ಗ್ರಾಮೀಣ ಮತ್ತು ನಗರ ಭಾಗದ ಮಹಿಳೆಯರು ನಿರುದ್ಯೋಗ ಸಮಸ್ಯೆಯಿಂದ ಹೊರ ಬಂದು ಸ್ವಂತ ಉದ್ಯೋಗವನ್ನು ಆರಂಭಿಸಲು ಉಚಿತವಾಗಿ ಬ್ಯೂಟಿಪಾರ್ಲರ್(Beauty Parlour Training) ತರಬೇತಿಯನ್ನು ಪಡೆಯಲು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಕುಮಟಾ ಕೆನರಾ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ ಕೇಂದ್ರದಿಂದ ಬ್ಯೂಟಿಪಾರ್ಲರ್ ತರಬೇತಿಯನ್ನು(Free Beautician Training Application) ಆಯೋಜನೆ ಮಾಡಿದ್ದು ಈ ತರಬೇತಿಯಲ್ಲಿ ಪ್ರಾಯೋಗಿಕವಾಗಿ ಮಹಿಳೆಯರಿಗೆ ಬ್ಯೂಟಿಪಾರ್ಲರ್ ಕುರಿತು ಅಗತ್ಯ ಮಾಹಿತಿಯನ್ನು ಒದಗಿಸುವುದರ ಜೊತೆಗೆ ತರಬೇತಿ ಪಡೆದ ಬಳಿಕ ಬ್ಯಾಂಕ್ ಮೂಲಕ ಸಾಲವನ್ನು ಪಡೆದು ಸ್ವಂತ ಉದ್ಯೋಗವನ್ನು ಆರಂಭಿಸಿಲು ಸೂಕ್ತ ಮಾರ್ಗದರ್ಶನ ನೀಡಲಾಗುತ್ತದೆ.
ಇಂದಿನ ಅಂಕಣದಲ್ಲಿ ಉಚಿತ ಬ್ಯೂಟಿಪಾರ್ಲರ್ ತರಬೇತಿಯನ್ನು(Free Beautician Course) ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ತರಬೇತಿ ಪ್ರಾರಂಭವಾಗುವ ದಿನಾಂಕ ಸೇರಿದಂತೆ ಸಂಪೂರ್ಣ ಅವಶ್ಯಕ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
Who Can Apply For Beauty Parlour Training-ಬ್ಯೂಟಿಪಾರ್ಲರ್ ತರಬೇತಿಯನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಿಂದ ಉಚಿತವಾಗಿ ಬ್ಯೂಟಿಪಾರ್ಲರ್ ತರಬೇತಿಯನ್ನು ಪಡೆಯಲು ಈ ಕೆಳಗಿನ ಪಟ್ಟಿಯಲ್ಲಿರುವ ಅರ್ಹತೆಯನ್ನು ಹೊಂದಿರುವುದು ಕಡ್ಡಾಯವಾಗಿದೆ.
ತರಬೇತಿಯಲ್ಲಿ ಭಾಗವಹಿಸಲು ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
ಗ್ರಾಮೀಣ ಭಾಗದ ಮಹಿಳೆಯರಿಗೆ ಅರ್ಜಿ ಸಲ್ಲಿಸಲು ಮೊದಲ ಅದ್ಯತೆ ಇರುತ್ತದೆ.
ಅರ್ಜಿದಾರ ಅಭ್ಯರ್ಥಿಯು ಗ್ರಾಮೀಣ ಭಾಗದವರಾಗಿದ್ದು ಬಿಪಿಎಲ್ ಅಥವಾ ಅಂತ್ಯೋದಯ ಕಾರ್ಡ ಅನ್ನು ಹೊಂದಿದವರಿಗೆ ಮೊದಲ ಆದ್ಯತೆ ಇರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅರ್ಜಿದಾರ ಮಹಿಳೆಯರ ವಯಸ್ಸು 18 ರಿಂದ 45 ವಯಸ್ಸಿನ ಒಳಗಿರಬೇಕು
ಅಭ್ಯರ್ಥಿಗಳಿಗೆ ಕನ್ನಡ ಓದಲು ಮತ್ತು ಬರೆಯಲು ಬರುವುದು ಕಡ್ಡಾಯವಾಗಿದೆ.
