free rooftop solar : ಪಿಎಂ ಸೂರ್ಯ ಘರ್ ಯೋಜನೆ ಮೂಲಕ ಉಚಿತ ಸೌರಶಕ್ತಿ ಅಳವಡಿಕೆ.ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ಸೌಲಭ್ಯ.ಅರ್ಜಿ ಪ್ರಕ್ರಿಯೆ ಸಂಪೂರ್ಣ ಆನ್‌ಲೈನ್ ಮೂಲಕ pmsuryaghar.gov.in ನಲ್ಲಿ.
ಪ್ರತೀ ತಿಂಗಳು ಬರುವ ಹೆಚ್ಚಿನ ವಿದ್ಯುತ್ ಬಿಲ್‌ನಿಂದ ತಲೆನೋವಿಗೆ ಒಳಗಾಗಿದ್ದೀರಾ? ಹಾಗಾದರೆ ನಿಮಗೆ ಕೇಂದ್ರ ಸರ್ಕಾರದಿಂದ ಒಳ್ಳೆಯ ಸುದ್ದಿ ಇದೆ. ಪಿಎಂ ಸೂರ್ಯ ಘರ್ ಯೋಜನೆ ಅಡಿಯಲ್ಲಿ, ನಿಮ್ಮ ಮನೆಯ ಛಾವಣಿಯಲ್ಲಿ ಉಚಿತವಾಗಿ ಸೌರಶಕ್ತಿ (solar system) ಅಳವಡಿಸಿ, ತಿಂಗಳಿಗೆ 300 ಯೂನಿಟ್‌ವರೆಗೆ ವಿದ್ಯುತ್ ಸಂಪೂರ್ಣ ಉಚಿತವಾಗಿ (Free Electricity) ಪಡೆಯಬಹುದಾಗಿದೆ.
2024 ಫೆಬ್ರವರಿಯಲ್ಲಿ ಆರಂಭವಾದ ಈ ಯೋಜನೆ ದೇಶದಾದ್ಯಂತ ಸಾಮಾನ್ಯ ಮನೆಗಳಿಗೆ ವಿದ್ಯುತ್ ಖರ್ಚು ಕಡಿಮೆ ಮಾಡಲು ರೂಪುಗೊಂಡಿದೆ. ಯಾವುದೇ ಆದಾಯ ಮಿತಿ ಇಲ್ಲದೆ, ಭಾರತದ ಖಾಯಂ ನಿವಾಸಿಗಳಾದ ಮನೆಮಾಲೀಕರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಹೋಟೆಲ್, ಅಂಗಡಿ, ಅಥವಾ ವಾಣಿಜ್ಯ ಕಟ್ಟಡಗಳಿಗೆ ಈ ಸೌಲಭ್ಯ ಅನ್ವಯಿಸುವುದಿಲ್ಲ.
ಅರ್ಜಿ ಹಾಕುವ ಮನೆಯ ಛಾವಣಿಯಲ್ಲಿ ಸೌರ ಪ್ಯಾನೆಲ್ (Solar Panel) ಅಳವಡಿಸಲು ಸಾಕಷ್ಟು ಜಾಗ ಇರಬೇಕು ಮತ್ತು ವಿದ್ಯುತ್ ಸಂಪರ್ಕ ಕಡ್ಡಾಯ.
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು
- ಆಧಾರ್ ಕಾರ್ಡ್,
- ಮತದಾರರ ಗುರುತಿನ ಚೀಟಿ,
- ಇತ್ತೀಚಿನ ವಿದ್ಯುತ್ ಬಿಲ್,
- ಬ್ಯಾಂಕ್ ಖಾತೆ ವಿವರಗಳು,
- ಮನೆಯ ಛಾವಣಿ ಫೋಟೋ,
- ಆಸ್ತಿ ದಾಖಲೆಗಳು
- 4 ಪಾಸ್ಪೋರ್ಟ್ ಸೈಜ್ ಫೋಟೋಗಳನ್ನು ಸಿದ್ಧಪಡಿಸಬೇಕು.
ಅರ್ಜಿ ಪ್ರಕ್ರಿಯೆ ಹೀಗಿದೆ:
ಮೊದಲಿಗೆ pmsuryaghar.gov.in ವೆಬ್‌ಸೈಟ್‌ಗೆ ಭೇಟಿ ನೀಡಿ. ರಾಜ್ಯ, ಜಿಲ್ಲೆ ಆಯ್ಕೆ ಮಾಡಿ ರಿಜಿಸ್ಟರ್ ಮಾಡಿಕೊಳ್ಳಿ. ನಂತರ ನಿಮ್ಮ ಪ್ರದೇಶದ ವಿದ್ಯುತ್ ಸರಬರಾಜು ಕಂಪನಿ ಆಯ್ಕೆ ಮಾಡಿ, ವಿದ್ಯುತ್ ಬಿಲ್‌ನ ಗ್ರಾಹಕರ ಖಾತೆ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿ.
ರಿಜಿಸ್ಟ್ರೇಷನ್ ಬಳಿಕ ಲಾಗಿನ್ ಮಾಡಿ, “Apply for rooftop solar” ಆಯ್ಕೆ ಮಾಡಿ, ಅಗತ್ಯ ವಿವರಗಳನ್ನು ಭರ್ತಿ ಮಾಡಿ, ದಾಖಲೆಗಳನ್ನು PDF ರೂಪದಲ್ಲಿ ಅಪ್‌ಲೋಡ್ ಮಾಡಿ ಮತ್ತು ಸಲ್ಲಿಸಿ. ಅರ್ಜಿಯ ಸ್ಟೇಟಸ್ ನೋಡಲು ಸಿಗುವ ಸಂಖ್ಯೆಯನ್ನು ಸಂಗ್ರಹಿಸಿಕೊಳ್ಳಿ.
ಸರ್ಕಾರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಇನ್ನೂ ಘೋಷಿಸಿಲ್ಲ. ಆದ್ದರಿಂದ ಈ ಅವಕಾಶವನ್ನು ತಪ್ಪಿಸಿಕೊಳ್ಳದೇ ತಕ್ಷಣ ಅರ್ಜಿ ಸಲ್ಲಿಸುವುದು ಒಳಿತು. ಯೋಜನೆ ಯಾವಾಗ ಬೇಕಾದರೂ ಸ್ಥಗಿತಗೊಳ್ಳುವ ಸಾಧ್ಯತೆ ಇರುವುದರಿಂದ ತಡಮಾಡಬೇಡಿ.
ಪಿಎಂ ಸೂರ್ಯ ಘರ್ ಯೋಜನೆ ಮೂಲಕ ದೇಶದಾದ್ಯಂತ ಸಾವಿರಾರು ಮನೆಗಳು ವಿದ್ಯುತ್ ಖರ್ಚಿನಲ್ಲಿ ದೊಡ್ಡ ಮಟ್ಟದ ಉಳಿತಾಯ ಸಾಧಿಸುತ್ತಿವೆ. ನೀವು ಕೂಡ ಇಂದು ಅರ್ಜಿ ಹಾಕಿ, ಉಚಿತ ವಿದ್ಯುತ್ ಸೌಲಭ್ಯವನ್ನು ಪಡೆದುಕೊಳ್ಳಿ.