ಕಟ್ಟಡ ಕಾರ್ಮಿಕರ ಕುಟುಂಬಕ್ಕೆ ಮರಣಾನಂತರ ಆರ್ಥಿಕ ನೆರವು ಎಷ್ಟು ಸಿಗುತ್ತೆ.? ಪಡೆಯುವುದು ಹೇಗೆ.? ಇಲ್ಲಿದೆ ಮಾಹಿತಿ

ಭಾರತದಲ್ಲಿ ಲಕ್ಷಾಂತರ ಕಾರ್ಮಿಕರು ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಶ್ರಮಾಧಾರಿತ ಕ್ಷೇತ್ರಗಳಲ್ಲಿ ದುಡಿಯುತ್ತಾ ತಮ್ಮ ಜೀವನ ಸಾಗಿಸುತ್ತಿದ್ದಾರೆ. ದುರದೃಷ್ಟವಶಾತ್, ಅನೇಕ ಕಾರ್ಮಿಕರು ಜೀವನದ ಕಷ್ಟ-ಸಂಕಷ್ಟಗಳ ಮಧ್ಯೆ ಅಕಾಲಿಕ ಮರಣ ಹೊಂದುವ ಘಟನೆಗಳು ನಡೆಯುತ್ತವೆ. ಇಂತಹ ಸಂದರ್ಭಗಳಲ್ಲಿ ಅವರ ಕುಟುಂಬ ಸದಸ್ಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದು ಸಹಜ. ಕುಟುಂಬದ ಆರ್ಥಿಕ ಭದ್ರತೆಗಾಗಿ ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (KBOCWWB) ವಿವಿಧ ರೀತಿಯ ನೆರವುಗಳನ್ನು ಒದಗಿಸುತ್ತಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 

ಮರಣ ಹೊಂದಿದ ಕಾರ್ಮಿಕರ ಅಂತ್ಯಕ್ರಿಯೆ ವೆಚ್ಚಕ್ಕಾಗಿ ಕಾರ್ಮಿಕ ಇಲಾಖೆ ₹4,000 ಹಾಗೂ ಎಕ್ಸ್‌ಗ್ರೇಷಿಯಾ ಮಂಡಳಿಯಿಂದ ₹71,000 ಆರ್ಥಿಕ ನೆರವು ನೀಡಲಾಗುತ್ತದೆ. ಈ ನೆರವು ಪಡೆಯಲು, ಕಾರ್ಮಿಕರು ತಮ್ಮ ಜೀವಿತಾವಧಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತರಾಗಿರಬೇಕು.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಏನು?:

ಅರ್ಜಿದಾರನು ಕಟ್ಟಡ ನಿರ್ಮಾಣ ಕಾರ್ಮಿಕನಾಗಿರಬೇಕು.

ಕನಿಷ್ಠ 18 ವರ್ಷ ವಯಸ್ಸು ಇರಬೇಕು.

ಕನಿಷ್ಠ 90 ದಿನ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರಬೇಕು.

ಜೀವಿತಾವಧಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿರಬೇಕು.

ಕಟ್ಟಡ ನಿರ್ಮಾಣ ಕಾರ್ಮಿಕ ನೋಂದಣಿ ಪ್ರಕ್ರಿಯೆ ಕೆಳಗಿನಂತಿದೆ:

ಮೊದಲಿಗೆ KBOCWWB ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ.

ನೋಂದಾಯಿಸಿ ಎಂಬ ಗುಂಡಿಯನ್ನು ಒತ್ತಿ.

ಹೊಸ ಕಾರ್ಮಿಕ ಕೆಲಸಗಾರರಾಗಿ ನೋಂದಾಯಿಸಿ ಆಯ್ಕೆ ಮಾಡಿ.

ಆಧಾರ್ ಸಂಖ್ಯೆಯನ್ನು ನಮೂದಿಸಿ,ಮೊಬೈಲ್‌ಗೆ ಬರುವ OTP ನಮೂದಿಸಿ.

ಎಲ್ಲಾ ವಿವರಗಳನ್ನು ಭರ್ತಿ ಮಾಡಿ, “ಸಲ್ಲಿಸು” ಒತ್ತಿ.

