15 ನಿಮಿಷಗಳಲ್ಲಿ ಲೋನ್ ಸಿಗುತ್ತೆ, ಎಸ್‌ಬಿಐ ಅಕೌಂಟ್ ಇದ್ದೋರಿಗೆ ವಿಶೇಷ ಆಫರ್

ಎಸ್‌ಬಿಐ (SBI Personal Loan) ಗ್ರಾಹಕರಿಗೆ 2.5 ಲಕ್ಷದಿಂದ 35 ಲಕ್ಷವರೆಗೆ ಲೋನ್ ನೀಡುತ್ತಿದ್ದು, 2.5 ಲಕ್ಷದಿಂದ 35 ಲಕ್ಷವರೆಗೆ ಲೋನ್ ಲಭ್ಯ,ಸರಳ ಅಪ್ಲಿಕೇಶನ್ ಪ್ರಕ್ರಿಯೆ, YONO ಅಥವಾ ಬ್ರಾಂಚ್ ಮೂಲಕ

ಉತ್ತಮ ಕ್ರೆಡಿಟ್ ಸ್ಕೋರ್‌ ಇದ್ದರೆ ಕಡಿಮೆ ಬಡ್ಡಿ ದರ

SBI Loan : ಏಕಾಏಕಿ ಹಣದ ಅಗತ್ಯ ಬಂದಾಗ, ಮೆಡಿಕಲ್ ಎಮರ್ಜೆನ್ಸಿ, ಕುಟುಂಬದ ಬೇಡಿಕೆ ಅಥವಾ ಇತರ ಫೈನಾನ್ಸ್ ತುರ್ತು ಸ್ಥಿತಿಗಳು ಯಾವ ಕ್ಷಣದಲ್ಲಿಯಾದರೂ ಎದುರಾಗಬಹುದು. ಇಂಥ ಸಮಯಗಳಲ್ಲಿ (Emergency Loan), ಬ್ಯಾಂಕುಗಳ ಪರ್ಸನಲ್ ಲೋನ್ (Personal Loan) ಯೋಜನೆಗಳು ನಿಜವಾಗಿಯೂ ಉಪಯುಕ್ತ.

ಎಸ್‌ಬಿಐ (SBI Personal Loan) ಗ್ರಾಹಕರಿಗೆ 2.5 ಲಕ್ಷದಿಂದ 35 ಲಕ್ಷವರೆಗೆ ಲೋನ್ ನೀಡುತ್ತಿದ್ದು, ಸೌಕರ್ಯವಂತದ ರಿಪೇಮೆಂಟ್ ಆಯ್ಕೆಗಳು ಕೂಡ ಇದೆ. ಆನ್‌ಲೈನ್‌ YONO ಆಪ್ ಅಥವಾ ಬ್ರಾಂಚ್ ಮೂಲಕ ಲೋನ್‌ಗಾಗಿ ಅರ್ಜಿ ಸಲ್ಲಿಸಬಹುದು

15 ನಿಮಿಷಗಳಲ್ಲಿ ಲೋನ್ ಸಿಗುತ್ತೆ, ಎಸ್‌ಬಿಐ ಅಕೌಂಟ್ ಇದ್ದೋರಿಗೆ ವಿಶೇಷ ಆಫರ್

ಎಸ್‌ಬಿಐ ಪರ್ಸನಲ್ ಲೋನ್‌ಗಳ ಮೇಲೆ ಬಡ್ಡಿ ದರ 10.30% ರಿಂದ ಆರಂಭವಾಗಿ 15.30% ತನಕ ಇದೆ. ಸರಾಸರಿ ದರ 12.68% ಇರುತ್ತದೆ. ಗ್ರಾಹಕರ ಕ್ರೆಡಿಟ್ ಸ್ಕೋರ್ (Credit Score), ಆದಾಯ ಹಾಗೂ ಟೆನ್ಯುರ್ ಆಧಾರದ ಮೇಲೆ ಈ ದರ ಬದಲಾಗಬಹುದು. ಉದಾಹರಣೆಗೆ, 5 ವರ್ಷದ ಟೆನ್ಯುರ್‌ಗೆ 2.5 ಲಕ್ಷ ಲೋನ್‌ಗಾಗಿ 11.45% ದರ ಇದ್ದರೆ ತಿಂಗಳಿಗೆ EMI ರೂ.5,492 ಆಗಬಹುದು.

