ಪದವಿ ಓದಿದವರಿಗೆ ಸಿಹಿ ಸುದ್ದಿ.. 1500 ಅಪ್ರೆಂಟಿಸ್​ ಉದ್ಯೋಗಗಳಿಗೆ ಅರ್ಜಿ ಆಹ್ವಾನ

ಪದವಿ ಓದಿದವರಿಗೆ ಸಿಹಿ ಸುದ್ದಿ.. 1500 ಅಪ್ರೆಂಟಿಸ್​ ಉದ್ಯೋಗಗಳಿಗೆ ಅರ್ಜಿ ಆಹ್ವಾನ

ಪದವಿ ಓದಿದವರಿಗೆ ಸಿಹಿ ಸುದ್ದಿ.. 1500 ಅಪ್ರೆಂಟಿಸ್ ಉದ್ಯೋಗಗಳಿಗೆ ಅರ್ಜಿ ಆಹ್ವಾನ.ಈ ಕೆಲಸಗಳಿಗೆ ಆಯ್ಕೆ ಆದವರಿಗೆ ಸಂಬಳ ಎಷ್ಟು ನೀಡುತ್ತಾರೆ?ನಿಮ್ಮ ವೃತ್ತಿ ಜೀವನಕ್ಕಾಗಿ ಇದೊಂದು ಸುವರ್ಣಾವಕಾಶ ಆಗಿದೆ.

ಲೇಖನದಲ್ಲಿ ಹುದ್ದೆಗೆ ಸಂಬಂಧಿಸಿದ ಎಲ್ಲ ಮಾಹಿತಿ ನೀಡಲಾಗಿದೆ

ಬ್ಯಾಂಕ್ಗಳಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರು ಈ ಹುದ್ದೆಗಳಿಗೆ ಪ್ರಯತ್ನ ಮಾಡಬಹುದು. ಇಂಡಿಯನ್ ಬ್ಯಾಂಕ್ ದೇಶದ್ಯಾಂತ ಇರುವ ಬ್ರ್ಯಾಂಚ್ಗಳಲ್ಲಿ ಉದ್ಯೋಗಗಳನ್ನ ಆಹ್ವಾನ ಮಾಡಿದೆ. ಇದಕ್ಕೆ ಸಂಬಂಧಪಟ್ಟಂತೆ ನೋಟಿಫಿಕೇಶನ್ ಅನ್ನು ಬ್ಯಾಂಕ್ ರಿಲೀಸ್ ಮಾಡಿದೆ. ಇದರಲ್ಲಿ ಕರ್ನಾಟಕಕ್ಕೆ 42 ಉದ್ಯೋಗಗಳು ಮೀಸಲು ಇವೆ.

ಇಂಡಿಯನ್ ಬ್ಯಾಂಕ್ ಮುಖ್ಯ ಕಚೇರಿಯನ್ನು ಚೆನ್ನೈನಲ್ಲಿ ಹೊಂದಿದೆ. ಸದ್ಯ ಆನ್ಲೈನ್ ಅರ್ಜಿಗಳನ್ನು ಆಹ್ವಾನ ಮಾಡಿದ್ದು, ಅರ್ಹ ಹಾಗೂ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಈ ಅಪ್ರೆಂಟಿಸ್ ಉದ್ಯೋಗಗಳಿಗೆ ಅಪ್ಲೇ ಮಾಡಬಹುದು. ಬ್ಯಾಂಕ್ನಿಂದ ತಮ್ಮ ವೃತ್ತಿ ಜೀವನ ರೂಪಿಸಿಕೊಳ್ಳುವವರಿಗೆ ಇದೊಂದು ಸುವರ್ಣಾವಕಾಶ ಎಂದು ಹೇಳಬಹುದು. ಇನ್ನು ಈ ಉದ್ಯೋಗಕ್ಕೆ ಸಂಬಂಧಿಸಿದ ಇತರೆ ಮಾಹಿತಿ ಈ ಲೇಖನ ಒಳಗೊಂಡಿದೆ.

ಒಟ್ಟು ಉದ್ಯೋಗಗಳು- 1500

ಉದ್ಯೋಗದ ಹೆಸರು- ಅಪ್ರೆಂಟಿಸ್

ಶೈಕ್ಷಣಿಕ ವಿದ್ಯಾರ್ಹತೆ- ಯಾವುದೇ ಪದವಿ

ವಯೋಮಿತಿ-

20 ರಿಂದ 28 ವರ್ಷಗಳು

ಆಯ್ಕೆ ಪ್ರಕ್ರಿಯೆ ಹೇಗೆ?

ಆನ್‌ಲೈನ್ ಲಿಖಿತ ಪರೀಕ್ಷೆ (100 ಅಂಕ)

ಸ್ಥಳೀಯ ಭಾಷಾ ಪ್ರಾವೀಣ್ಯತೆ ಪರೀಕ್ಷೆ

ಅರ್ಜಿ ಶುಲ್ಕ ಎಷ್ಟು ಇದೆ?

ಸಾಮಾನ್ಯ, ಒಬಿಸಿ, ಇಡಬ್ಲುಎಸ್ ಅಭ್ಯರ್ಥಿಗಳು- 800 ರೂ.

ಎಸ್ಸಿ. ಎಸ್ಟಿ, ಪಿಡಬ್ಲುಡಿ ಅಭ್ಯರ್ಥಿಗಳು- 175 ರೂಪಾಯಿಗಳು

ಬ್ಯಾಂಕ್ ವೆಬ್ಸೈಟ್- http://www.indianbank.in

ಅಪ್ರೆಂಟಿಸ್ ಅವಧಿಯಲ್ಲಿ ಸಂಬಳ

ನಗರ ಹಾಗೂ ಮಹಾನಗರದ ಬ್ರ್ಯಾಂಚ್- 15,000 ರೂಪಾಯಿ

ಗ್ರಾಮೀಣ, ನಗರ ಗ್ರಾಮೀಣ ಬ್ರ್ಯಾಂಚ್- 12,000 ರೂಪಾಯಿ

ಹುದ್ದೆಯ ಮುಖ್ಯ ದಿನಾಂಕಗಳು

ಅರ್ಜಿ ಸಲ್ಲಿಸಲು ಆರಂಭದ ದಿನಾಂಕ ಯಾವುದು- 18 ಜುಲೈ 2025

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು- 07 ಆಗಸ್ಟ್ 2025

Post a Comment

Previous Post Next Post

Top Post Ad

CLOSE ADS
CLOSE ADS
×