ವ್ಯಾಪಾರಿಗಳಿಗೆ ₹50 ಲಕ್ಷ ಹೂಡಿಕೆ ನೆರವು! ಈ ಯೋಜನೆ ವಿಶೇಷ ಏನು ಗೊತ್ತಾ

ವ್ಯಾಪಾರಿಗಳಿಗೆ ₹50 ಲಕ್ಷ ಹೂಡಿಕೆ ನೆರವು! ಈ ಯೋಜನೆ ವಿಶೇಷ ಏನು ಗೊತ್ತಾ

Start-up Business Loan : ಸ್ಟಾರ್ಟ್‌ಅಪ್ ಗೆ ₹20 ಲಕ್ಷ ಗ್ರ್ಯಾಂಟ್‌, ₹50 ಲಕ್ಷ ಹೂಡಿಕೆ ನೆರವು.Startup India Portal ನಲ್ಲಿ ಅರ್ಜಿ ಸಲ್ಲಿಸಿ ಹಣ ಪಡೆಯಬಹುದು.ಆಯ್ದ ಕ್ಷೇತ್ರಗಳ ಸ್ಟಾರ್ಟ್‌ಅಪ್ ಗಳಿಗೆ ಮಾತ್ರ ಅರ್ಹತೆ

ಸ್ವಂತ ವ್ಯವಹಾರ ಆರಂಭಿಸಿರುವರೂ ಹೂಡಿಕೆ (investment) ಕೊರತೆಯಿಂದ ಅದು ಮುಂದೆ ಸಾಗದೆ ನಿಂತಿದ್ದರೆ, ಈ ಯೋಜನೆ ನಿಮಗಾಗಿ. ಕೇಂದ್ರ ಸರ್ಕಾರ 2021ರಲ್ಲಿ ಸ್ಟಾರ್ಟ್‌ಅಪ್ ಇಂಡಿಯಾ ಸೀಡ್ ಫಂಡ್ ಯೋಜನೆ (Startup India Seed Fund Scheme – SISFS) ಆರಂಭಿಸಿದೆ.

ಆರಂಭಿಕ ಹಂತದ ಸ್ಟಾರ್ಟ್‌ಅಪ್‌ಗಳಿಗೆ ನೆರವು ನೀಡುವ ಈ ಯೋಜನೆ, ಈಗಾಗಲೇ ಹಲವರಿಗೆ ಬದುಕು ನೀಡಿದೆ.

ವ್ಯಾಪಾರಿಗಳಿಗೆ ₹50 ಲಕ್ಷ ಹೂಡಿಕೆ ನೆರವು! ಈ ಯೋಜನೆ ವಿಶೇಷ ಏನು ಗೊತ್ತಾ

ಈ ಯೋಜನೆಯು ಏಪ್ರಿಲ್ 2021ರಲ್ಲಿ ₹945 ಕೋಟಿ ಬಜೆಟ್‌ನೊಂದಿಗೆ ಪ್ರಾರಂಭವಾಯಿತು. ಇದರ ಮುಖ್ಯ ಉದ್ದೇಶವೆಂದರೆ ಹೊಸ ಆವಿಷ್ಕಾರಗಳನ್ನು ಬೆಳೆಸಲು ಹಣದ ಕೊರತೆಯು ಅಡ್ಡಿಯಾಗದಂತೆ ಮಾಡುವದು. Proof of Concept, Prototype Development, Market Entry, Product Testing ಹಾಗೂ Commercialisation ಹಂತಗಳಲ್ಲಿ ಈ ಹಣ ಬಳಸಬಹುದು.

ಸ್ಟಾರ್ಟ್‌ಅಪ್‌ಗಳು Startup India Portal ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಇನ್ನೋವೇಟಿವ್ ಸ್ಟಾರ್ಟ್‌ಅಪ್‌ಗಳಿಗೆ ಮೊದಲು ₹20 ಲಕ್ಷವರೆಗೆ ಗ್ರ್ಯಾಂಟ್ (grant) ನೀಡಲಾಗುತ್ತದೆ. ಈ ಹಣವನ್ನು ಹಂತ ಹಂತವಾಗಿ ಪೂರೈಸಲಾಗುತ್ತದೆ – ಉದಾಹರಣೆಗೆ, ಪ್ರೊಟೋಟೈಪ್ ಪೂರೈಕೆಯ ನಂತರ ಮೊದಲ ಹಂತದ ಹಣ, ನಂತರ ಉಳಿದ ಹಂತದ ಪಾವತಿಗಳು.

