ನಮ್ಮ ದೇಶದ ಅತ್ಯಂತ ಜನಪ್ರಿಯ ಡಿಜಿಟಲ್ ಪಾವತಿ ವ್ಯವಸ್ಥೆಯಾದ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್(UPI) ಪಾವತಿ ವಿಧಾನದಲ್ಲಿ ಮಹತ್ವದ ಬದಲಾವಣೆಯನ್ನು ರಾಷ್ಟ್ರೀಯ ಪಾವತಿ ನಿಗಮ (NPCI)ವು ಚಾಲ್ತಿಗೆ ತಂದಿದ್ದು ಇದರಿಂದ ಸಾರ್ವಜನಿಕರಿಗೆ ಯಾವೆಲ್ಲ ಪ್ರಯೋಜನಗಳು ಅಗಲಿವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.
ಭಾರತದ ಅತ್ಯಂತ ಜನಪ್ರಿಯ ಡಿಜಿಟಲ್ ಪಾವತಿ ವ್ಯವಸ್ಥೆಯಾದ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಇನ್ನಷ್ಟು ವೇಗವಾಗಿ ಮತ್ತು ಸುಗಮವಾಗಿ ಕಾರ್ಯನಿರ್ವಹಿಸಲಿದೆ. 2025ರ ಜೂನ್ 16ರಿಂದ, ಯುಪಿಐ ವಹಿವಾಟುಗಳು ಕೇವಲ 15 ಸೆಕೆಂಡುಗಳಲ್ಲಿ ಪೂರ್ಣಗೊಳ್ಳಲಿವೆ ಎಂದು ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಘೋಷಿಸಿದೆ.
ಈ ಹೊಸ ಮಾರ್ಗಸೂಚಿಗಳು ವಹಿವಾಟಿನ ಪ್ರಕ್ರಿಯೆಯನ್ನು ತ್ವರಿತಗೊಳಿಸಲಿದ್ದು ಇದರಿಂದ ಗೂಗಲ್ ಪೇ(Google Pay)/ಪೋನ್ ಪೇ(Phone pe)/Paytm ಇನ್ನಿತರೆ UPI ಆಧಾರಿತ ಅಪ್ಲಿಕೇಶನ್ ಅನ್ನು ಬಳಕೆದಾರರಿಗೆ ಉತ್ತಮ ಅನುಭವವನ್ನು ಒದಗಿಸಲಿವೆ ಇದರ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ
UPI Payment-ಯುಪಿಐ ವಹಿವಾಟುಗಳಲ್ಲಿ ಏನು ಬದಲಾವಣೆ?
ಎನ್‌ಪಿಸಿಐನ ಏಪ್ರಿಲ್ 26, 2025ರ ಸುತ್ತೋಲೆಯ ಪ್ರಕಾರ, ಯುಪಿಐ ಸೇವೆಗಳ ಪ್ರತಿಕ್ರಿಯೆ ಸಮಯವನ್ನು ಗಣನೀಯವಾಗಿ ಕಡಿಮೆಗೊಳಿಸಲಾಗಿದೆ. ಈಗಾಗಲೇ 30 ಸೆಕೆಂಡುಗಳಷ್ಟು ಸಮಯ ತೆಗೆದುಕೊಳ್ಳುತ್ತಿದ್ದ ವಹಿವಾಟುಗಳು, ಈಗ 10 ರಿಂದ 15 ಸೆಕೆಂಡುಗಳಲ್ಲಿ ಪೂರ್ಣಗೊಳ್ಳಲಿವೆ. ಇದರ ಜೊತೆಗೆ, ವಹಿವಾಟಿನ ಸ್ಥಿತಿಯನ್ನು ಪರಿಶೀಲಿಸುವ ಸಮಯವು 30 ಸೆಕೆಂಡುಗಳಿಂದ 10 ಸೆಕೆಂಡುಗಳಿಗೆ ಇಳಿಕೆಯಾಗಿದೆ. ವಹಿವಾಟು ವಿಫಲವಾದರೆ ಅಥವಾ ರಿವರ್ಸಲ್‌ಗೆ ಸಂಬಂಧಿಸಿದಂತೆಯೂ ಈ ಕಡಿಮೆ ಸಮಯದಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಉದಾಹರಣೆಗೆ, ನೀವು ಒಂದು ಅಂಗಡಿಯಲ್ಲಿ 500 ರೂಪಾಯಿಗಳ ಖರೀದಿಗಾಗಿ ಯುಪಿಐ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪಾವತಿಸಿದರೆ, ಈಗ ಆ ವಹಿವಾಟಿನ ದೃಢೀಕರಣವು ಕೇವಲ 15 ಸೆಕೆಂಡುಗಳಲ್ಲಿ ನಿಮ್ಮ ಮೊಬೈಲ್‌ಗೆ ತಲುಪಲಿದೆ. ಈಗಿನ 30 ಸೆಕೆಂಡುಗಳಿಗೆ ಹೋಲಿಸಿದರೆ, ಇದು ಗಮನಾರ್ಹವಾದ ಸುಧಾರಣೆಯಾಗಿದೆ.
