PUC Scholariship-ಪ್ರಥಮ ದರ್ಜೆಯಲ್ಲಿ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ 20,000 ಪ್ರೋತ್ಸಾಹಧನ ಪಡೆಯಲು ಅರ್ಜಿ ಆಹ್ವಾನ

PUC Scholariship-ಪ್ರಥಮ ದರ್ಜೆಯಲ್ಲಿ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ 20,000 ಪ್ರೋತ್ಸಾಹಧನ ಪಡೆಯಲು ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯಿಂದ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಉತೇಜನ ನೀಡಲು ಪ್ರೋತ್ಸಾಹಧನವನ್ನು(Prize Money Scholariship) ಒದಗಿಸಲು ಅರ್ಹ ಅಭ್ಯರ್ಥಿಗಳು ಆಯ್ಕೆ ಮಾಡಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಇಂದಿನ ಅಂಕಣದಲ್ಲಿ ಇಲಾಖೆಯಿಂದ ಪ್ರೋತ್ಸಾಹಧನವನ್ನು(Prize Money Scholariship Application) ಪಡೆಯಲು ಅರ್ಜಿ ಸಲ್ಲಿಸಲು ಇಲಾಖೆಯಿಂದ ನಿಗದಿಪಡಿಸಿರುವ ಮಾನದಂಡಗಳೇನು? ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಹೇಗೆ? ವಿದ್ಯಾರ್ಹತೆವಾರು ಪ್ರೋತ್ಸಾಹಧನ ಮೊತ್ತ ಎಷ್ಟು? ಇದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಶಿಕ್ಷಣ ಎನ್ನುವುದು ಇಂದಿನ ದಿನಮಾನಗಳಲ್ಲಿ ಬಹುತೇಕ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ(Post-Matric Scholarship) ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಉನ್ನತ ಮಟ್ಟದ ಸಾಧನೆಯನ್ನು ಮಾಡಲು ತುಂಬಾ ಸಹಕಾರಿಯಾಗಿದ್ದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉನ್ನತ ವ್ಯಾಸಂಗದ ಕಡೆ ಗಮನ ಕೊಡುವುದು ಅತ್ಯವಶ್ಯಕ ಇದಕ್ಕಾಗಿ ಆರ್ಥಿಕವಾಗಿ ಸರಕಾರ ಮತ್ತು ಖಾಸಗಿ ಸಹಯೋಗದಲ್ಲಿ ಅನೇಕ ವಿದ್ಯಾರ್ಥಿವೇತನ ಯೋಜನೆಗಳಿದ್ದು ಇವುಗಳ ಬಗ್ಗೆ ನಮ್ಮ ಪುಟದಲ್ಲಿ ಅನೇಕ ಅಂಕಣಗಳನ್ನು ನೀವು ನೋಡಬಹುದು.

Prize Money Amount Details-ವಿದ್ಯಾರ್ಹತೆವಾರು ಪ್ರೋತ್ಸಾಹಧನ ಮೊತ್ತ ಎಷ್ಟು?

ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿದ ಬಳಿಕ ಆಯ್ಕೆಯಾಗುವ ಫಲಾನುಭವಿಗಳಿಗೆ ಈ ಕೆಳಗಿನ ಪಟ್ಟಿಯಲ್ಲಿ ನಮೂದಿಸಿದ ರೀತಿಯಲ್ಲಿ ಪ್ರೋತ್ಸಾಹಧನ ಮೊತ್ತ ನೀಡಲಾಗುತ್ತದೆ.

2nd ಪಿಯುಸಿ/ 3 ವರ್ಷದ ಡಿಪ್ಲೋಮಾ- ₹20,000/-

ಪದವಿ- ₹25,000/-

MA/MBA- ₹30,000/-

ಕೃಷಿ/ಪಶುಸಂಗೋಪನೆ/ವೈದ್ಯಕೀಯ/ಇಂಜಿನಿಯರಿಂಗ್- ₹35,000/-

Prize Money Scholarship Eligibility-ಅರ್ಜಿ ಸಲ್ಲಿಸಲು ಅರ್ಹರು:

ಸಮಾಜ ಕಲ್ಯಾಣ ಇಲಾಖೆಯಿಂದ ವಿವಿಧ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅರ್ಜಿದಾರ ವಿದ್ಯಾರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

2nd ಪಿಯುಸಿ/ 3 ವರ್ಷದ ಡಿಪ್ಲೋಮಾ/ಪದವಿ/MA/MBA/ಕೃಷಿ/ಪಶುಸಂಗೋಪನೆ/ವೈದ್ಯಕೀಯ/ಇಂಜಿನಿಯರಿಂಗ್ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅರ್ಹರು.

