Registered Post-ಅಂಚೆ ಇಲಾಖೆಯಲ್ಲಿ ಇನ್ನುಂದೆ ರಿಜಿಸ್ಟರ್ಡ್ ಪೋಸ್ಟ್ ಸೇವೆ ಬಂದ್

Registered Post-ಅಂಚೆ ಇಲಾಖೆಯಲ್ಲಿ ಇನ್ನುಂದೆ ರಿಜಿಸ್ಟರ್ಡ್ ಪೋಸ್ಟ್ ಸೇವೆ ಬಂದ್

ಭಾರತೀಯ ಅಂಚೆ ಇಲಾಖೆಯ(India Post Office) ಒಂದು ಐತಿಹಾಸಿಕ ಸೇವೆಯಾದ ರಿಜಿಸ್ಟರ್ಡ್ ಪೋಸ್ಟ್ ಸೇವೆಯು(Registered Post) ಶೀಘ್ರದಲ್ಲೇ ಇತಿಹಾಸದ ಪುಟ ಸೇರಲಿದೆ. ಜುಲೈ 2, 2025ರಂದು ಭಾರತೀಯ ಅಂಚೆ ಇಲಾಖೆಯು ಹೊರಡಿಸಿದ ಆಂತರಿಕ ಸುತ್ತೋಲೆಯ ಪ್ರಕಾರ, ರಿಜಿಸ್ಟರ್ಡ್ ಪೋಸ್ಟ್ ಸೇವೆಯನ್ನು ಸೆಪ್ಟೆಂಬರ್ 1, 2025ರಿಂದ ಸ್ಪೀಡ್ ಪೋಸ್ಟ್ ಸೇವೆಯೊಂದಿಗೆ ವಿಲೀನಗೊಂಡು ರಿಜಿಸ್ಟರ್ಡ್ ಪೋಸ್ಟ್ ಸೇವೆಗೆ ಶಾಶ್ವತ ವಿದಾಯ ಬೀಳಲಿದೆ. ಈ ನಿರ್ಧಾರದಿಂದಾಗಿ ದೇಶದ ಅತ್ಯಂತ ಹಳೆಯ ಮತ್ತು ಜನಪ್ರಿಯ ಅಂಚೆ ಸೇವೆಯೊಂದು ಕೊನೆಗೊಳ್ಳಲಿದೆ.

ಇಂದಿನ ಈ ಲೇಖನದಲ್ಲಿ ಅಂಚೆ ಇಲಾಖೆಯು(Post Office Latest News) ರಿಜಿಸ್ಟರ್ಡ್ ಪೋಸ್ಟ್ ಸೇವೆಯನ್ನು ಸ್ಥಗಿತ ಮಾಡಲು ಕಾರಣಗಳೇನು? ಇದರಿಂದ ಗ್ರಾಹಕರಿಗೆ ಅಗುವ ಅನಾನುಕೂಲಗಳೇನು? ರಿಜಿಸ್ಟರ್ಡ್ ಪೋಸ್ಟ್ ಸೇವೆಯನ್ನು ಸ್ಪೀಡ್ ಪೋಸ್ಟ್ ಸೇವೆಯೊಂದಿಗೆ ವಿಲೀನ ಮಾಡಲು ಕಾರಣಗಳೇನು? ಇನ್ನಿತರೆ ಅಗತ್ಯ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

Registered Post-ಇತಿಹಾಸ ಪುಟ ಸೇರಲಿದೆ ರಿಜಿಸ್ಟರ್ಡ್ ಪೋಸ್ಟ್‌ ಸೇವೆ:

ರಿಜಿಸ್ಟರ್ಡ್ ಪೋಸ್ಟ್ ಸೇವೆಯು ಭಾರತೀಯ ಅಂಚೆ ಇಲಾಖೆಯ ಒಂದು ವಿಶಿಷ್ಟ ಸೇವೆಯಾಗಿತ್ತು. ಮಹತ್ವದ ದಾಖಲೆಗಳು, ಕಾನೂನು ದಾಖಲೆಗಳು, ಉದ್ಯೋಗ ಸಂದರ್ಶನ ಪತ್ರಗಳು, ನೋಟೀಸ್‌ಗಳು ಮತ್ತು ಇತರ ಪ್ರಮುಖ ಪತ್ರಗಳನ್ನು ಸುರಕ್ಷಿತವಾಗಿ ವಿಳಾಸದಾರರಿಗೆ ತಲುಪಿಸಲು ಈ ಸೇವೆಯನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು.

