DL and RC Card- ವಾಹನ ಚಾಲಕರಿಗೆ ಸಿಹಿ ಸುದ್ದಿ! DL ಮತ್ತು RC ಡೆಲಿವರಿ ಈಗ ಮತ್ತಷ್ಟು ಬೇಗ! ಬಂದಿದೆ ಸ್ಮಾರ್ಟ್ ಕಾರ್ಡ್

DL and RC Card- ವಾಹನ ಚಾಲಕರಿಗೆ ಸಿಹಿ ಸುದ್ದಿ! DL ಮತ್ತು RC ಡೆಲಿವರಿ ಈಗ ಮತ್ತಷ್ಟು ಬೇಗ! ಬಂದಿದೆ ಸ್ಮಾರ್ಟ್ ಕಾರ್ಡ್

ಕರ್ನಾಟಕ ರಾಜ್ಯ ಸರಕಾರದಡಿ ಕಾರ್ಯನಿರ್ವಹಿಸುವ ಸಾರಿಗೆ ಇಲಾಖೆಯು(Karnataka Transport Department) ವಾಹನ ಸವಾರರಿಗೆ ಅಧಿಕೃತವಾಗಿ ವಿತರಣೆ ಮಾಡುವ DL ಮತ್ತು RC ಕಾರ್ಡ ಪಡೆಯುವ ವಿಧಾನದಲ್ಲಿ ವಿನೂತನ ಯೋಜನೆ ಜಾರಿಗೆ ಮುಂದಾಗಿದೆ ಈ ಕುರಿತು ಒಂದಿಷ್ಟು ಅಗತ್ಯ ವಿವರವನ್ನು ಇಂದಿನ ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಡಿಎಲ್ ಮತ್ತು ಆರ್ ಸಿ ಡೆಲಿವರಿ ಈಗ ಮತ್ತಷ್ಟು ವೇಗವಾಗಿ, ಸ್ಮಾರ್ಟ್ ಮುದ್ರಣ ವ್ಯವಸ್ಥೆ ಚಾಲನೆಗೆ ಮುಂದಾದ ಕರ್ನಾಟಕ ಸಾರಿಗೆ ಇಲಾಖೆ(RTO Office), ಏನಿದು ನೂತನ ವ್ಯವಸ್ಥೆ? ಈ ಹಿಂದೆ ಇದ್ದ ವ್ಯವಸ್ಥಗೂ ಮತ್ತು ಹೊಸ ನಿಯಮದಿಂದ ಸಾರ್ವಜನಿಕರಿಗೆ ಯಾವೆಲ್ಲ ಪ್ರಯೋಜನ ಸಿಗಲಿವೆ?ಹೊಸ ಸ್ಮಾರ್ಟ್ ಕಾರ್ಡಿನ ವಿಶೇಷತೆಗಳು? ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಡ್ರೈವಿಂಗ್ ಲೈಸನ್ಸ್ (DL) ಮತ್ತು ವಾಹನದ ನೋಂದಾಯಿತ ಪ್ರಮಾಣಪತ್ರ(RC) ಕಾರ್ಡ್ ವಿತರಣೆ ಈಗ ಬಹಳಷ್ಟು ಬೇಗ ದೊರಕಲಿದೆ. ಏಕೆಂದರೆ ಕರ್ನಾಟಕ ಸಾರಿಗೆ ಇಲಾಖೆಯು ಮಹತ್ವ ಹೆಜ್ಜೆ ಹಾಕಿದ್ದು ಇದೀಗ ಈ ದಾಖಲೆಗಳನ್ನು ಸ್ಮಾರ್ಟ್ ಕಾರ್ಡ್ ಮೂಲಕ ಕೇಂದ್ರೀಕೃತವಾಗಿ ಹಾಗೂ ಸುರಕ್ಷಿತವಾಗಿ ಮುದ್ರಿಸಿಡಬಹುದು. ಈ ಸ್ಮಾರ್ಟ್ ಕಾರ್ಡ್ ಸ್ಪೀಡ್ ಪೋಸ್ಟ್ ಮೂಲಕ ನೇರವಾಗಿ ನಿಮ್ಮ ಮನೆಯ ಬಾಗಿಲಿಗೆ ಬರಲಿದೆ.

What Is Smart Card-ಏನಿದು ಸ್ಮಾರ್ಟ್ ಕಾರ್ಡ? ಹೇಗಿರಲಿದೆ?

