ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ(PM Awas Yojana) ವಸತಿ ರಹಿತರಿಗೆ ನಾಲ್ಕು ಘಟಕಗಳಲ್ಲಿ ಮನೆಯನ್ನು ಒದಗಿಸಲು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಸ್ವಂತ ನಿವೇಶನ ಹೊಂದಿರುವ/ಕಚ್ಚಾ ಮನೆ ಹೊಂದಿರುವವರು ಹಾಗೂ ನಿವೇಶನ ರಹಿತ ಕುಟುಂಬಗಳಿಗೆ ವಸತಿ ಸೌಲಭ್ಯ(PM Awas Scheme Application) ಕಲ್ಪಿಸಲು ಕೇಂದ್ರ ಸರ್ಕಾರವು Unified web portal (https/pmay.urban.gov.in)ದಲ್ಲಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು,ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.
ಒಟ್ಟು ನಾಲ್ಕು ಯೋಜನೆಗಳಲ್ಲಿ(Vasati Yojana)ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಮಾನದಂಡಗಳೇನು? ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳೇನು? ಇನ್ನಿತರೆ ಅಗತ್ಯ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.
Pradhana Mantri Awas Yojana-ನಾಲ್ಕು ಯೋಜನೆಯಡಿ ಅರ್ಜಿ ಆಹ್ವಾನ:
1) ಫಲಾನುಭವಿ ನೇತೃತ್ವದ ನಿರ್ಮಾಣ ವಸತಿ ಯೋಜನೆ(Beneficiary Led Construction (BLC)
2) ಪಾಲುದಾರಿಕೆಯಲ್ಲಿ ಕೈಗೆಟುಕುವ ಬಹುಮಹಡಿ ವಸತಿ ಯೋಜನೆ(Affordable Housing in Partnership (AHP)
3) ಕೈಗೆಟಕುವ ಬಾಡಿಗೆ ವಸತಿ ಯೋಜನೆ(Affordable Rental Housing (ARH)
4) ಬಡ್ಡಿ ಸಹಾಯಧನ ವಸತಿ ಯೋಜನೆ(Interest Subsidy Scheme (ISS)
PM Awas Eligibility Criteria-ನಿವೇಶನ ರಹಿತರು ಮತ್ತು ವಸತಿ ರಹಿತರು ಈ ಕೆಳಗಿನಂತೆ ಅರ್ಹತೆಯನ್ನು ಹೊಂದಿರಬೇಕು:
ಆವಾಸ್ ಯೋಜನೆಯಡಿ ಅರ್ಜಿಯನ್ನು ಸಲ್ಲಿಸಲ್ಲು ಅಭ್ಯರ್ಥಿಗಳು ಈ ಕೆಳಗಿನ ಪಟ್ಟಿಯಲ್ಲಿರುವ ಅರ್ಹತಾ ಮಾನದಂಡಗಳನ್ನು ಹೊಂದಿರುವುದು ಕಡ್ಡಾಯವಾಗಿದೆ.
1) ಫಲಾನುಭವಿಯು ವಿವಾಹಿತ ಮಹಿಳೆ ಅಥವಾ ಏಕ ಮಹಿಳಾ ಒಡೆತನದ ಗೃಹಿಣಿಯಾಗಿರಬೇಕು. ಇವರನ್ನು ಹೊರತುಪಡಿಸಿ ಪುರುಷರಾಗಿದ್ದಲ್ಲಿ ಮಾಜಿ ಯೋಧರು, ವಿಧುರರು, ಅಂಗವಿಕಲರು, ಹಿರಿಯ ನಾಗರೀಕರು, ವಿಚ್ಛೇದಿತರು ಅರ್ಹರಾಗಿರುತ್ತಾರೆ.
2) ಫಲಾನುಭವಿಯ ಕುಟುಂಬದ ವಾರ್ಷಿಕ ಆದಾಯವು ಆರ್ಥಿಕ ದುರ್ಬಲ ವರ್ಗದವರು (EWS)3.00 ಲಕ್ಷದೊಳಗೆ, ಕಡಿಮೆ ಆದಾಯ ವರ್ಗದವರು (LIG)3.00 ಲಕ್ಷದಿಂದ 6.00 ಲಕ್ಷದೊಳಗೆ, ಮಧ್ಯಮ ಆದಾಯ ವರ್ಗದವರು (MIG)6.00 ಲಕ್ಷದಿಂದ 9.00 ಲಕ್ಷದೊಳಗೆ ಆದಾಯ ಹೊಂದಿರಬೇಕು.
