1 ಕೋಟಿಗೂ ಹೆಚ್ಚು ಜನರ ಆಧಾರ್ ಕಾರ್ಡ್ ಕ್ಯಾನ್ಸಲ್! ನಿಮ್ಮ ಕಾರ್ಡ್ ಸ್ಥಿತಿ ನೋಡಿಕೊಳ್ಳಿ

1 ಕೋಟಿಗೂ ಹೆಚ್ಚು ಜನರ ಆಧಾರ್ ಕಾರ್ಡ್ ಕ್ಯಾನ್ಸಲ್! ನಿಮ್ಮ ಕಾರ್ಡ್ ಸ್ಥಿತಿ ನೋಡಿಕೊಳ್ಳಿ

UIDAI 1.2 ಕೋಟಿ ಆಧಾರ್ ಸಂಖ್ಯೆಗಳ ಡಿಆಕ್ಟಿವ್ ಮಾಡಿದೆ.ತಪ್ಪು ಮಾಹಿತಿ ಅಥವಾ ಅಪ್ಡೇಟ್ ಇಲ್ಲದಿದ್ದರೆ ಆಧಾರ್ ರದ್ದು.ಆಧಾರ್ ನಂಬರ್ ಚೆಕ್ ಮಾಡುವ ವಿಧಾನ ಬಹಳ ಸುಲಭ

UIDAI (Unique Identification Authority of India) ಭಾರತದ (India) ಪ್ರಮುಖ ಗುರುತಿನ ಪತ್ರವಾಗಿರುವ ಆಧಾರ್ (Aadhaar) ಸಂಖ್ಯೆಗಳ ಪೈಕಿ ಸುಮಾರು 1.2 ಕೋಟಿ ಸಂಖ್ಯೆಗಳನ್ನು ಡಿಆಕ್ಟಿವೇಟ್ ಮಾಡಿದೆ. ಇವುಗಳಲ್ಲಿ ಹಲವು ನಂಬರ್‌ಗಳು ಡುಪ್ಲಿಕೇಟ್ ಆಗಿದ್ದವು ಅಥವಾ ಇತ್ತೀಚೆಗೆ ಯಾವುದೇ ಅಪ್ಡೇಟ್ ಆಗಿರಲಿಲ್ಲ.

ಪ್ರಸ್ತುತವಾಗಿ UIDAI ಇತ್ತಿಚೆಗೆ ನೀಡಿರುವ ಮಾಹಿತಿಯ ಪ್ರಕಾರ, ಸುಮಾರು 1.17 ಕೋಟಿ ಆಧಾರ್ ಸಂಖ್ಯೆಗಳು ಮೃತ ವ್ಯಕ್ತಿಗಳಿಗೆ ಸೇರಿದವು ಎಂಬ ಕಾರಣದಿಂದ ಅವುಗಳನ್ನು ರದ್ದುಪಡಿಸಲಾಗಿದೆ. ಇದು ಆಧಾರ್ (Aadhaar) ಡೇಟಾ ಭದ್ರತೆ (security) ಹಾಗೂ ದುರ್ಬಳಕೆ ತಡೆಯುವ ಉದ್ದೇಶದಿಂದ ಮಾಡಲಾಗಿದೆ.

1 ಕೋಟಿಗೂ ಹೆಚ್ಚು ಜನರ ಆಧಾರ್ ಕಾರ್ಡ್ ಕ್ಯಾನ್ಸಲ್! ನಿಮ್ಮ ಕಾರ್ಡ್ ಸ್ಥಿತಿ ನೋಡಿಕೊಳ್ಳಿ

ಆಧಾರ್ ಸಂಖ್ಯೆಯು ಕೆಲವೊಮ್ಮೆ ತಾತ್ಕಾಲಿಕವಾಗಿ ನಿಷ್ಕ್ರಿಯವಾಗಬಹುದಾದ ಕಾರಣಗಳು ಹಲವು. ಉದಾಹರಣೆಗೆ, ಆಧಾರ್ ಕಾರ್ಡಿನಲ್ಲಿ ಚಿತ್ರ ಸ್ಪಷ್ಟವಾಗಿರದಿದ್ದರೆ, ಬಯೋಮೆಟ್ರಿಕ್ ಮಾಹಿತಿ ಸರಿಯಾಗಿರದಿದ್ದರೆ ಅಥವಾ ಅಪ್‌ಡೇಟ್ ಆಗದೇ ಇದ್ದರೆ UIDAI ನಿಷ್ಕ್ರಿಯಗೊಳಿಸಬಹುದು. ಇದರಿಂದ ಬ್ಯಾಂಕ್ ಖಾತೆ, ಮೊಬೈಲ್ ಸಿಮ್ (SIM), ಸರ್ಕಾರಿ ಸೌಲಭ್ಯಗಳಿಗೆ ತೊಂದರೆ ಆಗುವ ಸಾಧ್ಯತೆ ಇದೆ.