ಅರ್ಹತೆಗೋಸ್ಕರ ಕನಿಷ್ಠ ರೂ.15,000 ಮಾಸಿಕ ಆದಾಯ ಇರಬೇಕು. ಎಸ್‌ಬಿಐ ವೇತನ ಖಾತೆ ಇರುವವರಿಗೆ (Salary Account Holders) ಡಾಕ್ಯುಮೆಂಟೇಷನ್ ಬಹಳ ಸುಲಭವಾಗಿರುತ್ತದೆ. EMI ಒಟ್ಟು ಮಾಸಿಕ ಆದಾಯದ 50% ಮೀರಿ ಹೋಗಬಾರದು.

SBI Loan

ಲೋನ್ ಪ್ರೀ ಕ್ಲೋಸ್ ಮಾಡಿದರೆ 3% ಪೆನಾಲ್ಟಿ ವಿಧಿಸಲಾಗಬಹುದು. ಹೊಸ ಗ್ರಾಹಕರಿಗೆ SBI YONO ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ (Pre-approved Personal Loan) ತಕ್ಷಣ ಲೋನ್ ಮಂಜೂರಾಗುವ ಅವಕಾಶವೂ ಇದೆ.

ಲೋನ್ ಅಪ್ಲೈ ಮಾಡುವ ವಿಧಾನವನ್ನು ನೋಡಿದರೆ, YONO ಆಪ್ ಮೂಲಕ ಲಾಗಿನ್ ಆಗಿ, ಲೋನ್ಸ್ ಸೆಕ್ಷನ್‌ನಲ್ಲಿ ಪರ್ಸನಲ್ ಲೋನ್ ಆಯ್ಕೆಮಾಡಬೇಕು. ಎಲಿಜಿಬಿಲಿಟಿ ಚೆಕ್ ಮಾಡಿಕೊಂಡು, ಆಯ್ಕೆಯಾದ ಮೊತ್ತ ಹಾಗೂ ಅವಧಿ ಆಯ್ಕೆ ಮಾಡಿಕೊಂಡು. OTP ದೃಢೀಕರಣದೊಂದಿಗೆ ಅರ್ಜಿ ಸಲ್ಲಿಸಬಹುದು.

State Bank Personal Loan

ಅವಶ್ಯಕ ಡಾಕ್ಯುಮೆಂಟ್ಸ್‌ಗಳಲ್ಲಿ, ಗುರುತು ಪಡಿಸುವ ದಾಖಲಾತಿ: PAN, Aadhaar, Voter ID, Driving License, Passport ಮತ್ತು ವಿಳಾಸ ದಾಖಲೆ Utility Bills, Ration Card ಹಾಗೂ ಇನ್‌ಕಮ್ ಪ್ರೂಫ್ ಗಾಗಿ Salary Slip, Form 16, Bank Statement ಒದಗಿಸಬೇಕು. ನವೀಕೃತ ವಿವರಗಳಿಗೆ ಎಸ್‌ಬಿಐ ವೆಬ್‌ಸೈಟ್ ಅಥವಾ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಬಹುದು.

ಪ್ರಮುಖವಾಗಿ, ಸರ್ಕಾರಿ ನೌಕರರು ಅಥವಾ ಡಿಫೆನ್ಸ್ ಸಿಬ್ಬಂದಿಗೆ ವಿಶೇಷ ಯೋಜನೆಗಳೂ ಲಭ್ಯವಿದ್ದು, ಹೆಚ್ಚು ಕ್ರೆಡಿಟ್ ಸ್ಕೋರ್‌ (Credit Score above 800) ಇದ್ದಲ್ಲಿ ಹೆಚ್ಚು ಲಾಭವಾಗುತ್ತದೆ. ಸಾಲದ ಮೊತ್ತ ಮತ್ತು ಅವಧಿಯನ್ನು ಆಯ್ಕೆ ಮಾಡುವ ಮುನ್ನ SBI ಲೇಟೆಸ್ಟ್ ರೇಟ್‌ಗಳನ್ನು ಪರಿಶೀಲಿಸುವುದು ಉತ್ತಮ.


Previous Post Next Post