ಈ ಸೇವೆಯ ಮೂಲಕ ಕಳುಹಿಸಲಾದ ಪತ್ರಗಳು ದಾಖಲೆಯೊಂದಿಗೆ ಗುರಿಯನ್ನು ತಲುಪುತ್ತಿದ್ದವು, ಇದರಿಂದ ಗ್ರಾಹಕರಿಗೆ ಸುರಕ್ಷತೆಯ ಭರವಸೆ ಇತ್ತು. ಕೊರಿಯರ್ ಸೇವೆಗಳ ಆಗಮನದ ಮೊದಲು, ರಿಜಿಸ್ಟರ್ಡ್ ಪೋಸ್ಟ್ ಎಂಬುದು ಜನರಿಗೆ ಅತ್ಯಂತ ವಿಶ್ವಾಸಾರ್ಹ ಮತ್ತು ಕೈಗೆಟಕುವ ಸೇವೆಯಾಗಿತ್ತು.

Registered Post Latest News-ರಿಜಿಸ್ಟರ್ಡ್ ಪೋಸ್ಟ್ ಇನ್ಮುಂದೆ ಸ್ಪೀಡ್ ಪೋಸ್ಟ್ ನಲ್ಲಿ ವಿಲೀನ:

ಅಂಚೆ ಇಲಾಖೆಯ ಇತೀಚಿನ ಸುತ್ತೋಲೆಯ ಉಲ್ಲೇಖಿಸಿರುವ ಮಾಹಿತಿಯನ್ವಯ ರಿಜಿಸ್ಟರ್ಡ್ ಪೋಸ್ಟ್ ಇನ್ಮುಂದೆ ಸ್ಪೀಡ್ ಪೋಸ್ಟ್ ನಲ್ಲಿ ವಿಲೀನಗೊಳ್ಳಲ್ಲಿದ್ದು, ಈ ವಿಲೀನದ ಉದ್ದೇಶವು ಸೇವೆಗಳನ್ನು ಸುಲಭಗೊಳಿಸುವುದು, ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವುದು, ಟ್ರ‍ಾಕಿಂಗ್ ವ್ಯವಸ್ಥೆಯನ್ನು ಸುಧಾರಿಸುವುದು ಮತ್ತು ಗ್ರಾಹಕರಗೆ ಗುಣಮಟ್ಟದ ಸೇವೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

ರಿಜಿಸ್ಟರ್ಡ್ ಪೋಸ್ಟ್ ಮತ್ತು ಸ್ಪೀಡ್ ಪೋಸ್ಟ್ ಎರಡೂ ಒಂದೇ ರೀತಿಯ ಸೇವೆಗಳನ್ನು ಒದಗಿಸುವುದರಿಂದ, ಇವುಗಳನ್ನು ಏಕೀಕೃತ ಚೌಕಟ್ಟಿನಡಿ ತರುವುದು ಸೂಕ್ತ ಎಂದು ಇಲಾಖೆ ಭಾವಿಸಿದೆ. ಸ್ಪೀಡ್ ಪೋಸ್ಟ್ ಸೇವೆಯು ರಿಜಿಸ್ಟರ್ಡ್ ಪೋಸ್ಟ್‌ಗಿಂತ ವೇಗವಾಗಿ ಮತ್ತು ಆಧುನಿಕ ಟ್ರ‍ಾಕಿಂಗ್ ವ್ಯವಸ್ಥೆಯ ಮೂಲಕ ಪತ್ತೆ ವ್ಯವಸ್ಥೆಯೊಂದಿಗೆ ಗ್ರಾಹಕರಿಗೆ ತ್ವರಿತ ಸೇವೆಯನ್ನು ಒದಗಿಸುತ್ತದೆ.