ಕರ್ನಾಟಕದ ವಾಹನ ಚಾಲಕರಿಗೆ ಸಾರಿಗೆ ಇಲಾಕೆಯು ನೂತನ ವ್ಯವಸ್ಥೆಯನ್ನು ಪರಿಚಯಿಸಲು ಮುಂದಾಗಿದೆ! ಡ್ರೈವಿಂಗ್ ಲೈಸೆನ್ಸ್ (DL) ಮತ್ತು ವಾಹನ ನೋಂದಣಿ ಪತ್ರ (RC) ಡೆಲಿವರಿಯಲ್ಲಿ ಈಗ ಮಹತ್ವದ ಬದಲಾವಣೆಗೆ ಮುಂದಾಗಿದ್ದು, ಕರ್ನಾಟಕ ಸಾರಿಗೆ ಇಲಾಖೆಯು 2025ರ ಆರಂಭದಿಂದ ಸ್ಮಾರ್ಟ್ ಕಾರ್ಡ್‌ಗಳನ್ನು ಪರಿಚಯಿಸಲು ಸಜ್ಜಾಗಿದ್ದು, ಇದರಿಂದ DL ಮತ್ತು RC ಡೆಲಿವರಿಯ ವೇಗವು ಗಣನೀಯವಾಗಿ ಹೆಚ್ಚಲಿದೆ. ಈ ಆಧುನಿಕ ಸ್ಮಾರ್ಟ್ ಕಾರ್ಡ್‌ಗಳು ಚಿಪ್ ಮತ್ತು QR ಕೋಡ್‌ಗಳನ್ನು ಒಳಗೊಂಡಿದ್ದು, ಬಳಕೆದಾರರಿಗೆ ತಂತ್ರಜ್ಞಾನದ ಜೊತೆಗೆ ಸುರಕ್ಷತೆಯನ್ನೂ ಒದಗಿಸಲಿವೆ.

DL And RC Old Method-ಹಳೆಯ ವ್ಯವಸ್ಥೆ ಹೇಗಿತ್ತು?

ಇದುವರೆಗೂ ಪ್ರತಿ ಜಿಲ್ಲೆಯಲ್ಲಿ ಆರ್ ಟಿ ಓ(RTO) ಕಚೇರಿಯಲ್ಲಿ ಡಿಎಲ್ ಮತ್ತು ಆರ್ ಸಿ ಸ್ಮಾರ್ಟ್ ಕಾರ್ಡ್ ಗಳು ಮುದ್ರಣಗೊಂಡು ನಂತರ ಚಾಲಕರಿಗೆ ಹಸ್ತಾಂತರವಾಗುತ್ತಿತ್ತು. ಆದರೆ ಈ ವ್ಯವಸ್ಥೆಯಲ್ಲಿ ಬಹಳಷ್ಟು ಸಮಯ ಹಿಡಿಯುತ್ತಿತ್ತು ಮತ್ತು ಅಕ್ರಮವು ಕೂಡ ಆಗುತ್ತಿತ್ತು. ಅಕ್ರಮ ಮತ್ತು ತಂತ್ರಜ್ಞಾನ ಸಂಬಂಧಿತ ದೋಷಗಳನ್ನು ಕಡಿಮೆ ಮಾಡಲು ಸ್ಮಾರ್ಟ್ ಕಾರ್ಡ್ ಎಂಬ ವಿಶೇಷ ಉಪಯುಕ್ತ ಕಾರ್ಡ್ ಜಾರಿಗೆ ತರಲಾಗುತ್ತಿದೆ. ಮತ್ತು ಈ ಸ್ಮಾರ್ಟ್ ಕಾರ್ಡ್ ನಿಮ್ಮ ಮನೆ ಸ್ಪೀಡ್ ಪೋಸ್ಟ್ ಮುಖಾಂತರ ಬಾಗಿಲಿಗೆ ಬರುತ್ತದೆ.

DL ಮತ್ತು RC ಪಡೆಯುವ ವಿಧಾನದ ಕುರಿತು ಸಾರ್ವಜನಿಕರ ದೂರುಗಳು ಬಂದ ಹಿನ್ನೆಲೆ, ಈ ವಿನೂತನ ಸಾರ್ವಜನಿಕ ಸ್ನೇಹಿ ಕ್ರಮವನ್ನು ಜಾರಿಗೆ ತರಲು ಸಾರಿಗೆ ಇಲಾಕೆಯುವ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿಯನ್ನು ಹಂಚಿಕೊಂಡಿದ್ದಾರೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಸ್ಮಾರ್ಟ್ ಕಾರ್ಡ್ ಗಳನ್ನು ಕೇಂದ್ರೀಕೃತವಾಗಿ ಮುದ್ರಿಸಿ ಕಳುಹಿಸುವ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ.

DL And RC Smart Card-ಹೊಸ ಸ್ಮಾರ್ಟ್ ಕಾರ್ಡಿನ ವಿಶೇಷತೆಗಳು?

ಸ್ಮಾರ್ಟ್ ಕಾರ್ಡ್ ಪಿವಿಸಿ ಮೆಟೀರಿಯಲ್ ಇಂದ ಆಗಿದ್ದು ಇದರ ಮೇಲಿನ ಅಕ್ಷರ ಎಂದಿಗೂ ಅಳಿಸಿ ಹೋಗೋದಿಲ್ಲ ಹಾಗೂ ಇದು ಬೇಗನೆ ಮುರಿದು ಹೋಗುವುದಿಲ್ಲ.

ಲೇಸರ್ ಮುದ್ರ : ಅಕ್ಷರಗಳು ಅಳಿಸಿ ಹೋಗುವ ಸಾಧ್ಯತೆ ಬಹಳ ಕಡಿಮೆ.

ಈ ಕಾರ್ಡ್ ನಲ್ಲಿ ಚಿಪ್ ಮತ್ತು QR ಕೋಡ್ ಇದ್ದ ಕಾರಣ ಟ್ರಾಪಿಕ್ ಪೋಲಿಸ್ ತಪಾಸಣೆಯ ಸಮಯದಲ್ಲಿ ನಿಖರವಾಗಿ ವಿವರವನ್ನು ಪತ್ತೆ ಮಾಡಲು ಸಹಕಾರಿಯಾಗಿದೆ.

ಚಾಲಕರು ಹೆಸರು ಸೇರಿದಂತೆ ತುರ್ತು ಸಂಪರ್ಕ ಸಂಖ್ಯೆ ಸೇರಿ 25ಕ್ಕೂ ಹೆಚ್ಚು ಮಾಹಿತಿ ಈ ಕಾರ್ಡ್ ನಲ್ಲಿ ಒಳಗೊಂಡಿದೆ.

ಸ್ಮಾರ್ಟ್ ಕಾರ್ಡ್ ಇಂದ ದಾಖಲೆ ಪರಿಶೀಲನೆ ಬಹಳ ಸುಲಭ. ದಾಖಲೆಗಳಿಗೆ ಯಾವುದೇ ರೀತಿಯ ಕಚೇರಿಗಳಿಗೆ ಹೋಗುವ ಅವಶ್ಯಕತೆ ಇಲ್ಲ ಎಲ್ಲೂ ಸಹ ಸ್ಮಾರ್ಟ್ ಕಾರ್ಡ್ ನಲ್ಲಿ ಕೇಂದ್ರೀಕೃತವಾಗಿರುತ್ತದೆ.

Smart Card Benefits-ಈ ಕ್ರಮದಿಂದ ಸಾರ್ವಜನಿಕರಿಗೆ ಯಾವೆಲ್ಲ ಪ್ರಯೋಜನಗಳಿವೆ?

ಈ ಹೊಸ ವ್ಯವಸ್ಥೆಯಿಂದ ರಾಜ್ಯದ ಎಲ್ಲಾ 67 ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಅನ್ವಯವಾಗುತ್ತದೆ. ಈ ಸ್ಮಾರ್ಟ್ ಕಾರ್ಡ್ ನಿಂದ ಸರಳವಾಗಿ ಹಾಗೂ ವೇಗವಾಗಿ ಮತ್ತು ಸುರಕ್ಷಿತವಾಗಿ ಸೇವೆಯನ್ನು ಒದಗಿಸಲು ಈ ಹೊಸ ಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕರ ಶ್ರಮ ಮತ್ತು ಸಮಯ ಉಳಿತಾಯಕ್ಕೆ ಈ ಸ್ಮಾರ್ಟ್ ಕಾರ್ಡ್ ಬಹಳ ಉಪಕಾರಿಯಾಗುತ್ತಿದೆ.

ಇಂದಿನಿಂದ ನೀವು ಡಿಎಲ್ ಅಥವಾ ಆರ್ ಸಿ ಗೆ ಅರ್ಜಿ ಸಲ್ಲಿಸಿದರೆ ಆದಷ್ಟು ಬೇಗ ನಿಮ್ಮ ಮನೆ ಬಾಗಿಲಿಗೆ ‘ಸ್ಮಾರ್ಟ್ ಕಾರ್ಡ’ ಸ್ಪೀಡ್ ಪೋಸ್ಟ್ ಮುಖಾಂತರ ತಲುಪಲಿದೆ.

RTO Official Website-ಈ ಸ್ಮಾರ್ಟ್ ಕಾರ್ಡಿನ ಕುರಿತು ಇನ್ನು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಆರ್ ಟಿ ಓ ಕಚೇರಿಗೆ ಸಂಪರ್ಕಿಸಬಹುದು ಅಥವಾ ಸಾರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ ಲಿಂಕ್-Click Here

Post a Comment

Previous Post Next Post

Top Post Ad

CLOSE ADS
CLOSE ADS
×