ತರಬೇತಿ ಅವಧಿ: 14 ಜುಲೈ 2025 ರಿಂದ 17 ಆಗಸ್ಟ್ 2025.ಬಿಪಿಎಲ್ (BPL) ಕಾರ್ಡ್ ಹೊಂದಿರುವ ಮಹಿಳೆಯರಿಗೆ ಆದ್ಯತೆ.ನೇರ ಕಾಲ್ ಅಥವಾ ಆನ್ಲೈನ್ ಅರ್ಜಿ ಮೂಲಕ ಅರ್ಜಿ ಸಲ್ಲಿಸಿ
ಸ್ವಂತ ಉದ್ಯಮ ಆರಂಭಿಸಲು ಇಚ್ಛೆ ಹೊಂದಿರುವ ಮಹಿಳೆಯರಿಗೆ ಸೌಂದರ್ಯ ಕ್ಷೇತ್ರದಲ್ಲಿ ಸೂಕ್ತ ತರಬೇತಿ ನೀಡುವ ಉದ್ದೇಶದಿಂದ ಕನರಾ ಬ್ಯಾಂಕ್ RSETI (Canara Bank Rural Self Employment Training Institute) ಸಂಸ್ಥೆಯಿಂದ ಉಚಿತ 35 ದಿನಗಳ ‘ಬ್ಯೂಟಿ ಪಾರ್ಲರ್ ಮ್ಯಾನೇಜ್‌ಮೆಂಟ್’ ತರಬೇತಿ (Free Beautician Training) ನೀಡಲಾಗುತ್ತಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಉದ್ಯಮ ಆರಂಭಿಸಲು ಪ್ಲಾನ್ ಇದೆಯಾ? ಇದು ನಿಮ್ಮ ಆರಂಭದ ಹಂತ! ಈ ತರಬೇತಿಯು ಕೇವಲ ತರಬೇತಿಯಲ್ಲ, ಇದರಲ್ಲಿ ಭಾಗವಹಿಸುವವರಿಗೆ ವಸತಿ ಹಾಗೂ ಊಟದ ವ್ಯವಸ್ಥೆಯೂ ಉಚಿತವಾಗಿದೆ.ತರಬೇತಿ ನಂತರ ಸ್ವತಃ ಬ್ಯೂಟಿ ಪಾರ್ಲರ್ ಆರಂಭಿಸಲು ಸಿದ್ಧತೆಯನ್ನೂ ರೂಪಿಸಬಹುದು.
ಅರ್ಜಿ ಸಲ್ಲಿಸಲು ಅರ್ಹತೆ ಏನು?
ಬಿಪಿಎಲ್ ಕಾರ್ಡ್ (BPL Card) ಹೊಂದಿರುವ 18 ರಿಂದ 45 ವರ್ಷ ವಯಸ್ಸಿನ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಕನ್ನಡ ಓದಲು ಮತ್ತು ಬರೆಯಲು ಕಡ್ಡಾಯವಾಗಿ ಬಲ್ಲವರಾಗಿರಬೇಕು. ಗ್ರಾಮೀಣ ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ತರಬೇತಿ ಪಡೆದ ನಂತರ ಸ್ವ ಉದ್ಯಮ ಆರಂಭಿಸಲು ಬದ್ಧತೆ ಇರಬೇಕು.
ತರಬೇತಿ ವಿಷಯಗಳು ಯಾವುವು?
ಈ 35 ದಿನಗಳಲ್ಲಿ ಭಾಗವಹಿಸುವವರು ಮೇಕಪ್, ಸ್ಕಿನ್ ಕೇರ್, ಹೇರ್ ಸ್ಟೈಲಿಂಗ್, ಗ್ರಾಹಕ ನಿರ್ವಹಣೆ, ಮಾರ್ಕೆಟಿಂಗ್ ತಂತ್ರಗಳು ಸೇರಿದಂತೆ ಹಲವು ಪ್ರಾಯೋಗಿಕ ಮತ್ತು ತಾತ್ವಿಕ ವಿಷಯಗಳ ಬಗ್ಗೆ ತರಬೇತಿ ಪಡೆಯುತ್ತಾರೆ. ಇದರ ಜೊತೆಗೆ ಬ್ಯೂಟಿ ಉತ್ಪನ್ನಗಳ (beauty products) ಕುರಿತಾದ ಮಾಹಿತಿ, ಸೇವೆಗಳ ಪ್ಯಾಕೇಜಿಂಗ್ ಬಗ್ಗೆ ಬೋಧನೆ ನಡೆಯುತ್ತದೆ.
ಅರ್ಜಿ ಸಲ್ಲಿಸುವ ವಿಧಾನ
ಅರ್ಜಿದಾರರು ಎರಡು ವಿಧಾನಗಳಲ್ಲಿ ಅರ್ಜಿ ಸಲ್ಲಿಸಬಹುದು:
ಆನ್ಲೈನ್ ಮೂಲಕ – ಈ Google Form (https://forms.gle/xgA47s1g7tUd8jBY9) ಲಿಂಕ್ ಬಳಸಿ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಬಹುದು.
ನೇರ ಕರೆ ಮೂಲಕ – ಈ ನಂಬರ್‌ಗಳಿಗೆ ಕರೆ ಮಾಡಿ ಹೆಸರು ನೋಂದಾಯಿಸಬಹುದು:
📞 08386-220530, 9449860007, 9538281989, 9916783825, 888044612
ಅಗತ್ಯ ದಾಖಲೆಗಳ ಪಟ್ಟಿ:
ಆಧಾರ್ ಕಾರ್ಡ್ (Aadhar)
ಪಾಸ್‌ಪೋರ್ಟ್ ಫೋಟೋ (Photo)
ಬ್ಯಾಂಕ್ ಪಾಸ್ ಬುಕ್ ಪ್ರತಿಗೆ (Bank Passbook)
ರೇಶನ್ ಕಾರ್ಡ್ (Ration Card)
ಮೊಬೈಲ್ ನಂಬರ್ (Mobile Number)
ತರಬೇತಿ ನಡೆಯುವ ಸ್ಥಳ:
ಇಂಡಸ್ಟ್ರೀಯಲ್ ಏರಿಯಾ, ಹೆಗಡೆ ರಸ್ತೆ, ಕುಮಟಾ, ಉತ್ತರಕನ್ನಡ ಜಿಲ್ಲೆ – 581343
ಹೆಚ್ಚಿನ ಮಾಹಿತಿ: 9449860007, 9538281989, 9916783825, 888044612