ಕೃಷಿ ಇಲಾಖೆಯಿಂದ(Karnataka Agriculture Department) ಪ್ರತಿ ವರ್ಷದಂತೆ ಈ ಸಾಲಿನಲ್ಲಿಯು ಸಹ ಮುಂಗಾರು ಹಂಗಾಮಿನ ರೈತರ ಜಮೀನಿನ ಬೆಳೆ ಮಾಹಿತಿಯನ್ನು(RTC Crop Details)ಡಿಜಿಟಲ್ ಮಾದರಿಯಲ್ಲಿ ದಾಖಲಿಸಲು ಖಾಸಗಿ ನಿವಾಸಿಗಳ(PR) ಮೂಲಕ ರೈತರ ಜಮೀನನ್ನು ಭೇಟಿ ಮಾಡಿ ಅಪ್ಲಿಕೇಶನ್ ಆಧಾರಿತ ಬೆಳೆ ಸಮೀಕ್ಷೆಯನ್ನು(Crop Survey) ಮಾಡಲು ಅಧಿಕೃತವಾಗಿ ಚಾಲನೆಯನ್ನು ನೀಡಲಾಗಿದೆ.
2025-26ನೇ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗೆ(Farmer Crop Survey) ಕೃಷಿ ಇಲಾಖೆಯಿಂದ ಅಧಿಕೃತವಾಗಿ ಆರಂಭವಾಗಿದ್ದು, ರಾಜ್ಯಾದ್ಯಂತ ಪ್ರತಿ ಹಳ್ಳಿಗೆ ನೇಮಕ ಮಾಡಿರುವ ಖಾಸಗಿ ನಿವಾಸಿಗಳ ಮೂಲಕ ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್ ಮೂಲಕ ರೈತರ ತಾಕನ್ನು ನೇರವಾಗಿ ಭೇಟಿ ಮಾಡಿ ಬೆಳೆ ಮಾಹಿತಿಯನ್ನು ದಾಖಲಿಸಲಾಗುತ್ತದೆ.
ಇಂದಿನ ಅಂಕಣದಲ್ಲಿ ಬೆಳೆ ಸಮೀಕ್ಷೆಯಲ್ಲಿ ಬೆಳೆ ಮಾಹಿತಿಯನ್ನು(Crop Survey App) ದಾಖಲಿಸುವುದು ಎಷ್ಟು ಮುಖ್ಯ? ಇದರಿಂದ ರೈತರಿಗೆ ಆಗುವ ಪ್ರಯೋಜನಗಳೇನು? ಬೆಳೆ ಸಮೀಕ್ಷೆಯನ್ನು ಮಾಡಲು ರೈತರು ಅನುಸರಿಸಬೇಕಾದ ಕ್ರಮಗಳೇನು? ಈ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.
Crop Survey 2025-ಕೃಷಿ ಇಲಾಖೆಯಿಂದ ಬೆಳೆ ಸಮೀಕ್ಷೆ:
ಕೃಷಿ ಮತ್ತು ಕಂದಾಯ ಇಲಾಖೆಯ ಸಹಯೋಗದಲ್ಲಿ ರಾಜ್ಯಾದ್ಯಂತ ಪ್ರತಿ ಹಳ್ಳಿಗೆ ನೇಮಿಸಿರುವ ಖಾಸಗಿ ನಿವಾಸಿಗಳ ಮೂಲಕ ರೈತರ ಜಮೀನನ್ನು ಭೇಟಿ ಮಾಡಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಯಾವೆಲ್ಲ ಬೆಳೆಗಳನ್ನು ಬೆಳೆದಿದ್ದರೆ ಎನ್ನುವ ಮಾಹಿತಿಯನ್ನು ಡಿಜಿಟಲ್ ಮಾದರಿಯಲ್ಲಿ ಜಿಪಿಎಸ್ ಆಧಾರಿತ ಪೋಟೋ ವನ್ನು ತೆಗೆದು ಆನ್ಲೈನ್ ನಲ್ಲಿ ದಾಖಲಿಸಿ ಪಹಣಿಯಲ್ಲಿ ಬೆಳೆ ಮಾಹಿತಿಯನ್ನು ನಮೂದಿಸಲು ಬೆಳೆ ಸಮೀಕ್ಷೆ(Crop Survey)ಮಾಡುವ ಕಾರ್ಯಕ್ಕೆ ಅಧಿಕೃತವಾಗಿ ಇಲಾಖೆಯಿಂದ ಚಾಲನೆ ನೀಡಲಾಗಿದೆ.
How is a Crop Survey Done?ಬೆಳೆ ಸಮೀಕ್ಷೆ ಹೇಗೆ ಮಾಡಲಾಗುತ್ತದೆ?
