ಮೊಬೈಲ್‌ ಕ್ಯಾಂಟೀನ್‌ ತೆರೆಯಲು ಸಿಗಲಿದೆ 5 ಲಕ್ಷ ರೂ.ಗಳ ಸಹಾಯಧನ: ಯಾರೆಲ್ಲಾ ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ?

ಸ್ವಂತ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಬಯಸುವವರಿಗಾಗಿ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಸಂಚಾರಿ ಉಪಾಹಾರ ಗೃಹ ಅಥವಾ ಮೊಬೈಲ್‌ ಕ್ಯಾಂಟೀನ್‌ಗಳನ್ನು ಆರಂಭಿಸಲು ಸಹಾಯಧನವನ್ನು ನೀಡುತ್ತಿದೆ. ಬಾಯಲ್ಲಿ ನೀರೂರಿಸುವ ರುಚಿಕರ ತಿಂಡಿ ತಿನಿಸುಗಳಿಗೆ ಯಾವಾಗಲೂ ಬೇಡಿಕೆ ಇದೆ. ಅದರಲ್ಲೂ ಇತ್ತಿಚೇಗೆ ಮೊಬೈಲ್ ಕ್ಯಾಂಟಿನ್ ವ್ಯವಹಾರದಲ್ಲಿ ಕಡಿಮೆ ಬಂಡವಾಳವನ್ನು ಹೂಡಿಕೆ ಮಾಡಿ ಹೆಚ್ಚು ಆದಾಯವನ್ನು ಪಡೆಯಲು ಉತ್ತಮ ಅವಕಾಶಗಳಿವೆ. ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ 5 ಲಕ್ಷ ರೂ. ವರೆಗಿನ ಸಹಾಯಧನ ಲಭ್ಯವಾಗಲಿದೆ. ಹಾಗಿದ್ದರೆ ಸರ್ಕಾರದಿಂದ ಸಹಾಯಧನ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿ ಸಲ್ಲಿಸುವುದು ಹೇಗೆ? ಈ ಕುರಿತ ಮಾಹಿತಿ ಇಲ್ಲಿದೆ.

ಏನಿದು ಮೊಬೈಲ್‌ ಕ್ಯಾಂಟೀನ್‌ ಸಬ್ಸಿಡಿ ಯೋಜನೆ?

ಕರ್ನಾಟಕ ಸರ್ಕಾರವು ನಿರುದ್ಯೋಗಿ ಯುವಕರಿಗೆ ತಮ್ಮದೇ ಆದ ವ್ಯವಹಾರವನ್ನು ಪ್ರಾರಂಭಿಸಲು ಸಹಾಯ ಮಾಡಲು ಮೊಬೈಲ್ ಕ್ಯಾಂಟೀನ್ ಸಬ್ಸಿಡಿ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯು ವ್ಯಕ್ತಿಗಳಿಗೆ ಸಂಚಾರಿ ಕ್ಯಾಂಟೀನ್‌ ವಾಹನಗಳನ್ನು ಖರೀದಿಸಲು ಮತ್ತು ನಿರ್ವಹಿಸಲು ಸಹಾಯಧನವನ್ನು ಒದಗಿಸುತ್ತದೆ. ಅರ್ಹ ಫಲಾನುಭವಿಗಳಿಗೆ 5 ಲಕ್ಷ ರೂ.ವರೆಗೆ ಸಹಾಯಧನ ಪಡೆಯಬಹುದಾಗಿದೆ. ಇದು ವಾಹನದ ವೆಚ್ಚದ ಗಮನಾರ್ಹ ಭಾಗವನ್ನು ಒಳಗೊಂಡಿರುತ್ತದೆ ಮತ್ತು ಇದು ರಾಜ್ಯದ ಪ್ರವಾಸೋದ್ಯಮ ಇಲಾಖೆಯ ಉಪಕ್ರಮಗಳ ಭಾಗವಾಗಿದೆ.

