2025-26 ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯಿಂದ(Horticulture Schemes) ಸಹಾಯಧನದಲ್ಲಿ ರೈತರು ಇಲಾಖೆಯಿಂದ ಯಾವೆಲ್ಲ ಯೋಜನೆಯಡಿ ಅರ್ಜಿಯನ್ನು ಸಲ್ಲಿಸಿ ವಿವಿಧ ಸೌಲಭ್ಯಗಳನ್ನು ಪಡೆಯಬಹುದು ಎನ್ನುವ ಮಾಹಿತಿಯನ್ನು ಉಪ ನಿರ್ದೇಶೇಕರಾದ ಯೋಗೇಶ್ ಅವರು ತಿಳಿಸಿದ್ದು ಇದರ ವಿವರವನ್ನು ಈ ಅಂಕಣದಲ್ಲಿ ಪ್ರಕಟಿಸಲಾಗಿದೆ.
ತೋಟಗಾರಿಕೆ ಇಲಾಖೆಯಿಂದ ಯಾವೆಲ್ಲ ಕೃಷಿ ಯಂತ್ರಗಳಿಗೆ ಸಹಾಯಧನವನ್ನು(Agriculture equipment subsidy) ಪಡೆಯಬಹುದು? ಹಾಗೂ ಘಟಕವಾರು ವಿವಿಧ ಯೋಜನೆಯಲ್ಲಿ ಎಷ್ಟು ಸಬ್ಸಿಡಿಯನ್ನು ರೈತರಿಗೆ ನೀಡಲಾಗುತ್ತದೆ? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಇನ್ನಿತರೆ ಮಾಹಿತಿಗಳು ಹಲವು ರೈತರಿಗೆ ಸಮರ್ಪಕವಾಗಿ ತಿಳಿದಿರುವುದಿಲ್ಲ ಪ್ರಸ್ತುತ ಈ ಲೇಖನದಲ್ಲಿ ಇವುಗಳ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪ್ರಸ್ತುತ ಅಂಕಣದಲ್ಲಿ ತೋಟಗಾರಿಕೆ ಇಲಾಖೆಯ ಸಬ್ಸಿಡಿ ಯೋಜನೆಗಳ(Horticulture Department Subsidy Schemes) ಪಟ್ಟಿ,ಯೋಜನೆವಾರು ಸಬ್ಸಿಡಿ ವಿವರ,ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು, ತೋಟಗಾರಿಕೆ ಇಲಾಖೆಯಿಂದ ಯಾವೆಲ್ಲೆ ಕೃಷಿ ಯಂತ್ರಗಳಿಗೆ ಸಬ್ಸಿಡಿಯನ್ನು ಪಡೆಯಬಹುದು ಎನ್ನುವ ಅಗತ್ಯ ವಿವರವನ್ನು ಸಹ ಈ ಕೆಳಗೆ ತಿಳಿಸಲಾಗಿದೆ.
Karnataka Horticulture Department Schemes- ತೋಟಗಾರಿಕೆ ಇಲಾಖೆಯ ಸಬ್ಸಿಡಿ ಯೋಜನೆಗಳ ಪಟ್ಟಿ:
1) ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ.
2) ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY)
3) ರಾಷ್ಟ್ರೀಯ ಖಾದ್ಯ ತೈಲ ಅಭಿಯಾನದಡಿ (ತಾಳೆ ಬೆಳೆ ಯೋಜನೆ)
4) ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ.
5) ಜೇನು ಸಾಕಾಣಿಕೆ ಅಭಿವೃದ್ದಿ ಯೋಜನೆ.
6) ಪರಂಪರಾಗತ ಕೃಷಿ ವಿಕಾಸ ಯೋಜನೆ.
7) ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆ.
8) ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ಮನರೇಗಾ).
9) ಕೊಯ್ಲೋತ್ತರ ನಿರ್ವಹಣೆ ಕಾರ್ಯಕ್ರಮ.