ನಿಮ್ಮ ಆಧಾರ್ ಆಕ್ಟಿವ್ ಆಗಿದೆಯೆ ಎಂದು ತಿಳಿದುಕೊಳ್ಳಲು UIDAI ವೆಬ್‌ಸೈಟ್ (https://myaadhaar.uidai.gov.in) ಗೆ ಹೋಗಿ “Verify Aadhaar Number” ಸೆಕ್ಷನ್‌ನಲ್ಲಿ 12 ಅಂಕಿಯ ಆಧಾರ್ ನಂಬರ್, ಕ್ಯಾಪ್ಚಾ ಎಂಟರ್ ಮಾಡಿ “Proceed to Verify” ಕ್ಲಿಕ್ ಮಾಡಬೇಕು. ನಂತರ ನಿಮ್ಮ ಆಧಾರ್ ನಂಬರ್ “Active” ಅಥವಾ “Deactivated” ಎನ್ನುವುದು ತಕ್ಷಣ ತೋರಿಸುತ್ತದೆ.

ತಾವು ಆಧಾರ್ ಬಳಸುತ್ತಿಲ್ಲವಿದ್ದರೆ UIDAI ವೆಬ್‌ಸೈಟ್ ಅಥವಾ mAadhaar ಆಪ್‌ ಮೂಲಕ ಆಧಾರ್ ಲಾಕ್ ಮಾಡಬಹುದು. ಇದು ಅನಧಿಕೃತ ಬಳಕೆಯಿಂದ ತಡೆಯುತ್ತದೆ. ಹಾಗೆಯೇ, 12 ಅಂಕಿಯ ಆಧಾರ್ ನಂಬರ್‌ನ ಬದಲು ಇತ್ತೀಚೆಗೆ UIDAI ನೀಡುತ್ತಿರುವ Virtual ID (VID) ಬಳಸಬಹುದು. OTP ಅಥವಾ ವೈಯಕ್ತಿಕ ಮಾಹಿತಿ ಯಾರೊಂದಿಗೂ ಹಂಚಿಕೊಳ್ಳಬಾರದು.

ಆಧಾರ್ ನಂಬರ್ ಬಳಕೆಯ ಮೇಲೆ ನಿಗಾ ಇಡುವುದಕ್ಕಾಗಿ SMS/ಇಮೇಲ್ ಅಲರ್ಟ್ ಆನ್ ಮಾಡಿಕೊಳ್ಳುವುದು ಮುಖ್ಯ. ಸಾರ್ವಜನಿಕ WiFi ಅಥವಾ ಸೈಬರ್ ಕ್ಯಾಫೆಗಳಲ್ಲಿ ಆಧಾರ್ ಅಪ್ಡೇಟ್ ಅಥವಾ ವೆರಿಫಿಕೇಶನ್ ಮಾಡುವುದು ತಪ್ಪು. ಇದು ನಿಮ್ಮ ಡೇಟಾ ರಿಸ್ಕ್‌ಗೆ ಒಳಪಡಿಸುತ್ತದೆ.

UIDAI ಎಂದಿಗೂ ಫೋನ್ ಅಥವಾ ಮೆಸೇಜ್ ಮೂಲಕ OTP ಅಥವಾ ವೈಯಕ್ತಿಕ ಮಾಹಿತಿಯನ್ನು ಕೇಳುವುದಿಲ್ಲ. ಹಾಗಾಗಿ ಯಾವುದೇ ಸಂದೇಹಾಸ್ಪದ ಕರೆಗಳನ್ನು ತಕ್ಷಣ ತಿರಸ್ಕರಿಸಬೇಕು.


Post a Comment

Previous Post Next Post

Top Post Ad

CLOSE ADS
CLOSE ADS
×