ಕರ್ನಾಟಕ ರಾಜ್ಯ ಸರ್ಕಾರದಡಿ(Karnataka) ಕಾರ್ಯನಿರ್ವಹಿಸುವ ವಿವಿಧ ನಿಗಮಗಳಿಂದ ಹಲವು ಅಭಿವೃದ್ದಿ ಯೋಜನೆಗೆ(Nigama Yojane Arji) ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಪ್ರಸ್ತುತ ಈ ಅಂಕಣದಲ್ಲಿ ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ವಿವರಿಸಲಾಗಿದೆ.
ರಾಜ್ಯದಲ್ಲಿ ಒಟ್ಟೂ 11 ವಿವಿಧ ವರ್ಗಕ್ಕೆ ಸಂಬಂಧಪಟ್ಟ ನಿಗಮಗಳಿದ್ದು ಈ ನಿಗಮಗಳಿಂದ ಗಂಗಾ ಕಲ್ಯಾಣ(Ganga Kalyana) ನೀರಾವರಿ ಯೋಜನೆ, ಸ್ವಾವಲಂಬಿ ಸಾರಥಿ(Swavalambi Sarati Yojane) ಯೋಜನೆ ಸೇರಿದಂತೆ ಒಟ್ಟೂ 9 ಕ್ಕೂ ಹೆಚ್ಚಿನ ಯೋಜನೆಯಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
ಈ ಅಂಕಣದಲ್ಲಿ ರಾಜ್ಯದಲ್ಲಿ ಎಷ್ಟು ನಿಗಮಗಳಿವೆ? ಈ ನಿಗಮಗಳಿಂದ ಯಾವೆಲ್ಲ ಯೋಜನೆಯಡಿ ಅರ್ಜಿಯನ್ನು ಆಹ್ವಾಸಲಾಗಿದೆ? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Karnataka State Nigama-ಯಾವೆಲ್ಲ ನಿಗಮಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಕರ್ನಾಟಕದಲ್ಲಿ ರಾಜ್ಯ ಸರ್ಕಾರದಡಿ ವರ್ಗವಾರು ಅಸ್ತಿತ್ವದಲ್ಲಿರುವ ನಿಗಮಗಳ ಪಟ್ಟಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದ್ದು ಈ ನಿಗಮಗಳಿಂದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅರ್ಹ ಅರ್ಜಿದಾರರಿಗೆ ಅವಕಾಶ ನೀಡಲಾಗಿದೆ.
1) ಡಿ ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ(Devaraj Arasu nigama).
2) ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತ(Lingayata nigama).
3) ಮರಾಠಾ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತ(Marata nigama).
4) ಒಕ್ಕಲಿಗ ಸಮುದಾಯ ಅಭಿವೃದ್ದಿ ನಿಗಮ ನಿಯಮಿತ(Okkaliga nigama).
5) ಸವಿತಾ ಸಮಾಜ ಅಭಿವೃದ್ಧಿ ನಿಗಮ ನಿಯಮಿತ(Savita Samaja nigama).
6) ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ ನಿಯಮಿತ(Madiwala nigama).
7) ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ ನಿಯಮಿತ(Alemari abhivruddi nigama).
8) ಉಪ್ಪಾರ ಅಭಿವೃದ್ಧಿ ನಿಗಮ ನಿಯಮಿತ(Uppara nigama).
9) ವಿಶ್ವಕರ್ಮ ಅಭಿವೃದ್ಧಿ ನಿಗಮ ನಿಯಮಿತ(Vishwakarma nigama).
10) ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ(ambiga choudayya nigama).
11) ಕೊಡುಗೊಲ್ಲ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತ(kadugolla Arasu nigama).
Karnataka Nigama Yojanegalu-ಯಾವೆಲ್ಲ ಯೋಜನೆಯಡಿ ಸಬ್ಸಿಡಿಯನ್ನು ಅರ್ಜಿ ಆಹ್ವಾನಿಸಲಾಗಿದೆ?
1) ಅರಿವು ಶೈಕ್ಷಣಿಕ ಸಾಲ ಯೋಜನೆ (ನವೀಕರಣ)/Arivu Education Loan:
ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ(ಸಿ.ಇ.ಟಿ.) ಪ್ರವೇಶ ಪಡೆದ ಹಿಂದುಳಿದ ವರ್ಗಗಳ ಸೇರಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕಾಭಿವೃದ್ಧಿಗಾಗಿ ಅರಿವು ಶೈಕ್ಷಣಿಕ ಸಾಲ ನವೀಕರಣ ಯೋಜನೆಯಡಿ ವಾರ್ಷಿಕ ರೂ.1.00ಲಕ್ಷಗಳಂತೆ ಕೋರ್ಸ್ ಅವಧಿಗೆ ಗರಿಷ್ಠ ರೂ.4.00 ರಿಂದ ರೂ.5.00 ಲಕ್ಷಗಳ ವರೆಗೆ ವಾರ್ಷಿಕ ಶೇ.2 ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ.