Horticulture Department Subsidy Schemes-ಯೋಜನೆವಾರು ಸಬ್ಸಿಡಿ ವಿವರ:
1) ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ(NHM):
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ತೋಟಗಾರಿಕೆ ಬೆಳೆಗಳಾದ ಬಾಳೆ, ತರಕಾರಿ, ಬೆಣ್ಣೆ ಹಣ್ಣುಗಳ ಹೊಸ ಪ್ರದೇಶ ವಿಸ್ತರಣೆ ಕೈಗೊಳ್ಳಲು ಶೇ.40ರ ಸಹಾಯಧನ ನೀಡಲಾಗುತ್ತದೆ. ಪುನಶ್ಚೇತನ ಕಾರ್ಯಕ್ರಮದಡಿ ರೈತರಿಗೆ ಉಚಿತವಾಗಿ ಕಿತ್ತಳೆ, ಕಾಳುಮೆಣಸು ಸಸಿಗಳು ಹಾಗೂ ಜೈವಿಕ ಗೊಬ್ಬರ ವಿತರಿಸಲಾಗುತ್ತದೆ.
ಸಂರಕ್ಷಿತ ಬೇಸಾಯ ಕಾರ್ಯಕ್ರಮದಡಿ ಹಸಿರು ಮನೆ/ಪಾಲಿ ಮನೆ/ನೆರಳು ಪರದೆ ಮನೆಗಳ ನಿರ್ಮಾಣಕ್ಕೆ ಹಾಗೂ ಪ್ಲಾಸ್ಟಿಕ್ ಹೊದಿಕೆಗೆ ಶೇ.50 ರ ಸಹಾಯಧನ. ಹಾಗೆಯೇ ನೀರು ಸಂಗ್ರಹಣಾ ಘಟಕಗಳಿಗೆ/ಕೃಷಿ ಹೊಂಡ ನಿರ್ಮಾಣಕ್ಕೆ ಶೇ.50 ರ ಸಹಾಯಧನವನ್ನು ರೈತರು ಈ ಯೋಜನೆಯಡಿ ಪಡೆಯಬಹುದು.
2) ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY) :
ಈ ಯೋಜನೆಯಡಿ ವಿವಿಧ ತೋಟಗಾರಿಕೆ ಬೆಳೆಗಳಿಗೆ ಅದರೆ ಅಡಿಕೆ, ತೆಂಗು, ಶುಂಠಿ, ಬಾಳೆ, ತಾಳೆ, ಕಾಳುಮೆಣಸು, ಬೆಣ್ಣೆಹಣ್ಣು, ಸಪೋಟ, ತರಕಾರಿ ಬೆಳೆಗಳು ಹಾಗೂ ಇತರೆ ತೋಟದ ಬೆಳೆಗಳಿಗೆ ಹನಿ ನೀರಾವರಿ/ ಸೂಕ್ಷ್ಮ ನೀರಾವರಿ ಅಳವಡಿಸಿಕೊಳ್ಳಲು ಸಬ್ಸಿಡಿಯನ್ನು ಪಡೆಯಲು ಅವಕಾಶವಿರುತ್ತದೆ.
ಸಹಾಯಧನ ವಿವರ ಹೀಗಿದೆ ಹನಿ ನೀರಾವರಿ/ ಸೂಕ್ಷ್ಮ ನೀರಾವರಿ ಪದ್ದತಿಗಳಿಗೆ ಸಹಾಯಧನ. ಪರಿಶಿಷ್ಟ ಜಾತಿ/ ಪಂಗಡ /ಇತರೆ ವರ್ಗದ ರೈತರಿಗೆ ಶೇ.90 ರಷ್ಟು ಸಹಾಯಧನ ನೀಡಲಾಗುತ್ತದೆ.
3) ರಾಷ್ಟ್ರೀಯ ಖಾದ್ಯ ತೈಲ ಅಭಿಯಾನದಡಿ (ತಾಳೆ)(Oli Pam Subsidy Yojana):
“ತಾಳೆ ಬೆಳೆ ಬೆಳೆಯಲು ಪ್ರೋತ್ಸಾಹ” ತಾಳೆ ಬೆಳೆ ಹೊಸ ಪ್ರದೇಶ ವಿಸ್ತರಣೆ ಕೈಗೊಳ್ಳಲು ಶೇ.50 ರ ಸಹಾಯಧನವನ್ನು ಪಡೆಯಬಹುದು. ಮೊದಲನೇ, ಎರಡನೇ, ಮೂರನೇ ಮತ್ತು ನಾಲ್ಕನೇ ವರ್ಷಗಳ ನಿರ್ವಹಣೆಗೆ ಶೇ.50 ರ ಸಹಾಯಧನ ನೀಡಲಾಗುತ್ತದೆ. ಡಿಸೇಲ್ ಮೋಟಾರ್, ಕೊಳವೆ ಬಾವಿ, ತಾಳೆ ಹಣ್ಣು ಕಟಾವು ಮಾಡುವ ಯಂತ್ರ, ಅಂತರ ಬೆಳೆ, ಚಾಫ್ ಕಟ್ಟರ್ ಯಂತ್ರಕ್ಕೆ ಶೇ.50 ರ ಸಹಾಯಧನ ಪಡೆಯಲು ಅವಕಾಶವಿರುತ್ತದೆ.
4) ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ(RKVY):
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತೋಟಗಾರಿಕೆಯಲ್ಲಿನ ಕೊಯ್ಲೋತ್ತರ ಚಟುವಟಿಕೆಗಳಿಗೆ ಪ್ರೋತ್ಸಾಹಧನದಡಿ ಸೋಲಾರ್ ಪಂಪ್ ಸೆಟ್, ಕ್ಷೇತ್ರ ಮಟ್ಟದಲ್ಲಿ(ಫಾರ್ಮ್ ಗೇಟ್) ವಿಂಗಡನೆ ಪ್ಯಾಕಿಂಗ್ ಮತ್ತು ಸಂಗ್ರಹಣೆ ಘಟಕ, ನೀರು ಸಂಗ್ರಹಣ ಘಟಕಗಳಿಗೆ ಸಬ್ಸಿಡಿ ಪಡೆಯಬಹುದು.
ಕಳೆಕೊಚ್ಚುವ ಯಂತ್ರ, ಮರಕತ್ತರಿಸುವ ಯಂತ್ರ, ದೋಟಿ(Dhoti), ಪವರ್ ಸ್ಪ್ರೆಯರ್(Power Spryer), ಅಲ್ಯೂಮಿನಿಯಂ ಏಣಿ, ಪವರ್ ವಿಡರ್(Power Weeder), ಅಡಿಕೆ ಸಿಪ್ಪೆ ಸುಳಿಯುವ ಯಂತ್ರ, ಕಾಳು ಮೆಣಸು ಬಿಡಿಸುವ ಯಂತ್ರ, ತಳ್ಳುವ ಗಾಡಿ ಇತರೆ ಯಂತ್ರಗಳನ್ನು ಖರೀದಿಸಲು ಸಹಾಯಧನ ನೀಡಲಾಗುವುದು. ಯಾಂತ್ರಿಕರಣ ಯೋಜನೆಯಡಿ ಇತರೆ ವರ್ಗದ ರೈತರಿಗೆ ಶೇ.40 ರ ಸಹಾಯಧನ ನೀಡಲಾಗುತ್ತದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶೇಕರಾದ ಯೋಗೇಶ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
5) ಜೇನು ಸಾಕಾಣಿಕೆ ಅಭಿವೃದ್ದಿ ಯೋಜನೆ:
ಈ ಯೋಜನೆಯಡಿ ಅರ್ಜಿ ಸಲ್ಲಿಸಿದ ಅರ್ಹ ರೈತರಿಗೆ ಮಧುವನ ಮತ್ತು ಜೇನು ಸಾಕಾಣಿಕೆ ಅಭಿವೃದ್ದಿ ಕಾರ್ಯಕ್ರಮದಡಿ ಜೇನು ಪೆಟ್ಟಿಗೆ, ಜೇನು ಕುಟುಂಬ ಹಾಗೂ ಜೇನು ಸ್ಟಾಂಡ್‍ಗಳ ಖರೀದಿಗೆ ಸಬ್ಸಿಡಿಯನ್ನು ಒದಗಿಸಲಾಗುತ್ತದೆ. ಸಹಾಯಧನ ವಿವರ ಹೀಗಿದೆ ಸಾಮಾನ್ಯ ರೈತರಿಗೆ ಶೇ. 75 ರ ಸಹಾಯಧನ ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ರೈತರಿಗೆ ಶೇ.90 ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಇದಲ್ಲದೇ ಖಾಸಗಿ ಮಧುವನ ಸ್ಥಾಪಿಸಲು ಸಹಾಯಧನ ಪಡೆಯಲು ಅವಕಾಶವಿರುತ್ತದೆ.