ನೋಂದಣಿ ಪ್ರಕ್ರಿಯೆಗೆ ಬೇಕಾಗುವ ದಾಖಲೆಗಳು?:

90 ದಿನಗಳ ಉದ್ಯೋಗ ಪ್ರಮಾಣಪತ್ರ.

ಆಧಾರ್ ಕಾರ್ಡ್.

ಪಡಿತರ ಚೀಟಿ.

ಗುರುತಿನ ಚೀಟಿ.

ಮರಣಾನಂತರ ಆರ್ಥಿಕ ನೆರವು ಪಡೆಯುವ ಅರ್ಜಿ ಪ್ರಕ್ರಿಯೆ:

ಮೊದಲಿಗೆ KBOCWWB ವೆಬ್‌ಸೈಟ್ ಗೆ ಲಾಗಿನ್ ಮಾಡಿ.

ನಂತರ OTP ನಮೂದಿಸಿ.

ಸ್ಕೀಮ್ ಆಯ್ಕೆ ಮಾಡಿ.

ಸಂಬಂಧಿಸಿದ ಯೋಜನೆ (ಮರಣ ನೆರವು) ಆಯ್ಕೆ ಮಾಡಿ, ವಿವರಗಳನ್ನು ನಮೂದಿಸಿ.

ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಪರಿಶೀಲಿಸಿ, ಸಲ್ಲಿಸು ಒತ್ತಿ.

ಅಗತ್ಯ ದಾಖಲೆಗಳು ಯಾವುವು?:

ಕಾರ್ಮಿಕ ಇಲಾಖೆಯಿಂದ ನೀಡಿದ ಗುರುತಿನ ಚೀಟಿ.

ಬ್ಯಾಂಕ್ ಖಾತೆ ವಿವರಗಳು.

ಭಾವಚಿತ್ರ.

ಮರಣ ಪತ್ರ (ಗೆಜೆಟೆಡ್ ಅಧಿಕಾರಿಯಿಂದ ಪ್ರಮಾಣಿತ).

ಉದ್ಯೋಗ ಪ್ರಮಾಣ ಪತ್ರ.

ಆಧಾರ್ ಕಾರ್ಡ್(Adhar card) .

ಪಡಿತರ ಚೀಟಿ.

ನಾಮಿನಿಯ ಭಾವಚಿತ್ರ ಹಾಗೂ ಗುರುತಿನ ಚೀಟಿ.

ನೋಂದಣಿ ನವೀಕರಣ:

ಪ್ರತಿಯೊಬ್ಬ ಕಟ್ಟಡ ನಿರ್ಮಾಣ ಕಾರ್ಮಿಕನು ಮೂರು ವರ್ಷಕ್ಕೊಮ್ಮೆ ನೋಂದಣಿಯನ್ನು ನವೀಕರಿಸಬೇಕು.

ನವೀಕರಣಕ್ಕಾಗಿ ಲಾಗಿನ್ ಮಾಡಿ, Renewal ಆಯ್ಕೆ ಮಾಡಿ, ವಿವರಗಳನ್ನು ಭರ್ತಿ ಮಾಡಿ, ಸಲ್ಲಿಸು ಒತ್ತಿ.

ಒಟ್ಟಾರೆಯಾಗಿ, ಕಟ್ಟಡ ನಿರ್ಮಾಣ ಕಾರ್ಮಿಕರ ಮರಣಾನಂತರ ಅವರ ಕುಟುಂಬಕ್ಕೆ ಆರ್ಥಿಕ ನೆರವು ಒದಗಿಸುವ ಈ ಯೋಜನೆ, ಅಕಸ್ಮಿಕ ಸಂಕಷ್ಟದ ಸಂದರ್ಭದಲ್ಲಿ ಕುಟುಂಬದ ಬದುಕಿಗೆ ಬಲವಾದ ಆಧಾರವಾಗುತ್ತದೆ. ಆದ್ದರಿಂದ, ಎಲ್ಲಾ ಕಾರ್ಮಿಕರು ತಮ್ಮ ನೋಂದಣಿಯನ್ನು ಸಮಯಕ್ಕೆ ತಕ್ಕಂತೆ ನವೀಕರಿಸಿಕೊಳ್ಳುವುದು ಹಾಗೂ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ಬಹಳ ಮುಖ್ಯ.



Previous Post Next Post