KCET Seat Matrix Draft Released- ಕೆಸಿಇಟಿ 2025 ಸೀಟ್ ಮ್ಯಾಟ್ರಿಕ್ಸ್ ಬಿಡುಗಡೆ | ಸೀಟುಗಳ ವಿವರ ಹೀಗೆ ಪರಿಶೀಲಿಸಿ

ಕರ್ನಾಟಕದಲ್ಲಿ ತಾಂತ್ರಿಕ ಶಿಕ್ಷಣವನ್ನು ಮುಂದುವರಿಸಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಕೆಸಿಇಟಿ (KCET) ಮುಖ್ಯವಾದ ಪ್ರವೇಶ ಪರೀಕ್ಷೆಯಾಗಿದೆ. 2025ನೇ ಸಾಲಿನ ಎಂಜಿನಿಯರಿಂಗ್ ಕೋರ್ಸ್ಗಳ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದ ಸೀಟ್ ಮ್ಯಾಟ್ರಿಕ್ಸ್ (Seat Matrix) ಅನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಿನ್ನೆ ಜೂನ್ 13ರಂದು ಬಿಡುಗಡೆ ಮಾಡಿದೆ.

ಇದೀಗ ಈ ಡ್ರಾಫ್ಟ್ ಸೀಟ್ ಮ್ಯಾಟ್ರಿಕ್ಸ್ ಪಿಡಿಎಫ್ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಾಗಿದ್ದು, ಅಭ್ಯರ್ಥಿಗಳು ತಮ್ಮ ಆಯ್ಕೆ ಮತ್ತು ಆದ್ಯತೆಯನ್ನು ನಿರ್ಧರಿಸಲು ಈ ಮಾಹಿತಿಯನ್ನು ಬಳಕೆ ಮಾಡಬಹುದು.

ಸೀಟುಗಳ ಪ್ರಮುಖ ಅಂಶಗಳು

2025-26ನೇ ಸಾಲಿಗೆ ಒಟ್ಟು ಸೀಟುಗಳು: 1,35,969

2024ರಲ್ಲಿದ್ದ ಸೀಟುಗಳ ಸಂಖ್ಯೆ: 1,41,000

ಈ ಬಾರಿ ಕಡಿಮೆಯಾದ ಸೀಟುಗಳು: 6,000 (ಅಂದಾಜು)

ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದಲ್ಲಿ ಮುಖ್ಯವಾಗಿ ಸೀಟುಗಳ ಕಡಿತ ಕಂಡುಬಂದಿದೆ. 2024ರಲ್ಲಿ ಈ ವಿಭಾಗಕ್ಕೆ 35,013 ಸೀಟುಗಳು ಲಭ್ಯವಿದ್ದರೆ, ಈ ಬಾರಿ ಅದು 33,813ಕ್ಕೆ ಇಳಿದಿದೆ. ಈ ಪೈಕಿ 15,754 ಸೀಟುಗಳನ್ನು ಕೌನ್ಸೆಲಿಂಗ್ ಮೂಲಕ ಕೆಇಎ ನೇಮಕ ಮಾಡಲಿದೆ.

ಎಐಸಿಟಿಇ ಅನುಮತಿ ಗೊಂದಲ

ಕೆಲವು ಅನುದಾನಿತ ಕಾಲೇಜುಗಳು ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಿಂದ (AICTE) ಅನುಮತಿ ಪಡೆಯದೇ ಇರುವ ಕಾರಣದಿಂದಾಗಿ ಹಾಗೂ ಆನ್‌ಲೈನ್ ದಾಖಲೆ ಸಲ್ಲಿಕೆಯಲ್ಲಿ ದೋಷಗಳು ಉಂಟಾಗಿರುವ ಕಾರಣ ಸೀಟುಗಳ ಸಂಖ್ಯೆಯಲ್ಲಿ ತಾತ್ಕಾಲಿಕ ವ್ಯತ್ಯಾಸವಿದೆ.

ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ಎಚ್. ಪ್ರಸನ್ನ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದು, ಅಂತಿಮ ಸೀಟ್ ಮ್ಯಾಟ್ರಿಕ್ಸ್ ಪ್ರಕಟವಾದ ಬಳಿಕ ಈ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಕಾಲೇಜುಗಳು ತಾವು ನೀಡಬೇಕಾದ ಸೀಟುಗಳ ಪಟ್ಟಿ ತಿದ್ದುಪಡಿ ಮಾಡಲು 7 ದಿನಗಳ ಕಾಲಾವಕಾಶ ಪಡೆದಿದ್ದು, ಈ ಅವಧಿಯಲ್ಲಿ ಯಾವುದೇ ಹೊಸ ಸೀಟುಗಳನ್ನು ಸೇರಿಸಬಹುದು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೆಸಿಇಟಿ 2025ರ ಸೀಟ್ ಮ್ಯಾಟ್ರಿಕ್ಸ್ ಬಿಡುಗಡೆ ಮಾಡಿದೆ. ಸೀಟುಗಳ ಸಂಪೂರ್ಣ ವಿವರ ಹಾಗೂ ಪರಿಶೀಲನೆ ಪ್ರಕ್ರಿಯೆ ಇಲ್ಲಿದೆ...

KCET Seat Matrix Draft Released 2025

ಸೀಟ್ ಮ್ಯಾಟ್ರಿಕ್ಸ್ ಹೇಗೆ ಪರಿಶೀಲಿಸುವುದು?

* ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ- cetonline.karnataka.gov.in

* ‘UGCET’ ವಿಭಾಗವನ್ನು ಕ್ಲಿಕ್ ಮಾಡಿ

* ‘UGCET-2025 ಎಂಜಿನಿಯರಿಂಗ್ ಡ್ರಾಫ್ಟ್ ಸೀಟ್ ಮ್ಯಾಟ್ರಿಕ್ಸ್’ PDF ಫೈಲ್ ಡೌನ್‌ಲೋಡ್ ಮಾಡಿ ಮತ್ತು ನಿಮ್ಮ ಇಷ್ಟದ ಕಾಲೇಜು/ಕೋರ್ಸ್ ವಿವರ ಪರಿಶೀಲಿಸಿ

ಕೆಸಿಇಟಿ 2025 ಕೌನ್ಸೆಲಿಂಗ್ ವೇಳಾಪಟ್ಟಿ

ಬಹು ನಿರೀಕ್ಷಿತ ಕೆಸಿಇಟಿ ಕೌನ್ಸೆಲಿಂಗ್ ಪ್ರಕ್ರಿಯೆ ಜೂನ್ ಮೂರನೇ ಅಥವಾ ನಾಲ್ಕನೇ ವಾರದಲ್ಲಿ ಆರಂಭವಾಗುವ ಸಾಧ್ಯತೆ ಇದೆ. ಅಭ್ಯರ್ಥಿಗಳು ಸೀಟ್ ಮ್ಯಾಟ್ರಿಕ್ಸ್ ಆಧಾರವಾಗಿ ತಮ್ಮ ಕೋರ್ಸ್ ಆಯ್ಕೆ ಮತ್ತು ಕಾಲೇಜುಗಳ ಆದ್ಯತೆ ಪಟ್ಟಿ ಸಿದ್ಧಪಡಿಸಿಕೊಳ್ಳಬೇಕು.

ಕೌನ್ಸೆಲಿಂಗ್‌ಗೆ ಅಗತ್ಯವಿರುವ ದಾಖಲೆಗಳ ಪಟ್ಟಿ

ಕೆಸಿಇಟಿ 2025 ಅರ್ಜಿ ಪ್ರಿಂಟ್‌ಔಟ್

ಪ್ರವೇಶ ಪತ್ರ (Hall Ticket)

ಅರ್ಜಿ ಶುಲ್ಕ ಪಾವತಿ ರಶೀದಿ

10ನೇ ತರಗತಿ ಅಂಕಪಟ್ಟಿ ಹಾಗೂ ಪ್ರಮಾಣಪತ್ರ

12ನೇ ತರಗತಿ ಅಂಕಪಟ್ಟಿ ಹಾಗೂ ಪ್ರಮಾಣಪತ್ರ

7 ವರ್ಷದ ಅಧ್ಯಯನ ಪ್ರಮಾಣಪತ್ರ (BEO/DDPI ಸಹಿ ಅಗತ್ಯ)

2 ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರಗಳು

ಆದಾಯ ಪ್ರಮಾಣಪತ್ರ

ಗ್ರಾಮೀಣ ಅಧ್ಯಯನ ಪ್ರಮಾಣಪತ್ರ

ಜಾತಿ ಪ್ರಮಾಣಪತ್ರ

ಕನ್ನಡ ಮಾಧ್ಯಮ ಪ್ರಮಾಣಪತ್ರ (ಅರ್ಹ ಅಭ್ಯರ್ಥಿಗಳಿಗೆ ಮಾತ್ರ)

ವಿದ್ಯಾರ್ಥಿಗಳಿಗೆ ಸೂಚನೆ

ಉತ್ತಮ ಶೈಕ್ಷಣಿಕ ಭವಿಷ್ಯಕ್ಕಾಗಿ ಮುಂಚಿತವಾಗಿಯೇ ಎಲ್ಲಾ ದಾಖಲೆಗಳನ್ನು ತಯಾರಿಸಿಕೊಳ್ಳಿ. ಸೀಟುಗಳ ಲಭ್ಯತೆ, ಕಾಲೇಜು ಮಟ್ಟ, ವಿದ್ಯಾರ್ಥಿಗಳ ರ‍್ಯಾಂಕ್ ಇತ್ಯಾದಿಗಳ ಆಧಾರದ ಮೇಲೆ ತಯಾರಾಗಿರುವ College Preference List ಸಿದ್ಧಪಡಿಸಿಕೊಳ್ಳಿ.

2025ನೇ ಸಾಲಿಗೆ ಎಂಜಿನಿಯರಿಂಗ್ ಪ್ರವೇಶಕ್ಕಾಗುವ ಕೆಸಿಇಟಿ ಕೌನ್ಸೆಲಿಂಗ್ ಪ್ರಕ್ರಿಯೆ ಅತ್ಯಂತ ಮಹತ್ವದ್ದಾಗಿದೆ. ಈ ಬಾರಿ ಸೀಟುಗಳಲ್ಲಿ ಇರುವ ವ್ಯತ್ಯಾಸ, ಕಂಪ್ಯೂಟರ್ ಸೈನ್ಸ್ ಕೋರ್ಸ್ಗಳಲ್ಲಿ ಕಡಿತ ಮತ್ತು ಕೌನ್ಸೆಲಿಂಗ್ ವೇಳಾಪಟ್ಟಿ- ಇವೆಲ್ಲವೂ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ವ್ಯವಸ್ಥಿಯ ಯೋಜನೆ ರೂಪಿಸಲು ಸಹಾಯಕವಾಗಲಿವೆ.

ಕೆಇಎ ಪ್ರಕಟಿಸಿರುವ ಸೀಟ್ ಮ್ಯಾಟ್ರಿಕ್ಸ್ ಪಟ್ಟಿ: ಇಲ್ಲಿ Download ಮಾಡಿ

Previous Post Next Post