UPI Payment Benefits-ಬಳಕೆದಾರರಿಗೆ ಇದರಿಂದ ಏನು ಪ್ರಯೋಜನ?
ವೇಗದ ದೃಢೀಕರಣ: ವಹಿವಾಟಿನ ಯಶಸ್ಸು ಅಥವಾ ವಿಫಲತೆಯ ಬಗ್ಗೆ ತ್ವರಿತವಾಗಿ ತಿಳಿಯುವುದರಿಂದ ಬಳಕೆದಾರರ ಸಮಯ ಉಳಿತಾಯವಾಗುತ್ತದೆ.
ಕಡಿಮೆ ವಿಳಂಬ: ಉತ್ಸವದ ಸಂದರ್ಭಗಳು ಅಥವಾ ಬಿಲ್ ಪಾವತಿಯ ದಿನಗಳಂತಹ ಗರಿಷ್ಠ ಸಮಯದಲ್ಲಿ ವಹಿವಾಟು ವಿಳಂಬದ ಸಮಸ್ಯೆ ಕಡಿಮೆಯಾಗಲಿದೆ.
ವಿಶ್ವಾಸಾರ್ಹತೆ: ತಾಂತ್ರಿಕ ದೋಷಗಳಿಂದಾಗಿ ವಹಿವಾಟು ವಿಫಲವಾದರೆ, ಇದನ್ನು ತ್ವರಿತವಾಗಿ ಗುರುತಿಸಿ ಪರಿಹರಿಸಬಹುದು, ಇದರಿಂದ ಬಳಕೆದಾರರಿಗೆ ಗೊಂದಲ ಕಡಿಮೆಯಾಗುತ್ತದೆ.
ಸುಗಮ ಅನುಭವ: ಫೋನ್‌ಪೇ, ಗೂಗಲ್ ಪೇ, ಪೇಟಿಎಂನಂತಹ ಜನಪ್ರಿಯ ಯುಪಿಐ ಅಪ್ಲಿಕೇಶನ್‌ಗಳ ಬಳಕೆದಾರರಿಗೆ ಈ ವೇಗದ ಬದಲಾವಣೆಯಿಂದ ಒಟ್ಟಾರೆ ಪಾವತಿ ಅನುಭವ ಸುಧಾರಿಸಲಿದೆ.
NPCI New Rules-ಎನ್‌ಪಿಸಿಐನ ಹೊಸ ನಿಯಮಗಳು:
ಎನ್‌ಪಿಸಿಐ ತನ್ನ ಮೇ 21, 2025ರ ಸುತ್ತೋಲೆಯಲ್ಲಿ, ಗರಿಷ್ಠ ಟ್ರಾಫಿಕ್ ಸಮಯದಲ್ಲಿ ಯುಪಿಐ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಸುಧಾರಿಸಲು ಕೆಲವು ಕಟ್ಟುನಿಟ್ಟಾದ ನಿಯಮಗಳನ್ನು ಪರಿಚಯಿಸಿದೆ.
