BMRC ನೇಮಕಾತಿ 2025 – ಬೆಂಗಳೂರು ಮೆಟ್ರೋನಲ್ಲಿ ಭರ್ಜರಿ ಉದ್ಯೋಗ ಅವಕಾಶ

BMRC ನೇಮಕಾತಿ 2025 – ಬೆಂಗಳೂರು ಮೆಟ್ರೋನಲ್ಲಿ ಭರ್ಜರಿ ಉದ್ಯೋಗ ಅವಕಾಶ

BMRC ನೇಮಕಾತಿ 2025 – ಬೆಂಗಳೂರು ಮೆಟ್ರೋನಲ್ಲಿ ಭರ್ಜರಿ ಉದ್ಯೋಗ ಅವಕಾಶ.ಅಗಸ್ಟ್ 12 ಅರ್ಜಿ ಸಲ್ಲಿಕೆ ಕೊನೆಯ ದಿನ – ಮಾಹಿತಿ ಇಲ್ಲಿದೆ (ಕಂಪ್ಲೀಟ್ ಅರ್ಜಿ ವಿಧಾನ, ಅರ್ಹತೆ, ವೇತನ, ವಿಳಾಸ ಹಾಗೂ ಇತರ ಮಾಹಿತಿ ಕನ್ನಡದಲ್ಲಿ)




ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ತನ್ನ ವತಿಯಿಂದ ಮತ್ತೆ ಭರ್ಜರಿ ಉದ್ಯೋಗ ಪ್ರಕಟಣೆ ಹೊರಡಿಸಿದೆ. ಈ ಬಾರಿ ಸಹಾಯಕ ಮುಖ್ಯ ಭದ್ರತಾ ಅಧಿಕಾರಿ (Assistant Chief Security Officer) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳ ನೇಮಕಾತಿ ಕಾಂಟ್ರಾಕ್ಟ್ ಆಧಾರದಲ್ಲಿ ನಡೆಯಲಿದೆ.

ಮುಖ್ಯ ಮಾಹಿತಿಗಳು:

ಹುದ್ದೆಯ ಹೆಸರು: ಸಹಾಯಕ ಮುಖ್ಯ ಭದ್ರತಾ ಅಧಿಕಾರಿ (Assistant Chief Security Officer)
ಒಟ್ಟು ಹುದ್ದೆಗಳು: 5
ನೇಮಕಾತಿ ಪ್ರಕಾರ: ಕಾನ್ಟ್ರ್ಯಾಕ್ಟ್ ಆಧಾರಿತ
ಅರ್ಜಿ ಸಲ್ಲಿಕೆಯ ಕೊನೆ ದಿನ: 12 ಆಗಸ್ಟ್ 2025
ಡಾಕ್ಯುಮೆಂಟ್ ಕಳಿಸಲು ಕೊನೆ ದಿನ: 18 ಆಗಸ್ಟ್ 2025
ಜಾಗೆ: ಬೆಂಗಳೂರು
ವೇತನ: BMRCL ನ ನಿಯಮಾನುಸಾರ

ಅರ್ಹತಾ ಮಾನದಂಡ (Eligibility):

ಈ ಹುದ್ದೆಗೆ ಅರ್ಜಿ ಸಲ್ಲಿಸಲು ನೀವು ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ, ರಾಜ್ಯ ಪೊಲೀಸ್, ಬಿಎಸ್‌ಎಫ್, ಸಿಐಎಸ್‌ಎಫ್, ಸಿಆರ್‌ಪಿಎಫ್ ಅಥವಾ ಅಗ್ನಿಶಾಮಕ ಪಡೆಗಳಲ್ಲಿ ಸೇವೆ ಸಲ್ಲಿಸಿರುವ ಸಕ್ರಿಯ ಅಥವಾ ನಿವೃತ್ತ ಸಿಬ್ಬಂದಿ ಆಗಿರಬೇಕು.

ಅರ್ಹ ಹುದ್ದೆಗಳಲ್ಲಿರುವವರು ಅಥವಾ ನಿವೃತ್ತರಾದವರು:

ಈ ಹುದ್ದೆಗಳಿಗಿಂತ ಕಡಿಮೆ ಶ್ರೇಣಿಯವರು ಅರ್ಹರಲ್ಲ.