ಮೊಬೈಲ್‌ ಕ್ಯಾಂಟೀನ್‌ ಸಬ್ಸಿಡಿ ಯೋಜನೆಯ ಗುಣಲಕ್ಷಣಗಳು

ಯೋಜನೆಯ ಹೆಸರು- ಮೊಬೈಲ್ ಕ್ಯಾಂಟಿನ್ ಸಬ್ಸಿಡಿ ಯೋಜನೆ
ಇಲಾಖೆ- ಕರ್ನಾಟಕ ಪ್ರವಾಸೋದ್ಯಮ ಇಲಾಖೆ
ಉದ್ದೇಶ- ನಿರುದ್ಯೋಗಿ ಯುವಕರಿಗೆ ಸ್ವ ಉದ್ಯೋಗ ಅವಕಾಶ ಕಲ್ಪಿಸಿ ಆರ್ಥಿಕ ಸ್ವಾವಲಂಬಿಗಳನ್ನಾಗಿಸುವುದು
ಅರ್ಹ ಫಲಾನುಭವಿಗಳು- ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಸಮುದಾಯದ 20-45 ವರ್ಷದವರು
ಸಹಾಯಧನ ಪ್ರಮಾಣ- ಗರಿಷ್ಠ 5 ಲಕ್ಷ ರೂ. (ಘಟಕ ವೆಚ್ಚದ 70% ವರೆಗೆ)
ಅರ್ಜಿ ಸಲ್ಲಿಸುವ ವಿಧಾನ- ಜಿಲ್ಲಾ ಪ್ರವಾಸೋದ್ಯಮ ಕಚೇರಿಗೆ ಭೇಟಿ ನೀಡಿ ಅರ್ಜಿ ನಮೂನೆ ಪಡೆದು, ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು
ತರಬೇತಿ- ಉಚಿತ ಉದ್ಯಮಶೀಲತೆ/ಕೌಶಲ್ಯ ತರಬೇತಿ – 1 ತಿಂಗಳು (KSRTC ಮೂಲಕ ಊಟ, ವಸತಿ, ಪ್ರೋತ್ಸಾಹಧನದೊಂದಿಗೆ)
ದೂರವಾಣಿ ಸಂಖ್ಯೆ 0836-2955522

ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಣ್ಣ ಉದ್ಯಮಿದಾರರನ್ನು ಉತ್ತೇಜಿಸಲು ಒಂದು ತಿಂಗಳ ಉದ್ಯಮಶೀಲತೆ/ಕೌಶಲ್ಯ ತರಬೇತಿ ಹಾಗೂ ತರಬೇತಿ ಪಡೆದ ಬಳಿಕ ಅರ್ಹ ಅಭ್ಯರ್ಥಿಗಳಿಗೆ ಮೊಬೈಲ್ ಕ್ಯಾಂಟಿನ್ ಉದ್ದಿಮೆಯನ್ನು ಆರಂಭಿಸಲು ಸಬ್ಸಿಡಿಯನ್ನು ಪಡೆಯಲು ಈ ಯೋಜನೆಯಡಿ ಅವಕಾಶವಿರುತ್ತದೆ. ಅದೇ ರೀತಿ ಅತಿಥ್ಯ ಕ್ಷೇತ್ರದಲ್ಲಿ ಸಣ್ಣ ಉದ್ಯಮಿದಾರರಾಗಲು ಅಭ್ಯರ್ಥಿಗಳಿಗೆ ಊಟ, ವಸತಿ ಹಾಗೂ ಪ್ರೋತ್ಸಾಹಧನ ಜೊತೆಗೆ ಕೆಎಸ್‌ಟಿಡಿಸಿ ಸಂಸ್ಥೆಯ ಮೂಲಕ ಒಂದು ತಿಂಗಳು ತರಬೇತಿ ನೀಡಲಾಗುವುದು.