UPI Transaction Time Limit-ಕೇವಲ 10 ರಿಂದ 15 ಸೆಕೆಂಡುಗಳಲ್ಲಿ ಸೆಕೆಂಡುಗಳಲ್ಲಿ ಹಣ ಪಾವತಿ:
ಪ್ರಸ್ತುತ ಸಾರ್ವಜನಿಕರು ಗೂಗಲ್ ಪೇ(Google Pay)/ಪೋನ್ ಪೇ(Phone pe)/Paytm ಇನ್ನಿತರೆ UPI ಆಧಾರಿತ ಅಪ್ಲಿಕೇಶನ್ ಅನ್ನು ಬಳಕೆ ಮಾಡಿಕೊಂಡು ಹಣ ಪಾವತಿ ಮಾಡಲು "Pay" ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ಗರಿಷ್ಟ 30 ಸೆಕೆಂಡ್ ವರೆಗೆ ಸಮಯ ತೆಗೆದುಕೊಳ್ಳುತ್ತಿತ್ತು ಈಗ ಈ ಸಮಯವನ್ನು ಕೇವಲ 10 ರಿಂದ 15 ಸೆಕೆಂಡುಗಳಲ್ಲಿಗೆ ಇಲಿಕೆ ಮಾಡಲಾಗಿದ್ದು ಇದರನ್ವಯ ಇನ್ನು ಮುಂದೆ ತ್ವರಿತವಾಗಿ ಹಣ ಪಾವತಿ ಅಗಲಿದೆ.
UPI Transaction Status-ವಹಿವಾಟು ವಿಫಲವಾದರೆ ತಕ್ಷಣವೇ ಗುರುತಿಸಲಾಗುತ್ತದೆ:
ಈ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸುವ ಸಂದರ್ಭದಲ್ಲಿ, ಯುಪಿಐ ವ್ಯವಸ್ಥೆಯ ಒಟ್ಟಾರೆ ವಿಶ್ವಾಸಾರ್ಹತೆಯನ್ನು ಕಾಪಾಡಲು ಎನ್‌ಪಿಸಿಐ ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಂಡಿದೆ. ತಾಂತ್ರಿಕ ದೋಷಗಳಿಂದಾಗಿ ವಹಿವಾಟು ವಿಫಲವಾದರೆ, ಇದನ್ನು ತಕ್ಷಣವೇ ವಿಫಲವೆಂದು ಗುರುತಿಸಲಾಗುತ್ತದೆ, ಇದರಿಂದ ವ್ಯರ್ಥವಾದ ಸ್ಥಿತಿ ಪರಿಶೀಲನೆಯನ್ನು ತಪ್ಪಿಸಲಾಗುತ್ತದೆ.
ಇದರ ಜೊತೆಗೆ, ಎನ್‌ಪಿಸಿಐನ ದಾಖಲೆಗಳ ಪ್ರಕಾರ, ಗರಿಷ್ಠ ಸಮಯದಲ್ಲಿ 3-5% ವಹಿವಾಟು ವಿಫಲತೆಗಳು ನೆಟ್‌ವರ್ಕ್ ಅಥವಾ ಹ್ಯಾಂಡ್‌ಶೇಕ್ ಸಂಬಂಧಿತ ಸಮಸ್ಯೆಗಳಿಂದ ಉಂಟಾಗುತ್ತವೆ. ಈ ಸಮಸ್ಯೆಗಳನ್ನು ಕಡಿಮೆ ಮಾಡಲು ಈ ಹೊಸ ನಿಯಮಗಳು ಸಹಾಯ ಮಾಡಲಿವೆ.
NPCI website-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಧಿಕೃತ NPCI ಜಾಲತಾಣದ ವೆಬ್ಸೈಟ್ ಲಿಂಕ್-Click Here