ಹೌದು, ಏರ್ಪ್ಲೇನ್ ಫೀಚರ್ ನಿಮ್ಮ ಫೋನ್ ಬ್ಯಾಟರಿಯನ್ನು ಉಳಿಸುವುದಲ್ಲದೆ, ನಿಮ್ಮ ಮೊಬೈಲ್ ಅನ್ನು ನೀವು ವೇಗವಾಗಿ ಚಾರ್ಜ್ ಮಾಡಬಹುದು. ಏರ್ಪ್ಲೇನ್ ಮೋಡ್‌ನ ಐದು ಅದ್ಭುತ ಪ್ರಯೋಜನಗಳ ನಾವಿಂದು ತಿಳಿದುಕೊಳ್ಳೋಣ.
ಬಿಸಿಯಾಗದಂತೆ ತಡೆಯುತ್ತದೆ
ಕೆಲವೊಮ್ಮೆ, ಕಳಪೆ ನೆಟ್‌ವರ್ಕ್ ಕವರೇಜ್ ಅಥವಾ ಹೆಚ್ಚಿನ ಬ್ಯಾಕ್ಗ್ರೌಂಡ್ ಚಟುವಟಿಕೆಯು ಮೊಬೈಲ್ ಬೇಗನೆ ಬಿಸಿಯಾಗಲು ಕಾರಣವಾಗಬಹುದು. ಅಂತಹ ಸಂದರ್ಭಗಳಲ್ಲಿ, ನಿಮ್ಮ ಫೋನ್ ಅನ್ನು ತಂಪಾಗಿಸಲು ನೀವು ಏರ್ಪ್ಲೇನ್ ಮೋಡ್ ಅನ್ನು ಬಳಸಬಹುದು. ಇದು ನೆಟ್‌ವರ್ಕ್ ಸಂಪರ್ಕವನ್ನು ನಿಷ್ಕ್ರಿಯಗೊಳಿಸುತ್ತದೆ. ಅಲ್ಲದೆ, ಪ್ರೊಸೆಸರ್‌ನಲ್ಲಿನ ಕೆಲಸದ ಹೊರೆ ಕಡಿಮೆ ಮಾಡುತ್ತದೆ ಮತ್ತು ಫೋನ್ ಅನ್ನು ವೇಗವಾಗಿ ತಂಪಾಗಿಸುತ್ತದೆ.
ಗಮನ ಹೆಚ್ಚಿಸಲು ಸಹಾಯ
ಏರ್ಪ್ಲೇನ್ ಮೋಡ್ ಕೇವಲ ಬ್ಯಾಟರಿಯನ್ನು ಉಳಿಸಲು ಮಾತ್ರವಲ್ಲ, ಇದು ನಿಮ್ಮ ಗಮನವನ್ನು ಕೇಂದ್ರೀಕರಿಸಲು ಸಹ ಸಹಾಯ ಮಾಡುತ್ತದೆ. ನಿರಂತರ ನೋಟಿಫಿಕೇಶನ್ಗಳು, ಕರೆಗಳು ಮತ್ತು ಮೆಸೇಜ್ಗಳು ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯಬಹುದು. ನೀವು ಯಾವುದಾದರೂ ಕೆಲಸಕ್ಕೆ ತಯಾರಿ ನಡೆಸುತ್ತಿರಲಿ ಅಥವಾ ಏನಾದರೂ ಮುಖ್ಯವಾದ ಕೆಲಸವನ್ನು ಮಾಡುತ್ತಿರಲಿ ಆ ಕೆಲಸದ ಮೇಲೆ ಗಮನಹರಿಸುವುದು ತುಂಬಾ ಮುಖ್ಯ. ಅಂತಹ ಸಂದರ್ಭಗಳಲ್ಲಿ, ನೀವು ಏರ್ಪ್ಲೇನ್ ಮೋಡ್ ಅನ್ನು ಬಳಸಬಹುದು. ಇದು ಯಾವುದೇ ಕರೆಗಳು ಅಥವಾ ನೋಟಿಫಿಕೇಶನ್ಗಳು ಬರುವುದನ್ನು ತಡೆಯುತ್ತದೆ.
