ್ದಿಮೆಯನ್ನು ಪ್ರಾರಂಭಿಸಲು ಉಚಿತ ಟಿವಿ ಮತ್ತು ಎಲೆಕ್ಟ್ರಿಕ್ ಉಪಕರಣ ರಿಪೇರಿ ತರಬೇತಿಯನ್ನು ಒದಗಿಸಲು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಉಚಿತ ಟಿವಿ ಮತ್ತು ಎಲೆಕ್ಟ್ರಿಕ್ ಉಪಕರಣ ರಿಪೇರಿ(TV And Electronics Repair Training)ತರಬೇತಿಯನ್ನು ಪಡೆಯಲು ಯಾರೆಲ್ಲ ಅರ್ಜಿ ಹಾಕಬಹುದು? ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ತರಬೇತಿ ಅವಧಿ, ತರಬೇತಿ ಕೇಂದ್ರದ ವಿಳಾಸ ಸೇರಿದಂತೆ ಇನ್ನಿತರೆ ಅಗತ್ಯ ವಿವರವನ್ನು ಈ ಕೆಳಗೆ ಪ್ರಕಟಿಸಲಾಗಿದೆ.

TV And Electronics Repair Training-ಟಿವಿ ಮತ್ತು ಎಲೆಕ್ಟ್ರಿಕ್ ಉಪಕರಣ ರಿಪೇರಿ ಸ್ವಂತ ಉದ್ದಿಮೆಯಲ್ಲಿವೆ ಉತ್ತಮ ಅವಕಾಶಗಳು:

ಟಿವಿ (LED, OLED, Smart TV) ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ (ವಾಷಿಂಗ್ ಮಷೀನ್, ಫ್ರಿಜ್, ಮೈಕ್ರೋವೇವ್, ಫ್ಯಾನ್, ಮಿಕ್ಸರ್ ಇತ್ಯಾದಿ) ರಿಪೇರಿ ವ್ಯವಹಾರವು ಭಾರತದಲ್ಲಿ ಹೆಚ್ಚು ಲಾಭದಾಯಕ ಮತ್ತು ಸ್ಥಿರ ಉದ್ಯಮ ಅವಕಾಶವಾಗಿದೆ. ಗ್ರಾಹಕರ ಸಂಖ್ಯೆ ಹೆಚ್ಚುತ್ತಿರುವುದು, ಹಳೆಯ ಉಪಕರಣಗಳ ಮರುಬಳಕೆ ಮತ್ತು ಸ್ಮಾರ್ಟ್ ಡಿವೈಸ್‌ಗಳ ಹಾವಳಿಯಿಂದ ಈ ಕ್ಷೇತ್ರದ ಬೇಡಿಕೆ ನಿರಂತರವಾಗಿ ಇದೆ.

Who Can Apply For TV And Electronics Training-ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳ ಪಟ್ಟಿ ಹೀಗಿದೆ:

ಕೆನರಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಕುಮಟಾ ಕೇಂದ್ರದಿಂದ ಪ್ರಸ್ತುತ ಅರ್ಜಿ ಆಹ್ವಾನಿಸಿರುವ 30 ದಿನದ ಉಚಿತ ಟಿವಿ ಮತ್ತು ಎಲೆಕ್ಟ್ರಿಕ್ ಉಪಕರಣ ರಿಪೇರಿ ತರಬೇತಿಯಲ್ಲಿ ಭಾಗವಹಿಸಲು ಈ ಕೆಳಗಿನ ಪಟ್ಟಿಯಲ್ಲಿರುವ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ತರಬೇತಿಯಲ್ಲಿ ಭಾಗವಹಿಸಬಹುದು.

ಅಭ್ಯರ್ಥಿಯು ರಾಜ್ಯದ ಖಾಯಂ ಪ್ರಜೆಯಾಗಿರಬೇಕು.

ಅಭ್ಯರ್ಥಿಯ ವಯಸ್ಸು18 ರಿಂದ 45 ವರ್ಷದ ಒಳಗಿರಬೇಕು.

ಅಭ್ಯರ್ಥಿಗೆ ಕನ್ನಡ ಓದಲು ಮತ್ತು ಬರವಣಿಗೆ ಬರುವಂತಹ ಅಭ್ಯರ್ಥಿಗಳಿಗೆ ಮೊದಲ ಆದ್ಯತೆಯಿರುತ್ತದೆ.

ಬಿಪಿಎಲ್ ಕಾರ್ಡ ಹೊಂದಿರುವವರಿಗೆ ಪ್ರಥಮ ಆದ್ಯತೆ ಇರುತ್ತದೆ.