ಯೋಜನೆಯ ಪ್ರಮುಖ ಅಂಶಗಳು

ಉದ್ದೇಶಿತ ಫಲಾನುಭವಿಗಳು: ಈ ಯೋಜನೆಯು ಪ್ರಾಥಮಿಕವಾಗಿ ನಿರುದ್ಯೋಗಿ ಯುವಕರನ್ನು ಗುರಿಯಾಗಿಸಿಕೊಂಡಿದ್ದು, ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಯೋಜನೆ ಅನ್ವಯವಾಗಲಿದೆ.

ಸಬ್ಸಿಡಿ ಮೊತ್ತ: ಅರ್ಹ ವ್ಯಕ್ತಿಗಳು ಮೊಬೈಲ್ ಕ್ಯಾಂಟೀನ್ ಸ್ಥಾಪಿಸಲು 5 ಲಕ್ಷ ರೂ.ವರೆಗೆ ಸಬ್ಸಿಡಿ ಪಡೆಯಬಹುದು.

ಪ್ರವಾಸೋದ್ಯಮ ನೀತಿ: ಸಬ್ಸಿಡಿಯನ್ನು ಪ್ರವಾಸೋದ್ಯಮ ಸಂಬಂಧಿತ ವ್ಯವಹಾರಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಕರ್ನಾಟಕ ಪ್ರವಾಸೋದ್ಯಮ ನೀತಿ 2020-25ಕ್ಕೆ ಲಿಂಕ್ ಮಾಡಲಾಗಿದೆ.

ತರಬೇತಿ: ಅರ್ಹ ಅಭ್ಯರ್ಥಿಗಳಿಗೆ ಮೊಬೈಲ್ ಕ್ಯಾಂಟಿನ್ ಉದ್ದಿಮೆ ಆರಂಭಿಸಲು ಒಂದು ತಿಂಗಳ ಉದ್ಯಮಶೀಲತೆ/ಕೌಶಲ್ಯ ತರಬೇತಿ ಹಾಗೂ ತರಬೇತಿ ನೀಡಲಾಗುತ್ತದೆ.

ಮೊಬೈಲ್‌ ಕ್ಯಾಂಟೀನ್‌ ಯೋಜನೆಯ ಉದ್ದೇಶ ಏನು?

ರಾಜ್ಯದಲ್ಲಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಯುವಕರಿಗೆ ಆರ್ಥಿಕ ಸಬಲೀಕರಣವನ್ನು ನೀಡುವುದು ಮತ್ತು ಸ್ವ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದು ಈ ಯೋಜನೆಯ ಪ್ರಧಾನ ಉದ್ದೇಶ.

ಯೋಜನೆಯಡಿ ದೊರೆಯುವ ಸಹಾಯಧನ ಎಷ್ಟು?

ಅರ್ಜಿ ಸಲ್ಲಿಸಿದ ಬಳಿಕ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಪ್ರವಾಸೋದ್ಯಮ ಇಲಾಖೆಯಿಂದ ಮೊಬೈಲ್ ಕ್ಯಾಂಟಿನ್ ಅನ್ನು ಆರಂಭಿಸಲು ಒಟ್ಟು ಘಟಕ ವೆಚ್ಚಕ್ಕೆ ಶೇ 70 ರಷ್ಟು ಗರಿಷ್ಠ 5 ಲಕ್ಷದ ವರೆಗೆ ಸಹಾಯಧನವನ್ನು ಒದಗಿಸಲಾಗುತ್ತದೆ.

ಅರ್ಹತಾ ಮಾನದಂಡಗಳೇನು?