ಅಷ್ಟೇ ಅಲ್ಲ, ಆವಶ್ಯಕತೆ ಇದ್ದರೆ ₹50 ಲಕ್ಷವರೆಗೆ ಹೂಡಿಕೆ (equity investment) ಸಹಾಯವೂ ಲಭ್ಯ. ಇದನ್ನು Convertible Debentures, Debt ಅಥವಾ ಇತರ ಮಾರ್ಗಗಳಿಂದ ನೀಡಲಾಗುತ್ತದೆ. ಆದರೆ ಈ ಹಣವನ್ನು ಕಟ್ಟಡ ನಿರ್ಮಾಣ ಅಥವಾ infrastructure ನಿರ್ಮಾಣಕ್ಕಾಗಿಲ್ಲ, ಬದಲಾಗಿ ಕೇವಲ ವ್ಯವಹಾರ ವಿಸ್ತರಣೆಗೆ ಮಾತ್ರ ಬಳಸಬಹುದು.

ಈ ಯೋಜನೆಗೆ ಅರ್ಹತೆ ಪಡೆಯಲು ಕೆಲವು ಶರತ್ತುಗಳಿವೆ – DPIIT ಪ್ರಮಾಣೀಕರಿಸಲ್ಪಟ್ಟ ಸ್ಟಾರ್ಟ್‌ಅಪ್ ಆಗಿರಬೇಕು, ಆರಂಭಗೊಂಡು ಎರಡು ವರ್ಷಕ್ಕೂ ಹೆಚ್ಚು ಆಗಿರಬಾರದು. ನಿಮ್ಮ ಉತ್ಪನ್ನ ಅಥವಾ ಸೇವೆ technical ಆಗಿ scalable ಆಗಿರಬೇಕು ಮತ್ತು ಆರೋಗ್ಯ, ಕೃಷಿ, ಶಿಕ್ಷಣ, ಫೈನಾನ್ಸ್, ಶಕ್ತಿ, ಬಯೋಟೆಕ್‌ (biotech), ಟೆಕ್ಸ್‌ಟೈಲ್ (textile), ಡಿಫೆನ್ಸ್ (defense) ಇತ್ಯಾದಿ ಪ್ರಮುಖ ಕ್ಷೇತ್ರಕ್ಕೆ ಸಂಬಂಧಿಸಿದ್ದಾಗಿರಬೇಕು.

ಮತ್ತೊಂದು ಪ್ರಮುಖ ಅಂಶ – ಈ ಸ್ಟಾರ್ಟ್‌ಅಪ್ ಯಾವುದೇ ಇತರೆ ಕೇಂದ್ರ ಅಥವಾ ರಾಜ್ಯ ಸರ್ಕಾರದ ಯೋಜನೆಗಳಿಂದ ₹10 ಲಕ್ಷಕ್ಕಿಂತ ಹೆಚ್ಚು ನೆರವನ್ನು ಪಡೆದುಕೊಂಡಿರಬಾರದು. ಹಾಗೆಯೇ ಭಾರತೀಯ promoter‌ಗಳು ಕನಿಷ್ಠ 51% equity ಹೊಂದಿರಬೇಕು. ಈ ಎಲ್ಲಾ ಮಾಹಿತಿಗಳೊಂದಿಗೆ startup‌ಗಳು ಸರ್ಕಾರದಿಂದ ನೆರವು ಪಡೆದು ತಮ್ಮ ಭವಿಷ್ಯ ನಿರ್ಮಿಸಬಹುದು.

ಹೂಡಿಕೆ ಇಲ್ಲದ ಕಾರಣದಿಂದ ನಿಮ್ಮ ಬುದ್ಧಿಶಕ್ತಿಯ ಆವಿಷ್ಕಾರ ಕಣ್ಮರೆಯಾಗಬಾರದು. ಈ ಯೋಜನೆ ಹೊಸದಾಗಿ ಉದ್ಯಮ ಆರಂಭಿಸುತ್ತಿರುವ ಯುವತೆಗೆ ಪ್ರೇರಣೆ ನೀಡುತ್ತದೆ.


Post a Comment

Previous Post Next Post

Top Post Ad

CLOSE ADS
CLOSE ADS
×