ಶಕ್ತಿಶಾಲಿ ಫೀಚರ್ಸ್ ಮತ್ತು ಆಕರ್ಷಕ ಬೆಲೆಯ ಹಲವಾರು ವದಂತಿ ಸುದ್ದಿಗಳಿಂದ ಭಾರಿ ನಿರೀಕ್ಷೆ ಮೂಡಿಸಿದ್ದ iQOO Z10 Turbo+ 5G ಸ್ಮಾರ್ಟ್‌ಫೋನ್ ಇದೀಗ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ನಿರೀಕ್ಷೆಯಂತೆಯೇ, ಈ ಹೊಸ ಫೋನ್ ಶಕ್ತಿಶಾಲಿ ಸ್ಪೆಸಿಫಿಕೇಷನ್‌ಗಳು, ಆಕರ್ಷಕ ವಿನ್ಯಾಸ ಮತ್ತು ಕೈಗೆಟುಕುವ ಬೆಲೆಯಲ್ಲಿ ಪರಿಚಯಗೊಂಡಿದ್ದು, ಮೂರು ಬಣ್ಣ ಆಯ್ಕೆಗಳಲ್ಲಿ ಮತ್ತು ನಾಲ್ಕು ವಿಭಿನ್ನ RAM ಮತ್ತು ಸ್ಟೋರೇಜ್ ಮಾದರಿಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.
iQOO Z10 Turbo+ 5G: ಪ್ರಮುಖ ವೈಶಿಷ್ಟ್ಯಗಳು
ಹೊಸ iQOO Z10 Turbo+ 5G ಫೋನ್ 6.78-ಇಂಚಿನ AMOLED ಟಚ್‌ಸ್ಕ್ರೀನ್ ಡಿಸ್‌ಪ್ಲೇ ಹೊಂದಿದ್ದು, 2,800×1,260 ಪಿಕ್ಸೆಲ್‌ಗಳ ರೆಸಲ್ಯೂಶನ್, 144Hz ವರೆಗಿನ ರಿಫ್ರೆಶ್ ರೇಟ್, ಮತ್ತು 93.42% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಈ ಡಿಸ್‌ಪ್ಲೇ HDR ತಂತ್ರಜ್ಞಾನವನ್ನು ಬೆಂಬಲಿಸುತ್ತದೆ ಮತ್ತು 1.07 ಬಿಲಿಯನ್ ಬಣ್ಣಗಳನ್ನು ಪ್ರದರ್ಶಿಸುವ ಸಾಮರ್ಥ್ಯ ಹೊಂದಿದೆ.
ಕಾರ್ಯಕ್ಷಮತೆಗಾಗಿ, 3nm MediaTek Dimensity 9400+ SoC ಪ್ರೊಸೆಸರ್ ನೀಡಲಾಗಿದ್ದು, ಗರಿಷ್ಠ 3.73GHz ಕ್ಲಾಕ್ ಸ್ಪೀಡ್ ಹೊಂದಿದೆ. ಜೊತೆಗೆ, ಇದು ಗೇಮಿಂಗ್‌ಗಾಗಿ Immortalis-G925 GPU ಯನ್ನು ಸಹ ಒಳಗೊಂಡಿದೆ. ಈ ಎಲ್ಲವನ್ನು 16GB ವರೆಗೆ LPDDR5x RAM ಮತ್ತು 512GB ವರೆಗೆ UFS 4.1 ಸ್ಟೋರೇಜ್ ನೊಂದಿಗೆ ಜೋಡಿಸಲಾಗಿದೆ. ಮತ್ತು ಆಂಡ್ರಾಯ್ಡ್ 15 ಆಧಾರಿತ OriginOS 5 ನಲ್ಲಿ ಕಾರ್ಯನಿರ್ವಹಿಸುತ್ತದೆ.