2) ಅರಿವು ಶೈಕ್ಷಣಿಕ ಸಾಲ ಯೋಜನೆ (ಹೊಸತು)/Education Loan:
ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ(ಸಿ.ಇ.ಟಿ.) ಪ್ರವೇಶ ಪಡೆದ ಹಿಂದುಳಿದ ವರ್ಗಗಳ ಸೇರಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕಾಭಿವೃದ್ಧಿಗಾಗಿ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ವಾರ್ಷಿಕ ರೂ.1.00ಲಕ್ಷಗಳಂತೆ ಕೋರ್ಸ್ ಅವಧಿಗೆ ಗರಿಷ್ಠ ರೂ.4.00 ರಿಂದ ರೂ.5.00 ಲಕ್ಷಗಳ ವರೆಗೆ ವಾರ್ಷಿಕ ಶೇ.2 ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ.
3) ವಿದೇಶಿ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣಕ್ಕಾಗಿ ಬಡ್ಡಿರಹಿತ ಸಾಲ ಯೋಜನೆ.
4) ಗಂಗಾ ಕಲ್ಯಾಣ ನೀರಾವರಿ ಯೋಜನೆ/Ganaga Kalyana:
ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿಸಣ್ಣ ರೈತರ ವೈಯುಕ್ತಿಕ ನೀರಾವರಿ ಯೋಜನೆಯಲ್ಲಿ ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು. ಉಳಿಕೆ ಜಿಲ್ಲೆಗಳಲ್ಲಿ ಒಂದೇ ಸ್ಥಳದಲ್ಲಿ ಹೊಂದಿಕೊಂಡಂತೆ ಇರುವ ಕನಿಷ್ಠ 2 ಎಕರೆ ಜಮೀನು ಹೊಂದಿರುವವರಿಗೆ ರೂ.2.00ಲಕ್ಷಗಳ ಸಹಾಯಧನ (ಸಬ್ಸಿಡಿ) ಹಾಗೂ ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ರೂ.50,000/-ಗಳ ಸಾಲ ನೀಡಲಾಗುತ್ತದೆ.
ಸಾಮೂಹಿಕ ನೀರಾವರಿ ಕೊಳವೆಬಾವಿ ಯೋಜನೆಯಡಿ ಕನಿಷ್ಠ 3 ಜನ ಸಣ್ಣ ಮತ್ತು ಅತಿಸಣ್ಣ ರೈತರು ಹೊಂದಿರುವ 8-15 ಎಕರೆ ಜಮೀನಿಗೆ ರೂ.4.00ಲಕ್ಷಗಳ ವೆಚ್ಚದಲ್ಲಿ 2 ಕೊಳವೆಬಾವಿ ಹಾಗೂ 15 ಎಕರೆಗಿಂತ ಹೆಚ್ಚು ಜಮೀನು ಒಳಪಡುವ ಘಟಕಗಳಿಗೆ ನಿಗದಿತ ಘಟಕವೆಚ್ಚ ರೂ.6.00ಲಕ್ಷಗಳ ವೆಚ್ಚದಲ್ಲಿ 3 ಕೊಳವೆಬಾವಿಗಳನ್ನು ಕೊರೆಯಿಸಿ ಪಂಪ್ಸೆಟ್ ಮತ್ತು ಉಪಕರಣಗಳನ್ನು ಸರಬರಾಜು ಮಾಡುವುದು ಹಾಗೂ ವಿದ್ಯುದ್ದೀಕರಣಕ್ಕೆ ಠೇವಣಿ ಪಾವತಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿ ನೀರಾವರಿ ಸೌಲಭ್ಯ ಒದಗಿಸುವುದು. ಇದು ಪೂರ್ಣ ಅನುದಾನವಾಗಿರುತ್ತದೆ.
