ಯುವಕ ಮತ್ತು ಯುವತಿಯರಿಗೆ ಕಂಪ್ಯೂಟರ್ ಶಿಕ್ಷಣವನ್ನು(Computer Education) ಉಚಿತವಾಗಿ ಒದಗಿಸಲು ಕೆನರಾ ಬ್ಯಾಂಕ್(Canara Bank) ಮಾಹಿತಿ ತಂತ್ರಜ್ಞಾನ ಸಂಸ್ಥೆ ಬೆಂಗಳೂರು ಕೇಂದ್ರದ ವತಿಯಿಂದ ಮೂರು ತಿಂಗಳ ಉಚಿತ ತರಬೇತಿಗೆ ಅಭ್ಯರ್ಥಿಗಳನ್ನು ಗುರುತಿಸಲು ಅರ್ಜಿಯನ್ನು ಕರೆಲಾಗಿದ್ದು ಈ ಕುರಿತು ಸಂಸ್ಥೆಯಿಂದ ಅಧಿಕೃತ ಪ್ರಕಟಣೆಯನ್ನು ಹೊರಡಿಸಲಾಗಿದ್ದು ಇದರ ವಿವರವನ್ನು ಇಂದಿನ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.
ಇಂದಿನ ಡಿಜಿಟಲ್ ಯುಗದಲ್ಲಿ ಉದ್ಯೋಗವನ್ನು ಪಡೆಯಲು ಅಭ್ಯರ್ಥಿಗಳು ಕಡ್ಡಾಯವಾಗಿ ಕಂಪ್ಯೂಟರ್ ಶಿಕ್ಷಣವನ್ನು(Free Computer Training) ಹೊಂದಿರಬೇಕಾಗುತ್ತದೆ ಈ ನಿಟ್ಟಿನಲ್ಲಿ ಯುವಕ ಮತ್ತು ಯುವತಿಯರು ಈ ತರಬೇತಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದು. ತರಬೇತಿಯ ಪ್ರಯೋಜನವನ್ನು ಪಡೆದುಕೊಳ್ಳಲು.
ಉಚಿತವಾಗಿ ಕಂಪ್ಯೂಟರ್ ಶಿಕ್ಷಣ(Free Computer Training Application) ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ತರಬೇತಿ ಪ್ರಾರಂಭ ದಿನಾಂಕ? ತರಬೇತಿ ಆಯೋಜನೆ ಮಾಡಿರುವ ಕೇಂದ್ರ ವಿಳಾಸ ಸೇರಿದಂತೆ ಇತ್ಯಾದಿ ಸಂಪೂರ್ಣ ವಿವರವನ್ನು ಈ ಕೆಳಗೆ ಪ್ರಕಟಿಸಲಾಗಿದೆ
Computer Training Details-ಕೆನರಾ ಬ್ಯಾಂಕ್‍ನಿಂದ ಉಚಿತ ಕಂಪ್ಯೂಟರ್ ಶಿಕ್ಷಣ ತರಬೇತಿ:
ಕೆನರಾ ಬ್ಯಾಂಕ್ ಸಂಸ್ಥೆಯು ನಿರುದ್ಯೋಗಿ ಯುವಕ-ಯುವತಿಯರಿಗೆ "ಕಂಪ್ಯೂಟರ್ ಆಫೀಸ್ ಅಡ್ಮಿನಿಸ್ಟ್ರೇಷನ್, ಟ್ಯಾಲಿ, ಡೆಸ್ಕ್ ಟಾಪ್ ಪಬ್ಲಿಷಿಂಗ್ ಹಾಗೂ ಹಾರ್ಡ್ ವೇರ್ ಮತ್ತು ನೆಟ್ವರ್ಕ್ ಅಡ್ಮಿನಿಸ್ಟ್ರೇಷನ್'' ಕುರಿತಾದ ಮೂರು ತಿಂಗಳ ಉಚಿತ ಕಂಪ್ಯೂಟರ್ ತರಬೇತಿ ಶಿಕ್ಷಣವನ್ನು 2025ನೇ ಅಕ್ಟೋಬರ್ 03 ರಂದು ಆರಂಭಿಸಲಿದ್ದು, ತರಬೇತಿಯು ಬೆಳಿಗ್ಗೆ 09.30 ರಿಂದ ಸಂಜೆ 05.30 ರವರೆಗೆ ನಡೆಯಲಿದೆ.
Who Can Apply For Free Computer Training-ತರಬೇತಿ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಕೆನರಾ ಬ್ಯಾಂಕ್ ವತಿಯಿಂದ ಉಚಿತ ಕಂಪ್ಯೂಟರ್ ಶಿಕ್ಷಣ ಕೌಶಲ್ಯ ತರಬೇತಿಯನ್ನು ಪಡೆಯಲು ಈ ಕೆಳಗಿನ ಪಟ್ಟಿಯಲ್ಲಿರುವ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಈ ತರಬೇತಿಯನ್ನು ಪಡೆಯಬಹುದು.
ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
ತರಬೇತಿಯಲ್ಲಿ ಭಾಗವಹಿಲಿಚ್ಚಿಸುವ ಅಭ್ಯರ್ಥಿಗಳು ಕನಿಷ್ಠ ಎಸ್.ಎಸ್.ಎಲ್.ಸಿ ಪಾಸಾಗಿರಬೇಕು.
ಪಿ.ಯು.ಸಿ. ಐಟಿಐ, ಡಿಪ್ಲೊಮಾ, ಡಿಗ್ರಿ ಹೊಂದಿದವರಿಗೆ ಆದ್ಯತೆ ನೀಡಲಾಗುವುದು.
ಅರ್ಜಿದಾರರ ವಯಸ್ಸು ಕನಿಷ್ಠ 18 ರಿಂದ 30 ವರ್ಷದೊಳಗಿರಬೇಕು. ಪರಿಶಿಷ್ಟ ಜಾತಿ/ವರ್ಗದವರಿಗೆ ಗರಿಷ್ಠ ವಯಸ್ಸು 35 ವರ್ಷದೊಳಗಿರಬೇಕು.
ಬಿಪಿಎಲ್ ಕಾರ್ಡ್ ಅಥವಾ ವಾರ್ಷಿಕ ರೂ. 1,60,000 ಕ್ಕಿಂತ ಕಡಿಮೆ ಆದಾಯ ಪ್ರಮಾಣಪತ್ರವನ್ನು ಹೊಂದಿರಬೇಕು.
Free Computer Training Topics-ತರಬೇತಿಯಲ್ಲಿ ಯಾವೆಲ್ಲ ವಿಷಯಗಳ ಕುರಿತು ತರಬೇತಿ ನೀಡಲಾಗುತ್ತದೆ?
ಕಂಪ್ಯೂಟರ್ ಆಫೀಸ್ ಅಡ್ಮಿನಿಸ್ಟ್ರೇಷನ್, ಟ್ಯಾಲಿ, ಡೆಸ್ಕ್ ಟಾಪ್ ಪಬ್ಲಿಷಿಂಗ್ ಹಾಗೂ ಹಾರ್ಡ್ ವೇರ್ ಮತ್ತು ನೆಟ್ವರ್ಕ್ ಅಡ್ಮಿನಿಸ್ಟ್ರೇಷನ್ ವಿಷಯದ ಮೇಲೆ ತರಬೇತಿಯನ್ನು ಆಯೋಜನೆ ಮಾಡಲಾಗಿದೆ.
ಕಂಪ್ಯೂಟರ್ ತರಬೇತಿಯಲ್ಲಿ ಕಂಪ್ಯೂಟರ್‍ಗಳ ಮೂಲಭೂತ ಅಂಶಗಳು, ಕಂಪ್ಯೂಟರ್ ಅಸೆಂಬ್ಲಿಂಗ್ ಮತ್ತು ಟ್ರಬಲ್ ಶೂಟಿಂಗ್, ನೆಟ್ವರ್ಕ್, ವಿಂಡೋಸ್, ಸರ್ವರ್, ಡೇಟಾ ಸಂಗ್ರಹಣೆ, ಎಂ.ಎಸ್. ಆಫೀಸ್, ಕೋರೆಲ್ ಡ್ರಾ. ಪೋಟೋಶಾಪ್(Computer Assembling ,Networking ,Windows,Microsoft Office,MS Office,CorelDRAW,Photoshop) ಕುರಿತು ಕೌಶಲ್ಯವನ್ನು ಒದಗಿಸಲಾಗುತ್ತದೆ.
Computer Training Interview Date-ಅಭ್ಯರ್ಥಿಗಳ ಆಯ್ಕೆಗೆ ನೇರ ಸಂದರ್ಶನ:
ಸದರಿ ತರಬೇತಿಗೆ ಸೇರಲಿಚ್ಛಿಸುವವರು ನೇರ ಸಂದರ್ಶನಕ್ಕೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯಲ್ಲಿ ಹಾಜರಾಗಬೇಕು. ಪ್ರತಿದಿನ ಬೆಳಿಗ್ಗೆ 11 ಗಂಟೆಗೆ ಅರ್ಹತಾ ಪರೀಕ್ಷೆ ಮತ್ತು ಸಂದರ್ಶನಗಳು ನಡೆಯಲಿದ್ದು, ಅರ್ಜಿ ಫಾರಂ ಗಳನ್ನು ಪರೀಕ್ಷೆಗೆ ಹಾಜರಾಗುವ ಸಂದರ್ಭದಲ್ಲಿ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ಸಂಸ್ಥೆ, 3ನೇ ಮಹಡಿ, ಚಿತ್ರಾಪುರ ಭವನ, 8ನೇ ಮುಖ್ಯರಸ್ತೆ, 15ನೇ ಅಡ್ಡರಸ್ತೆ, ಮಲ್ಲೇಶ್ವರಂ - 560 055 ಹಾಗೂ ದೂರವಾಣಿ ಸಂಖ್ಯೆ : 94485 38107/080 23440036/23463580 ಗೆ ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.