ಹಸು ಎಮ್ಮೆ ಸೇರಿದಂತೆ ಹೈನುಗಾರಿಕೆ ಆರಂಭಕ್ಕೆ ₹1.25 ಲಕ್ಷ ಸಬ್ಸಿಡಿ, ಅರ್ಜಿ ಆಹ್ವಾನ

Dairy Farming Loan : ಹಸು ಎಮ್ಮೆ ಸೇರಿದಂತೆ ಹೈನುಗಾರಿಕೆ ಆರಂಭಕ್ಕೆ ₹1.25 ಲಕ್ಷ ಸಬ್ಸಿಡಿ, ಅರ್ಜಿ ಆಹ್ವಾನ.ಹೈನುಗಾರಿಕೆ ಆರಂಭಿಸಲು ₹1.25 ಲಕ್ಷ ಸಹಾಯಧನ.ಎರಡು ಎಮ್ಮೆ ಅಥವಾ ಹಸು ಖರೀದಿಗೆ ಶೇ.50% ಸಬ್ಸಿಡಿ.ಅರ್ಜಿಗೆ 10 ಸೆಪ್ಟೆಂಬರ್ 2025 ಕೊನೆಯ ದಿನಾಂಕ

ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆ ಹಲವಾರು ಕುಟುಂಬಗಳಿಗೆ ಸ್ಥಿರ ಆದಾಯದ ಮೂಲವಾಗಿದ್ದು, ಈ ಕ್ಷೇತ್ರದಲ್ಲಿ ತೊಡಗಿಕೊಳ್ಳಲು ಬಯಸುವ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಕರ್ನಾಟಕ ಸರ್ಕಾರ ಉತ್ತಮ ಅವಕಾಶ ಒದಗಿಸಿದೆ.

ಸಮಾಜ ಕಲ್ಯಾಣ ಇಲಾಖೆಯಡಿ ಬರುವ ವಿವಿಧ ನಿಗಮಗಳಿಂದ, ಹೈನುಗಾರಿಕೆ (Cow Purchase Loan) ಆರಂಭಿಸಲು ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಯಡಿ, ಅರ್ಹ ಫಲಾನುಭವಿಗಳಿಗೆ ಎರಡು ಎಮ್ಮೆ ಅಥವಾ ಹಸು ಖರೀದಿಗೆ ಶೇ.50% ಸಬ್ಸಿಡಿ ದೊರೆಯಲಿದೆ. ಗರಿಷ್ಠ ಸಹಾಯಧನ ₹1.25 ಲಕ್ಷವರೆಗೆ ಲಭ್ಯ. ಇದರಿಂದ ಹೈನುಗಾರಿಕೆ ಪ್ರಾರಂಭಿಸಲು ಬೇಕಾದ ಆರ್ಥಿಕ ಭಾರವನ್ನು ಕಡಿಮೆ ಮಾಡಬಹುದು.

ಅರ್ಹತೆಗಳು:

ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಸಮಾಜ ಕಲ್ಯಾಣ ಇಲಾಖೆಯಡಿ ನಿಗದಿಪಡಿಸಿದ ವರ್ಗಕ್ಕೆ ಸೇರಿದವರಾಗಿರಬೇಕು.

ಹಿಂದೆ ಈ ಯೋಜನೆಯಡಿ ನೆರವು ಪಡೆದವರು ಅರ್ಹರಲ್ಲ.

ಕುಟುಂಬದಲ್ಲಿ ಸರ್ಕಾರಿ/ಅರೆ ಸರ್ಕಾರಿ ಉದ್ಯೋಗಿ ಇರಬಾರದು.

dairy farming ಅಗತ್ಯ ದಾಖಲೆಗಳು:

ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಸೈಸ್ ಫೋಟೋ, ಬ್ಯಾಂಕ್ ಪಾಸ್‌ಬುಕ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ರೇಷನ್ ಕಾರ್ಡ್, ಮೊಬೈಲ್ ನಂಬರ್.

ಅರ್ಜಿ ಸಲ್ಲಿಸುವ ವಿಧಾನ:

ಆನ್ಲೈನ್: ಅಧಿಕೃತ ಲಿಂಕ್ ಮೂಲಕ “ಸೇವಾ ಸಿಂಧು” ಪೋರ್ಟಲ್‌ಗೆ ಲಾಗಿನ್ ಮಾಡಿ, ಅಗತ್ಯ ಮಾಹಿತಿಗಳನ್ನು ತುಂಬಿ, ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು.

ಆಫ್ಲೈನ್: ಹತ್ತಿರದ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು.

ಕೊನೆಯ ದಿನಾಂಕ:

10 ಸೆಪ್ಟೆಂಬರ್ 2025 ಅರ್ಜಿ ಸಲ್ಲಿಸಲು ಅಂತಿಮ ದಿನ. ಆಸಕ್ತ ಅಭ್ಯರ್ಥಿಗಳು ತಡಮಾಡದೆ ಅರ್ಜಿ ಸಲ್ಲಿಸಿ, ಈ ಅವಕಾಶವನ್ನು ಬಳಸಿಕೊಳ್ಳುವುದು ಒಳಿತು.

ಹೈನುಗಾರಿಕೆ ಆರಂಭಿಸಲು ಈ ಯೋಜನೆ ಕೃಷಿಕರು ಮತ್ತು ಗ್ರಾಮೀಣ ಯುವಕರಿಗೆ ಆರ್ಥಿಕ ಬೆಂಬಲದೊಂದಿಗೆ ಸ್ವಾವಲಂಬನೆಯ ದಾರಿಯನ್ನು ತೆರೆದು ಕೊಡಲಿದೆ.

ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ : https://swdcorp.karnataka.gov.in/


Previous Post Next Post