ಪ್ರತಿ ಹಳ್ಳಿ ಮಟ್ಟದಲ್ಲಿ ನೇಮಕ ಮಾಡಿರುವ ಖಾಸಗಿ ನಿವಾಸಿಗಳು(PR) ಮೊದಲಿಗೆ ಆ ಹಳ್ಳಿಯ ಎಲ್ಲಾ ರೈತರ ಸರ್ವೆ ನಂಬರ್ ವಿವರ ಇರುವ ನಕ್ಷೆಯನ್ನು ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ನಂತರ ನಿರ್ದಿಷ್ಟ ರೈತರ ಜಮೀನಿನ ತಾಕನ್ನು ಭೇಟಿ ಅಲ್ಲಿ ಬೆಳೆದಿರುವ ಬೆಳೆಯ ಜಿಪಿಎಸ್ ಪೋಟೋ ವನ್ನು ತೆಗೆದು ಬೆಳೆ ಮಾಹಿತಿಯನ್ನು ದಾಖಲಿಸಿ ಮೊಬೈಲ್ ಅಪ್ಲಿಕೇಶನ್ ಮೂಲಕವೇ ಅಪ್ಲೋಡ್ ಮಾಡಲಾಗುತ್ತದೆ.
Bele Samikshe PR Details-ನಿಮ್ಮ ಹಳ್ಳಿಯ ಖಾಸಗಿ ನಿವಾಸಿಗಳನ್ನು(PR) ಸಂಪರ್ಕ ಮಾಡಿ:
ರೈತರು ತಮ್ಮ ತಮ್ಮ ಜಮೀನಿನ ಬೆಳೆ ಮಾಹಿತಿಯನ್ನು ನಿಖರವಾಗಿ ದಾಖಲಿಸಲು ಕೂಡಲೇ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ನಿಮ್ಮ ಹಳ್ಳಿಗೆ ನೇಮಕ ಮಾಡಿರುವ ಖಾಸಗಿ ನಿವಾಸಿಯ(PR) ಮೊಬೈಲ್ ನಂಬರ್ ಅನ್ನು ಪಡೆದು ಅವರನ್ನು ಸಂಪರ್ಕ ಮಾಡಿ ನಿಮ್ಮ ಜಮೀನಿನ ಬೆಳೆ ಮಾಹಿತಿಯನ್ನು ನಿಖರವಾಗಿ ದಾಖಲಿಸಿಕೊಳ್ಳಿ.
Famer Crop Survey App-ರೈತರ ಸ್ವಂತ ಬೆಳೆ ಮಾಹಿತಿಯನ್ನು ದಾಖಲಿಸಲು ಅವಕಾಶ:
ರೈತರೇ ಸ್ವಂತ ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆ ಮಾಹಿತಿಯನ್ನು ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್ ಅನ್ನು ತಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಕೆಳಗಿನ ವಿಧಾನವನ್ನು ಅನುಸರಿಸಿ ದಾಖಲಿಸಲು ಅವಕಾಸವಿರುತ್ತದೆ.
ಗೂಗಲ್ ಪ್ಲೇಸ್ಟೋರ್ > ರೈತರ ಬೆಳೆ ಸಮೀಕ್ಷೆ ಆಪ್-2025->ಡೌನ್ ಲೋಡ್ ಮಾಡಿ-"Famer Crop Survey App Download Link"
1) ಆ್ಯಪ್ ಓಪನ್ ಮಾಡಿ
2) ಋತು : ಮುಂಗಾರು
3) ಲಾಗಿನ್ ಮಾಹಿತಿ (E-KYC) ಮೂಲಕ ಆಧಾರ್ ದೃಢೀಕರಣ (ಆಧಾರ್ ಸಂಖ್ಯೆ > ಒಟಿಪಿ ಜನರೇಷನ್)
4) ರೈತರ ಮಾಹಿತಿ ನಮೂದಿಸಿ ಅಥವಾ ಪರಿಶೀಲಿಸಿ-> ಹೆಸರು ಜನ್ಮ ದಿನಾಂಕ - ವಿಳಾಸ – ಮೊಬೈಲ್ ಸಂಖ್ಯೆ (ನಮೂದಿಸಬೇಕು)- ಲಿಂಗ ನಂತರ ಸಕ್ತಿಯಗೊಳಿಸಿ->ಒಟಿಪಿ ಪಡೆಯಿರಿ -> ಸಲ್ಲಿಸಿ.
