ಕೃಷಿ ಇಲಾಖೆಯಿಂದ ಶೇ 90 ರಷ್ಟು ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್ ಕಲ್ಟಿವೇಟರ್(Cultivator Subsidy) ಪಡೆಯಲು ಅವಕಾಶವಿದ್ದು ಇದಕ್ಕಾಗಿ ಅರ್ಹ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಕೃಷಿ ಇಲಾಖೆಯಿಂದ ಕೃಷಿ ಯಾಂತ್ರೀಕರಣ ಯೋಜನೆಯಡಿ(Cultivator Subsidy Scheme) ವಿವಿಧ ಯಂತ್ರಗಳಿಗೆ ಸಹಾಯಧನವನ್ನು ನೀಡಲಾಗುತ್ತದೆ ಇದೆ ಮಾದರಿಯಲ್ಲಿ ರೈತರು ಟ್ರ್ಯಾಕ್ಟರ್ ಕಲ್ಟಿವೇಟರ್ ಖರೀದಿಗೆ ಸಬ್ಸಿಡಿಯನ್ನು ಸಹ ಪಡೆಯಬಹುದಾಗಿದ್ದು ಇದಕ್ಕಾಗಿ ಅರ್ಜಿ ಸಲ್ಲಿಸಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
ಕೃಷಿ ಯಾಂತ್ರೀಕರಣ ಯೋಜನೆಯಡಿ ಟ್ರ್ಯಾಕ್ಟರ್ ಕಲ್ಟಿವೇಟರ್(Tractor Cultivator) ಎಷ್ಟು ಮೊತ್ತವನ್ನು ರೈತರು ಪಾವತಿ ಮಾಡಬೇಕು? ಸರ್ಕಾರದ ಸಬ್ಸಿಡಿ ಮೊತ್ತ ಎಷ್ಟು? ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೇನು? ಈ ಉಪಕರಣವನ್ನು ಖರೀದಿ ಮಾಡಲು ಇನ್ನಿತರೆ ಅವಶ್ಯಕ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ
Who can Apply For Cultivator Subsidy-ಟ್ರ್ಯಾಕ್ಟರ್ ಕಲ್ಟಿವೇಟರ್ ಗೆ ಸಬ್ಸಿಡಿ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?
1) ಕೃಷಿ ಇಲಾಖೆಯಿಂದ ಕೃಷಿ ಯಾಂತ್ರೀಕರಣ ಯೋಜನೆಯಡಿ ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್ ಕಲ್ಟಿವೇಟರ್ ಅನ್ನು ಪಡೆಯಲು ಅರ್ಜಿ ಸಲ್ಲಿಸಲು ರೈತರು ಈ ಕೆಳಗೆ ತಿಳಿಸಿರುವ ಅರ್ಹತೆಯನ್ನು ಹೊಂದಿರಬೇಕು.
2) ಅರ್ಜಿದಾರರ ರೈತರ ಹೆಸರಿನಲ್ಲಿ ಕೃಷಿ ಜಮೀನಿನನ್ನು ಹೊಂದಿರಬೇಕು.
3) ಅರ್ಜಿದಾರರ ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
4) ಅರ್ಜಿದಾರ ರೈತರು ಸಣ್ಣ ಮತ್ತು ಅತೀ ಸಣ್ಣ ರೈತರ ವರ್ಗಕ್ಕೆ ಸೇರಿದವರಾಗಿರಬೇಕು.
5) ಈಗಾಗಲೇ ಕೃಷಿ ಯಾಂತ್ರಿಕರಣ ಯೋಜನೆಯಡಿ ಸಬ್ಸಿಡಿಯನ್ನು ಈ ಉಪಕರಣಕ್ಕೆ ಸಹಾಯಧನ ಪಡೆದಿದ್ದರೆ ಮತ್ತೊಮ್ಮೆ ಸಬ್ಸಿಡಿ ಪಡೆಯಲು ಅವಕಾಶವಿರುವುದಿಲ್ಲ.
Cultivator Subsidy Amount-ಟ್ರ್ಯಾಕ್ಟರ್ ಕಲ್ಟಿವೇಟರ್ ಗೆ ಎಷ್ಟು ಸಬ್ಸಿಡಿ ಪಡೆಯಬಹುದು?
