ಐಫೋನ್ ಶೈಲಿಯ ಆಕರ್ಷಕ ಡಿಸೈನ್.90Hz ಡಿಸ್‌ಪ್ಲೇ, 12GB RAM (ವರ್ಚುಯಲ್).5000mAh ಬ್ಯಾಟರಿ, Android 14 Go ಎಡಿಷನ್.ಐಫೋನ್ ಲುಕ್‌ನೊಂದಿಗೆ (iPhone Look) ಬಜೆಟ್‌ನಲ್ಲಿ ಹೊಸ ಫೋನ್ ಖರೀದಿಸಲು ಯೋಚಿಸುತ್ತಿದ್ದರೆ, itel A90 ನಿಮಗೆ ಸೂಕ್ತ ಆಯ್ಕೆಯಾಗಬಹುದು. ಈ ಫೋನ್ ₹7,000 ರೂಪಾಯಿಯೊಳಗೆ ಲಭ್ಯವಿದ್ದು, ಸ್ಟೂಡೆಂಟ್‌ಗಳು ಮತ್ತು ದಿನನಿತ್ಯದ ಬಳಕೆದಾರರಿಗೆ ಸೂಕ್ತವಾಗಿದೆ.
ಫೋನ್‌ನಲ್ಲಿ ನೀಡಿರುವ (Unisoc T7100 processor) ನೊಂದಿಗೆ 4GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಲಭ್ಯವಿದ್ದು, ವರ್ಚುಯಲ್ ರ್ಯಾಮ್ ಮೂಲಕ 12GB ವರೆಗೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಆಂಡ್ರಾಯ್ಡ್ 14 Go ಎಡಿಷನ್ ಮೂಲಕ ಈ ಫೋನ್ ಕೆಲಸ ಮಾಡುತ್ತದೆ ಮತ್ತು AI ಸಹಾಯಕ Aivana 2.0 ಕೂಡ ಇದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಥೇಟ್ ಐಫೋನ್ ತರ ಕಾಣೋ ಫೋನ್! ಆದ್ರೆ ಬೆಲೆ ₹7 ಸಾವಿರಕ್ಕೂ ಕಡಿಮೆ
ಫೋನ್ (Smartphone) ನೋಡಲು ಐಫೋನ್ ಮಾದರಿಯಂತೆ (iPhone model) ಕಾಣುತ್ತದೆ. ರಿಯರ್ ಕ್ಯಾಮೆರಾ ಸೆಟಪ್ ಆಕರ್ಷಕವಾಗಿದ್ದು, ಪ್ಲಾಸ್ಟಿಕ್ ಮೆಟೇರಿಯಲ್‌ನಿಂದ ತಯಾರಾದ ಮೇಲ್ಮೈ ಮ್ಯಾಟ್ ಫಿನಿಷ್‌ನಲ್ಲಿ ಬಂದಿದೆ. 13MP ಹಿಂಭಾಗದ ಕ್ಯಾಮೆರಾ ಮತ್ತು 5MP ಸೆಲ್ಫಿ ಕ್ಯಾಮೆರಾ ನೀಡಲಾಗಿದ್ದು, ನವೀನ ಕ್ಯಾಮೆರಾ ಅನುಭವವನ್ನೂ ನೀಡುತ್ತದೆ.
6.6 ಇಂಚಿನ HD+ (display) ಹೊಂದಿರುವ ಈ ಫೋನ್ 90Hz ರಿಫ್ರೆಶ್ ರೇಟ್‌ನೊಂದಿಗೆ ಉತ್ತಮ ವ್ಯೂಯಿಂಗ್ ಎಕ್ಸ್‌ಪಿರಿಯನ್ಸ್ ನೀಡುತ್ತದೆ. ವಾಟರ್‌ಡ್ರಾಪ್ ನಾಚ್ ವಿನ್ಯಾಸದಲ್ಲಿ ಈ ಡಿಸ್‌ಪ್ಲೇ ಬರುತ್ತದೆ. ಇದರಲ್ಲಿ USB Type-C, Wi-Fi 5, Bluetooth 5.0 ಸೇರಿದಂತೆ ಇತರ ಎಲ್ಲಾ ಪ್ರಮುಖ ಫೀಚರ್ಸ್ ಒದಗಿಸಲಾಗಿದೆ.
5000mAh ಸಾಮರ್ಥ್ಯದ ಬ್ಯಾಟರಿ ಒಂದುವರೆ ದಿನದ ಬಳಕೆ ಸಹಜವಾಗಿ ನೀಡುತ್ತದೆ. ಆದರೆ, ನೀಡಲಾಗಿರುವ 10W ಚಾರ್ಜರ್ ಬಳಸಿದರೆ ಚಾರ್ಜ್ ಆಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂಬುದು ಗಮನಾರ್ಹವಾಗಿದೆ.
ಫೋನ್‌ನ ಬೆಲೆ ಕೇವಲ ₹6,999 ಅಥವಾ ₹7,000 ಒಳಗೆ ಇದ್ದು, Flipkart ಅಥವಾ ಇತರೆ (online shopping platforms)ಗಳಲ್ಲಿ ಲಭ್ಯವಿದೆ. ಆಯ್ಕೆಮಾಡಿದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಪೇಮೆಂಟ್ ಮಾಡಿದರೆ ಹೆಚ್ಚುವರಿ ರಿಯಾಯಿತಿ ಕೂಡ ಲಭ್ಯವಿದೆ.
ಸಾಮಾನ್ಯವಾಗಿ ಈ ದರದಲ್ಲಿ ಹೆಚ್ಚು ಫೀಚರ್‌ಗಳು ಸಿಗುವುದಿಲ್ಲ. ಆದರೆ ಈ ಫೋನ್‌ನಲ್ಲಿರುವ RAM, Display, Battery, Camera ಸೇರಿದಂತೆ ಎಲ್ಲವೂ ಸಾಮಾನ್ಯ ಬಳಕೆದಾರರಿಗೆ ಸೂಕ್ತವಾಗಿದೆ. ಕಡಿಮೆ ಬಜೆಟ್‌ನಲ್ಲೇ ಶಕ್ತಿಶಾಲಿ ಫೋನ್ ಬೇಕೆಂದಿದ್ದರೆ ಇದು ಒಳ್ಳೆಯ ಆಯ್ಕೆ.