ಅರ್ಜಿ ಸಲ್ಲಿಕೆ ವಿಧಾನ:

  • “ಅಧಿಸೂಚನೆ ಸಂಖ್ಯೆ” ಮತ್ತು “ಸಹಾಯಕ ಭದ್ರತಾ ಅಧಿಕಾರಿ” ವಿಭಾಗವನ್ನು ಆಯ್ಕೆಮಾಡಿ.
  • ಅರ್ಜಿಯ ಲಿಂಕ್ ಕ್ಲಿಕ್ ಮಾಡಿ, ಫಾರ್ಮ್ ತೆರೆದ ಮೇಲೆ ನೀವು ಎಲ್ಲ ಅಗತ್ಯ ಡೀಟೇಲ್ಸ್ ಭರ್ತಿ ಮಾಡಬೇಕು.
  • ಶೈಕ್ಷಣಿಕ ಪ್ರಮಾಣ ಪತ್ರಗಳು, ಅನುಭವ ಪ್ರಮಾಣ ಪತ್ರಗಳು, ಗುರುತಿನ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
  • ಅರ್ಜಿಯನ್ನು ಪೂರ್ತಿ ಚೆಕ್‌ ಮಾಡಿ, ನಂತರ ಸಬ್ಮಿಟ್ ಮಾಡಿರಿ.
  • ಅರ್ಜಿಯ ಪ್ರಿಂಟ್‌ಆಉಟ್ ತೆಗೆದು, ಸಹಿ ಹಾಕಿ ಈ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಅಥವಾ ಕೂರಿಯರ್ ಮೂಲಕ ಕಳುಹಿಸಿ:ವಿಳಾಸ:
General Manager (HR),
Bangalore Metro Rail Corporation Limited,
III Floor, BMTC Complex, K.H. Road,
Shanthinagar, Bengaluru – 560027.
ಲಕೋಟೆ ಮೇಲೆ: “APPLICATION FOR THE POST OF ASST. CHIEF SECURITY OFFICER” ಎಂದು ಸ್ಪಷ್ಟವಾಗಿ ಬರೆಯಬೇಕು.

ಮೇಲುಚಿಕ್ಕ ದಿನಾಂಕಗಳು:

  • Online ಅರ್ಜಿ ಸಲ್ಲಿಕೆಗೆ ಕೊನೆ ದಿನ 12 ಆಗಸ್ಟ್ 2025
  • ಸ್ಪೀಡ್ ಪೋಸ್ಟ್‌ನಲ್ಲಿ ಅರ್ಜಿ ತಲುಪುವ ಕೊನೆ ದಿನ 18 ಆಗಸ್ಟ್ 2025

ಅಧಿಕೃತ ಮಾಹಿತಿ ಹಾಗೂ ಮಾರ್ಗಸೂಚಿ:

ಅರ್ಜಿ ಸಲ್ಲಿಸುವ ಮೊದಲು ನೀವು BMRCL ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪೂರ್ಣ ಅಧಿಸೂಚನೆ ಓದಿಕೊಳ್ಳುವುದು ಅತ್ಯಂತ ಅಗತ್ಯ. ಈ ಅಧಿಸೂಚನೆಯಲ್ಲಿ ಉದ್ಯೋಗ ನಿಯಮ, ಕೆಲಸದ ಅವಧಿ, ಕರಾರು ಶರತ್ತುಗಳು, ಅನುಭವದ ಅಗತ್ಯಗಳು ಸೇರಿದಂತೆ ಎಲ್ಲ ಮಾಹಿತಿಯೂ ನೀಡಲಾಗಿದೆ.

ಬೆಂಗಳೂರು ಮೆಟ್ರೋ (BMRCL) ಸಂಸ್ಥೆಯ ಈ ಉದ್ಯೋಗ ಪ್ರಕಟಣೆ ನಿವೃತ್ತ ಅಥವಾ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಭದ್ರತಾ ಇಲಾಖೆಗಳ ಸಿಬ್ಬಂದಿಗೆ ಹೊಸ ಅವಕಾಶ. ಕೊನೆ ದಿನವರೆಗೆ ಕಾಯದೆ ತಕ್ಷಣವೇ ಅರ್ಜಿ ಸಲ್ಲಿಸಿ, ಅಗತ್ಯ ದಾಖಲೆಗಳನ್ನು ಹೊಂದಿಸಿ, ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿ.

ಈ ಹುದ್ದೆಯು ಗೌರವಯುತ ಮತ್ತು ಕರ್ತವ್ಯದ ಪ್ರಮುಖ ಸ್ಥಾನವಾಗಿದೆ. ನಿಮ್ಮ ಅನುಭವವನ್ನು metro projectನಲ್ಲಿ ಬಳಸಲು ಇದು ಉತ್ತಮ ಅವಕಾಶವಾಗಿರಬಹುದು.

Post a Comment

Previous Post Next Post

Top Post Ad

CLOSE ADS
CLOSE ADS
×