BMTC ವಿಕೇಂಡ್ ಟೂರ್ ಪ್ಯಾಕೇಜ್:-ಬೆಂಗಳೂರಿನ ಪ್ರಸಿದ್ದ ದೇವಾಲಯಗಳ ದರ್ಶನಕ್ಕಾಗಿ ಬಿಎಂಟಿಸಿ (BMTC) ಸಾರ್ವಜನಿಕರಿಗೆ ಇದೀಹ ಹೊಸ ವಿಕೇಂಡ್ ಟೂರ್ ಪ್ಯಾಕೇಜ್ ಘೋಷಣೆ ಮಾಡಿದೆ. ಹೌದು, BMTC ‘ದಿವ್ಯ ದರ್ಶನ’ (Divya Darshana) ಹೆಸರಿನಲ್ಲಿ ಎಸಿ ಬಸ್ ಮೂಲಕ ಒಂದೇ ದಿನ ಬೆಂಗಳೂರಿನ 8 ಪ್ರಸಿದ್ಧ ದೇಗುಲಗಳ ವೀಕ್ಷಣೆಗೆ ಅವಕಾಶ ನೀಡಿದೆ.
ಒನ್ ಡೇ ಟೆಂಪಲ್ ಟೂರ್
ಹೌದು, ಈಗಾಗಲೇ ಈ ಯೋಜನೆ ಜಾರಿಗೊಂಡಿದೆ. ದೇವಾಲಯಗಳ ವೀಕ್ಷಣೆಯ ‘ಒನ್ ಡೇ ಟೆಂಪಲ್ ಟೂರ್’ ಯೋಜನೆಗೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಬುಧವಾರ ಚಾಲನೆ ನೀಡಿದ್ದಾರೆ. ವಿಶೇಷವಾಗಿ ಹವಾನಿಯಂತ್ರಿತ ವಾಯು ವಜ್ರ ಬಸ್‌ಗಳಲ್ಲಿ ಪ್ರವಾಸ ಇರಲಿದೆ.
BMTC ದಿವ್ಯ ದರ್ಶನದಲ್ಲಿ ಯಾವೆಲ್ಲಾ ದೇಗುಲಕ್ಕೆ ಭೇಟಿ?
1) ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇಗುಲ,
2)RR ನಗರದ ರಾಜರಾಜೇಶ್ವರಿ ದೇವಸ್ಥಾನ,
3) RR ನಗರದ ಶೃಂಗಗಿರಿ ಷಣ್ಮುಖ ದೇವಾಸ್ಥಾನ,
4) RR ನಗರದ ಕರುಮಾರಿ ಅಮ್ಮ ದೇವಾಲಯ,
5) ಉತ್ತರಹಳ್ಳಿ ಬಳಿಯ ಓಂಕಾರ ಹೀಲ್ಸ್,
6) ಇಸ್ಕಾನ್ ದೇವಸ್ಥಾನ (ವಸಂತಪುರ) ವೈಕುಂಠ,
7) ಕನಕಪುರ ರಸ್ತೆಯಲ್ಲಿ ಆರ್ಟ್ ಆಫ್ ಲೀವಿಂಗ್,
8) ಬನಶಂಕರಿಯಲ್ಲಿನ ಬನಶಂಕರಿ ದೇವಾಲಯಗಳಿಗೆ ಟೂರ್ ಇರಲಿದೆ.
ದಿವ್ಯ ದರ್ಶನ ಸಮಯ ಎಷ್ಟು?
ಇನ್ನು, ಈ ದಿವ್ಯ ದರ್ಶನ ಟೂರ್‌ಪ್ಯಾಕೇಜ್ ಸದ್ಯ ಪ್ರತಿ ವಾರಾಂತ್ಯದಲ್ಲಿ ಮಾತ್ರ ಪರಿಚಯಿಸಲಾಗಿದ್ದು, ಬಳಿಕ ದಿನನಿತ್ಯವೂ ಆರಂಭವಾಗಲಿದೆ ಎಂದು ಹೇಳಲಾಗಿದೆ. ಹವಾನಿಯಂತ್ರಿತ ಬಸ್ ಸೇವೆ ಇದರ ಪ್ರಮುಖ ಆಕರ್ಷಣೆಯಾಗಿದೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಳಿಗ್ಗೆ 8:30ಕ್ಕೆ ಆರಂಭವಾದ ಈ ಬಸ್ ಸಂಜೆ 6:05ಕ್ಕೆ ಮರಳಲಿದೆ. ಬರೋಬ್ಬರಿ ಬೆಂಗಳೂರಿನೊಳಗೆ ಒಂದೇ ದಿನ 9 ಗಂಟೆ ಟೂರ್ ಇದಾಗಿರಲಿದೆ.
ದಿವ್ಯ ದರ್ಶನ ಟೂರ್ ಪ್ಯಾಕೆಜ್ ಟಿಕೆಟ್ ದರ ಎಷ್ಟು?
ಇನ್ನು, ಪ್ರಮುಖವಾಗಿ ನೋಡುವುದಾದರೆ ದಿವ್ಯ ದರ್ಶನ ಟೆಂಪಲ್ ಟೂರ್ ಪ್ಯಾಕೇಜ್‌ಗೆ BMTC ವಯಸ್ಕರಿಗೆ 450 ರೂಪಾಯಿ ಮತ್ತು ಮಕ್ಕಳಿಗೆ 350 ರೂಪಾಯಿ ದರ ನಿಗದಿ ಮಾಡಿದೆ. ಈ ದರದಲ್ಲಿ ಒಂದೇ ದಿನ ಬೆಂಗಳೂರಿನ 8 ದೇಗುಲಗಳನ್ನು ನೋಡಬಹುದು.