ಈ ಹಿಂದೆ ಇಲಾಖೆಯ ಯೋಜನೆಯ ಮೂಲಕ ಈಗಾಗಲೇ ಪ್ರೋತ್ಸಾಹಧನ ಪಡೆದಿರುವವರು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

How to Apply-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

Step-1: ಪಥಮದಲ್ಲಿ ಇಲ್ಲಿ ಕ್ಲಿಕ್ "Prize Money Online Application" ಮಾಡಿ ಅಧಿಕೃತ ಸಮಾಜ ಕಲ್ಯಾಣ ಇಲಾಖೆಯ ಜಾಲತಾಣವನ್ನು ಪ್ರವೇಶ ಮಾಡಬೇಕು.

Step-2: ನಂತರ ಈ ಪೇಜ್ ನಲ್ಲಿ "Scheme" ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ "One Time Assistance/Postmetric/SSLC/Top5rank" ಎಂದು ಒಟ್ಟು ನಾಲ್ಕು ಆಯ್ಕೆಗಳು ತೋರಿಸುತ್ತವೆ ಇದರಲ್ಲಿ ನೀವು ಯಾವ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಿರುವಿರೋ ಅದರ ಮೇಲೆ ಕ್ಲಿಕ್ ಮಾಡಿಕೊಂಡು "Validate aadhar" ಬಟನ್ ಮೇಲೆ ಕ್ಲಿಕ್ ಮಾಡಿ.

Step-3: ಬಳಿಕ ಇಲ್ಲಿ ನಿಮ್ಮ 12 ಅಂಕಿಯ ಆಧಾರ್ ಕಾರ್ಡ ನಂಬರ್ ಅನ್ನು ಹಾಕಿ OTP ಅನ್ನು ನಮೂದಿಸಿದರೆ ಅಧಿಕೃತ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಕೇಳುವ ಎಲ್ಲಾ ಅಗತ್ಯ ವಿವರ ಮತ್ತು ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

Documents-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:

ಅರ್ಹ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅಗತ್ಯವಾಗಿ ಒದಗಿಸಬೇಕಾದ ದಾಖಲಾತಿಗಳ ಪಟ್ಟಿ ಹೀಗಿದೆ:

ವಿದ್ಯಾರ್ಥಿಯ ಆಧಾರ್ ಕಾರ್ಡ/Aadhar

ಪೋಟೋ/Photo

ಬ್ಯಾಂಕ್ ಪಾಸ್ ಬುಕ್/Bank Pass Book

ಜಾತಿ ಮತ್ತು ಆದಾಯ ಪ್ರಮಾಣ ಪತ್ರ/Caste And Income Certificate

ವ್ಯಾಸಂಗ ಪ್ರಮಾಣ ಪತ್ರ/Study Certificate

ಮೊಬೈಲ್ ನಂಬರ್/Mobile Number

Important Notice-ವಿದ್ಯಾರ್ಥಿಗಳಿಗೆ ವಿಶೇಷ ಸೂಚನೆ:

ಪ್ರೋತ್ಸಾಹ ಧನದ ಅರ್ಜಿ ಸಲ್ಲಿಸಿದ ನಂತಪುರ, ದಾಖಲೆ (ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಸಲ್ಲಿಸಿರುವ ಅರ್ಜಿಯ ಪ್ರತಿ, ಎಲ್ಲಾ ಸೆಮಿಸ್ಟರ್ ಪದವಿ ಅಂಕ ಪಟ್ಟಿ)ಗಳನ್ನು ನಿಮ್ಮ ಕಾಲೇಜಿನ ಪ್ರಾಂಶುಪಾಲರಿಂದ ದೃಢೀಕರಿಸಿ, ಕಾಲೇಜು ವ್ಯಾಪ್ತಿಗೊಳಪಟ್ಟ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಕಛೇರಿಗೆ ಸ್ವೀಕೃತಿ ಪ್ರತಿಯೊಂದಿಗೆ ಸಲ್ಲಿಸತಕ್ಕದ್ದು.

Helpline Number-ಈ ಯೋಜನೆಯ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಇಲಾಖೆಯ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ- 9482300 400 ಗೆ ಸಂಪರ್ಕಿಸಿ.

Official Website Of Karnataka-ಇಲಾಖೆಯ ವೆಬ್ಸೈಟ್-Click Here

Post a Comment

Previous Post Next Post

Top Post Ad

CLOSE ADS
CLOSE ADS
×