ಇಂಟರ್ನೆಟ್ನಿಂದ ಮಕ್ಕಳನ್ನು ದೂರವಿಡುತ್ತೆ
ನಿಮ್ಮ ಮಕ್ಕಳು ಇಂಟರ್ನೆಟ್ ಇಲ್ಲದೆಯೇ ಫೋನ್‌ನಲ್ಲಿ ಆಟವಾಡಬೆಂದು ಬಯಸಿದರೆ, ನೀವು ಏರ್ಪ್ಲೇನ್ ಮೋಡ್ ಅನ್ನು ಆನ್ ಮಾಡಬಹುದು. ಈ ಮೋಡ್ ಅವರು ಯಾವುದೇ ಜಾಹೀರಾತುಗಳನ್ನು ನೋಡದಂತೆ ತಡೆಯುತ್ತದೆ. ಆದ್ದರಿಂದ ಅವರು ತಮ್ಮ ಆಟಗಳನ್ನು ಸುರಕ್ಷಿತವಾಗಿ ಮತ್ತು ಅಡೆತಡೆಗಳಿಲ್ಲದೆ ಆನಂದಿಸಬಹುದು. ಅಲ್ಲದೆ, ಇನ್ನಿತರ ವಿಡಿಯೋಗಳು ಅಥವಾ ಬೇರೆ ಕಡೆಗೆ ಗಮನ ಹರಿಯುವುದನ್ನು ಸಹ ತಡೆಯುತ್ತದೆ.
ಬ್ಯಾಟರಿ ಬಳಕೆ ಕಡಿಮೆ
ನೀವು ದುರ್ಬಲ ನೆಟ್‌ವರ್ಕ್ ಸಿಗ್ನಲ್‌ಗಳಿರುವ ಪ್ರದೇಶದಲ್ಲಿದ್ದರೆ, ನಿಮ್ಮ ಫೋನ್ ನಿರಂತರವಾಗಿ ನೆಟ್‌ವರ್ಕ್‌ಗಳನ್ನು ಹುಡುಕುತ್ತಿರುತ್ತದೆ. ಇದು ಬ್ಯಾಟರಿ ಬಳಕೆಯನ್ನು ಹೆಚ್ಚಿಸುತ್ತದೆ. ಅಂತಹ ಸಂದರ್ಭಗಳಲ್ಲಿ, ನಿಮ್ಮ ಫೋನ್‌ಗೆ ವಿರಾಮ ನೀಡಲು ನೀವು ಏರ್ಪ್ಲೇನ್ ಮೋಡ್ ಅನ್ನು ಆನ್ ಮಾಡಬಹುದು. ಇದು ನೆಟ್‌ವರ್ಕ್‌ಗಳಿಗಾಗಿ ನಿರಂತರವಾಗಿ ಹುಡುಕುವುದನ್ನು ತಡೆಯುತ್ತದೆ, ನಿಮ್ಮ ಬ್ಯಾಟರಿಯನ್ನು ಉಳಿಸುತ್ತದೆ.
ವೇಗವಾಗಿ ಚಾರ್ಜ್ ಆಗುತ್ತೆ
ಏರ್‌ಪ್ಲೇನ್ ಮೋಡ್ ಬಳಸಿ ನಿಮ್ಮ ಫೋನ್ ಅನ್ನು ಹೆಚ್ಚು ವೇಗವಾಗಿ ಚಾರ್ಜ್ ಮಾಡಬಹುದು. ಈ ಮೋಡ್ ಅನ್ನು ಆನ್ ಮಾಡುವುದರಿಂದ ನಿಮ್ಮ ಫೋನ್‌ನಲ್ಲಿ ನೆಟ್‌ವರ್ಕ್, ವೈ-ಫೈ, ಬ್ಲೂಟೂತ್‌ನಂತಹ ಬ್ಯಾಕ್ಗ್ರೌಂಡ್ ಚಟುವಟಿಕೆಗಳು ಆಫ್ ಆಗುತ್ತವೆ. ಇದು ಚಾರ್ಜ್ ಮಾಡುವಾಗ ಮೊಬೈಲ್ನ ಕೆಲಸದ ಹೊರೆಯನ್ನು ಕಡಿಮೆ ಮಾಡುತ್ತದೆ. ಬ್ಯಾಟರಿ ಹೆಚ್ಚು ವೇಗವಾಗಿ ಚಾರ್ಜ್ ಆಗುತ್ತದೆ. ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸದ ಫೋನ್‌ಗಳು ತಮ್ಮ ಫೋನ್‌ಗಳನ್ನು ವೇಗವಾಗಿ ಚಾರ್ಜ್ ಮಾಡಲು ಈ ಮೋಡ್ ಅನ್ನು ಬಳಸಬಹುದು. (ಏಜೆನ್ಸೀಸ್)