iQOO Z10 Turbo 5G Launched with MediaTek Dimensity 9400 SoC and 8 000mAh Battery
ಕ್ಯಾಮರಾ ವಿಷಯದಲ್ಲಿ, ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 50 ಮೆಗಾಪಿಕ್ಸೆಲ್‌ನ ಮುಖ್ಯ ಸೋನಿ ಸೆನ್ಸಾರ್ ಮತ್ತು 8 ಮೆಗಾಪಿಕ್ಸೆಲ್‌ನ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಸೇರಿವೆ. ಮುಖ್ಯ ಕ್ಯಾಮೆರಾ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ ಬರುತ್ತದೆ ಮತ್ತು 4K ವೀಡಿಯೊ ರೆಕಾರ್ಡಿಂಗ್‌ಗೂ ಬೆಂಬಲಿಸುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, 16 ಮೆಗಾಪಿಕ್ಸೆಲ್‌ನ ಫ್ರಂಟ್ ಕ್ಯಾಮೆರಾ ಇದೆ.
ಬ್ಯಾಟರಿ ವಿಭಾಗದಲ್ಲಿ, ಈ ಫೋನ್ 8,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು ದೀರ್ಘಕಾಲದ ಬಳಕೆಯನ್ನು ಖಾತ್ರಿಪಡಿಸುತ್ತದೆ. ಇದರ ಜೊತೆಗೆ, 90W ಫಾಸ್ಟ್ ಚಾರ್ಜಿಂಗ್ ಬೆಂಬಲವು ಬ್ಯಾಟರಿ ಬೇಗನೆ ಚಾರ್ಜ್ ಆಗಲು ಸಹಾಯ ಮಾಡುತ್ತದೆ. ಸಂಪರ್ಕಕ್ಕಾಗಿ, ಇದು ಬ್ಲೂಟೂತ್ 5.4, Wi-Fi 7, GPS ಮತ್ತು ಇತರ ಹಲವು ಆಯ್ಕೆಗಳನ್ನು ಒಳಗೊಂಡಿದೆ.
iQOO Z10 Turbo+ 5G:ಬೆಲೆ ಮತ್ತು ಲಭ್ಯತೆ
ಚೀನಾದಲ್ಲಿiQOO Z10 Turbo+ 5G ಫೋನಿನ ಆರಂಭಿಕ ಬೆಲೆ 12GB RAM ಮತ್ತು 256GB ಸಂಗ್ರಹಣೆಯ ರೂಪಾಂತರಕ್ಕೆ CNY 2,299 (ಸುಮಾರು ₹28,000) ಆಗಿದೆ. ಇದರ ಇತರ ರೂಪಾಂತರಗಳಾದ 12GB+512GB, 16GB+256GB ಮತ್ತು 16GB+512GB ಮಾದರಿಗಳು ಕ್ರಮವಾಗಿ CNY 2,699 (ಸುಮಾರು ₹32,900), CNY 2,499 (ಸುಮಾರು ₹30,500) ಮತ್ತು CNY 2,999 (ಸುಮಾರು ₹36,500) ಬೆಲೆಯಲ್ಲಿ ಲಭ್ಯವಿದೆ.
ಈ iQOO Z10 Turbo+ 5G ಫೋನ್ ಪೋಲಾರ್ ಆಶ್, ವೈಟ್, ಮತ್ತು ಡೆಸರ್ಟ್ ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ದೊರೆಯಲಿದೆ. ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಫೀಚರ್‌ಗಳೊಂದಿಗೆ ಗ್ರಾಹಕರ ಗಮನ ಸೆಳೆಯಲು ಸಜ್ಜಾಗಿರುವ ಈ ಫೋನ್ ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬ ಕುರಿತಂತೆ ಪ್ರಸ್ತುತ ಯಾವುದೇ ಮಾಹಿತಿ ದೊರೆತಿಲ್ಲ. ಆದರೆ, ಶೀಘ್ರದಲ್ಲೇ ಆಗಮನವನ್ನು ನಿರೀಕ್ಷಿಸಬಹುದು. iQOO Z10 Turbo+ 5G ಫೋನ್ ಭಾರತದಲ್ಲಿ ಯಾವಾಗ ಬಿಡುಗಡೆಯಾಗಬಹುದು ಎಂಬುದನ್ನು ಊಹಿಸಿ ಮತ್ತು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.