6) ಪರಂಪರಾಗತ ಕೃಷಿ ವಿಕಾಸ ಯೋಜನೆ:
ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿ ರೈತರ ಗುಂಪುಗಳ ರಚನೆ, ಆ ಗುಂಪುಗಳ ಮೂಲಕ ಸಾವಯುವ ತೋಟಗಾರಿಕೆ ಪ್ರೋತ್ಸಾಹಿಸಲು ಸಹಾಯಧನ ನೀಡಲಾಗುವುದು. ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿ ಎರೆಹುಳ ಗೊಬ್ಬರ ಘಟಕ ಸ್ಥಾಪನೆ, ಬಯೋಡೈಜೆಷ್ಟರ್, ಅಝೋಲ್ಲಾ ತೊಟ್ಟಿ, ಸಸ್ಯ ಜನ್ಯ/ ಪ್ರಾಣಿ ಜನ್ಯ ಕೀಟನಾಶಕ ತಯಾರಿಕೆ ಪ್ಲಾಸ್ಟೀಕ್ ಡ್ರಂ ಗೆ ಸಹಾಯಧನ ಪಡೆಯಬಹುದು.
7) ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆ:
ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿ ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿ ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು/ ಅಭಿವೃದ್ದಿ ಪಡಿಸಲು ಸಹಾಯಧನ ನೀಡಲಾಗುತ್ತದೆ. ಸಮಗ್ರ ಕೀಟ ರೋಗ ಕಾರ್ಯಕ್ರಮದಡಿ ಅಡಿಕೆ ಎಲೆ ಚುಕ್ಕೆ ರೋಗವನ್ನು ನಿಯಂತ್ರಿಸಲು ಔಷಧಿ ಖರೀದಿಸಲು ಸಾಮಾನ್ಯ ರೈತರಿಗೆ ಶೇ. 75 ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ರೈತರಿಗೆ ಶೇ. 90 ರ ಸಹಾಯಧನ ಒದಗಿಸಲಾಗುತ್ತದೆ.
8) ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(Narega):
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು, ತಾಳೆ, ಅಂಗಾಂಶ ಬಾಳೆ, ಸಪೋಟ ಮುಂತಾದ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ ಕೈಗೊಳ್ಳಲು ಸಹಾಯಧನ ನೀಡಲಾಗುವುದು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಬಿಪಿಎಲ್ ಕಾಡ್ ದಾರರು, ಸಣ್ಣ ರೈತರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಇಲಾಖೆಯ ಮುಖಾಂತರ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತದೆ.
9) ಕೊಯ್ಲೋತ್ತರ ನಿರ್ವಹಣೆ ಕಾರ್ಯಕ್ರಮ:
ಕೊಯ್ಲೋತ್ತರ ನಿರ್ವಹಣೆ ಕಾರ್ಯಕ್ರಮದಡಿ ಸಂಸ್ಕರಣಾ ಘಟಕಗಳು/ಪ್ಯಾಕ್ ಹೌಸ್/ಶೀತಲ ಗೃಹಗಳ ನಿರ್ಮಾಣಕ್ಕೆ ಶೇ.50 ರ ಸಹಾಯಧನ ನೀಡಲಾಗುವುದು. ಅಣಬೆ ಘಟಕ ನಿರ್ಮಿಸಲು ಶೇ.40 ರ ಸಹಾಯಧನ ನೀಡಲಾಗುತ್ತದೆ.
How To Apply-ಎಲ್ಲಿ ಅರ್ಜಿ ಸಲ್ಲಿಸಬೇಕು:
ಈ ಮೇಲಿನ ಪಟ್ಟಿಯಲ್ಲಿರುವ ವಿವಿಧ ಯೋಜನೆಯ ಪ್ರಯೋಜನವನ್ನು ಪಡೆಯಲು ಆಸಕ್ತಿಯನ್ನು ಹೊಂದಿರುವ ರೈತರು ನಿಮ್ಮ ತಾಲ್ಲೂಕಿನ ತೋಟಕಾರಿಕೆ ಇಲಾಖೆಯನ್ನು ನೇರವಾಗಿ ಭೇಟಿ ಮಾಡಿ ನಿಮ್ಮ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿಯವರನ್ನು(AHO) ಸಂಪರ್ಕಿಸಿ ಅಗತ್ಯ ಮಾಹಿತಿಯನ್ನು ಪಡೆದು ಅರ್ಜಿಯನ್ನು ಸಲ್ಲಿಸಬಹುದು.
Horticulture Department Website: ತೋಟಗಾರಿಕೆ ಇಲಾಖೆಯ ಅಧಿಕೃತ ವೆಬ್ಸೈಟ್-Click Here