Courier v/s Speed Post-ಕೊರಿಯರ್ ಸಂಸ್ಥೆ ಜೊತೆ ಪೈಪೊಟಿಗೆ ಸ್ಪೀಡ್ ಪೋಸ್ಟ್ ಸೇವೆ:

ಕೊರಿಯರ್ ಸಂಸ್ಥೆಗಳ ಆಗಮನದಿಂದ ರಿಜಿಸ್ಟರ್ಡ್ ಪೋಸ್ಟ್‌ಗೆ ಬೇಡಿಕೆ ಕಡಿಮೆಯಾಗಿತ್ತು. ಈ ಸ್ಪರ್ಧೆಯನ್ನು ಎದುರಿಸಲು ಅಂಚೆ ಇಲಾಖೆಯು ಸ್ಪೀಡ್ ಪೋಸ್ಟ್ ಸೇವೆಯನ್ನು ಆರಂಭಿಸಿತು, ಇದು ಕೊರಿಯರ್‌ಗೆ ಸಮನಾದ ವೇಗದಲ್ಲಿ ಒಂದರಿಂದ ಎರಡು ದಿನಗಳಲ್ಲಿ ಪತ್ರವನ್ನು ತಲುಪಿಸುವ ಸಾಮರ್ಥ್ಯವನ್ನು ಹೊಂದಿದೆ. ಈಗ, ರಿಜಿಸ್ಟರ್ಡ್ ಪೋಸ್ಟ್‌ನ ಸ್ಥಾನವನ್ನು ಸ್ಪೀಡ್ ಪೋಸ್ಟ್ ಸಂಪೂರ್ಣವಾಗಿ ಆಕ್ರಮಿಸಿಕೊಳ್ಳಲಿದೆ.

Registered Post Closing Date-ರಿಜಿಸ್ಟರ್ಡ್ ಪೋಸ್ಟ್ ಯಾವ ದಿನದಿಂದ ಬಂದ್ ಅಗಲಿದೆ?

ಅಂಚೆ ಇಲಾಕೆಯ ಅಧಿಕೃತ ಸುತ್ತೋಲೆಯಲ್ಲಿ ಹೊರಡಿಸಿರುವ ಮಾಹಿತಿಯನ್ವ ಇದೆ ಸೆಪ್ಟೆಂಬರ್ 1, 2025ರಿಂದ ದೇಶದ್ಯಾಂತ ರಿಜಿಸ್ಟರ್ಡ್ ಪೋಸ್ಟ್ ಸೇವೆಯು ಸ್ಥಗಿತಗೊಳ್ಳಲಿದೆ.

ಗ್ರಾಹಕರಿಗೆ ಆದ ಆಘಾತ!

ರಿಜಿಸ್ಟರ್ಡ್ ಪೋಸ್ಟ್ ಸೇವೆಯನ್ನು ಸ್ಥಗಿತಗೊಳಿಸುವ ಈ ಕ್ರಮವು ಗ್ರಾಹಕರಲ್ಲಿ ಆಘಾತವನ್ನುಂಟು ಮಾಡಿದೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ರಿಜಿಸ್ಟರ್ಡ್ ಪೋಸ್ಟ್ ಒಂದು ಕೈಗೆಟಕುವ ಮತ್ತು ವಿಶ್ವಾಸಾರ್ಹ ಸೇವೆಯಾಗಿತ್ತು. ಉದಾಹರಣೆಗೆ, ರಿಜಿಸ್ಟರ್ಡ್ ಬುಕ್ ಪೋಸ್ಟ್ ಸೇವೆಯ ಶುಲ್ಕ 1 ಕೆ.ಜಿ.ಗೆ ಕೇವಲ 32 ರೂ. ಆಗಿದ್ದರೆ, ರಿಜಿಸ್ಟರ್ಡ್ ಪಾರ್ಸೆಲ್‌ಗೆ 78 ರೂ. ಶುಲ್ಕವಿತ್ತು. ಆದರೆ, ಸ್ಪೀಡ್ ಪೋಸ್ಟ್‌ನ ಶುಲ್ಕವು ಇದಕ್ಕಿಂತ ಹೆಚ್ಚಿರುವುದರಿಂದ, ಗ್ರಾಹಕರಿಗೆ ಆರ್ಥಿಕ ಹೊರೆ ಹೆಚ್ಚಾಗುವ ಆತಂಕವಿದೆ.