Free Beautician Training Date-ತರಬೇತಿ ನಡೆಯುವ ದಿನಾಂಕ:
ಕೆನರಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಕೇಂದ್ರದಿಂದ ಮಹಿಳೆಯರಿಗೆ ಬ್ಯೂಟಿಪಾರ್ಲರ್ ತರಬೇತಿಯನ್ನು ಏರ್ಪಡಿಸಲಾಗಿದ್ದು ಈ ತರಬೇತಿಯು ದಿನಾಂಕ: 02 ಸೆಪ್ಟೆಂಬರ್ 2025 ರಿಂದ ಆರಂಭವಾಗಿ ದಿನಾಂಕ: 06 ಅಕ್ಟೋಬರ್ 2025 ಗೆ ಮುಕ್ತಾಯವಾಗಲಿದ್ದು ಒಟ್ಟು 35 ದಿನದ ತರಬೇತಿ ಇದಾಗಿರುತ್ತದೆ.
Free Beautician Training-ಶುಲ್ಕ ರಹಿತ ತರಬೇತಿ ಇದಾಗಿರುತ್ತದೆ:
ಆರ್ ಸೆಟ್ ಸಂಸ್ಥೆಯಿಂದ ಪ್ರಸ್ತುತ ಆಯೋಜನೆ ಮಾಡುತ್ತಿರುವ ತರಬೇತಿಯು ಸಂಪೂರ್ಣ ಉಚಿತವಾಗಿದ್ದು ಯಾವುದೇ ಬಗ್ಗೆಯ ಶುಲ್ಕವನ್ನು ಪಾವತಿ ಮಾಡುವ ಅವಶ್ಯಕತೆಯಿರುವುದಿಲ್ಲ ತರಬೇತಿಯಲ್ಲಿ ಭಾಗವಹಿಸುವ ಮಹಿಳೆಯರಿಗೆ ಉಚಿತವಾಗಿ ವಸತಿ ಮತ್ತು ಊಟದ ವ್ಯವಸ್ಥೆಯನ್ನು ತರಬೇತಿ ಕೇಂದ್ರದಲ್ಲೇ ಮಾಡಲಾಗಿರುತ್ತದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Training Center Address-ತರಬೇತಿ ನಡೆಯುವ ಕೇಂದ್ರದ ವಿಳಾಸ:
ಉಚಿತ ಬ್ಯೂಟಿ ಪಾರ್ಲರ್ ತರಬೇತಿಯನ್ನು ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಇಂಡಿಸ್ಟ್ರೀಯಲ್ ಏರಿಯಾ, ಹೆಗಡೆ ರಸ್ತೆ,ಕುಮಟಾ ಉತ್ತರಕನ್ನಡ ಕೇಂದ್ರದಲ್ಲಿ ತರಬೇತಿಯನ್ನು ಆಯೋಜನೆ ಮಾಡಲಾಗಿದೆ.
Last Date For Application-ಮುಂಚಿತವಾಗಿ ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ:
ತರಬೇತಿಯಲ್ಲಿ ಭಾಗವಹಿಸಲು ಅರ್ಹ ಮಹಿಳೆಯರು ಅರ್ಜಿಯನ್ನು ಸಲ್ಲಿಸಲು ಸಂಸ್ಥೆಯಿಂದ ನಿಗದಿಪಡಿಸಿದ ಕೊನೆಯ ದಿನಾಂಕ: 02 ಸೆಪ್ಟೆಂಬರ್ 2025
Free Beautician Course Application-ಅರ್ಜಿ ಸಲ್ಲಿಸುವುದು ಹೇಗೆ?
ಉಚಿತ ಬ್ಯೂಟಿ ಪಾರ್ಲರ್ ತರಬೇತಿಯನ್ನು ಪಡೆಯಲು ಅರ್ಹ ಮಹಿಳೆಯರು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಜಿಯನ್ನು ಸಲ್ಲಿಸಲು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳು ಮೊದಲಿಗೆ ಈ "Apply Now" ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಂದಣಿಯನ್ನು ಮಾಡಿಕೊಳ್ಳಬಹುದು ಅಥವಾ ಈ 08386-220530 ಅಥವಾ 9449860007, 9538281989, 9916783825 ಮೊಬೈಲ್ ನಂಬರ್ ಗೆ ಕರೆ ಮಾಡಿ ಮಹಿಳೆಯರು ಮುಂಚಿತವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ತರಬೇತಿಯನ್ನು ಪಡೆಯಬಹುದು.
Documents For Free Beautician Training-ತರಬೇತಿಯಲ್ಲಿ ಭಾಗವಹಿಸಲು ಅವಶ್ಯಕ ದಾಖಲೆಗಳು:
ಆಧಾರ್ ಕಾರ್ಡ/Aadhar.
ಬ್ಯಾಂಕ್ ಪಾಸ್ ಬುಕ್ ಪ್ರತಿ/Bank Pass Book.
ಪೋಟೋ/Photo.
ರೇಶನ್ ಕಾರ್ಡ ಪ್ರತಿ/Ration Card.
ಮೊಬೈಲ್ ನಂಬರ್/Mobile Number.