5) ರೈತರ ಸರ್ವೆ ನಂ ಮಾಹಿತಿ ಪಡೆಯಿರಿ (ಸದರಿ ರೈತರು ಹೊಂದಿರುವ ಎಲ್ಲ ಸರ್ವೆಗಳ ಮಾಹಿತಿ ದೃಢೀಕರಿಸಿಕೊಳ್ಳುವುದು. ಉದಾ : ಗ್ರಾಮ ಸರ್ವೆ ಸಂಖ್ಯೆ -ಮಾಲೀಕರ ವಿವರ, ವಿಸ್ತೀರ್ಣ)
6) ಬೆಳೆ ಸಮೀಕ್ಷೆ ಆರಂಭಿಸು ( ಬೆಳೆ ಸಮೀಕ್ಷೆ ಮಾಡುವ ಸರ್ವೆ ನಂ ತಾಕನ್ನು ಆಯ್ಕೆ ಮಾಡಿ ಸದರಿ ಸರ್ವೆ ನಂಬರ್ನಲ್ಲಿಯೇ ನಿಂತು ಪ್ರಾರಂಭಿಸುವುದು)
7) ಬೆಳೆಯ ವಿವರ ದಾಖಲಿಸಿ -
ಬೆಳೆ ಹೆಸರು (ಉದಾ: ರಾಗಿ, ಮಾವು, ಹಿಪ್ಪುನೇರಳೆ, ತೆಂಗು, ಇತ್ಯಾದಿ)
ಬೆಳೆಯ ವಿಧ (ಏಕಬೆಳೆ, ಅಂತರಬೆಳೆ, ಮಿತ್ತಬೆಳೆ)
ಬಿತ್ತನೆ ಸಮಯ(ಕೃಷಿ ಬೆಳೆಗಳಲ್ಲಿ)
ನೀರಾವರಿ ವಿಧ(ಮಳೆಯಾಶ್ರಿತ ಅಥವಾ ನೀರಾವರಿ)
ವಿಸ್ತೀರ್ಣ(ಎಕರೆ:ಗುಂಟೆ:ಆಣಾ)
ಬೆಳೆ ಹೆಸರು
ಬೆಳೆಯ ಛಾಯಚಿತ್ರ ಅಪ್ಲೋಡ್ ಮಾಡಿ
ಸೂಚನೆ :- ಸದರಿ ಸರ್ವೆನಂಬರ್ ನಲ್ಲಿ ಹಿಂದಕ್ಕಿಂತ ಹೆಚ್ಚಿನ ಬೆಳೆಗಳಿದ್ದಲ್ಲಿ ಮೇಲೆ ಸ್ಕೂಲ್ ಮಾಡಿ ಇತರೆ ಬೆಳೆಗಳನ್ನು ಮೇಲಿನ ಮಾಹಿತಿಗಳಂತೆ ಸೇರಿಸುವುದು)
8) ಎಲ್ಲಾ ಬೆಳೆಗಳನ್ನು ದಾಖಲಿಸಿಕೊಂಡಿರುವ ಮಾಹಿತಿ ನಿಖರಪಡಿಸಿಕೊಳ್ಳಿ.
9) ಸಮೀಕ್ಷೆ ಸೇವ್ ಮಾಡಿ ಅಥವಾ ಅಪ್ಲೋಡ್ ಮಾಡಿ.
10) ಅಪ್ಲೋಡ್ ವಿವರದಲ್ಲಿ ಅಪ್ಲೋಡ್ ಯಶಸ್ವಿಯಾಗಿರುವುದನ್ನು ಖಾತರಿಪಡಿಸಿಕೊಳ್ಳುವುದು.
ಅಪ್ ಲೋಡ್ ಮಾಡಲಾದ ಬೆಳೆ ಮಾಹಿತಿಯನ್ನು ಪ್ರತಿ ಗ್ರಾಮಕ್ಕೆ ನೇಮಿಸಲಾದ ಇಲಾಖಾ ಅಧಿಕಾರಿಗಳು ಪರಿಶೀಲಿಸಿ ಅನುಮೋದಿಸುವರು.
Bele Samikshe Benefits-ಬೆಳೆ ಸಮೀಕ್ಷೆಯಿಂದ ರೈತರಿಗೆ ಆಗುವ ಪ್ರಯೋಜನಗಳೇನು?
ಬೆಳೆ ವಿಮಾ ಪರಿಹಾರವನ್ನು ಪಡೆಯಲು ಸಹಕಾರಿ.
ಪಹಣಿಯಲ್ಲಿ ಬೆಳೆ ಮಾಹಿತಿ ದಾಖಲಿಸಲು ಸಮೀಕ್ಷೆ ಅವಶ್ಯಕ.
ಕೃಷಿ,ತೋಟಗಾರಿಕೆ,ರೇಷ್ಮೆ ಇಲಾಖೆಯಲ್ಲಿನ ಸಬ್ಸಿಡಿ ಯೋಜನೆಯ ಪ್ರಯೋಜನವನ್ನು ಪಡೆಯಲು ಈ ಮಾಹಿತಿ ಅವಶ್ಯಕವಾಗಿದೆ.
ಬೆಳೆ ಹಾನಿ ಪರಿಹಾರವನ್ನು ಪಡೆಯಲು ಬೆಳೆ ಸಮೀಕ್ಷೆ ಬೆಳೆ ಮಾಹಿತಿ ಅವಶ್ಯಕವಾಗಿದೆ.
Crop Survey Helpline-ಹೆಚ್ಚಿನ ಮಾಹಿತಿ ಪಡೆಯಲು ಸಹಾಯವಾಣಿ:- 8448447715