Free TV And Electronics Training Duration-ತರಬೇತಿ ಪ್ರಾರಂಭ ದಿನಾಂಕ:

ಉಚಿತ ಟಿವಿ ಮತ್ತು ಎಲೆಕ್ಟ್ರಿಕ್ ಉಪಕರಣ ರಿಪೇರಿ ತರಬೇತಿಯು 17 ನವೆಂಬರ್ 2025 ರಿಂದ ಆರಂಭವಾಗಿ 16 ಡಿಸೆಂಬರ್ 2025ಕ್ಕೆ ಪೂರ್ಣಗೊಳ್ಳಲಿದ್ದು ತರಬೇತಿಯು ಒಟ್ಟು 30 ದಿನ ಆಯೋಜನೆ ಮಾಡಲಾಗಿದೆ.

Free TV And Electronics Center Address-ತರಬೇತಿ ಸಂಸ್ಥೆಯ ವಿಳಾಸ:

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಇಂಡಿಸ್ಟ್ರೀಯಲ್ ಏರಿಯಾ, ಹೆಗಡೆ ರಸ್ತೆ,ಕುಮಟಾ,ಉತ್ತರಕನ್ನಡ-581343

How To Apply For TV And Electronics Training-ಆನ್ಲೈನ್ ನಲ್ಲಿ ನೋಂದಣಿ ಮಾಡುವುದು ಹೇಗೆ?

ಉಚಿತ ಟಿವಿ ಮತ್ತು ಎಲೆಕ್ಟ್ರಿಕ್ ಉಪಕರಣ ರಿಪೇರಿ ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳು ತರಬೇತಿ ಆರಂಭವಾಗುವ ಮುಂಚಿತವಾಗಿ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ ಗೂಗಲ್ ಪಾರ್ಮ್ ಭೇಟಿ ಮಾಡಿ ತಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

Step-1: ಅಭ್ಯರ್ಥಿಗಳು ಪ್ರಥಮ ಹಂತದಲ್ಲಿ ಇಲ್ಲಿ ಕ್ಲಿಕ್ "Free TV And Electronics Training Registration" ಮಾಡಿ ಅಧಿಕೃತ ಅರ್ಜಿ ನಮೂನೆಯನ್ನು ಪ್ರವೇಶ ಮಾಡಿ.

Step-2: ತದನಂತರ ಈ ಪುಟದಲ್ಲಿ ಕೇಳಿರುವ ಎಲ್ಲಾ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ತರಬೇತಿಯಲ್ಲಿ ಭಾಗವಹಿಸಲು ಮುಂಚಿತವಾಗಿ ನೋಂದಣಿಯನ್ನು ಮಾಡಿಕೊಳ್ಳಿ.

Documents For TV And Electronics Training-ತರಬೇತಿಯಲ್ಲಿ ಭಾಗವಹಿಸಲು ಅಗತ್ಯ ದಾಖಲೆಗಳು:

ತರಬೇತಿಯಲ್ಲಿ ಭಾಗವಹಿಸಲು ನೋಂದಣಿಯನ್ನು ಮಾಡಿಕೊಂಡಿರುವ ಅಭ್ಯರ್ಥಿಗಳು ಉಚಿತ ಟಿವಿ ಮತ್ತು ಎಲೆಕ್ಟ್ರಿಕ್ ಉಪಕರಣ ರಿಪೇರಿ ತರಬೇತಿ ಪ್ರಾರಂಭವಾಗುವ ದಿನದಂದು ಈ ಕೆಳಗಿನ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ತರಬೇತಿ ಕೇಂದ್ರವನ್ನು ಭೇಟಿ ಮಾಡಿ.

ಆಧಾರ್ ಕಾರ್ಡ ಪ್ರತಿ/Adhar.

ಬ್ಯಾಂಕ್ ಪಾಸ್ ಬುಕ್/Bank Pass Book.

ರೇಶನ್ ಕಾರ್ಡ ಪ್ರತಿ/Ration Card.

ಪಾನ್ ಕಾರ್ಡ ಪ್ರತಿ/Pan Card.

ಅಭ್ಯರ್ಥಿಯ ನಾಲ್ಕು ಪೋಟೋ/Photo.

Helpline-ತರಬೇತಿಯ ಕುರಿತು ಮತ್ತು ನೋಂದಣಿಗಾಗಿ ಸಂಪರ್ಕಿಸಿ- 08386-220530/ 9449860007/ 9538281989/ 9916783825/ 8880444612

Previous Post Next Post