ಕ್ರೆಡಿಟ್ ಸ್ಕೋರ್ ಕಮ್ಮಿ ಇದೆ ಅಂತ ಲೋನ್ ಸಿಗ್ತಾ ಇಲ್ವಾ? ಈ ರೀತಿ ಮಾಡಿ ಸಾಕು

ಕ್ರೆಡಿಟ್ ಸ್ಕೋರ್ ಕಮ್ಮಿ ಇದೆ ಅಂತ ಲೋನ್ ಸಿಗ್ತಾ ಇಲ್ವಾ? ಈ ರೀತಿ ಮಾಡಿ ಸಾಕು

ಸಿಬಿಲ್ ಸ್ಕೋರ್ ಕಡಿಮೆ ಇದ್ರೆ ಪರ್ಸನಲ್ ಲೋನ್ ಸಿಗೋದು ಕಷ್ಟ.ಬಡ್ಡಿದರ ಕಡಿಮೆ ಬೇಕಾದ್ರೆ ಸ್ಕೋರ್ ಇಂಪ್ರೂವ್ ಮಾಡಲೇ ಬೇಕು.

ಬಿಲ್, ಇಎಮ್ಐ ಪಾವತಿಯಲ್ಲಿ ಶಿಸ್ತಿದ್ದರೆ ಲಾಭ

ಅನೇಕ ಮಂದಿ ಪರ್ಸನಲ್ ಲೋನ್ (Personal Loan) ಅಪ್ಲೈ ಮಾಡಿದ ಮೇಲೆ ಬಡ್ಡಿದರ ಜಾಸ್ತಿ ಅಂತ ಕೇಳಿ ಶಾಕ್ ಆಗುತ್ತಾರೆ ಅಥವಾ ನೇರವಾಗಿ ನಿರಾಕರಣೆ ಎದುರಿಸುತ್ತಾರೆ. ಇದರ ಹಿಂದೆ ಪ್ರಮುಖ ಕಾರಣವೆಂದರೆ “ಸಿಬಿಲ್ ಸ್ಕೋರ್” ಕಡಿಮೆಯಾಗಿರೋದು.

ಈ ಸ್ಕೋರ್ (Credit Score) ಒಂದು ಮೂರು ಅಂಕಿಯ ಸಂಖ್ಯೆ, ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ (NBFC)ಗಳು ನಿಮ್ಮ ಹಣಕಾಸು ನಂಬಿಕೆ ಆಧರಿಸಿ ಸಾಲ ನೀಡಬೇಕೋ ಅಥವಾ ಬೇಡವೊ ಎಂಬ ನಿರ್ಧಾರ ತೆಗೆದುಕೊಳ್ಳೋ ಅಳತೆಯಾಗಿದೆ.

ಕ್ರೆಡಿಟ್ ಸ್ಕೋರ್ ಕಮ್ಮಿ ಇದೆ ಅಂತ ಲೋನ್ ಸಿಗ್ತಾ ಇಲ್ವಾ? ಈ ರೀತಿ ಮಾಡಿ ಸಾಕು

ಸಾಮಾನ್ಯವಾಗಿ 700ಕ್ಕಿಂತ ಮೇಲಾಗಿದ್ದರೆ ಉತ್ತಮ ಸ್ಕೋರ್ ಎನ್ನುತ್ತಾರೆ. ಸ್ಕೋರ್ ಏರಿದಷ್ಟೂ ಬಡ್ಡಿದರ ಇಳಿಯುತ್ತೆ, ಲೋನ್ ಅನುಮೋದನೆ ತ್ವರಿತವಾಗಿ ಆಗುತ್ತೆ.

ಇದು ಸುಧಾರಿಸಲು ಬಹು ದೊಡ್ಡ ಪ್ರಯತ್ನ ಬೇಕಾಗಿಲ್ಲ. ಕೆಲ ಸರಳ ಕ್ರಮಗಳನ್ನು ಅನುಸರಿಸಿದರೆ, ನಿಮಗೂ ಹೆಚ್ಚು ಹಣ ಕಡಿಮೆ ಬಡ್ಡಿದರಕ್ಕೆ ಲಭ್ಯವಾಗಬಹುದು. ಮೊದಲನೆಯದಾಗಿ, ಪ್ರತಿಯೊಂದು EMI ಅಥವಾ ಕ್ರೆಡಿಟ್ ಕಾರ್ಡ್ (Credit Card) ಬಿಲ್ಲನ್ನು ಸಮಯಕ್ಕೆ ಪಾವತಿಸಬೇಕು. ಇದಕ್ಕಾಗಿ ಆಟೋ ಡೆಬಿಟ್ ಆಯ್ಕೆ ಮಾಡಿ.

ಹೆಚ್ಚಾಗಿ ಕಂಡುಬರುವ ಒಂದು ತಪ್ಪು ಎಂದರೆ ಕ್ರೆಡಿಟ್ ಕಾರ್ಡ್ ಅನ್ನು ಗರಿಷ್ಠ ಮಟ್ಟದಲ್ಲಿ ಬಳಸುವುದು. ಇದರಿಂದ ಸ್ಕೋರ್‌ಗೆ ಧಕ್ಕೆ ಆಗುತ್ತದೆ. ಕಾರ್ಡ್ ಲಿಮಿಟ್‌ನ 30% ಒಳಗೇ ಬಳಸಿದರೆ ಉತ್ತಮ ಫಲಿತಾಂಶ ದೊರೆಯಬಹುದು.

ಇದರ ಜೊತೆಗೆ ವರ್ಷಕ್ಕೊಂದು ಬಾರಿ ನೀವು ಉಚಿತ ಕ್ರೆಡಿಟ್ ವರದಿ ಪಡೆಯಬಹುದು. CIBIL, Experian, Equifax ಅಥವಾ CRIF Highmark ಎನ್ನುವ ಸಂಸ್ಥೆಗಳು ಇದನ್ನು ಒದಗಿಸುತ್ತವೆ. ಯಾವ ಸಾಲ ನೀವು ತೆಗೆದುಕೊಂಡಿಲ್ಲವೋ ಅದನ್ನು ವಿವರವಾಗಿ ಪರಿಶೀಲಿಸಿ, ತಪ್ಪುಗಳಿದ್ದರೆ ತಕ್ಷಣ ಆನ್‌ಲೈನ್‌ನಲ್ಲಿ ದೂರು ನೀಡಿ. ಸುಮಾರು 30 ದಿನಗಳಲ್ಲಿ ಸರಿಪಡಿಸಲಾಗುತ್ತದೆ.

ಇವೆಲ್ಲ ಸರಿಯಾಗಿ ಮಾಡಿದರೆ, 3-6 ತಿಂಗಳಲ್ಲೇ ನಿಮ್ಮ ಸ್ಕೋರ್‌ನಲ್ಲಿ ಸ್ಪಷ್ಟವಾದ ಬದಲಾವಣೆ ಕಂಡುಬರುತ್ತದೆ. ಸಾಲ ಪಡೆಯಲು ಸಂಕಷ್ಟ ಆಗ್ತಿದ್ದರೂ ಈ ಕ್ರಮಗಳು ಪಾಲಿಸಿದರೆ ನಿಮ್ಮ ಹಣಕಾಸಿನ ಭವಿಷ್ಯ ಉತ್ತಮವಾಗಬಹುದು.


Post a Comment

Previous Post Next Post

Top Post Ad

CLOSE ADS
CLOSE ADS
×