ಇಂದಿನಿಂದ ವಾರ್ಷಿಕ ಫಾಸ್ಟ್ ಟ್ಯಾಗ್ ಪಾಸ್ ಜಾರಿ : ಅರ್ಜಿ ಸಲ್ಲಿಸುವುದು ಹೇಗೆ

Annual Fastag Pass Application : ಇಂದಿನಿಂದ ಫಾಸ್ಟ್ ಟ್ಯಾಗ್ ಬಳಕೆ ದಾರಿಯರಿಗೆ ವಾರ್ಷಿಕ ಪಾಸ್ ಪಡೆಯುವ ಅವಕಾಶವನ್ನು ಜಾರಿ ಮಾಡಲಾಗಿದೆ. ಅರ್ಹರು ಅರ್ಜಿ ಸಲ್ಲಿಸಿ ಇದರ ಲಾಭ ಪಡೆಯಿರಿ.

ದೇಶದ ವಿವಿಧ ನ್ಯಾಷನಲ್ ಹೈವೇ ಗಳಲ್ಲಿ ಸಂಚರಿಸಲು ಪ್ರತಿ ಬಾರಿಯೂ ಪಾಸ್ಟ್ ಟ್ಯಾಗ್ ಶುಲ್ಕವನ್ನು ಪಾವತಿಸುವ ಬದಲಾಗಿ ಒಂದೇ ಬಾರಿ ಪಾಸ್ ಪಡೆಯುವ ಅವಕಾಶವನ್ನು ಜಾರಿ ಮಾಡಲಾಗಿದ್ದು, ಇದರ ಶುಲ್ಕ ಎಷ್ಟು? ಅರ್ಜಿ ಸಲ್ಲಿಸುವುದು ಹೇಗೆ ಎಂಬ ಇತ್ಯಾದಿ ಮಾಹಿತಿ ಇಲ್ಲಿದೆ.

ವಾರ್ಷಿಕ ಫಾಸ್ಟ್ ಟ್ಯಾಗ್ ಪಾಸ್ ನ ವಿವರ :

ಇದು ಚಾಲಕರ ಸಮಯವನ್ನು ಉಳಿಸಲು, ಹಾಗೂ ಪ್ರತಿ ಬಾರಿಯೂ ಪಾಸ್ಟ್ ಟ್ಯಾಗ್ ರಿಚಾರ್ಜ್ ಮಾಡುವ ಸಮಯವನ್ನು ಮತ್ತು ಹಣವನ್ನು ಉಳಿಸಲು ಸಹಾಯವಾಗಿದೆ. ಇದರ ಮೌಲ್ಯ 3,000ರೂ. ಇದ್ದು ನೀವು ಒಟ್ಟು 200 ಟ್ರಿಪ್ ಗಳವರೆಗೆ ಇದನ್ನು ಬಳಸಬಹುದು.

200 ಟ್ರಿಪ್ ಮುಗಿದ ನಂತರ ನೀವು ಪುನಃ ಪಾಸ್ ಗಳನ್ನು ರಿಚಾರ್ಜ್ ಮಾಡಬೇಕಾಗುತ್ತದೆ. ಈಗಾಗಲೇ ನೀವು ಫಾಸ್ಟ್ ಟ್ಯಾಗ್ ಇದ್ದರೆ ಹೊಸದಾಗಿ ಖರೀದಿಸುವ ಅಗತ್ಯ ಇರುವುದಿಲ್ಲ.

ಇದಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ?

ಇದಕ್ಕಾಗಿ ನೀವು ಹೊಸದಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ಬದಲಾಗಿ ರಾಜ್ ಮಾರ್ಗ ಯಾತ್ರಾ ಆಪ್, NHAI ಅಥವಾ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಕೃತ ವೆಬ್ಸೈಟ್ನ ಲಿಂಕ್ ಬಳಸಿ ಪಾಸ್ ಪಡೆಯುವ ಅವಕಾಶವಿದೆ.

ಅಧಿಕೃತ ವೆಬ್ಸೈಟ್ ಲಿಂಕ್ ಗಳು :

* NHAI – https://nhai.gov.in/

* ರಾಜ್ ಮಾರ್ಗ ಯಾತ್ರಾ – https://rajmargyatra.nhai.gov.in/nhai

Previous Post Next Post