ಇಪಿಎಫ್‌ಒ 3.0 ಇತ್ತೀಚಿನ ಸುದ್ದಿ:-ನೌಕರರ ಭವಿಷ್ಯ ನಿಧಿ ಸಂಸ್ಥೆ, ಇಪಿಎಫ್ ಸದಸ್ಯರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ಪಿಎಫ್ ಖಾತೆ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆಗಳನ್ನು ತರಲು ಸಜ್ಜಾಗಿದೆ. ಇದರ ಅಡಿಯಲ್ಲಿ ಪಿಎಫ್ ಸದಸ್ಯರು ತಮ್ಮ ಕಾರ್ಡ್ ಸ್ವೈಪ್ ಮಾಡುವ ಮೂಲಕ ಅಥವಾ ತಮ್ಮ ಮೊಬೈಲ್ ಯುಪಿಐ ಅನ್ನು ಸ್ಕ್ಯಾನ್ ಮಾಡುವ ಮೂಲಕವೂ ಪಿಎಫ್ ಹಣವನ್ನು ಹಿಂಪಡೆಯಬಹುದಾಗಿದೆ.
ಇಪಿಎಫ್ ಸದಸ್ಯರಿಗೆ ಹೆಚ್ಚಿನ ಸೌಲಭ್ಯಗಳು
ಹೌದು, ಇಪಿಎಫ್‌ಒ ತನ್ನ ಕೋಟ್ಯಾಂತರ ಇಪಿಎಫ್ ಚಂದಾದಾರರಿಗಾಗಿ ಹಲವು ನವೀಕರಣಗಳನ್ನು ಹೊರತರುತ್ತಿದೆ. ಅದರಲ್ಲಿ ತಂತ್ರಜ್ಞಾನದ ಭಾಗವಾಗಿ ಹೊರತರುತ್ತಿರುವ ತ್ವರಿತ ಪಿಎಫ್ ವಿತ್ ಡ್ರಾ ಸೇವೆಯೂ ಒಂದು. ಇಪಿಎಫ್‌ಒ 3.0 ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಈ ಆಧುನಿಕ ವಿಧಾನದ ಸಹಾಯದಿಂದ ಭವಿಷ್ಯದಲ್ಲಿ ಇಪಿಎಫ್ ಸದಸ್ಯರು ಅಗತ್ಯವಿದ್ದಾಗ ತ್ವರಿತವಾಗಿ ತಮ್ಮ ಪಿಎಫ್ ಖಾತೆಯಿಂದ ಹಣ ಹಿಂತೆಗೆಯಲು ಇದು ಅನುವುಮಾಡಿಕೊಡುತ್ತದೆ.
ಇಪಿಎಫ್‌ಒ 3.0
ಉಳಿತಾಯ ಖಾತೆಯಿಂದ ಬೇಕೆಂದಾಗ ಹಣ ವಿತ್ ಡ್ರಾ ಮಾಡುವ ರೀತಿಯಲ್ಲಿಯೇ ಇದೀಗ EPFO 3.0 ಅಡಿಯಲ್ಲಿ ಇಪಿಎಫ್ ಖಾತೆಯಿಂದಲೂ ATM ಅಥವಾ UPI ಮೂಲಕ ಹಣ ಹಿಂಪಡೆಯಲು ಸಾಧ್ಯವಾಗುತ್ತದೆ. ಆದರೆ, ಇದಕ್ಕೂ ಮೊದಲು ಎಟಿಎಂ, ಯುಪಿಐ ಮೂಲಕ ಎಷ್ಟು ಪಿಎಫ್ ಹಣ ವಿತ್ ಡ್ರಾ ಮಾಡಬಹುದು? ಒಮ್ಮೆ ಹಣ ವಿತ್ ಡ್ರಾ ಮಾಡಿದ ಬಳಿಕ ಮತ್ತೆ ಹಣ ಹಿಂತೆಗೆಯಲು ಎಷ್ಟು ಸಮಯ ಬೇಕಾಗುತ್ತದೆ? ಎಂಬುದನ್ನು ಕೂಡ ತಿಳಿಯುವುದು ಅಗತ್ಯವಾಗಿದೆ.
ಯುಪಿಐ, ಎಟಿಎಂ ಮೂಲಕ ಯಾವಾಗ ಹಣ ವಿತ್ ಡ್ರಾ
ನೌಕರರು ವೈದ್ಯಕೀಯ, ಶಿಕ್ಷಣ, ಮನೆ ನಿರ್ಮಾಣ ಅಥವಾ ಕುಟುಂಬದ ಅಗತ್ಯಗಳಿಗಾಗಿ ಇದ್ದಕ್ಕಿದ್ದಂತೆ ಹಣದ ಅಗತ್ಯವಿರುವಾಗ ತುರ್ತು ಸಂದರ್ಭದಲ್ಲಿ ಎಟಿಎಂ ಅಥವಾ ಯುಪಿಐ ಮೂಲಕ ಹಣ ಹಿಂಪಡೆಯಬಹುದಾಗಿದೆ.
ಎಟಿಎಂನಿಂದ ಎಷ್ಟು ಪಿಎಫ್ ಹಣ ವಿತ್ ಡ್ರಾ ಸಾಧ್ಯ?
ವಾಸ್ತವವಾಗಿ, ಎಟಿಎಂ ಯುಪಿಐ ಮೂಲಕ ಎಷ್ಟು ಪಿಎಫ್ ಮೊತ್ತವನ್ನು ಹಿಂಪಡೆಯಬಹುದು ಎಂಬ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿಗಳಿಲ್ಲ. ಆದಾಗ್ಯೂ, ಎಟಿಎಂ ಮೂಲಕ ಪಿಎಫ್ ಹಣ ವಿತ್ ಡ್ರಾ ಮಿತಿ 10,000ರೂ.ಗಳಿಂದ 25,000 ರೂ.ಗಳವರೆಗೆ ಇರಬಹುದು. ಈ ಮಿತಿ ಯುಪಿಐನಲ್ಲಿ 2,000ರೂ.ಗಳಿಂದ 25,000ರೂ.ವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ.