ಕೃಷಿ ಮೂಲಸೌಕರ್ಯ ನಿಧಿ(Agriculture Infrastructure Fund)ಯೋಜನೆಯಡಿ ಕೃಷಿ ಸಂಬಂಧಪಟ್ಟ ವಿವಿಧ ಬಗ್ಗೆಯ ಸಾಲಗಳಿಗೆ ಶೇ 3% ಬಡ್ಡಿ ಸಹಾಯಧನವನ್ನು ಪಡೆಯಲು ಅವಕಾಶವಿದ್ದು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ರೈತರು ಅನುಸರಿಸಬೇಕಾದ ಕ್ರಮಗಳ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.
ಏನಿದು ಕೃಷಿ ಮೂಲಸೌಕರ್ಯ ನಿಧಿ ಯೋಜನೆ(Bank Loan Interest Subsidy)? ರೈತರಿಗೆ ಈ ಯೋಜನೆಯಡಿ ಯಾವೆಲ್ಲ ಪ್ರಯೋಜನಗಳಿವೆ? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಯಾರೆಲ್ಲ ಅರ್ಜಿ ಸಲ್ಲಿಸಬಹುದು?ಕೃಷಿ ಮೂಲಸೌಕರ್ಯ ನಿಧಿ ಯೋಜನೆಯ ಕುರಿತು ಉಪಯುಕ್ತ ಮಾಹಿತಿ ಸೇರಿದಂತೆ ಸಂಪೂರ್ಣ ಅಗತ್ಯ ವಿವರವನ್ನು ಈ ಕೆಳಗೆ ಪ್ರಕಟಿಸಲಾಗಿದೆ.
AIF-Agriculture Infrastructure Fund-ಕೃಷಿ ಮೂಲಸೌಕರ್ಯ ನಿಧಿ ವಿವರಣೆ:
ಕೃಷಿಯ ಅಭಿವೃದ್ಧಿಗೆ ಮೂಲಸೌಕರ್ಯವು ಅತ್ಯಂತ ಮಹತ್ವದ್ದಾಗಿದೆ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ರೈತರಿಗೆ ಸಮರ್ಪಕ ಬೆಲೆ ಒದಗಿಸುವುದು ಮತ್ತು ಕೃಷಿ ಉತ್ಪನ್ನಗಳ ಸಮರ್ಪಕ ಬಳಕೆಗೆ ಕೊಯ್ಲು-ನಂತರದ ಮೂಲಸೌಕರ್ಯವು ನಿರ್ಣಾಯಕವಾಗಿದೆ. ಇದು ಪ್ರಕೃತಿಯ ಏರಿಳಿತಗಳು, ಪ್ರಾದೇಶಿಕ ಅಸಮಾನತೆಗಳು, ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸೀಮಿತ ಭೂ ಸಂಪನ್ಮೂಲದ ಸಂಪೂರ್ಣ ಸಾಮರ್ಥ್ಯವನ್ನು ಸಾಧಿಸಲು ಸಹಾಯ ಮಾಡುತ್ತದೆ.
ಈ ದೃಷ್ಟಿಯಿಂದ, ಕೇಂದ್ರ ಹಣಕಾಸು ಸಚಿವರು ದಿನಾಂಕ 15.05.2020 ರಂದು ರೈತರಿಗೆ ಫಾರ್ಮ್-ಗೇಟ್ ಮೂಲಸೌಕರ್ಯಕ್ಕಾಗಿ ₹1 ಲಕ್ಷ ಕೋಟಿಯ ಕೃಷಿ ಮೂಲಸೌಕರ್ಯ ನಿಧಿಯನ್ನು ಘೋಷಿಸಿದರು. ಈ ಯೋಜನೆಯಡಿ ₹1,00,000 ಕೋಟಿಯ ಹಣಕಾಸು ಸೌಲಭ್ಯವನ್ನು ಕೊಯ್ಲು-ನಂತರದ ಮೂಲಸೌಕರ್ಯ ಮತ್ತು ಸಮುದಾಯ ಕೃಷಿ ಸಂಪನ್ಮೂಲಗಳಿಗೆ ಸಂಬಂಧಿಸಿದ ಯೋಜನೆಗಳಿಗೆ ಹೂಡಿಕೆ ಮಾಡಲು ಒದಗಿಸಲಾಗುತ್ತದೆ. ಪ್ರಾಥಮಿಕ ಕೃಷಿ ಸಹಕಾರ ಸಂಘಗಳು (PACS), ರೈತ ಉತ್ಪಾದಕ ಸಂಘಟನೆಗಳು (FPO), ಕೃಷಿ ಉದ್ಯಮಿಗಳು ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಈ ನಿಧಿಯು ಲಭ್ಯವಿರುತ್ತದೆ.
Loan Interest Subsidy-ಕೃಷಿ ಸಾಲದ ಮೇಲೆ 3% ಬಡ್ಡಿ ಸಬ್ಸಿಡಿ ಒದಗಿಸಲಾಗುತ್ತದೆ:
ಈ ಯೋಜನೆಯಡಿ ನೀಡಲಾಗುವ ಎಲ್ಲ ಸಾಲಗಳಿಗೆ ₹2 ಕೋಟಿವರೆಗೆ ವಾರ್ಷಿಕ 3% ಬಡ್ಡಿ ಸಬ್ಸಿಡಿಯನ್ನು ಒದಗಿಸಲಾಗುತ್ತದೆ. ಈ ಸಬ್ಸಿಡಿಯು ಗರಿಷ್ಠ 7 ವರ್ಷಗಳವರೆಗೆ ಲಭ್ಯವಿರುತ್ತದೆ. ₹2 ಕೋಟಿಗಿಂತ ಹೆಚ್ಚಿನ ಸಾಲಗಳಿಗೆ, ಬಡ್ಡಿ ಸಬ್ಸಿಡಿಯು ₹2 ಕೋಟಿಗೆ ಮಾತ್ರ ಸೀಮಿತವಾಗಿರುತ್ತದೆ.
ಕೃಷಿ ಮೂಲಸೌಕರ್ಯ ನಿಧಿ(AIF-Agriculture Infrastructure Fund) ಯೋಜನೆಯ ಅಂಕಿ-ಅಂಶ:
ಯೋಜನೆ ಪ್ರಾರಂಭ- 08 ಜುಲೈ 2020
ಎಷ್ಟು ಬಡ್ಡಿ ಸಬ್ಸಿಡಿ ಪಡೆಯಬಹುದು- 3%
ಒಟ್ಟು ಅನುದಾನ ಹಂಚಿಕೆ- 1 ಲಕ್ಷ ಕೋಟಿ
ಯೋಜನೆಯ ಅವಧಿ: 2020-21 ರಿಂದ 2032-33 ರವರೆಗೆ
AIF Others Schemes-ಇತರೆ ಯೋಜನೆಯಡಿ ಸಾಲ ಪಡೆದಿದರು ಅರ್ಜಿ ಸಲ್ಲಿಸಲು ಅವಕಾಶ:
ಕೃಷಿ ಮೂಲಸೌಕರ್ಯ ನಿಧಿ(AIF) ಯೋಜನೆಯ ಹೊರತುಪಡಿಸಿ ಈ ಕೆಳಗಿನ ಪಟ್ಟಿಯಲ್ಲಿರುವ ಯೋಜನೆಯ ಮೂಲಕ ಸಾಲ ಪಡೆದವರು ಸಹ ನೀವು ಬ್ಯಾಂಕ್ ಮೂಲಕ ಪಡೆದಿರುವ ಸಾಲದ ಬಡ್ಡಿಗೆ ಶೇ 3% ಬಡ್ಡಿದರ ಸಬ್ಸಿಡಿಯನ್ನು ಪಡೆಯಬಹುದು.
ತೋಟಗಾರಿಕೆ(NHB) ಮಂಡಳಿಯ ಯೋಜನೆ.
PMFME ಯೋಜನೆ.
PMKSY ಯೋಜನೆ.
AC&ABC ಯೋಜನೆ.
PMEGP ಯೋಜನೆ.
PMKUSUM(B&C) ಯೋಜನೆ.
AIF Online Application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?
ಹಂತ-1: ಮೊದಲಿಗೆ "Apply Now" ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ Agriculture Infrastructure Fund ಯೋಜನೆಯ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.
ಹಂತ-2: ಬಳಿಕ "Beneficiary Corner" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಈ ಈ ಯೋಜನೆಯಡಿ ಸಾಲ ಪಡೆದವರು "Register As Beneficiary" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಇತರೆ ಯೋಜನೆಯಡಿ ಸಾಲ ಪಡೆದರವರು "Convergence with Other Schemes" ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಹಂತ-3: ಬಳಿಕ ಈ ಪುಟದಲ್ಲಿ ಆಧಾರ್ ಕಾರ್ಡ ನಲ್ಲಿರುವಂತೆ ನಿಮ್ಮ ಹೆಸರು ಮೊಬೈಲ್ ನಂಬರ್ ಮತ್ತು ಆಧಾರ್ ಕಾರ್ಡ ಸಂಖ್ಯೆಯನ್ನು ಹಾಕಿ "Send OTP" ಬಟನ್ ಮೇಲೆ ಕ್ಲಿಕ್ ಮಾಡಿ OTP ಅನ್ನು ನಮೂದಿಸಿದರೆ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಕೇಳುವ ಎಲ್ಲಾ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.
Documents-ಅವಶ್ಯಕ ದಾಖಲೆಗಳು:
ಅರ್ಜಿದಾರರ ಆಧಾರ್ ಕಾರ್ಡ/Aadhar
ಬ್ಯಾಂಕ್ ಪಾಸ್ ಬುಕ್/Bank Pass Book
ಮೊಬೈಲ್ ನಂಬರ್/Mobile Number
AIF Scheme More Details-ಈ ಯೋಜನೆಯ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಉಪಯುಕ್ತ ಮಾಹಿತಿ:
ಅಧಿಕೃತ ಎಕ್ಸ್/ಟ್ವಿಟರ್ ಖಾತೆ-Follow Now
ಯೋಜನೆಯ ಅಧಿಕೃತ ವೆಬ್ಸೈಟ್- Click Here
ಸಹಾಯವಾಣಿ- Contact Us