3) ರಾಜ್ಯ ಮತ್ತು ಕೇಂದ್ರ ಸರ್ಕಾರದ ಬೇರೆ ಯಾವುದೇ ಯೋಜನೆ/ಇಲಾಖೆಯಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಆಯ್ಕೆಯಾಗಿ 20 ವರ್ಷದಿಂದ ವಸತಿ ಯೋಜನೆಯಡಿಯಲ್ಲಿ ಸಹಾಯಧನ ಪಡೆದು ಮನೆ ನಿರ್ಮಾಣ ಮಾಡಿಕೊಂಡಿರಬಾರದು.
5) ರಾಜ್ಯದ ಯಾವುದೇ ಭಾಗದಲ್ಲಿ ನಿವೇಶನ ಅಥವಾ ವಸತಿ ಹೊಂದಿರದ ಕುಟುಂಬವನ್ನು ನಿವೇಶನ ರಹಿತರು ಎಂದು ಪರಿಗಣಿಸಲಾಗುತ್ತದೆ.
6) ರಾಜ್ಯದ ಯಾವುದೇ ಭಾಗದಲ್ಲಿ ಪಕ್ಕಾ ಮನೆಯನ್ನು ಹೊಂದಿರದ. ಆದಾಗ್ಯೂ ನಿವೇಶನ ಹೊಂದಿರುವ ಕಚ್ಚಾಮನೆಯನ್ನು ಹೊಂದಿರುವ ಕುಟುಂಬವನ್ನು ವಸತಿ ರಹಿತ ಕುಟುಂಬವೆಂದು ಪರಿಗಣಿಸಲಾಗುತ್ತದೆ.
7) ಫಲಾನುಭವಿಯು ಸ್ವಂತ ನಿವೇಶನ ಹೊಂದಿದ್ದಲ್ಲಿ, ನಿವೇಶನಕ್ಕೆ ಸಂಬಂಧಿಸಿದಂತೆ ಹಕ್ಕುಪತ್ರ/ ಕ್ರಯಪತ್ರ/ ದಾನಪತ್ರ/ಉಡುಗೊರೆ ಪತ್ರ/ ಖಾತಾ ಪತ್ರಗಳನ್ನು ಹೊಂದಿರಬೇಕು.
8) ಪ್ರಧಾನ ಮಂತ್ರಿ ಹಿಂದೆ ನಗರ ಯೋಜನೆಯಡಿಯಲ್ಲಿ ಆಯ್ಕೆಯಾಗಿ ಮನೆ ನಿರ್ಮಿಸದೇ, ದಿನಾಂಕ: 31-12-2023 ರ ನಂತರ ಕೇಂದ್ರ ಸರ್ಕಾರದಿಂದ ಮನೆ ರದ್ದಾದ ಫಲಾನುಭವಿಗಳು ಸಮೀಕ್ಷೆಯಡಿಯಲ್ಲಿ ಅರ್ಜಿ ಸಲ್ಲಿಸಲು ಅನರ್ಹರಾಗಿರುತ್ತಾರೆ.
Required Documents-ಅರ್ಜಿದಾರರು ಸಲ್ಲಿಸಬೇಕಾದ ದಾಖಲೆಗಳು:-
1 ) ಅರ್ಜಿದಾರರು ವಸತಿ ರಹಿತರಾಗಿದ್ದಲ್ಲಿ ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳು(ಹಕ್ಕುಪತ್ರಶ್ರಯಪತ್ರ/ದಾನಪತ್ರ/ಉಡುಗೊರೆ ಪತ್ರ/ ಖಾತಾ ಪತ್ರ)
2) ಅರ್ಜಿದಾರರ ಇತ್ತೀಚಿನ 2 ಭಾವಚಿತ್ರ, ಆಧಾರ್ ಕಾರ್ಡ್ ಪ್ರತಿ, ಕುಟುಂಬ ಸದಸ್ಯರುಗಳ ಆಧಾರ್ ಕಾರ್ಡ್ ಪ್ರತಿ.