5) ಸ್ವಯಂ ಉದ್ಯೋಗ ಸಾಲ (ಬ್ಯಾಂಕ್ ಸಹಯೋಗದೊಂದಿಗೆ)/Business subsidy loan:
ನಿಗಮವು ಸ್ವಯಂ ಉದ್ಯೋಗ ಅಡಿಯಲ್ಲಿ ವ್ಯಾಪಾರ ಸಂಬಂಧಿತ ಚಟುವಟಿಕೆಗಳಿಗಾಗಿ ವಾಣಿಜ್ಯ ಬ್ಯಾಂಕಗಳ ವತಿಯಿಂದ ಪಡೆಯುವ ಲೋನಿಗೆ ಪ್ರತಿ ಫಲಾನುಭವಿಗೆ ಯೋಜನಾ ವೆಚ್ಚದ 20% ಅಥವಾ ಗರಿಷ್ಠ ರೂ.100000/- ವರೆಗೆ ಸಹಾಯಧನ ಒದಗಿಸಲಾಗುತ್ತದೆ.
6) ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ/Self employment subsidy loan:
ಈ ಯೋಜನೆಯಲ್ಲಿ ಕೃಷಿ ಅವಲಂಭಿತ ಚಟುವಟಿಕೆಗಳು, ವ್ಯಾಪಾರ ಚಟುವಟಿಕೆಗಳು ಹಾಗೂ ಸೇವಾ ವಲಯ ಚಟುವಟಿಕೆಗಳಿಗೆ ಹಿಂದುಳಿದ ವರ್ಗಗಳ ಜನರು ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಚಟುವಟಿಕೆಗಳಿಗನುಸಾರ ಸಾಲ ಮತ್ತು ಸಹಾಯಧನ ಸೌಲಭ್ಯವನ್ನು ಒದಗಿಸಲಾಗುತ್ತದೆ.
7) ಉಚಿತ ಹೋಲಿಗೆ ಯಂತ್ರ ಯೋಜನೆ(SEWING MACHINE SCHEME):
ಈ ಯೋಜನೆಯಡಿ ಅರ್ಜಿ ಸಲ್ಲಿಸಿದ ಅರ್ಹ ಮಹಿಳೆಯರಿಗೆ ಉಚಿತವಾಗಿ ಹೋಲಿಗೆ ಯಂತ್ರವನ್ನು ಪಡೆಯಲು ಅವಕಾಶವಿರುತ್ತದೆ.
9) ಸ್ವಾವಲಂಬಿ ಸಾರಥಿ ಯೋಜನೆ/Swavalambi Sarati:
ಸ್ವಾವಲಂಬಿ ಸಾರಥಿ ಯೋಜನೆಯಡಿ ನಿಗಮವು ಹಿಂದುಳಿದ ವರ್ಗಗಳಿಗೆ ಸೇರಿದ ನಿರುದ್ಯೋಗಿ ಯುವಜನರು ನಾಲ್ಕು ಚಕ್ರ ವಾಹನ ಖರೀದಿಗೆ ಪಡೆಯುವ ಸಾಲಕ್ಕೆ ಶೇ.50 ರಷ್ಟು ಅಥವಾ ಗರಿಷ್ಠ ರೂ 3,00,000/- ಸಹಾಯಧನ.
How To Apply-ಅರ್ಜಿ ಸಲ್ಲಿಸುವ ವಿಧಾನ ಹೇಗೆ?
ಈ ಮೇಲೆ ತಿಳಿಸಿರುವ ಯೋಜನಯ ಸೌಲಭ್ಯವನ್ನು ಪಡೆಯಲು ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ಕೊನೆಯ ದಿನಾಂಕ ಮುಕ್ತಾಯ ಅಗುವುದರ ಒಳಗಾಗಿ ಸೇವಾ ಸಿಂಧು ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
Online Application Link-ಅರ್ಜಿ ಸಲ್ಲಿಸಲು ಲಿಂಕ್- Apply Now
Last Date For Application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಅರ್ಹ ಅರ್ಜಿದಾರರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕೆಲವು ನಿಗಮಗಳಲ್ಲಿ 30 ಜೂನ್ ಕೊನೆಯ ದಿನಾಂಕವಾಗಿದ್ದರೆ ಇನ್ನು ಕೆಲವು ನಿಗಮಗಳಲ್ಲಿ ಜುಲೈ ತಿಂಗಳು ಕೊನೆಯ ದಿನಾಂಕವಾಗಿರುತ್ತದೆ.
Nigama Website-ನಿಗಮವಾರು ಅಧಿಕೃತ ವೆಬ್ಸೈಟ್ ಗಳು:
ಕರ್ನಾಟದಲ್ಲಿರುವ ಎಲ್ಲಾ ನಿಗಮಗಳ ಯೋಜನೆಯ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಆಯಾ ನಿಗಮದ ವೆಬ್ಸೈಟ್ ಅನ್ನು ಪ್ರವೇಶ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ-Click Here
Helpline Number-ಸಹಾಯವಾಣಿ-080-22865522