ಈ ಯೋಜನೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನ ನಿಬಂಧನೆಗಳನ್ನು ಪೂರೈಸಬೇಕು
ರಾಜ್ಯದ ಮೂಲ ನಿವಾಸಿ ಆಗಿರಬೇಕು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕೆ ಸೇರಿದವರಾಗಿರಬೇಕು.
ಕನಿಷ್ಠ SSLC ಉತ್ತೀರ್ಣ ಆಗಿರಬೇಕು.
ವಯಸ್ಸು 20ರಿಂದ 45 ವರ್ಷದೊಳಗೆ ಇರಬೇಕು.
ಲಘು ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
ನಗರ ನಿವಾಸಿಗಳಿಗೆ ವಾರ್ಷಿಕ ಆದಾಯ 2 ಲಕ್ಷ ರೂ.ಕ್ಕಿಂತ ಕಡಿಮೆ ಇರಬೇಕು.
ಗ್ರಾಮಾಂತರ ನಿವಾಸಿಗಳಿಗೆ ಆದಾಯ ಮಿತಿ 1.5 ಲಕ್ಷ ರೂ. ನಿಗದಿಪಡಿಸಲಾಗಿದೆ
ಅರ್ಜಿದಾರ ಅಥವಾ ಕುಟುಂಬದ ಸದಸ್ಯರು ಸರ್ಕಾರಿ ನೌಕರರಾಗಿರಬಾರದು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೇನು?

ಅರ್ಜಿ ನಮೂನೆ (ಸ್ಥಳೀಯ ಪ್ರವಾಸೋದ್ಯಮ ಇಲಾಖೆಯಲ್ಲಿ ಲಭ್ಯ)
ಆಧಾರ್ ಕಾರ್ಡ್ ಪ್ರತಿ
ಪಾಸ್‌ಪೋರ್ಟ್ ಗಾತ್ರದ 2 ಭಾವಚಿತ್ರ
ಜಾತಿ ಮತ್ತು ಆದಾಯ ಪ್ರಮಾಣ ಪತ್ರ
SSLC ಅಂಕಪಟ್ಟಿ
ಲಘು ವಾಹನ ಚಾಲನಾ ಪರವಾನಗಿ
ಅಫಿಡೆವಿಟ್ (ರೂ.50 ಛಾಪಾ ಕಾಗದದಲ್ಲಿ, ನೌಕರರಲ್ಲ ಎಂಬ ಪ್ರಮಾಣ ಪತ್ರ)

ಅರ್ಜಿ ಸಲ್ಲಿಕೆಯ ವಿಧಾನ ಹೇಗೆ?

ನಿಮ್ಮ ಜಿಲ್ಲೆಯಲ್ಲಿ ಇರುವ ಪ್ರವಾಸೋದ್ಯಮ ಇಲಾಖೆ ಕಚೇರಿಗೆ ಭೇಟಿ ನೀಡಿ.
ಮೊಬೈಲ್‌ ಕ್ಯಾಂಟೀನ್‌ ಆರಂಭಿಸಲು ಅರ್ಜಿ ನಮೂನೆ ಪಡೆದು, ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿ.
ಅರ್ಜಿ ಪರಿಶೀಲನೆಯ ನಂತರ, ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ಉದ್ಯಮಶೀಲತೆ ತರಬೇತಿ ನೀಡಲಾಗುತ್ತದೆ.
ತರಬೇತಿ ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ, ಸಬ್ಸಿಡಿ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ.
ಗಮನಿಸಿ: ಈ ಯೋಜನೆ ಅನುದಾನ ಲಭ್ಯತೆಯ ಆಧಾರದ ಮೇಲೆ ರಾಜ್ಯದ ಕೆಲವು ಆಯ್ದ ಜಿಲ್ಲೆಗಳಿಗೆ ಮಾತ್ರ ಅನ್ವಯಿಸುತ್ತದೆ. ಅರ್ಜಿದಾರರು ತಮ್ಮ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಕಚೇರಿಯನ್ನು ಭೇಟಿಯಾಗಿ ಯೋಜನೆಯ ಲಭ್ಯತೆ, ಅರ್ಜಿ ಸ್ವೀಕಾರ ದಿನಾಂಕ, ತರಬೇತಿ ಕೇಂದ್ರಗಳ ವಿವರಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.

ಸಂಪರ್ಕ ಮಾಹಿತಿ:

ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಸಹಾಯಕ ನಿರ್ದೇಶಕರ ಕಚೇರಿ, ರಂಗಾಯಣ ಆವರಣ, ಬೆಂಗಳೂರು. ದೂರವಾಣಿ ಸಂಖ್ಯೆ: 0836-2955522


Previous Post Next Post