3) ಇತ್ತೀಚಿನ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಪಡಿತರ ಚೀಟಿ, ಬ್ಯಾಂಕ್ ಖಾತೆಯ ವಿವರ, ಪಾನ್ ಕಾರ್ಡ್
4) ಅರ್ಜಿದಾರರ ಹೆಸರಲ್ಲಿ (ಪತಿ/ಪತ್ನಿ)ಅವಿವಾಹಿತ ಮಗ/ ಅವಿವಾಹಿತ ಮಗಳು ಹೆಸರಲ್ಲಿ ಸ್ವಂತ ಮನೆ ಹೊಂದಿಲ್ಲ ಎಂಬುದರ ಬಗ್ಗೆ ರೂ.100/- ಭಾಷಾ ಕಾಗದದಲ್ಲಿ ಸ್ವಯಂ ದೃಢೀಕೃತ ಪತ್ರ ನೀಡುವುದು.
5) ಆಸ್ತಿಯು ಅರ್ಜಿದಾರರ ಹಾಗೂ ಕುಟುಂಬ ಸದಸ್ಯರ ಜಂಟಿ ಖಾತೆ ಹೊಂದಿದ್ದಲ್ಲಿ ರೂ.100/- ಛಾಪಾ ಕಾಗದದಲ್ಲಿ ಯಾವುದೇ ತಂಟೆ-ತಕರಾರು ಇಲ್ಲದಿರುವ ಬಗ್ಗೆ ಒಪ್ಪಿಗೆ ಪತ್ರವನ್ನು ನೀಡಬೇಕು.
How To Apply-ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿ ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ನಿಮ್ಮ ಹತ್ತಿರದ ಸ್ಥಳೀಯ ನಗರ ಪ್ರಾಧಿಕಾರವನ್ನು ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು. ಅಥವಾ ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
Awas Yojana Online Application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ವಸತಿ ಸೌಲಭ್ಯವನ್ನು ಪಡೆಯಲು ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ಈ ಕೆಳಗಿನ ಹಂತಗಳನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
Step-1: ಮೊದಲ ಹಂತದಲ್ಲಿ ಈ ಲಿಂಕ್ PM Awas Yojana Online Application ಮೇಲೆ ಕ್ಲಿಕ್ ಮಾಡಿ ಅಧಿಕೃತ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಜಾಲತಾಣವನ್ನು ಪ್ರವೇಶ ಮಾಡಬೇಕು.
Step-2: ಇದಾದ ಬಳಿಕ ಈ ಪೇಜ್ ನಲ್ಲಿ Click to Proceed ಬಟನ್ ಮೇಲೆ ಕ್ಲಿಕ್ ಮಾಡಿ "Documents Required" ವಿವರ ತೋರಿಸುತ್ತದೆ ಇಲ್ಲಿ ಕೆಳಗೆ Proceed ಆಯ್ಕೆಯ ಮೇಲೆ ಕ್ಲಿಕ್ ಮಾಡಿ "Eligibility Check" ಕಾಲಂ ತೆರೆದುಕೊಳ್ಳುತ್ತದೆ ಇಲ್ಲಿ Eligibility Check ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.
Step-3: ಇದಾದ ಬಳಿಕ ಇಲ್ಲಿ ಅರ್ಜಿದಾರರ 12 ಅಂಕಿಯ ಆಧಾರ್ ಕಾರ್ಡ ನಂಬರ್ ಅನ್ನು ಹಾಕಿ ಆಧಾರ್ ನಲ್ಲಿರುವಂತೆ ನಿಮ್ಮ ಹೆಸರನ್ನು ನಮೂದಿಸಿ "Generate OTP" ಬಟನ್ ಮೇಲೆ ಕ್ಲಿಕ್ ಮಾಡಿ OTP ಪಡೆದು ಇಲ್ಲಿ ನಮೂದಿಸಿ ನಂತರ ಪೇಜ್ ನಲ್ಲಿ ಅಗತ್ಯ ವಿವರವನ್ನು ಭರ್ತಿ ಮಾಡಿ "Submit" ಬಟನ್ ಮೇಲೆ ಕ್ಲಿಕ್ ಮಾಡಿದರೆ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಕೇಳುವ ಎಲ್ಲಾ ಅಗತ್ಯ ಮಾಹಿತಿಯನ್ನು ಆಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬೇಕು.
For More Information-ಇನ್ನು ಹೆಚ್ಚಿನ ಮಾಹಿತಿಯನ್ನು ಯೋಜನೆಯ ಅಧಿಕೃತ ವೆಬ್ಸೈಟ್-Click Here