ವಿಶೇಷವಾಗಿ, ರಿಜಿಸ್ಟರ್ಡ್ ಬುಕ್ ಪೋಸ್ಟ್ ಸೇವೆಯ ಸ್ಥಗಿತಗೊಳಿಕೆಯು ಪುಸ್ತಕ ಪ್ರೇಮಿಗಳಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ಈ ಸೇವೆಯು ಪುಸ್ತಕಗಳನ್ನು ಕಡಿಮೆ ವೆಚ್ಚದಲ್ಲಿ ಕಳುಹಿಸಲು ಸಹಾಯಕವಾಗಿತ್ತು. ಈಗ, ಖಾಸಗಿ ಕೊರಿಯರ್ ಸೇವೆಗಳನ್ನು ಆಶ್ರಯಿಸಬೇಕಾದ ಅನಿವಾರ್ಯತೆಯಿಂದ ಗ್ರಾಹಕರು ದುಬಾರಿ ಶುಲ್ಕವನ್ನು ಭರಿಸಬೇಕಾಗುತ್ತದೆ.

India Post Future Plans-ಅಂಚೆ ಇಲಾಖೆಯ ಭವಿಷ್ಯದ ಯೋಜನೆಗಳು:

ಅಂಚೆ ಇಲಾಖೆಯು ತನ್ನ ಸೇವೆಗಳನ್ನು ಆಧುನೀಕರಣಗೊಳಿಸಲು ಮತ್ತು ಇ-ಕಾಮರ್ಸ್ ಯುಗದಲ್ಲಿ ಸ್ಪರ್ಧಾತ್ಮಕವಾಗಿರಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಪ್ರಕಾರ, ಅಂಚೆ ಇಲಾಖೆಯನ್ನು ಸಂಪೂರ್ಣ ಡಿಜಿಟಲ್ ವೇದಿಕೆಯಾಗಿ ಪರಿವರ্তಿಸುವ ಯೋಜನೆಯು ಪ್ರಗತಿಯಲ್ಲಿದೆ. ಇದರ ಜೊತೆಗೆ, 1.64 ಲಕ್ಷ ಅಂಚೆ ಕಚೇರಿಗಳನ್ನು ಹೊಂದಿರುವ ಈ ಇಲಾಖೆಯನ್ನು ಜಗತ್ತಿನ ಅತಿದೊಡ್ಡ ವಿತರಣಾ ಜಾಲವಾಗಿ ರೂಪಿಸುವ ಗುರಿಯಿದೆ.

Advice To Customers-ಗ್ರಾಹಕರಿಗೆ ಸಲಹೆ:

ಸೆಪ್ಟೆಂಬರ್ 1, 2025ರಿಂದ ರಿಜಿಸ್ಟರ್ಡ್ ಪೋಸ್ಟ್ ಸೇವೆಯ ಬದಲಿಗೆ ಸ್ಪೀಡ್ ಪೋಸ್ಟ್ ಮತ್ತು ಸಾಮಾನ್ಯ ಪೋಸ್ಟ್ ಸೇವೆಗಳು ಮಾತ್ರ ಲಭ್ಯವಿರುತ್ತವೆ. ಗ್ರಾಹಕರು ತಮ್ಮ ಪ್ರಮುಖ ದಾಖಲೆಗಳನ್ನು ಕಳುಹಿಸಲು ಸ್ಪೀಡ್ ಪೋಸ್ಟ್ ಸೇವೆಯನ್ನು ಬಳಸಬಹುದು, ಇದು ರಿಜಿಸ್ಟರ್ಡ್ ಪೋಸ್ಟ್‌ನಂತೆಯೇ ಸುರಕ್ಷತೆಯನ್ನು ಒದಗಿಸುತ್ತದೆ ಜೊತೆಗೆ ತ್ವರಿತ ವಿತರಣೆಯ ಭರವಸೆಯನ್ನು ನೀಡುತ್ತದೆ.

ಹೆಚ್ಚಿನ ಮಾಹಿತಿ ಪಡೆಯಲು ಅಂಚೆ ಇಲಾಖೆ ವೆಬ್ಸೈಟ್-Click Here

Post a Comment

Previous Post Next Post

Top Post Ad

CLOSE ADS
CLOSE ADS
×