ರೈತರು ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್ ಕಲ್ಟಿವೇಟರ್ ಅನ್ನು ಪಡೆಯಲು ಅವಕಾಶವಿದ್ದು ಕಲ್ಟಿವೇಟರ್ ನ ಒಟ್ಟು ಮೊತ್ತ(Full rate) ರೂ ₹54,000/- ಅಗಿದ್ದು ಸಾಮಾನ್ಯ/ಒಬಿಸಿ ವರ್ಗದ ರೈತರು ರೂ ₹29,500/- ಅನ್ನು ಪಾವತಿ ಮಾಡಬೇಕಾಗುತ್ತದೆ SC/ST ವರ್ಗದ ರೈತರು ರೂ ₹9,900/- ರೈತ ವಂತಿಕೆಯನ್ನು ಪಾವತಿ ಮಾಡಿ ಟ್ರ್ಯಾಕ್ಟರ್ ಕಲ್ಟಿವೇಟರ್ ಅನ್ನು ಪಡೆಯಬಹುದು.
ಪೂರ್ಣ ದರ ₹54,000/-
ಸಾಮಾನ್ಯ ವರ್ಗ ರೈತ ವಂತಿಕೆ ₹29,500/-
SC/ST ರೈತ ವಂತಿಕೆ ₹9,900/-
ಸಾಮಾನ್ಯ ವರ್ಗದ ರೈತರು 50% ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್ ಕಲ್ಟಿವೇಟರ್ ಪಡೆಯಬಹುದು ಹಾಗೂ SC ಮತ್ತು ST ವರ್ಗದ ರೈತರು ಶೇ 90% ಸಬ್ಸಿಡಿಯಲ್ಲಿ ಖರೀದಿ ಮಾಡಬಹುದು.
ಸಬ್ಸಿಡಿಯಲ್ಲಿ ಕಲ್ಟಿವೇಟರ್ ಪಡೆಯಲು ಮತ್ತು ವಿಚಾರಣೆಗಾಗಿ ಸಂಪರ್ಕಿಸಿ: 9901876682(Easy life enterprises)
Subsidy Tractor Cultivator Details-ಟ್ರ್ಯಾಕ್ಟರ್ ಕಲ್ಟಿವೇಟರ್ ವಿವರ ಹೀಗಿದೆ:
ಸಬ್ಸಿಡಿಯಲ್ಲಿ ನೀಡಲಾಗುವ ಟ್ರ್ಯಾಕ್ಟರ್ ಕಲ್ಟಿವೇಟರ್ ನ ತಾಂತ್ರಿಕ ವಿವರ ಈ ಕೆಳಗಿನಂತಿದೆ.
Tyep U Clamp
No of Tines 7/9
Dimension of TINE 525*75*35mm
No of Shovels 7/9
Power Required 400mm
Working Capacity 0.5ha/hr
Approx Weight 250kg
How To Apply-ಅರ್ಜಿ ಸಲ್ಲಿಸುವುದು ಹೇಗೆ?
ರೈತರು ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್ ಕಲ್ಟಿವೇಟರ್ ಅನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಲು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ತಮ್ಮ ಹೋಬಳಿಯ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಈ ದೂರವಾಣಿ ಸಂಖ್ಯೆಗೆ 9901876682 ಕರೆ ಮಾಡಿಯು ಸಹ ಮಾಹಿತಿಯನ್ನು ಪಡೆದು ಸಬ್ಸಿಡಿಯಲ್ಲಿ ಕಲ್ಟಿವೇಟರ್ ಪಡೆಯಬಹುದು.
Required Documents-ಅವಶ್ಯಕ ದಾಖಲೆಗಳು:
ಅರ್ಜಿದಾರರ ಆಧಾರ್ ಕಾರ್ಡ್
ಬ್ಯಾಂಕ್ ಪಾಸ್ ಬುಕ್
ಪೋಟೋ
ಜಮೀನಿನ ಪಹಣಿ/ಉತಾರ್/RTC
ರೇಶನ್ ಕಾರ್ಡ್
ಮೊಬೈಲ್ ನಂಬರ್
